
ಕಲರ್ಸ್ ಸೂಪರ್ (Colors Super) ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಜಾ ಭಾರತ (Maja Bharata) ಕಾಮಿಡಿ ಶೋನಲ್ಲಿ ಲ್ಯಾಗ್ ಮಂಜು (Lag Manju) ಆಗಿ ಗುರುತಿಸಿಕೊಂಡ ಕಲಾವಿದ ಮಂಜು ಪಾವಗಡ (Manju Pavagada) ಇಂದು ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟರ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಪಾತ್ರ ಯಾವುದಾದರೂ ಸರಿ ಎಲ್ಲಾ ಪಾತ್ರಗಳನ್ನೂ ಮಾಡುವ ಕಲಾವಿದನಾಗಿ ಗುರುತಿಸಿಕೊಳ್ಳಬೇಕು ಎನ್ನುವ ಆಸೆ ಇವರದಾಗಿತ್ತು.
ಮಂಜು ಇಂದು ದಾವಣಗೆರೆಯಲ್ಲಿ (Davanagere) ಹೊಸ ಸಿನಿಮಾ ಚಿತ್ರೀಕರಣ ಆರಂಭಿಸಿದ್ದಾರೆ. ಈ ಚಿತ್ರಕ್ಕೆ ಸಿಎಂ ರಾಜಕೀಯ ಕಾರ್ಯದರ್ಶಿ ಹೊನ್ನಾಳಿ ಶಾಸಕ ರೇಣುಕಾಚಾರ್ಯ (Renukacharya) ಚಾಲನೆ ನೀಡಿದ್ದಾರೆ. ಮಲ್ಲಿಗೇನಹಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಈ ಚಿತ್ರೀಕರಣಕ್ಕೆ ನಾಗರಾಜ್ (Director Nagaraj) ನಿರ್ದೇಶನ ಮಾಡಿದ್ದಾರೆ. ನಾಗರಾಜ್ ಅವರು ಹುಟ್ಟೂರು ಕೂಡ ಮಲ್ಲಿಗೇನಹಳ್ಳಿ ಗ್ರಾಮದ ಹುಡುಗ. ಈ ಚಿತ್ರಕ್ಕೆ ಪಾಂಪ್ಲೇಟ್ (Pamplate) ಎಂದು ಶೀರ್ಷಿಕೆ ನೀಡಲಾಗಿದೆ.
ಮಂಜು ಪಾವಗಡ ಮತ್ತು ನಟಿ ಸಿರಿ ಪ್ರಹ್ಲಾದ್ (Siri Prahalad) ಜೋಡಿಯಾಗಿ ನಟಿಸುತ್ತಿರುವ ಈ ಚಿತ್ರದ ಪೂಜೆ ಮಲ್ಲಿಗೇನಹಳ್ಳಿಯಲ್ಲಿರುವ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಕ್ಯಾಮೆರಾ ಬಟನ್ ಆನ್ ಮಾಡುವ ಮೂಲಕ ರೇಣುಕಾಚಾರ್ಯ ಚಾಲನೆ ನೀಡಿದ್ದಾರೆ.
ಮಜಾ ಭಾರತ ಶೋ ನಂತರ ಮಂಜು ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಬಿಗ್ ಬಾಸ್ ಸೀಸನ್ 8ರ (Bigg Boss 8) ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಈ ಸೀಸನ್‌ನಲ್ಲಿ ಅತಿ ಹೆಚ್ಚು ಮನೋರಂಜನೆ ನೀಡಿದ ಕಲಾವಿದ ಹಾಗೇ ಅತಿ ಹೆಚ್ಚು ಟಾಸ್ಕ್ ಗೆದ್ದಿರುವ ಹಳ್ಳಿ ಹೈದರಾಗಿ ಗುರುತಿಸಿಕೊಂಡಿದ್ದರು. ಕಾಮಿಡಿ ಶೋಗಿಂತ ಬಿಗ್ ಬಾಸ್‌ನಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆದ ಮಂಜು ಸೀಸನ್ 8ರ ಟ್ರೋಫಿ ಕೂಡ ಪಡೆದುಕೊಂಡರು. ಇದಾಗ ನಂತರ ಬ್ಯಾಕ್ ಟು ಬ್ಯಾಕ್ ಟಿವಿ ಸಂದರ್ಶನದಲ್ಲಿ ಕಾಣಿಸಿಕೊಂಡರು. ಈ ವೇಳೆ ಲ್ಯಾಜ್ ಮಂಜುಗೆ ಸಿನಿಮಾ ಆಫರ್‌ಗಳು ಹರಿದು ಬಂತು.
