ಜೈ ಹೋ ಹಾಡಿನ ಬಳಿಕ ಗಾಯಕ ವಿಜಯ್ ಪ್ರಕಾಶ್ ಸಿಂಗರ್ ಆಗಿ ತಮ್ಮ ವೃತ್ತಿ ಬದುಕಿನಲ್ಲಿ ಸಾಕಷ್ಟು ಅವಕಾಶ ಪಡೆದು ಮಿಂಚತೊಡಗಿದರು. ಹಿಂದಿ ಸೇರಿದಂತೆ, ಕನ್ನಡ, ತಮಿಳು, ತೆಲುಗು, ಮಲಯಾಳಂ ಹೀಗೆ ಹಲವು ಭಾಷೆಗಳಲ್ಲಿ ಹಾಡುತ್ತ ತಮ್ಮ ಗಾಯನದ ಕಂಪನ್ನು...
ಕನ್ನಡ ಮೂಲದ ಬಹುಭಾಷಾ ಗಾಯಕ ವಿಜಯ್ ಪ್ರಕಾಶ್ ಅವರು ಇನ್ಮುಂದೆ 'ಡಾ ವಿಜಯ್ ಪ್ರಕಾಶ್'. ಕೆನಡಾದ ಸಂಗೀತ ಕಲಾ ಸಂಸ್ಥೆಯು ಗಾಯಕ ವಿಜಯ್ ಪ್ರಕಾಶ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಈ ಮೂಲಕ ಕನ್ನಡದ ಗಾಯಕ ವಿಜಯ್ ಪ್ರಕಾಶ್ ಮೂಲಕ ಸಂಗೀತಕ್ಕೆ ಮತ್ತೊಂದು ಗೌರವ ಗರಿ ದೊರಕಿದಂತಾಗಿದೆ. ಕೆನಡಾದ (Canada) ಟೊರಾಂಟೋದಲ್ಲಿ (Toronto) 'ರಿಚ್ಮಂಡ್ ಗ್ರಾಬ್ರಿಯಲ್ Richmond Gabriel University'ಮೂಲಕ ಸಂಗೀತ ಕಲೆಗೆ ನೀಡಲಾಗುವ ಗೌರವ್ ಡಾಕ್ಟರೇಟ್ಅನ್ನು ಭಾರತದ, ಅದರಲ್ಲೂ ಮಖ್ಯವಾಗಿ ಕನ್ನಡಿಗ ಸಿಂಗರ್ ವಿಜಯ್ ಪ್ರಕಾಶ್ ಗಳಿಸಿದ್ದಾರೆ.
ಗಾಯಕ ವಿಜಯ್ ಪ್ರಕಾಶ್ ಅವರು ಮೂಲತಃ ಮೈಸೂರಿನ ಗಾಯಕರಾಗಿದ್ದು, ಸಂಗೀತದ ಅಭ್ಯಾಸವನ್ನು ಹೆಚ್ಚಾಗಿ ಮುಂಬೈನಲ್ಲಿ ಮಾಡಿದ್ದಾರೆ. ಹಿಂದಿಯ 'ಸರಗಮಪ' ಸೇರದಂತೆ ಹಲವಾರು ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಸಿ ಗಮನಸೆಳೆದಿದ್ದ ಗಾಯಕ ವಿಜಯ್ ಪ್ರಕಾಶ್ ಅವರು ಸಾಕಷ್ಟು ಹಿಂದಿಯ ಆಲ್ಬಂ ಸಾಂಗ್‌ಗಳಿಗೂ ಧ್ವನಿಯಾಗಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ಚಿತ್ರವಾದ ಭಾರತದ 'ಸ್ಲಂ ಡಾಗ್ ಮಿಲೇನಿಯರ್' ನಲ್ಲಿ 'ಜೈ ಹೋ' ಹಾಡಿಗೆ ಧ್ವನಿಯಾಗುವ ಮೂಲಕ ವಿಜಯ್ ಪ್ರಕಾಶ್ ಬಹಳಷ್ಟು ಪ್ರಸಿದ್ಧಿ ಪಡೆದರು.
undefined
ಕೋವಿಡ್ ಬಳಿಕ ಭಾಷೆ ಬ್ಯಾರಿಕೇಡ್ ಕಿತ್ತೆಸೆದು ನಟಿಸಿದೆ; ನಟಿ ಆಶಿಕಾ ರಂಗನಾಥ್ ಹೀಗೆ ಹೇಳಿದ್ಯಾಕೆ?
