Govinda Govinda: ನಟ ಸುಮಂತ್ ಶೈಲೇಂದ್ರ ಹೊಸ ಸಿನಿಮಾ ನ.26ಕ್ಕೆ ರಿಲೀಸ್

By Suvarna News  |  First Published Nov 12, 2021, 1:52 PM IST

ದಿಲ್‌ವಾಲಾ ಸಿನಿಮಾ ಸೇರಿದಂತೆ ಯಂಗ್‌ ಆಂಡ್‌ ಎನರ್ಜಿಟಿಕ್‌ ಆ್ಯಕ್ಷನ್‌ ಸಿನಿಮಾಗಳ ಮೂಲಕವೇ ಚಿತ್ರರಂಗಕ್ಕೆ ಬಂದ ಸುಮಂತ್‌ ಶೈಲೇಂದ್ರ ಈಗ ರೊಮ್ಯಾಂಟಿಕ್‌ ಥ್ರಿಲ್ಲರ್‌ ಗೋವಿಂದ ಗೋವಿಂದ ಚಿತ್ರದ ಮೂಲಕ ಮತ್ತೆ ಬೆಳ್ಳಿತೆರೆ ಮೇಲೆ ಬರುತ್ತಿದ್ದಾರೆ. 
 


'ದಿಲ್‌ವಾಲಾ' (Dilwala) ಸಿನಿಮಾ ಸೇರಿದಂತೆ ಯಂಗ್‌ ಆಂಡ್‌ ಎನರ್ಜಿಟಿಕ್‌ ಆ್ಯಕ್ಷನ್‌ ಸಿನಿಮಾಗಳ ಮೂಲಕವೇ ಚಿತ್ರರಂಗಕ್ಕೆ ಬಂದ ಸುಮಂತ್‌ ಶೈಲೇಂದ್ರ (Sumanth Shailendra), ಈಗ ರೊಮ್ಯಾಂಟಿಕ್‌ ಥ್ರಿಲ್ಲರ್‌ 'ಗೋವಿಂದ ಗೋವಿಂದ' (Govinda Govinda) ಚಿತ್ರದ ಮೂಲಕ ಮತ್ತೆ ಬೆಳ್ಳಿತೆರೆ ಮೇಲೆ ಬರುತ್ತಿದ್ದಾರೆ. 'ಗೋವಿಂದ ಗೋವಿಂದ' ಇದೇ ತಿಂಗಳ 26ಕ್ಕೆ ರಾಜ್ಯಾದ್ಯಂತ ತೆರೆ ಕಾಣಲಿದೆ. 'ಹುಂಡಿ ನಮ್ದು, ಕಾಸು ನಿಮ್ದು' ಈ ಸಿನಿಮಾದ ಟ್ಯಾಗ್‌ಲೈನ್‌. ಚಿತ್ರದಲ್ಲಿ ಸುಮಂತ್‌ ಕಾಲೇಜ್‌ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕವಿತಾ ಗೌಡ (Kavitha Gowda) ಹಾಗೂ ಭಾವನಾ ಮೆನನ್‌ (Bhavana Menon) ನಾಯಕಿಯರು. ಚಿತ್ರಕ್ಕೆ ಸೆನ್ಸಾರ್‌ನಿಂದ (Censor) ಯಾವುದೇ ಕಟ್‌ ಹಾಗೂ ಮ್ಯೂಟ್‌ ಇಲ್ಲದೆ ಯು ಪ್ರಮಾಣಪತ್ರ (U Certificate) ಸಿಕ್ಕಿದೆ.

'ಗೋವಿಂದ ಗೋವಿಂದ' ಒಂದೊಳ್ಳೆಯ ಚಿತ್ರ. ನಾನು ಚಿತ್ರರಂಗದಲ್ಲಿ ಮೂರು ದಶಕಗಳಿಂದ ಇದ್ದೇನೆ. ಒಂದು ಸಂಪೂರ್ಣ ಹಾಸ್ಯ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದೇನೆ. ತುಂಬಾ ಗ್ಯಾಪ್‌ ನಂತರ ನನ್ನ ನಟನೆಯ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಹಾಸ್ಯಕ್ಕೆ ಕೊರತೆ ಇಲ್ಲ. ಹೀಗಾಗಿ ಚಿತ್ರ ಎಲ್ಲರಿಗೂ ಇಷ್ಟವಾಗುತ್ತದೆಂಬ ನಂಬಿಕೆ ಇದೆ. ಹಾಗೂ ಮೊದಲ ಬಾರಿಗೆ ಒಂದು ಸಿನಿಮಾವನ್ನು ಬೇರೆ ಭಾಷೆಗಳಿಗೆ ಡಬ್ ಮಾಡಿ, ಒಟ್ಟಿಗೆ ಬಿಡುಗಡೆ ಮಾಡುತ್ತಿದ್ದೇನೆ. ಏಕಕಾಲದಲ್ಲಿ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ತೆರೆಗೆ ಬರುತ್ತಿದೆ ಎನ್ನುತ್ತಾರೆ ಶೈಲೇಂದ್ರ ಬಾಬು.

Tap to resize

Latest Videos

3 ಭಾಷೆಗಳಲ್ಲಿ ಸುಮಂತ್‌ ಶೈಲೇಂದ್ರ; ಗೋವಿಂದ ಗೋವಿಂದ ಚಿತ್ರದಲ್ಲಿ ಏನೆಲ್ಲ ಇವೆ?

