ಬಾಲಿವುಡ್‌ನಲ್ಲಿ ಶಿಲ್ಪಾ, ಸ್ಯಾಂಡಲ್‌ವುಡ್‌ನಲ್ಲಿ ಶ್ವೇತಾ; 'ಇದೆಂತಾ ಹೇರ್‌ ಸ್ಟೈಲ್?'

Suvarna News   | Asianet News
Published : Nov 12, 2021, 04:33 PM IST
ಬಾಲಿವುಡ್‌ನಲ್ಲಿ ಶಿಲ್ಪಾ, ಸ್ಯಾಂಡಲ್‌ವುಡ್‌ನಲ್ಲಿ ಶ್ವೇತಾ; 'ಇದೆಂತಾ ಹೇರ್‌ ಸ್ಟೈಲ್?'

ಸಾರಾಂಶ

ನಟಿ ಸ್ವೇತಾ ಪ್ರಸಾದ್‌ ಹೇರ್‌ ಸ್ಟೈಲ್‌ ಹೊಸ ಟ್ರೆಂಡ್ ಕ್ರಿಯೇಟ್ ಮಾಡುತ್ತಿದೆ. ಸಾಕಷ್ಟು ಪ್ರಶ್ನೆಗಳನ್ನು ಕೇಳುತ್ತಿರುವ ಫಾಲೋವರ್ಸ್....   

ಕನ್ನಡ ಕಿರುತೆರೆ ಜನಪ್ರಿಯ ನಟಿ ಶ್ವೇತಾ ಪ್ರಸಾದ್‌ (Shwetha Prasad) ವೈಯಕ್ತಿಕ ಕಾರಣಗಳಿಂದ ಬಣ್ಣದ ಲೋಕದಿಂದ ಕೊಂಚ ದೂರ ಉಳಿದರೂ, ಸೋಷಿಯಲ್ ಮೀಡಿಯಾದಲ್ಲಿ (Social Media)ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿದ್ದಾರೆ. ಫೋಟೋಶೂಟ್‌ (Photoshoot), ಪಾಲ್ಗೊಳ್ಳುತ್ತಿರುವ ಖಾಸಗಿ ಕಾರ್ಯಕ್ರಮಗಳು (Event) ಸೇರಿದಂತೆ ಅನೇಕ ಹ್ಯಾಪನಿಂಗ್‌ ವಿಚಾರಗಳ ಬಗ್ಗೆ ಅಭಿಮಾನಿಗಳೊಂದಿಗೆ ಮಾಹಿತಿ ಹಂಚಿಕೊಳ್ಳುತ್ತಾರೆ. ಈ ನಡುವೆ ಶ್ವೇತಾ ಹೊಸ ಮೇಕ್‌ ಓವರ್ (Makeover) ಮಾಡಿಕೊಂಡಿದ್ದಾರೆ. 

'ನನಗೆ ಹೇರ್‌ ಕಟ್ (Hair cut) ಮಾಡಿಸುವುದು ಒಂದ ಥೆರಪಿ (Therapy), ತಲೆಯನ್ನು ತುಂಬಾನೇ ಲೈಟ್ ಮಾಡುತ್ತದೆ. ಹೇರ್‌ಸ್ಟೈಲಿಷ್ಟ್‌ ಪ್ರಶಾಂತ್ (Celebrity Hairstylist Prashanth) ಅವರು ನೀಡಿದ ಕರೇಜ್‌ನಿಂದ ನಾನು ಈ ಕ್ರೇಜಿ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಯಿತು.  ಅನುಮಾನ ಪಡಬೇಡಿ ಅಥವಾ ಪ್ರಶ್ನೆ ಕೇಳಬೇಡಿ. ನಿಮ್ಮಷ್ಟೇ ಎಲ್ಲರೂ ಒಳ್ಳೆಯವರು ಅಂದುಕೊಂಡಿರುವೆ. ಇಷ್ಟ ಆಯ್ತು ಇಲ್ವಾ?' ಎಂದು ಬರೆದುಕೊಂಡಿದ್ದಾರೆ. ಕ್ರೇಜಿಯಾಗಿದೆ (Crazy), ಲೈಟ್ ಆಗಿದೆ, ಸೂಪರ್ ಆಗಿದೆ ಎಂದು ನಟಿ ಅನುಪಮಾ ಗೌಡ (Anupama Gowda), ಕಾವ್ಯಾ ಶೆಟ್ಟಿ (Kavya Shetty) ಕಾಮೆಂಟ್ ಮಾಡಿದ್ದಾರೆ.

ಪುನೀತ್‌ ರಾಜ್‌ಕುಮಾರ್ ಚಿತ್ರಕ್ಕೆ ಧ್ವನಿಯಾದ 'ರಾಧಾ ರಮಣ' ಶ್ವೇತಾ ಪ್ರಸಾದ್!

