Sanjjanaa Galrani Pregnant: ಮೊದಲ ಮಗುವಿನ ನಿರೀಕ್ಷೆಯಲ್ಲಿ ಕನ್ನಡದ ನಟಿ!

Suvarna News   | Asianet News
Published : Jan 02, 2022, 09:36 AM ISTUpdated : Jan 02, 2022, 11:02 AM IST
Sanjjanaa Galrani  Pregnant: ಮೊದಲ ಮಗುವಿನ ನಿರೀಕ್ಷೆಯಲ್ಲಿ ಕನ್ನಡದ ನಟಿ!

ಸಾರಾಂಶ

ತಾಯಿ ಆಗುತ್ತಿರುವ ವಿಚಾರ ರಿವೀಲ್ ಮಾಡಿದ ನಟಿ. ಹೊಸ ವರ್ಷಕ್ಕೆ ಸಿಹಿ ಸುದ್ದಿ...............

ಕನ್ನಡ ಚಿತ್ರರಂಗದಲ್ಲಿ (Sandalwood) ಗಂಡ ಹೆಂಡತಿ ನಟಿ ಎಂದೇ ಖ್ಯಾತಿ ಪಡೆದಿರುವ ಸಂಜನಾ ಗಲ್ರಾನಿ (Sanjjanaa Galrani) 2022 ಹೊಸ ವರ್ಷಕ್ಕೆ ಅಭಿಮಾನಿಗಳಿಗೆ ಗುಡ್ ನ್ಯೂಸ್‌ ನೀಡಿದ್ದಾರೆ. ಸಿನಿ ಜರ್ನಿ ಆರಂಭದಿಂದಲೂ ವೈಯಕ್ತಿಕ ಜೀವನದ ಬಗ್ಗೆ ಎಲ್ಲಿಯೂ, ಯಾವ ವಿಷಯವನ್ನೂ ಹಂಚಿಕೊಳ್ಳದ ನಟಿ ಡ್ರಗ್ಸ್ (Drugs) ಪ್ರಕರಣದಲ್ಲಿ ಸಿಲುಕಿಕೊಂಡಾಗ ಅವರಿಗೆ ಮದುವೆ ಆಗಿದೆ, ಧರ್ಮ ಬದಲಾಯಿಸಿದ್ದಾರೆ ಎಂಬುವುದು ಬೆಳಕಿಗೆ ಬಂದಿತ್ತು. ಆದರೆ ಅವರೀಗ ಕೊಟ್ಟಿರುವ ನ್ಯೂಸ್ ಕೇಳಿ ಸಂತೋಷ ಪಟ್ಟವರೂ ಇದ್ದಾರೆ. ಆದರೆ. ಶಾಕ್ ಆದವರೇ ಹೆಚ್ಚು. 

ಹೌದು! ನಟಿ ಸಂಜನಾ ಗಲ್ರಾನಿ ತಾಯಿಯಾಗುತ್ತಿದ್ದಾರೆ. 'ಇದೊಂದು ಅದ್ಭುತ ಜರ್ನಿ. ನನಗೀಗ 5 ತಿಂಗಳು, ನನ್ನ ಜೀವನಕ್ಕೆ ನಾನು ತುಂಬಾನೇ ಥ್ಯಾಂಕ್‌ಫುಲ್ ಆಗಿರುತ್ತೀನಿ. ನನಗೆ ಗಂಡು ಮಗು ಆಗಲಿದೆ ಎನ್ನುವ ಭಾವನೆ ನನಗೆ ಬರುತ್ತಿದೆ,' ಎಂದು ಟೈಮ್ಸ್‌ ಆಫ್ ಇಂಡಿಯಾ ಜೊತೆ ನಟಿ ಮಾತನಾಡಿದ್ದಾರೆ. 

ಡ್ರಗ್ಸ್ ಪ್ರಕರಣದ ನಂತರ ಸಿನಿಮಾರಂಗದಿಂದ ದೂರ ಉಳಿದುಕೊಂಡು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ನಟ, ಸಂಜನಾ ಗಲ್ರಾನಿ ಫೌಂಡೇಷನ್‌ ಆರಂಭಿಸಿ ಕೊರೋನಾ ಸಮಯದಲ್ಲಿ ವಾರಿಯರ್ ಅಗಿದ್ದು. ಕೊರೊನಾ ಪ್ರಕರಣ ಕಡಿಮೆ ಆದ ನಂತರ ಮಲಯಾಳಂ ಸಿನಿಮಾ ಒಪ್ಪಿಕೊಂಡು ತಿರುವನಂತಪುರಂನಲ್ಲಿ ಚಿತ್ರೀಕರಣ ಮಾಡಿದ್ದರು. 

