ಅಪ್ಪನಿಗಾಗಿ ಬಂದ ಹೊಸ ಹಾಡು, ಕಾನ್ಸ್‌ನಲ್ಲಿ ಮೆಚ್ಚುಗೆ ಪಡೆದ ಚಿತ್ರದ ಟ್ರೇಲರ್: ಸಿನಿರಂಗದಲ್ಲಿ ಏನಾಗುತ್ತಿದೆ?

ಅಪ್ಪನಿಗಾಗಿ ಬಂದ ಹೊಸ ಹಾಡು, ಕಾನ್ಸ್‌ನಲ್ಲಿ ಮೆಚ್ಚುಗೆ ಪಡೆದ ಚಿತ್ರದ ಟ್ರೇಲರ್: ಸಿನಿರಂಗದಲ್ಲಿ ಏನಾಗುತ್ತಿದೆ?

Published : Jun 09, 2026, 05:49 PM IST

ಕನ್ನಡ‌ ಚಿತ್ರರಂಗದಲ್ಲಿ ಅಮ್ಮನ ಕುರಿತು ಸಾಕಷ್ಟು ಹಾಡುಗಳು ಬಂದಿವೆ. ಆದ್ರೆ ಅಪ್ಪನ ಪ್ರೀತಿಯನ್ನು ಸಂಭ್ರಮಿಸುವ ಹೊಸ ಹಾಡು ಸಿನಿಮಾ ಪ್ರೇಮಿಗಳನ್ನು ಸೆಳೆಯುತ್ತಿದೆ. ಅದುವೇ ಅವ್ವನಂತ ಅಪ್ಪನಿವನು.

'ಪ್ರೇಮದ ಊರಲ್ಲಿ' ಸಿನಿಮಾದಿಂದ ಬಂತು ಅಪ್ಪನಿಗಾಗಿ ಹೊಸ ಹಾಡು: ಕನ್ನಡ‌ ಚಿತ್ರರಂಗದಲ್ಲಿ ಅಮ್ಮನ ಕುರಿತು ಸಾಕಷ್ಟು ಹಾಡುಗಳು ಬಂದಿವೆ. ಆದ್ರೆ ಅಪ್ಪನ ಪ್ರೀತಿಯನ್ನು ಸಂಭ್ರಮಿಸುವ ಹೊಸ ಹಾಡು ಸಿನಿಮಾ ಪ್ರೇಮಿಗಳನ್ನು ಸೆಳೆಯುತ್ತಿದೆ. ಅದುವೇ ಅವ್ವನಂತ ಅಪ್ಪನಿವನು.‌ ಮ್ಯೂಸಿಕಲ್ ಲವ್ ಸ್ಟೋರಿ ಕಥಾಹಂದರ ಹೊಂದಿರುವ ಪ್ರೇಮದ ಊರಲ್ಲಿ ಸಿನಿಮಾ ತಂಡವೀಗ ಅಪ್ಪನ ಕುರಿತಾದದ ಹಾಡು ಬಿಡುಗಡೆ ಮಾಡಿದೆ. ನಿರ್ದೇಶಕ ಮನೋಜ್ ಕುಮಾರ್ ಕ್ಯಾಚಿ ಮ್ಯಾಚಿ ಪದ ಪೊಣಿಸಿದ್ದು, ಸಿದ್ದಾರ್ಥ್ ಸುಂದರ್ ಧ್ವನಿಯಾಗಿದ್ದು, ಸುನಾದ್ ಗೌತಮ್ ಸಂಗೀತ ಒದಗಿಸಿದ್ದಾರೆ. ಅವ್ವನಂತ ಅಪ್ಪನಿವನು ಗೀತೆಯಲ್ಲಿ ಅಪ್ಪನಾಗಿ ರಂಗಾಯಣ ರಘು ಹಾಗೂ ಮಗನಾಗಿ ಶ್ರೀರಾಮ್ ನಟಿಸಿದ್ದಾರೆ. ಪ್ರೇಮದ ಊರಲ್ಲಿ ಸಿನಿಮಾದಲ್ಲಿ ಶ್ರೀರಾಮ್‌ ನಾಯಕನಾಗಿ ನಟಿಸಿದ್ದು, ನಟಿಯರಾದ ತಪಸ್ವಿನಿ ಪೂಣಚ್ಚ ಹಾಗೂ ರಮಿಕಾ ಶಿವು ಜೊತೆಯಾಗಿದ್ದಾರೆ.