ಜೈ ಹೋ ಹಾಡಿನ ಬಳಿಕ ಗಾಯಕ ವಿಜಯ್ ಪ್ರಕಾಶ್ ಸಿಂಗರ್ ಆಗಿ ತಮ್ಮ ವೃತ್ತಿ ಬದುಕಿನಲ್ಲಿ ಸಾಕಷ್ಟು ಅವಕಾಶ ಪಡೆದು ಮಿಂಚತೊಡಗಿದರು. ಹಿಂದಿ ಸೇರಿದಂತೆ, ಕನ್ನಡ, ತಮಿಳು, ತೆಲುಗು, ಮಲಯಾಳಂ ಹೀಗೆ ಹಲವು ಭಾಷೆಗಳಲ್ಲಿ ಹಾಡುತ್ತ ತಮ್ಮ ಗಾಯನದ ಕಂಪನ್ನು ಇಡೀ ಭಾರತಕ್ಕೆ ಪಸರಿಸುವಲ್ಲಿ ಯಶಸ್ವಿಯಾದರು ಗಾಯಕ ವಿಜಯ್ ಪ್ರಕಾಶ್. ಇಂದು ಸೌತ್-ನಾತ್ ಭೇದವಿಲ್ಲದೇ ಎಲ್ಲಾ ಕಡೆ ಸಲ್ಲುವ ಗಾಯಕರಾಗಿ ಬೆಳೆದಿದ್ದಾರೆ ಕನ್ನಡಿಗ ಹೆಮ್ಮೆಯ ವಿಜಯ್ ಪ್ರಕಾಶ್.
'ಆಫ್ರಿಕಾದಲ್ಲಿ ಶೀಲಾ, ಭಾರತದಲ್ಲಿ ಸಾಲ' ಆಗಿದ್ದೇಕೆ, ವಿಕ್ಟೋರಿಯಾ ಫಾಲ್ಸ್ ಮೇಲೆ ಕ್ಯಾಮೆರಾ ಇಟ್ಟಿದ್ರಾ ದ್ವಾರಕೀಶ್!
ಇದೀಗ, ಕೆನಡಾದ ಗೌರವ್ ಡಾಕ್ಟರೇಟ್ ಪಡೆಯುವ ಮೂಲಕ ಡಾ ವಿಜಯ್ ಪ್ರಕಾಶ್ ಆಗಿ ಬದಲಾಗಿರುವ ಅವರು, ತಮ್ಮ ಬದುಕಿನ ಸಂಗೀತದ ಹೊಸದೊಂದು ಮೈಲಿಗಲ್ಲಿಗೆ ಸಾಕ್ಷಿಯಾಗಿದ್ದಾರೆ. ಈ ಸಂತೋಷದ ಘಳಿಗೆಯಲ್ಲಿ ಅವರಿಗೆ ದೇಶ-ವಿದೇಶಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಡಾ ವಿಜಯ್ ಪ್ರಕಾಶ್ ಅವರಿಂದ ಮುಂದೆಐ ಕೂಡ ಇನ್ನು ಹೆಚ್ಚಿನ ಸಂಗೀತ ಸುಧೆ ಸಾಗರೋಪಾದಿಯಲ್ಲಿ ಹರಿದು ಬರಲಿ ಎಂದು ಅವರ ಅಭಿಮಾನಿಗಳು ಹಾರೈಸಿ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಕನ್ನಡಿಗರ ಪರವಾಗಿ ಡಾ ವಿಜಯ್ ಪ್ರಕಾಶ್ ಅವರಿಗೆ 'ಜೈ ಹೋ' ಎನ್ನೋಣ ಅಲ್ಲವೇ?
ಗೋಕಾಕ್ ಚಳುವಳಿಗೆ ಡಾ ರಾಜ್‌ಕುಮಾರ್ ಧುಮುಕುವಂತೆ ಮಾಡಿದ್ದು ಯಾರೆಂಬ ಗುಟ್ಟು ಬಿಚ್ಚಿಟ್ಟ ಇಂದ್ರಜಿತ್ ಲಂಕೇಶ್!