ಬಿಗ್ ಬಾಸ್‌ ಮಾಡಿದ ನಿರ್ಲಕ್ಷ್ಯದಿಂದ 6 ಸಲ ಆಪರೇಷನ್ ಆಯ್ತು: ಸುಷ್ಮಾ ವೀರ್ ಗರಂ

By Vaishnavi Chandrashekar  |  First Published Apr 17, 2024, 10:19 AM IST

ನೂರೊಂದು ನೆನಪು ಕಾರ್ಯಕ್ರಮದಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಒಪ್ಪಿಕೊಂಡ ನಂತರ ತಮ್ಮ ಆರೋಗ್ಯದಲ್ಲಿ ಆದ ಬದಲಾವಣೆ ಎಷ್ಟು ಪರಿಣಾಮ ಬೀರಿತ್ತು ಎಂದು ಸುಷ್ಮಾ ಹೇಳಿದ್ದಾರೆ.
 


ಕನ್ನಡ ಚಿತ್ರರಂಗ, ರಂಗಭೂಮಿ ಮತ್ತು ಕಿರುತೆರೆ ಲೋಕದಲ್ಲಿ ಮಿಂಚಿರುವ ನಟಿ ಸುಷ್ಮಾ ವೀರ್‌ ಮೊದಲ ಸಲ ಬಿಗ್ ಬಾಸ್ ರಿಯಾಲಿಟಿ ಶೋ ನಂತರ ಹೇಗೆಲ್ಲಾ ತಮ್ಮ ಜೀವನದ ಬದಲಾಗಿತ್ತು ಎಂದು ರಿವೀಲ್ ಮಾಡಿದ್ದಾರೆ. 

'ಬಿಗ್ ಬಾಸ್ ರಿಯಾಲಿಟಿ ಶೊನಲ್ಲಿ ಕಾಣಿಸಿಕೊಂಡಾಗ ಅನೇಕರು ಸರ್‌ಪ್ರೈಸ್ ಆಗಿಬಿಟ್ಟರು ಆದರೆ ಆ ಸಮಯದಲ್ಲಿ ತುಂಬಾ ಪರ್ಸನಲ್ ವಿಚಾರಕ್ಕೆ ಸಿಲುಕಿಕೊಂಡಿದ್ದೆ. ಹಲವು ಸಲ ಆಫರ್ ಕೊಟ್ಟು ಕರೆದಿದ್ದರು, ಇಲ್ಲಿ ಬಿಗ್ ಬಾಸ್ ಸರಿ ತಪ್ಪು ಎಂದು ಹೇಳುತ್ತಿಲ್ಲ ಆದರೆ Bigg boss is not scripted, Bigg Boss is well edited. ವಿಡಿಯೋವನ್ನು ಎಡಿಟ್ ಮಾಡುವಾಗ ಎಡಿಟರ್‌ಗೆ ತಲೆ ಇರಬೇಕು. ಒಂದೆರಡು ಸಲ ಆಗಲ್ಲ ಬರಲ್ಲ ಎಂದು ಹೇಳಿದ್ದೆ ಆದರೆ ಮೂರನೇ ಸಲ ಏನಾಗಿತ್ತು ಕಪ್ಪಣ್ಣ ಅವರು ನಮ್ಮ ಫ್ಯಾಮಿಲಿ ಬಹಳಷ್ಟು ಸಲ ಬಹಳಷ್ಟು ವಿಷಯಗಳಲ್ಲಿ ನಮ್ಮ ಫ್ಯಾಮಿಲಿಗೆ ನಿಂತಿದ್ದಾರೆ..ತಾಯಿಗೆ ಅಣ್ಣಗಾಗಿ ನನಗೆ ಅಂಕಲ್ ಆಗಿ. ಅವರ ಮಗ ಜೆಡಿ ಆಗಷ್ಟೇ ಈ ಕ್ಷೇತ್ರಕ್ಕೆ ಕಾಲಿಟ್ಟಿದ್ದರು ...ಫ್ಯಾಮಿಲಿ ಬಂದು ಕೇಳಿದಾಗ ನಾನು ಬೇಡ ಎಂದು ಹೇಳುವುದಿಲ್ಲ. ಅವರು ಕೇಳಿದಾಗ ಅಮ್ಮ ಕೂಡ ಎರಡು ವಾರ ಅಲ್ವಾ ಹೋಗಿ ಬಾ ಎಂದರು. ಒಪ್ಪಿಕೊಂಡು ಹೋಗಿದ್ದೆ ಅಲ್ಲಿ ಎರಡು ವಾರ ಎಂದವರು ಐದು ವಾರ ಮಾಡಿಬಿಟ್ಟರು' ಎಂದು ರಘುರಾಮ್ ಯುಟ್ಯೂಬ್ ಚಾನೆಲ್‌ನಲ್ಲಿ ಸುಷ್ಮಾ ಮಾತನಾಡಿದ್ದಾರೆ.