ಕೆವಿಎನ್ ನಿರ್ಮಾಣದ 'ಬಾಲನ್ ದಿ ಬಾಯ್' ಸಿನಿಮಾದ ಟ್ರೇಲರ್ ಬಿಡುಗಡೆ: ದಕ್ಷಿಣ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಕೆವಿಎನ್ ಸಾಲು ಸಾಲು ಸಿನಿಮಾಗಳನ್ನು ನಿರ್ಮಾಣ ಮಾಡ್ತಿದೆ. ಇದೀಗ 2024ರಲ್ಲಿ ತೆರೆಕಂಡ ಮಲಯಾಳಂನ ಹಿಟ್‌ ಸಿನಿಮಾ ‘ಮಂಜುಮ್ಮೆಲ್‌ ಬಾಯ್ಸ್‌’ನ ನಿರ್ದೇಶಕ ಚಿದಂಬರಂಗೆ ಕೆವಿಎನ್ ಅವಕಾಶ‌ ನೀಡಿದೆ. ಚಿದಂಬರಂ ನಿರ್ದೇಶನದಲ್ಲಿ ಈಗ ‘ಬಾಲನ್‌ ದಿ ಬಾಯ್‌’ ಚಿತ್ರ ಸಿದ್ಧವಾಗಿದ್ದು, ಈ ಸಿನಿಮಾವನ್ನು ಅಂತರಾಷ್ಟ್ರೀಯ ವೇದಿಕೆಯಾದ ಕಾನ್ಸ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿದೆ. ಇದೀಗ  ‘ಬಾಲನ್‌ ದಿ ಬಾಯ್‌’  ಸಿನಿಮಾದ ಟ್ರೇಲರ್​ ಬಿಡುಗಡೆ ಆಗಿದೆ. ಓರ್ವ ಬಾಲಕನ ಸುತ್ತ ಸಾಗುವ ಕಥೆಗೆ ಸಸ್ಪೆನ್ಸ್, ಥ್ರಿಲ್ ಅಂಶಗಳನ್ನು ಬ್ಲೆಂಡ್ ಮಾಡಿ ಟ್ರೇಲರ್ ಕಟ್ ಮಾಡಲಾಗಿದೆ.

'ಕಾಮನ್ ಮ್ಯಾನ್' ಮೋಷನ್ ಫೋಸ್ಟರ್ ರಿಲೀಸ್: ಕನ್ನಡದಲ್ಲಿ ಈಗ ಕಾಮನ್ ಮ್ಯಾನ್ ಅನ್ನೋ ಸಿನಿಮಾ ಸಿದ್ಧವಾಗುತ್ತಿದೆ. ಒಬ್ಬ ಸಾಮಾನ್ಯ ಲಾಯರ್ ರಾಜ್ಯದ ಮುಖ್ಯಮಂತ್ರಿ ಹೇಗಾಗ್ತಾನೆ ಎಂದು ಹೇಳುವ ಸಿನಿಮಾ ಕಾಮನ್ ಮ್ಯಾನ್. ಸಮಾಜ ಸೇವಕ ಎನ್. ನರಸಿಂಹಮೂರ್ತಿ ಅವರು ಕಥೆ ಬರೆದು ಸುರಭಿ ಫಿಲಂಸ್ ಅಡಿ‌ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್ ಅವರು  ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ನಿರ್ಮಾಪಕರ ಹುಟ್ಟುಹಬ್ಬದ ಹಿನ್ನೆಲೆ ಬೆಂಗಳೂರಿನಲ್ಲಿ ಸುದ್ದಿಘೋಷ್ಟಿ ಮಾಡಿದ ಚಿತ್ರತಂಡ ಸಿನಿಮಾ ಮೋಷನ್ ಪೋಸ್ಟರ್ ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ಕೆರೆಬೇಟೆ ಖ್ಯಾತಿಯ ಗೌರೀಶಂಕರ್ ನಾಯಕನಾಗಿ ನಟಿಸುತ್ತಿದ್ದು, ಉಳಿದ ಪಾತ್ರಗಳಲ್ಲಿ  ಗಣೇಶರಾವ್ ಕೇಸರಕರ್, ಎಸ್ಕಾರ್ಟ್ ಶ್ರೀನಿವಾಸ್, ಪ್ರಕಾಶ್ ತುಮ್ಮಿನಾಡು ನಟಿಸಿದ್ದಾರೆ.

