ತಮ್ಮ ಜೀವನದ ಸೂಪರ್ ಸ್ಟಾರ್ ಯಾರೆಂದು ಪ್ರಶ್ನೆ ಮಾಡಿದಾಗ ಮೊದಲು ಪ್ರಿಯಾಂಕಾ ಹೇಳಿದ್ದು ಗಂಡನ ಹೆಸರು..ಯಾಕೆ ಗೊತ್ತಾ?
ಮಜಾ ಭಾರತ ಮತ್ತು ಗಿಚ್ಚಿ ಗಿಲಿಗಿಲಿ ಕಾಮಿಡಿ ಕಾರ್ಯಕ್ರಮಗಳ ಮೂಲಕ ವೀಕ್ಷಕರ ಪ್ರೀತಿ ಗಳಿಸಿರುವ ಪ್ರಿಯಾಂಕಾ ಸುವರ್ಣ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ಭಾವುಕರಾಗಿದ್ದಾರೆ. ಕಳೆದ ವರ್ಷ ಅಮಿತ್ ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರಿಯಾಂಕಾ ತಮ್ಮ ಜೀವನದ ಸೂಪರ್ ಸ್ಟಾರ್ ಗಂಡ ಅಮಿತ್ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
'ಮದುವೆ ಮೊದಲು ಸೂಪರ್ ಸ್ಟಾರ್ ಯಾರೆಂದು ಕೇಳಿದ್ದರೆ ತಂದೆ ತಾಯಿ ಎಂದು ಹೇಳುತ್ತಿದ್ದೆ ಆದರೆ ನನ್ನ ಜೀವನದಲ್ಲಿ ನಡೆದ ದೊಡ್ಡ ಘಟನೆ ನಂತರ ನನ್ನ ಜೀವನದ ಸೂಪರ್ ನನ್ನ ಗಂಡ ಆಗಿಬಿಟ್ಟರು. ಒಂದು ಸಮಯದಲ್ಲಿ ನನಗೆ ಡಿಸ್ಕ್ ಬ್ಲಜ್ ಆಗಿ ಆಪರೇಷನ್ ಆಗಿತ್ತು ಆ ಸಮಯದಲ್ಲಿ ನನ್ನ ಮದುವೆಯ ತಾಂಬೂಲ ಬದಲಾವಣೆ ಅಷ್ಟೇ ಆಗಿತ್ತು ಆದರೆ ಇಡೀ ಊರಿಗೆ ಹುಡುಗಿ ಫಿಕ್ಸ್ ಆಗಿದ್ದಾನೆ ಎಂದು ಹೇಳಿದ್ವಿ. ಸುಮಾರು 8 ತಿಂಗಳ ಕಾಲ ನಾನು ಹಾಸಿಗೆ ಹಿಡಿದು ಬಿಟ್ಟೆ ನಾನ್ ಸ್ಟಾಪ್ ಆಪರೇಷನ್ ಆಗುತ್ತಿತ್ತು ಅಲ್ಲದೆ ವೈದ್ಯರು ನಾನು ಬದುಕುವುದಿಲ್ಲ..ಒಂದು ವೇಳೆ ಬದುಕಿದರೂ ನಾನು ನಡೆಯುವುದಿಲ್ಲ ಎಂದು ಹೇಳಿಬಿಟ್ಟರು. 70% ನನ್ನ ದೇಹ ಪೂರ್ತಿ ಇನ್‌ಫೆಕ್ಷನ್ ಆಗಿತ್ತು. ನೆನಪಿಲ್ಲ ಅಷ್ಟು ಅಸ್ಪತ್ರೆಗಳಿಗೆ ಭೇಟಿ ನೀಡಿದ್ದೀನಿ. ಆಗ ನನಗೆ ಸ್ಟಿರಾಯ್ಡ್ ಕೊಟ್ಟು ಮಲಗಿಸುತ್ತಿದ್ದರು' ಎಂದು ಪ್ರಿಯಾಂಕಾ ಮಾತನಾಡಿದ್ದಾರೆ.