ಸುಮಂತ್ ಶೈಲೇಂದ್ರ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ಮತ್ತೋರ್ವ ನಾಯಕನಾಗಿ ತುಳು ಸಿನಿಮಾ ಖ್ಯಾತಿಯ ರೂಪೇಶ್ ಶೆಟ್ಟಿ (Roopesh Shetty) ನಟಿಸಿದ್ದಾರೆ. ಸುಮಂತ್ ಹಾಗೂ‌ ರೂಪೇಶ್ ಅವರಿಗೆ ನಾಯಕಿಯರಾಗಿ ಕವಿತಾ ಗೌಡ ಹಾಗೂ ಭಾವನ‌ ಮೆನನ್ ನಟಿಸಿದ್ದಾರೆ.  ಚಿತ್ರದ ಆಡಿಯೋ ಪುಷ್ಕರ್ ಫಿಲಂಸ್ (Pushkar Films) ಮೂಲಕ ಹೊರಬಂದಿವೆ. ಈಗಾಗಲೇ ಹಿರಿತೆರೆಯಲ್ಲಿ ಹಲವು ಹಿಟ್‌ ಚಿತ್ರಗಳನ್ನು ನೀಡಿರುವ ಶೈಲೇಂದ್ರ ಬಾಬು, ಕಿರುತೆರೆಯಲ್ಲಿ ದೊಡ್ಡ ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ರವಿ ಆರ್‌ ಗರಣಿ (Ravi.R.Garani) ಹಾಗೂ ಕಿಶೋರ್‌ ಮಧುಗಿರಿ (Kishor Madhugiri) ಈ ಚಿತ್ರ ನಿರ್ಮಿಸಿದ್ದಾರೆ. 

ತಿಲಕ್‌ (Tilak) ಈ ಸಿನಿಮಾಕ್ಕಾಗಿ ಮೊದಲ ಬಾರಿ ನಿರ್ದೇಶಕರ ಕ್ಯಾಪ್‌ ಧರಿಸಿದ್ದಾರೆ. ಇಲ್ಲಿವರೆಗೂ ಆ್ಯಕ್ಷನ್‌, ರೋಮ್ಯಾಂಟಿಕ್‌ ಚಿತ್ರಗಳನ್ನೇ ಹೆಚ್ಚು ಮಾಡಿದ ಸಮಂತ್ ಈಗ ಪಕ್ಕಾ ಮನರಂಜನೆ ಹಾಗೂ ಥ್ರಿಲ್ಲರ್‌ ಬೇಸ್‌ ಕತೆಗೆ ಹೀರೋ ಆಗಿದ್ದಾರೆ. ನಗು ಮತ್ತು ಕುತೂಹಲ ಈ ಚಿತ್ರದ ಹೈಲೈಟ್ಸ್‌. ಕೆ ಎಸ್‌ ಚಂದ್ರಶೇಖರ್‌ ಛಾಯಾಗ್ರಹಣ, ಹಿತನ್‌ ಹಾಸನ್‌ ಸಂಗೀತ, ದೇವ್‌ ರಂಗಭೂಮಿ ಸಂಭಾಷಣೆ, ಕುಮಾರ್‌ ಸಿನಿಮಾಟೋಗ್ರಾಫಿ ಈ ಚಿತ್ರಕ್ಕಿದೆ. ವಿಜಯಪುರ, ಮಧುಗಿರಿ, ಚಿಂತಾಮಣಿ, ಬೆಂಗಳೂರು ಮುಂತಾದ ಕಡೆ 60ಕ್ಕೂ ಹೆಚ್ಚು ದಿನ ಚಿತ್ರೀಕರಣ ಮಾಡಲಾಗಿದೆ. 

ಬುಸಿನೆಸ್‌, ಕುಟುಂಬ ಕಾರಣಕ್ಕೆ ಸ್ವಲ್ಪ ದೂರ ಇದ್ದೆ: ಸುಮಂತ್‌

ತೆಲುಗಿನ 'ಬ್ರೊಚೆವರೆವರುರ' (Brochevarevarura) ಚಿತ್ರದಿಂದ ಸ್ಫೂರ್ತಿ ಪಡೆದು ನಿರ್ಮಿಸಿರುವ ಈ ಚಿತ್ರದಲ್ಲಿ ಪ್ರದೀಪ್‌ ರಾಜ್‌, ಅಚ್ಯುತ್‌ ಕುಮಾರ್‌, ಶೋಭರಾಜ್‌, ವಿ. ಮನೋಹರ್‌, ಪವನ್‌, ವಿಜಯ್‌ಚೆಂಡೂರ್‌ ಮುಂತಾದವರು ನಟಿಸಿದ್ದಾರೆ. ವಿಶೇಷವಾಗಿ ಈ ಚಿತ್ರದ ಸ್ಯಾಟಲೈಟ್‌ ರೈಟ್ಸ್‌ ಈಗಾಗಲೇ ಒಂದೊಳ್ಳೆ ಮೊತ್ತಕ್ಕೆ ಮಾರಾಟವಾಗಿದೆಯಂತೆ. ಡಿಜಿಟಲ್ ಪ್ಲಾಟ್​​ಫಾರ್ಮ್​ ಹಾಗೂ ಓಟಿಟಿಗಳಿಂದ ಬೇಡಿಕೆ ಬಂದಿದ್ದರೂ, ಮೊದಲು ಚಿತ್ರವನ್ನು ದೊಡ್ಡ ಪರದೆ ಮೇಲೆ ರಿಲೀಸ್ ಮಾಡಿ ನಂತರ ಓಟಿಟಿಗೆ ಕೊಡುತ್ತೇವೆ ಎನ್ನುತ್ತಿದೆ 'ಗೋವಿಂದ ಗೋವಿಂದ' ಚಿತ್ರತಂಡ.

"

click me!