'ಮಗು ಜನನ ಆಗುವ ದಿನದವರೆಗೂ ನಾನು ತುಂಬಾನೇ ಆ್ಯಕ್ಟಿವ್ ಆಗಿರಬೇಕು ಅಂದುಕೊಂಡಿರುವೆ. ನಾನು ಅನೇಕ ಮಹಿಳೆಯರನ್ನು ನೋಡಿದ್ದೀನಿ ಇನ್ನೇನು ಎರಡು ವಾರಗಳು ಇವೆ ಅನ್ನೂವರೆಗೂ ಕೆಲಸ ಮಾಡುತ್ತಾರೆ. ಅದೆಲ್ಲಾ ನನಗೆ ತುಂಬಾ inspire ಮಾಡುತ್ತೆ. ನಾನು ವಾರದಲ್ಲಿ ಮೂರು ಅಥವಾ ನಾಲ್ಕು ದಿನ ಅಷ್ಟೇ ಕೆಲಸ ಮಾಡುವುದು. ಆದರೂ ನನ್ನ ಶೆಡ್ಯೂಲ್ ಸದಾ ಬ್ಯುಸಿಯಾಗಿರುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ಅನುಮೋದನೆಗಳು ಮತ್ತು ಕಂಟೆನ್ಟ್‌ ವಿಚಾರದ ಬಗ್ಗೆ ಸದಾ ಚಿಂತಿಸುವೆ,' ಎಂದು ಸಂಜನಾ ಹೇಳಿದ್ದಾರೆ. 

'ನಾಚಿಕೆಯಾಗ್ಬೇಕು' ಸಂಜನಾಗೆ ಸಹನೆಯ ಪಾಠ ಹೇಳಿದ ನೆಟ್ಟಿಗರು !

ಮಕ್ಕಳನ್ನು ತುಂಬಾನೇ ಇಷ್ಟ ಪಡುವ ಸಂಜನಾ ತಾಯಿ ಆಗುತ್ತಿದ್ದಾರೆ ಎಂದು ತಿಳಿಯುತ್ತಿದ್ದಂತೆ, ಸಂತೋಷ ಪಟ್ಟರಂತೆ. 'ನಾನು ಹಲವು ವರ್ಷಗಳಿಂದ ಪ್ಲಾನಿಂಗ್‌ ಮುಂದೂಡುತ್ತಲೇ ಬಂದೆ. ಏಕೆಂದರೆ ದೇಹದಲ್ಲಿ ಆಗುವ ಬದಲಾವಣೆಗಳ ಬಗ್ಗೆ ಭಯವಿತ್ತು. ನನ್ನ ಮನೆಯಲ್ಲಿ ನನ್ನ ಪೋಷಕರು ತುಂಬಾನೇ ಟಿಪಿಕಲ್ ಇಂಡಿಯನ್ ಪೋಷಕರ ರೀತಿ. ನಾನು ಯಾವಾಗ ಮಕ್ಕಳು ಮಾಡಿಕೊಳ್ಳುತ್ತೇನೆ ಎಂದು ಸದಾ ಪ್ರಶ್ನೆ ಮಾಡುತ್ತಿದ್ದರು. ಈಗ ನನಗೆ 34 ವರ್ಷ. ಇದು ಸರಿಯಾದ ಸಮಯ ಅಂದುಕೊಂಡೆ. ಕೊರೋನಾದಿಂದ ಹಲವರ ಜೀವನ ಬದಲಾಗಿದೆ, ಹೀಗಾಗಿ ನನ್ನ ಗಂಡ ಮತ್ತು ನಾನು ಮಗು ಮಾಡಿಕೊಳ್ಳುವ ತೀರ್ಮಾನ ಮಾಡಿಕೊಂಡೆವು. ಪ್ರೆಗ್ನೆನ್ಸಿ ವಿಚಾರ ತಿಳಿಯುತ್ತಿದ್ದಂತೆ, He's been over the moon' ಎಂದಿದ್ದಾರೆ ನಟಿ. 