ಹೀಟ್‌ನಿಂದ 7 ಸಾರಿ ಅಬಾರ್ಷ್ ಆಗಿತ್ತು; ತಾಯಿ ಕಷ್ಟ ನೆನೆದು ಭಾವುಕಾರದ ಸುಶ್ಮಿತಾ
'ಆ ಸಮಯದಲ್ಲಿ ನಾನು ಮಗಳು ಕುಟುಂಬದವಳು ಎಂದು ತಂದೆ-ತಾಯಿ, ಅಕ್ಕ-ತಂಗಿ ಪ್ರೀತಿ ಕೊಡುತ್ತಿದ್ದರು ಆದರೆ ಆ ಸಮಯದಲ್ಲಿ ನನ್ನ ಗಂಡ ಆಗಬೇಕು ಇನ್ನೂ ಆಗಿಲ್ಲ ಆದರೂ ಒಂದು ವರ್ಷ ಕೆಲಸ ಬಿಟ್ಟು ನನ್ನ ತಾಯಿ ಜೊತೆ ನಿಂತು ನನ್ನನ್ನು ನೋಡಿಕೊಂಡಿದ್ದಾರೆ. ತಾಂಬೂಲ ಬದಲಾಗಿರುವುದು ಅಷ್ಟೇ ಈ ಹುಡುಗಿ ಬೇಡ ಬಿಟ್ಟು ಬಿಡು ಎಂದು ಅನೇಕರು ಹೇಳಿದ್ದರು ಆದರೂ ಇಲ್ಲ ಆಕೆ ನನ್ನನ್ನು ನಂಬಿದ್ದಾಳೆ ಆಕೆನೇ ನಾನು ಮದುವೆ ಮಾಡಿಕೊಳ್ಳುವುದು ಎಂದು ಎಲ್ಲರನ್ನು ಎದುರು ಹಾಕಿಕೊಂಡರು.'ಎಂದು ಪ್ರಿಯಾಂಕಾ ಹೇಳಿದ್ದಾರೆ.
'ಎರಡನೇ ಆಪರೇಷನ್‌ಗೆ ನಾನು ಹೋಗುತ್ತಿರುವಾಗ ನಡೆದ ಘಟನೆ ನೆನಪಿದೆ, ನಾನು ಬದುಕುತ್ತೀನಿ ಇಲ್ಲ ಗೊತ್ತಿಲ್ಲ ಅದಿಕ್ಕೆ ಡಾಕ್ಟರ್ ಸಹಿ ಮಾಡಿಸಿಕೊಂಡಿದ್ದರು ಆ ಸಮಯದಲ್ಲಿ ನನ್ನ ಗಂಡ ಡಾಕ್ಟರ್‌ನ ಬಿಗಿಯಾಗಿ ಹಿಡಿದುಕೊಂಡು ಆಕೆ ನಡೆಯುವಂತೆ ಆಗದಿದ್ದರೂ ಪರ್ವಾಗಿಲ್ಲ ಆಕೆಯನ್ನು ಬದುಕಿಸಿಕೊಡಿ ಎನ್ನುತ್ತಿದ್ದರು. ಎಷ್ಟು ಒಳ್ಳೆ ಹುಡುಗನನ್ನು ಮದುವೆ ಮಾಡಿಕೊಳ್ಳುತ್ತಿದ್ದಿನಿ ಅನಿಸಿದ್ದು ಯವಾಗಲೇ. ಆಪರೇಷನ್ ಆದ್ಮೇಲೆ ನನ್ನ ತಾಯಿ ಮಾಡುತ್ತಿದ್ದ ಕೆಲಸಗಳನ್ನು ಅವರು ಮಾಡುತ್ತಿದ್ದರು...ನನ್ನ ಡೈಪರ್ ಕೂಡ ಬದಲಾಯಿಸಿದ್ದಾರೆ. ಸುಮಾರು 8 ತಿಂಗಳ ಕಾಲ ಸ್ನಾನ ಮಾಡಿ ಏನೂ ಇಲ್ಲ ನಾನು ಅಷ್ಟು ಗಲೀಜ್ ಆಗಿದ್ದೀನಿ ಅನಿಸುತ್ತದೆ ಆದರೂ ನನ್ನ ಪಕ್ಕದಲ್ಲಿ ಮಲಗುತ್ತಿದ್ದರು. ಒಂದು ನಿಮಿಷವೂ ನನ್ನನ್ನು ಬಿಟ್ಟು ಇರುತ್ತಿರಲಿಲ್ಲ ಸ್ನಾನಕ್ಕೆ ಹೋದರೂ ನನ್ನ ತಂಗಿಯನ್ನು ಪಕ್ಕದಲ್ಲಿ ಬಿಟ್ಟು ಹೋಗುತ್ತಿದ್ದರು. ಹೀಗಾಗಿ ನನ್ನ ಜೀವನದ ಸೂಪರ್ ಸ್ಟಾರ್ ನನ್ನ ಗಂಡ' ಎಂದಿದ್ದಾರೆ ಪ್ರಿಯಾಂಕಾ.