‘ಕ್ಷೇತ್ರಪಾಲ’ ಚಿತ್ರದ ಶೀರ್ಷಿಕೆ ಮತ್ತು ಟೈಟಲ್ ಮೋಶನ್ ಪೋಸ್ಟರ್ ಬಿಡುಗಡೆ: ಕರಾವಳಿಯ ಪ್ರತೀತಿಯಂತೆ, ಪ್ರತಿ ಕ್ಷೇತ್ರದಲ್ಲೂ ಆ ಕ್ಷೇತ್ರದ ರಕ್ಷಣೆಗೆ ‘ಕ್ಷೇತ್ರಪಾಲ’ನಾಗಿ ದೈವವೊಂದು ಇರುತ್ತದೆ. ಆಯಾಯ ಕ್ಷೇತ್ರದಲ್ಲಿ ನ್ಯಾಯ, ನೀತಿ, ಧರ್ಮವನ್ನು ಪಾಲನೆ-ಪೋಷಣೆ ಮಾಡಿ ಜನರನ್ನು ‘ಕ್ಷೇತ್ರಪಾಲ’ ಕಾಪಾಡುತ್ತಾನೆ ಎಂಬುದು ಕರಾವಳಿ ಜನರ ಬಲವಾದ ನಂಬಿಕೆ. ಅಂಥದ್ದೇ ಒಂದು ನಂಬಿಕೆಯ ಕಥೆಯನ್ನು ಇಟ್ಟುಕೊಂಡು ‘ಕ್ಷೇತ್ರಪಾಲ’ ಚಿತ್ರ ತೆರೆಗೆ ಬರುತ್ತಿದೆ. ಬೆಂಗಳೂರಿನಲ್ಲಿ ಸುದ್ದಿಘೋಷ್ಟಿ ಮಾಡಿದ ಚಿತ್ರತಂಡ ಸಿನಿಮಾದ ಟೈಟಲ್ ಮೋಷನ್ ಪೋಸ್ಟರ್ ರಿಲೀಸ್ ಮಾಡಿದೆ. ಜಗದೀಶ್ ಮಂಜಣ್ಣ ‘ಕ್ಷೇತ್ರಪಾಲ’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದು, ರಾಘವ ಪೂಜಾರಿ ನಾಯಕನಾಗಿ ನಟಿಸಿದ್ದಾರೆ. ಉಳಿದಂತೆ ಬಲರಾಜ್ ವಾಡಿ, ಗೋಪಾಲಕೃಷ್ಣ ದೇಶಪಾಂಡೆ, ಸುಚೇಂದ್ರ ಪ್ರಸಾದ್, ಅದ್ವಿಕಾ ಶೆಟ್ಟಿ, ರಾಘು ರಾಮನಕೊಪ್ಪ, ಗೌತಮಿ ಗೌಡ, ನಮಿತಾ ಕಿರಣ್ ಸಿನಿಮಾದಲ್ಲಿದ್ದಾರೆ.

ಸತ್ಯದೇವ್ 16ನೇ ಸಿನಿಮಾ ಘೋಷಣೆ.. ಸಮವರ್ತಿ ಶೀರ್ಷಿಕೆ ಫಸ್ಟ್ ಲುಕ್ ಅನಾವರಣ: ತೆಲುಗು ಚಿತ್ರರಂಗದಲ್ಲಿ ಭಿನ್ನ ವಿಭಿನ್ನ ಪಾತ್ರಗಳ ಮೂಲಕ ಮಿಂಚಿರುವ ಸತ್ಯದೇವ್‌ ಅವರ 16ನೇ ಸಿನಿಮಾ ಘೋಷಣೆಯಾಗಿದೆ. ಟೈಟಲ್ ಜೊತೆಗೆ ಫಸ್ಟ್ ಲುಕ್ ನ್ನು ಚಿತ್ರತಂಡ ಅನಾವರಣ ಮಾಡಿದೆ. ಚಿತ್ರಕ್ಕೆ ಸಮವರ್ತಿ ಎಂಬ ಶೀರ್ಷಿಕೆ ಇಡಲಾಗಿದೆ. ಸಮವರ್ತಿ ಸಿನಿಮಾಗೆ ಅಜಯ್ ನಾಗ್ ವಿ ಆಕ್ಷನ್ ಕಟ್ ಹೇಳಿದ್ದಾರೆ. ಶಿವಚರಣ್ ರೆಡ್ಡಿ ಜಕ್ಕಿಡಿ ಮತ್ತು ಶಶಿಧರ್ ರೆಡ್ಡಿ ನಿರ್ಮಾಣ ಮಾಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ಮೂಡಿ ಬರಲಿದೆ. 

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
Read more