Tap to resize

Latest Videos

ಬದುಕುತ್ತೀನಿ ಅಂತ ಗೊತ್ತಿಲ್ಲ ಆದರೆ ನನ್ನ ಗಂಡ ಡಾಕ್ಟರ್ ಕಾಲಿಡಿದು ಅಳುತ್ತಿದ್ದರು: ಗಿಚ್ಚಿ ಗಿಲಿಗಿಲಿ ಪ್ರಿಯಾಂಕಾ ಭಾವುಕ

'ಬಿಗ್ ಬಾಸ್ ವೇದಿಕೆಗೆ ಮಾಸ್ಟರ್ ಆನಂದ್‌ ಸೂಕ್ತ ವ್ಯಕ್ತಿ ಆದರೆ ಅಲ್ಲಿ ತುಂಬಾ ಸಮಸ್ಯೆ ಆಗಿಬಿಟ್ಟಿತ್ತು. ಬಿಗ್ ಬಾಸ್‌ನಿಂದ ಹೊರ ಬಂದ ಮೇಲೆ ತುಂಬಾ ಸಮಸ್ಯೆ ಆಗುತ್ತಿತ್ತು...ನಾನು ಟ್ರಿಗರ್ ಆಗಿರುವುದನ್ನು ಹಾಕುತ್ತಿದ್ದರು, ವಿಷಯ ಹಾಕುತ್ತಿರಲಿಲ್ಲ. ಒಂದು ಘಟನೆಯ ಹಿನ್ನೆಲೆ ಮತ್ತು ಮುನ್ನಲೆ ಹೇಳುತ್ತಿರಲಿಲ್ಲ. ಸೆಲೆಕ್ಟಿವ್ ಸ್ಮಾರ್ಟ್‌ನೆಸ್‌ ಅನ್ನೋದು ಎಡಿಟಿಂಗ್‌ನಲ್ಲಿ ಮಾಡುತ್ತಿದ್ದರು ಅದು ತುಂಬಾ ದೊಡ್ಡ ತಪ್ಪು. ಬಿಗ್ ಬಾಸ್‌ ಕಾರ್ಯಕ್ರಮಕ್ಕೆ ಗನತೆನೇ ಸುದೀಪ್. 24 ಗಂಟೆಗೆ ಕುಳಿತುಕೊಂಡು ಬಿಗ್ ಬಾಸ್ ಎಪಿಸೋಡ್‌ಗಳನ್ನು ಸುದೀಪ್ ನೋಡಲಿ ಎಂದು ನಿರೀಕ್ಷೆ ಮಾಡುವುದಿಲ್ಲ ಆದರೆ ಕ್ಯಾಪ್ಟನ್ ಆಗಿ ತಮ್ಮ ತಂಡಕ್ಕೆ ಗೌರವನ್ನು ಕೊಟ್ಟೆ ಕೊಡುತ್ತಾರೆ ಟೀಂನ ಬಿಟ್ಟಿ ಕೊಡುವ ಲೀಡರ್ ಅಲ್ಲ.  ಆ ಪರಿಸ್ಥಿತಿಯಲ್ಲಿ ಏನು ಎಡಿಟ್‌ ಮಾಡಿಕೊಡುತ್ತಿದ್ದರು ಅದೇ ಫೈನಲ್ ಆಗುತ್ತಿತ್ತು. ಅಲ್ಲಿ ರೆಹೆಮಾನ್ ಮತ್ತು ನೇಹಾ ಅಫೇರ್‌ನಲ್ಲಿ ಹಾಕಿಬಿಟ್ಟಿದ್ದರು ಅದರಿಂದ ಆಕೆ ಮದುವೆ ಮುರಿದು ಬಿತ್ತು. ಈ ವಿಚಾರದಲ್ಲಿ ಸುದೀಪ್ ಅವರನ್ನು ದೂರಲು ಆಗಲ್ಲ ನೋಡುತ್ತಿರುವ ವೀಕ್ಷಕರನ್ನು ದೂರಲು ಅಗಲ್ಲ' ಎಂದು ಸುಷ್ಮಾ ಹೇಳಿದರು.