ಲವ್ ಯು 2 (Love You 2), ನಾನು ನನ್ನ ಜಾನು ಮತ್ತು ಈಗ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಜೊತೆ ರೈಡರ್ (Rider) ಸಿನಿಮಾದಲ್ಲಿ ನಟಿಸಿದ್ದಾರೆ. ಕೆಲವು ದಿನಗಳ ಹಿಂದೆ ಗಾಯಕಿ ಸಂಗೀತ ರಾಜೀವ್ (Sangeetha Rajeev) ಅವರ ಜೊತೆ ಸೇರಿ ನಾನು ಮುಟ್ಟಿದ್ದೆಲ್ಲ ಚಿನ್ನ ಎಂಬ ಆಲ್ಬಂ ಹಾಡಿನಲ್ಲಿ ಬಿಡುಗಡೆ ಮಾಡಿದ್ದರು. ಯುಟ್ಯೂಬ್‌ನಲ್ಲಿ ಈ ವಿಡಿಯೋ ಸಖತ್ ವೈರಲ್ ಆಗಿದ್ದು, ಮಂಜುನ ಮೊದಲ ಬಾರಿ ಕ್ಲಾಸ್ ಆ್ಯಂಡ್ ಮಾಸ್ ಲುಕ್‌ನಲ್ಲಿ ನೋಡಿ ಶಾಕ್ ಅಗಿದ್ದಾರೆ. ಅನೇಕ ಕಿರುತೆರೆ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದಾರೆ.
ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್ (Divya Suresh) ಸ್ನೇಹದ ಬಗ್ಗೆ ಗಾಸಿಪ್ ಹರಿದಾಡುತ್ತಿತ್ತು. ಇವರಿಬ್ಬರೂ ಮದುವೆ ಅಗುತ್ತಾರೆ ಅದು ಇದು ಎಂಬ ಸುದ್ದಿ ಹರಿದಾಡುತ್ತಿದ್ದವು. ಆದರೆ ನಾವು ಸ್ನೇಹಿತರು ಎಂಬ ವಿಚಾರವನ್ನು ಮಂಜು ಸ್ಪಷ್ಟಪಡಿಸಿದ್ದಾರೆ.
ಕೆಲವು ದಿನಗಳ ಹಿಂದೆ ಪ್ರಸಾರವಾದ ರಂಗು ರಂಗೋಲಿ ಟಿವಿ ಕಾರ್ಯಕ್ರಮದಲ್ಲಿ ಮಂಜು ಮದುವೆ ಹೆಣ್ಣು ಹುಡುಕುವ ಕೆಲಸ ಮಾಡಿದ್ದಾರೆ. ರಾಮಚಾರಿ (Ramachari) ಸಿನಿಮಾ ಸ್ಟೈಲ್‌ನಲ್ಲಿ ಸೀರೆ, ತಾಳಿ ಮತ್ತು ಕುಂಕುಮವನ್ನು ಬಾಗಿನದಲ್ಲಿ ಇಟ್ಟುಕೊಂಡು ಹುಡುಕಿದ್ದಾರೆ. ಪ್ರತಿಯೊಬ್ಬ ಕಿರುತೆರೆ ನಟಿಯೂ ಮಂಜಣ್ಣ ಎಂದು ಕರೆಯುತ್ತಿದ್ದ ಕಾರಣ ನಾನು ಮೊದಲು ವೈಷ್ಣವಿ ಗೌಡಗೆ (Vaishnavi Gowda) ಹೊಡೆಯಬೇಕು. ಎಲ್ಲಿ ಹೋದರೂ ಯಾರೇ ಮಾತನಾಡಿಸಿದರೂ ಮಂಜಣ್ಣ ಮಂಜಣ್ಣ ಎಂದು ಕರೆಯುತ್ತಾರೆ ಎಂದು ಕಾಲೆಳೆದಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.