ಇಡೀ ಕೂದಲನ್ನು ಶಾರ್ಟ್ ಆಗಿ ಕಟ್ ಮಾಡಿ, ಆನಂತರ ಕುತ್ತಿಗೆ ಭಾಗದಲ್ಲಿ ಕೂದಲನ್ನು ಶೇವ್‌ (Heade Shave) ಮಾಡಿ ಅದಕ್ಕೊಂದು ಡಿಸೈನ್ ಮಾಡಿಸಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಬಾಲಿವುಡ್ (Bollywood) ನಟಿ ಶಿಲ್ಪಾ ಶೆಟ್ಟಿಯೂ (Shilpa Shetty) ಕೂಡ ಇದೇ ಹೇರ್‌ ಸ್ಟೈಲ್ ಮಾಡಿಸಿಕೊಂಡಿದ್ದರು. ಪತಿ ರಾಜ್‌ಕುಂದ್ರಾ (Raj kundra) ಜೈಲಿನಿಂದ ಮನೆಗೆ ಬರುತ್ತಿದ್ದಂತೆ, ಜೀವನದಲ್ಲೂ ಬದಲಾವಣೆಗಳು ಬೇಕು ಎಂದು ಮಾಡಿಸಿಕೊಂಡಿದ್ದಾರೆ. ಯಾವ ಉದ್ದೇಶವಿಲ್ಲ. ಟ್ರೆಂಡ್‌ಗೆಂದು, (Trend) ಶ್ವೇತಾ ಮಾಡಿಸಿಕೊಂಡಿದ್ದಾರೆ. 

ತುಂಬಾ ದಿನಗಳಿಂದ ಶ್ವೇತಾ ಸೋಷಿಯಲ್ ಮೀಡಿಯಾದಲ್ಲಿ ಏನೂ ಪೋಸ್ಟ್ ಮಾಡದ ಕಾರಣ ಕಾಮೆಂಟ್ (Comment)ನಲ್ಲಿ ಫ್ಯಾನ್ಸ್   ಪ್ರಶ್ನೆ ಮಾಡಿದ್ದಾರೆ. ಸೋಷಿಯಲ್ ಮೀಡಿಯಾ ಡಿಟಾಸ್ಕ್‌ (SM Detox) ಮುಗಿಸಿದ ನಂತರ ಶ್ವೇತಾ ತಾವು ಯೋಗ instructor ಸರ್ಟಿಫಿಕೇಟ್ ಪಡೆದುಕೊಂಡಿರುವುದಾಗಿ ತಿಳಿಸಿದ್ದಾರೆ. ಶ್ವೇತಾ ಅವರ ಫಿಟ್ನೆಸ್ ರಹಸ್ಯವೂ ಫಾಲೋವರ್ಸ್‌ಗೆ ತಿಳಿದಿದೆ. 

ಸಾವಿನ ವದಂತಿ: ರಾಧಾ ಮಿಸ್ is fine ಎಂದ ಪತಿ ಪ್ರದೀಪ

ಆರ್‌ಜೆ (RJ) ಆಗಿ ಕೆಲಸ ಮಾಡುತ್ತಿದ್ದ ಪ್ರದೀಪ್ (Pradeep) ಮತ್ತು ಶ್ವೇತಾ ಈಗಲೂ ಅನೇಕರಿಗೆ ಸ್ಫೂರ್ತಿಯಾಗುತ್ತಾರೆ. ಅವರು ಒಬ್ಬರಿಗೊಬ್ಬರು ಪ್ರೋತ್ಸಾಹಿಸಿಕೊಂಡು, ಸಪೋರ್ಟ್ ಮಾಡುವ ರೀತಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಶ್ವೇತಾ ಹಾಗೂ ಪ್ರದೀಪ್ ಕಾಲೇಜ್‌ (College) ಸ್ನೇಹಿತರು, ಲವ್ ಆಗಿ ಪ್ರದೀಪ್ ಅವರೇ ಮೊದಲು ಪ್ರಪೋಸ್ (Propose) ಮಾಡಿದರು. ಶ್ವೇತಾಗಾಗಿ ಪ್ರದೀಪ್ ತಮ್ಮ ರೆಡಿಯೋ ಸ್ಟೇಷನ್‌ನಲ್ಲಿ ಆಗಾಗ ಲವ್‌ ಸಾಂಗ್ ಕೂಡ ಡೆಡಿಕೇಟ್ ಮಾಡುತ್ತಿದ್ದರಂತೆ, ಮದುವೆಗೂ ಮೊದಲು. 10 ವರ್ಷಗಳ ಕಾಲ ಇಬ್ಬರು ಪ್ರೀತಿಸಿ, ದಾಂಪತ್ಯ ಜೀವನಕ್ಕೆ (Married Life))ಗೆ ಕಾಲಿಟ್ಟರು. ಕೆಲವು ದಿನಗಳ ಹಿಂದೆ ವಿಶೇಷ ಕೇಕ್‌ (Cake) ಮಾಡಿಸಿ, ತಮ್ಮ 7ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದರು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?