ಹೀಟ್‌ನಿಂದ 7 ಸಾರಿ ಅಬಾರ್ಷ್ ಆಗಿತ್ತು; ತಾಯಿ ಕಷ್ಟ ನೆನೆದು ಭಾವುಕಾರದ ಸುಶ್ಮಿತಾ

'ನನ್ನ ಸೀಸನ್‌ನಲ್ಲಿದ್ದ ಪ್ರತಿಯೊಬ್ಬರನ್ನು ನೀವು ಕೇಳಬಹುದು..ನನಗೆ ಮೆಡಿಕೇಷನ್‌ ಕೊಡುವುದು ನಿಲ್ಲಿಸಿಬಿಟ್ಟರೆ ಇದರಿಂದ 7.8mm ಕ್ಲಾಟ್‌ ನನ್ನ ಲೆಫ್ಟ್‌ ಆಟ್ರಿಯಲ್ಲಿ ಆಗಿಬಿಟ್ಟಿತ್ತು. ನನಗೆ 23 ಸರ್ಜರಿ ಆಗಿತ್ತು ಎಂದು ಅಲ್ಲಿದ್ದವರಿಗೂ ಗೊತ್ತಿತ್ತು ಆದರೂ ಔಷದಿ ಕೊಡಲಿಲ್ಲ. ಏಸಿಯಲ್ಲಿ ಇರುವಂತೆ ಇರಲಿಲ್ಲ ನೀರಿನಲ್ಲಿ ಇಳಿಯುವಂತೆ ಇರಲಿಲ್ಲ...ಆದರೂ ಅದನ್ನು ಮಾಡಿಸಿಬಿಟ್ಟರು. ಹೊರ ಬಂದ ಮೇಲೆ 6 ಸರ್ಜರಿ ಆಯ್ತು. ನಾನು ಬಿಗ್ ಬಾಸ್‌ನ ದೂರುತ್ತಿರುವೆ ಅಂದುಕೊಳ್ಳುತ್ತಾರೆ ಆದರೆ ಒಪ್ಪಿಕೊಳ್ಳುವ ಮುನ್ನ ಹೇಳಿದ ಮಾತುಗಳನ್ನು ಮುರಿದಿದ್ದಾರೆ. ಬಿಗ್ ಬಾಸ್‌ ಮನೆಯಲ್ಲಿದ್ದ ಇನ್ನಿತ್ತರ ಸ್ಪರ್ಧಿಗಳು ನನ್ನ ಪರ ಔಷಧಿಗಳನ್ನು ಕೇಳುತ್ತಿದ್ದರು. ನನಗೆ ಆಗಲೇ ಬೆನ್ನು ಆಪರೇಷನ್ ಆಗಿತ್ತು ಆದರೂ ನನ್ನ ಶ್ರಮ ಹಾಕಿ ಕೆಲಸ ಮಾಡಿದ್ದೀವಿ. ಅಷ್ಟೆಲ್ಲಾ ಆರೋಗ್ಯ ಸಮಸ್ಯೆ ಇದ್ದರೂ ಔಷದಿ ಕೇಳಿದ್ದರೂ ಕೊಡುತ್ತಿರಲಿಲ್ಲ. ಬಿಗ್ ಬಾಸ್‌ ಹೊರ ಬಂದ ಮೇಲೆ ನನಗೆ ರಕ್ತ 5.2 ಆಗಿಬಿಟ್ಟಿತ್ತು' ಎಂದಿದ್ದರು ಸುಷ್ಮಾ. 

click me!