
ಕನ್ನಡ ಎರಡು ಸಿನಿಮಾಗಳಲ್ಲಿ ನಟಿಸಿರುವ ತಮಿಳು ನಟಿ ಸ್ನೇಹಾ ಮತ್ತು ಪತಿ ಪ್ರಸನ್ನ ವಿಚ್ಚೇದನ ಪಡೆಯುತ್ತಾರೆ ಎನ್ನುವ ಸುದ್ದಿ ಎಲ್ಲೆಡೆ ಹಬ್ಬಿದೆ. ಮುದ್ದಾದ ಮಕ್ಕಳಿದ್ದರೂ ಯಾವ ಕಾರಣಕ್ಕೆ ದೂರವಾಗುತ್ತಿದ್ದಾರೆ ಎನ್ನುವ ವಿಚಾರ ಯಾರಿಗೂ ಗೊತ್ತಿದೆ. ಆದರೆ ಪರೋಕ್ಷವಾಗಿ ಸ್ನೇಹ ಸಂಬಂಧಗಳ ಬಗ್ಗೆ ಚರ್ಚಿಸಿದ್ದಾರೆ.
'ಜೀವನದಲ್ಲಿ ಪೊಸೆಸಿವ್‌ನೆಸ್ ಬೇರೆ ನಂಬಿಕೆ ಬೇರೆ. ಹೆಚ್ಚು ಪೊಸೆಸಿವ್ ಅಗಿಬಿಟ್ಟರೆ ನಂಬಿಕೆ ಬ್ಯಾಲೆನ್ಸ್ ಮಾಡುವುದು ಕಷ್ಟ. ಮತ್ತೊಬ್ಬರಿಗೆ ಈ ಪೊಸೆಸಿವ್‌ನೆಸ್ ಅರ್ಥವಾಗುವುದಿಲ್ಲ. ಎಲ್ಲಿ ಹೋಗುತ್ತೀರಾ ಏನು ಮಾಡುತ್ತಿದ್ದೀರಾ ಎಂದು ಪದೇ ಪದೇ ಪ್ರಶ್ನೆ ಮಾಡಿದರೆ ಅದು ಪೊಸೆಸಿವ್‌ನೆಸ್ ಒಂದೇ ಅಲ್ಲ ನಂಬಿಕೆ ಕೂಡ ಆಗಿರಬಹುದು. ಒಬ್ಬರನ್ನು ಇನ್ನೊಬ್ಬರು ಅರ್ಥಮಾಡಿಕೊಂಡೆ ಸಮಸ್ಯೆ ಆಗಲ್ಲ. ಇಲ್ಲವಾದರೆ ಏನ್ ಮಾಡಿದರೂ ತಪ್ಪಾಗುತ್ತದೆ' ಎಂದು ಸ್ನೇಹಾ ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಬಾಯ್‌ಫ್ರೆಂಡ್‌ಗೆ ಕಿಸ್ ಮಾಡಿದ ತೇಜಸ್ವಿನಿ ಆನಂದ್‌ಕುಮಾರ್; ಅನುಪಮಾ ಗೌಡ ತಂಗಿ ಫೋಟೋ ವೈರಲ್
'ಏನು ಮಾಡುತ್ತಿದ್ದೀನಿ ಎಲ್ಲಿ ಹೋಗುತ್ತಿದ್ದೀನಿ ಎಷ್ಟು ಹೊತ್ತಿಗೆ ಬರುತ್ತೇನೆ ಎಂದು ಒಬ್ಬರು ಕೇಳುವುದಕ್ಕೂ ಮುನ್ನವೇ ಇನ್ನೊಬ್ಬರು ಹೇಳಬೇಕು. ಅಥವಾ ಅಲ್ಲಿ ಹೋದ ಮೇಲೆ ಸಮಯ ಇದ್ದರೆ ಒಮ್ಮೆ ಫೋನ್ ಮಾಡಿ ಮಾತನಾಡಬೇಕು. ಏನು ಮಾಡುತ್ತಿದ್ದೀರಾ ಹೇಗಿದ್ದೀರಾ ಎಂದು ವಿಚಾರಿಸಿಕೊಲ್ಳಬೇಕು ಇಂತಹ ವಿಷಯಗಳೇ ಇಬ್ಬರಲ್ಲಿ ನಂಬಿಕೆ ಹೆಚ್ಚಿಸುತ್ತದೆ. ಆರಂಭದಲ್ಲಿ ನಾನು ಸ್ವಲ್ಪ ಪೊಸೆಸಿವ್ ಅಗಿದ್ದೆ. ಹಾಗಂತ ನಂಬಿಕೆ ಇರಲಿಲ್ಲ ಅಂತಲ್ಲ. ಮದುವೆ ಆದಮೇಲೆ ಜೀವನ ನಮಗೂ ಬೋರ್ ಆಗುತ್ತದೆ. ನಾನು ಸಾಕಷ್ಟು ಸಲ ಜಗಳ ಮಾಡಿದ್ದೀನಿ..ಜಗಳದ ಬಳಿಕೆ ಇಬ್ಬರೂ ಡೇಟ್ ನೈಟ್ ಹೋಗಿ ಮಾತನಾಡಿಕೊಂಡು ಸರಿ ಮಾಡಿಕೊಳ್ಳುತ್ತೇನೆ. ಬಳಿಕ ಮತ್ತೆ ಜೀವನ ಮುಂದುವರೆಯುತ್ತದೆ' ಎಂದು ಸ್ನೇಹಾ ಹೇಳಿದ್ದಾರೆ.
ರಮ್ಯಾ ಔಟ್ ಆಗುತ್ತಿದ್ದಂತೆ ಐಶ್ವರ್ಯ ರಾಜೇಶ್ ಎಂಟ್ರಿ; ಧನಂಜಯ್ ಜೋಡಿ ಸೂಪರ್ ಎಂದ ನೆಟ್ಟಿಗರು
'ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಬೇಕು ಆಗ ಯಾವುದೇ ಸಮಸ್ಯೆ ಇರುವುದಿಲ್ಲ. ಪ್ರಸನ್ನರನ್ನು ಮದುವೆ ಮಾಡಿಕೊಳ್ಳುವ ಮುನ್ನ ನನಗೆ ಒಂದು ಲವ್ ಬ್ರೇಕಪ್ ಆಗಿತ್ತು. ಆ ಸಮಯದಲ್ಲಿ ನಾನು ಮಾನಸಿಕವಾಗಿ ಸಾಕಷ್ಟು ನೋವು ಅನುಭವಿಸಿರುವೆ ಒಂದರ್ಥದಲ್ಲಿ ಖಿನ್ನತೆಗೆ ಜಾರಿದೆ ಎನ್ನಬಹುದು. ಆ ವರ್ಷ ಪೂರ್ತಿ ನನಗೆ ಕೆಟ್ಟದಾಗಿತ್ತು ಜನ ಏನೇನೋ ಮಾತನಾಡುತ್ತಿದ್ದರು. ಈ ಬ್ರೇಕಪ್ ನಡುವೆಗೂ ಸಿನಿಮಾಗಳಲ್ಲಿ ನಟಿಸುತ್ತಿದ್ದ ಅಚ್ಚರಿ ಅಂದ್ರೆ ಅದೇ ವರ್ಷ ನನಗೆ ನಟನೆಯಲ್ಲಿ ರಾಜ್ಯಪ್ರಶಸ್ತಿ ಸಿಕ್ಕಿದೆ. ಆ ವರ್ಷ ನನ್ನ ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ' ಎಂದಿದ್ದಾರೆ ಸ್ನೇಹಾ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.