ಸಂಜನಾ ಕುಟುಂಬದಲ್ಲಿ ಇದೇ ಮೊದಲ ಮಗು ಅಂತೆ. ಹೀಗಾಗಿ ಇಡೀ ಕುಟುಂಬ ಸಂಜನಾ ಅವರನ್ನು ಪ್ಯಾಂಪರ್ ಮಾಡುತ್ತಿದ್ದಾರೆ. 'ಆರಂಭದಲ್ಲಿ ನನಗೂ ತುಂಬಾನೇ ಖುಷಿ ಆಯ್ತು ಈಗ ನಾನು ಇದಕ್ಕೆ ಅಡ್ಜೆಸ್ಟ್‌ ಆಗಿರುವೆ. ನನಗೆ ದೇಹಕ್ಕೆ ಯಾವುದು ಸರಿ ಏನು ಬೇಕು ಎಂದು ತಿಳಿದುಕೊಂಡಿರುವೆ. ಪ್ರಗ್ನೆನ್ಸಿ ನನ್ನನ್ನು ತುಂಬಾನೇ ಜೆಂಟಲ್ ಮತ್ತು accepting ಮಾಡಿದೆ. ನಾನು ಮುಂಚೆ ಸದಾ ಕೆಲಸ ಮಾಡಿಕೊಂಡು ಕೆಲಸದ ಬಗ್ಗೆ ಚಿಂತಿಸುತ್ತಿದ್ದೆ. ಈಗ ನಾನು ಈ ಪ್ರಾಸೆಸ್‌ ಅನ್ನು ಖುಷಿ ಪಡುತ್ತಿರುವೆ. ಸುಲಭವಾಗಿ ಎಂಜಾಯ್ ಮಾಡುತ್ತಿರುವೆ,' ಎಂದು ನಟಿ ಹೇಳಿದ್ದಾರೆ. 

ಸ್ನೇಹಿತ ರಾಹುಲ್ ವಿರುದ್ಧ ವಂಚನೆ ದೂರು ನೀಡಿದ ಸಂಜನಾ ಗಲ್ರಾನಿ!

'ಬ್ಯಾಕ್ ಟು ಬ್ಯಾಕ್ ಮಕ್ಕಳು ಮಾಡಿಕೊಂಡು ಅವರ ಜಬಾವ್ದಾರಿ ಮುಗಿಸಿಕೊಂಡರೆ ಚೆನ್ನಾಗಿರುತ್ತದೆ. ಸಬ್ಯಾಟಿಕಲ್ ತೆಗೆದುಕೊಂಡು ಮಕ್ಕಳ ಜೊತೆ ಸಮಯ ಕಳೆದ ಅನಂತರ ನಾನು ಮತ್ತೆ ಕೆಲಸ ಆರಂಭಿಸುವುದು ಚೆನ್ನಾಗಿರುತ್ತದೆ. ನಾನು ಪ್ರೆಗ್ನೆಂಟ್ ಆಗಿರುವುದು ನನ್ನನ್ನು ಸ್ಟ್ರಾಂಗ್ ಮಾಡಿದೆ. ಯಾವುದೇ ಫಿಲ್ಮಂ ಬ್ಯಾಗ್ರೌಂಡ್‌ ಇಲ್ಲದೆ ನಾನು ಸಿನಿಮಾ ಕ್ಷೇತ್ರದಲ್ಲಿ ಇಷ್ಟು ವರ್ಷ ಕೆಲಸ ಮಾಡಿದ್ದೀನಿ. ಬಹುಭಾಷಾ ಸಿನಿಮಾಗಳಲ್ಲಿ ಕೆಲಸ ಮಾಡಿದ್ದೀನಿ. ಎರಡು ಮೂರು ತಿಂಗಳು ಕಷ್ಟ ಸಮಯ ಎದುರಿಸಿದ ತಕ್ಷಣ ನನ್ನ ವೃತ್ತಿ ಜೀವನ ಜಡ್ಜ್‌ ಮಾಡುವುದು ತಪ್ಪು. ನನಗಿಂತ ನನ್ನ ಪಕ್ಕ ಇದ್ದವರಿಗೆ ನೋವು ಹೆಚ್ಚಾಗಿತ್ತು. ಈ ಘಟನೆಯಿಂದ ನಾನು ಜೀವನದಲ್ಲಿ grounded ಆಗಿರುವೆ. ತಾಯಿತನ ನನ್ನ ಜೀವನದಲ್ಲಿ ಸಂತೋಷ ತರಲಿದೆ ಎಂದು ನಂಬಿರುವೆ' ಎಂದು ಸಂಜನಾ ಮಾತು ಮುಗಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?