ಬೆಂಗಳೂರಲ್ಲೆ ಬೇಕಾದಷ್ಟು ಜಾಗ ಸಿಗ್ತವೆ, ಮಾರಿದ್ರೆ ತುಂಬಾ ರೇಟೂ ಬರುತ್ತೆ; ರಾಕಿಂಗ್ ಸ್ಟಾರ್ ಯಶ್!

By Shriram Bhat  |  First Published Jul 9, 2024, 6:40 PM IST

ಸುತ್ತ ಕಾಂಪೌಂಡು ಹಾಕಿಸ್ಕೋತಾ ಇದೀವಿ.. ನಾವೇನು ಸಿಸ್ಟಮ್ ಮಾಡ್ಬೇಕು ಅನ್ನೋದು ನಂಗೊತ್ತು.. ಒಳ್ಗಡೆ ನಾವು ಲೇಕರಿ ಇರಿಗೇಶನ್ ಮಾಡಿಸಿದ್ರೆ ಸುತ್ತ ಇರೋರಿಗೂ ಒಳ್ಳೇದಾಗುತ್ತೆ ಅನ್ನೋದು ನಮಗೆ ಗೊತ್ತು..


ಕನ್ನಡದ ನಟ, ಇಂದು ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ರಾಕಿಂಗ್ ಸ್ಟಾರ್ ಯಶ್ (Rocking Star Yash) ಹಳೆಯ ವಿಡಿಯೋ ಒಂದು ಈಗ ಇಂಟರ್ನೆಟ್‌ನಲ್ಲಿ ವೈರಲ್ ಆಗ್ತಿದೆ.  ಕೆಲವು ವರ್ಷಗಳ ಹಿಂದೆ ಯಶ್ ಕುಟುಂದಲ್ಲಿ ನಡೆದಿದ್ದ ಒಂದು ಅಹಿತಕರ ಘಟನೆ  ಹಾಗು ಆ ಬಗ್ಗೆ ನಟ ಯಶ್ ಅಮದು ಮಾತನಾಡಿದ್ದು, ಸದ್ಯ ಸೋಷಿಯಲ್ ಮೀಡಿಯಾ ಮೂಲಕ ಸಖತ್ ವೈರಲ್ಆಗತೊಡಗಿವೆ. ಈ ಸೋಷಿಯಲ್ ಮೀಡಿಯಾ ಅಂದ್ರೆ ಹೀಗೇನೆ.. ಹತ್ತು ವರ್ಷಗಳ ಹಿಂದೆ ಹೇಳಿದ್ದು ಈಗ ಎಲ್ಲಿಂದಲೋ ಪ್ರತ್ಯಕ್ಷವಾಗುತ್ತದೆ. 

ಹಳೆಯ ಸುದ್ದಿ ಏನು ಅಂದ್ರೆ, ನಟ ಯಶ್ ಹಾಸನದಲ್ಲಿ ಕಾನೂನಿನ ಪ್ರಕಾರವೇ ಜಮೀನು ಖರೀದಿ ಮಾಡಿದ್ದಾರೆ. ಅದಕ್ಕೆ, ರಸ್ತೆ, ದೇವಸ್ಥಾನ ಎಂದು ಸ್ಥಳೀಯರಿಂದ ವಿರೋಧ ಬಂದಿತ್ತು. ಜಗಳ ಆದಾಗ, ನಟ ಯಶ್ ಸೀದಾ ಪೊಲೀಸ್ ಸ್ಟೇಶನ್‌ಗೆ ಬಂದು ಗಲಾಟೆಗೆ ಕಾರಣರಾದವರ್ ವಿರುರ್ದಧ ದೂರು ದಾಖಲಿಸಿ ಅಲ್ಲೇ ಮಾಧ್ಯಮಗಳ ಜೊತೆ ಮಾತನಾಡಿದ್ದರು. ಅದೀಗ ವೈರಲ್ ಅಗಿದೆ, ಅಷ್ಟೇ ವಿಷ್ಯ ಇರೋದು!

Tap to resize

Latest Videos

ಹಾಸನದಲ್ಲೇ ಹುಟ್ಟಿರೋ ಮಗ ನಾನು, ನಮ್ ತಂದೆ-ತಾಯಿ ಹಾಸನದವ್ರೇ..; KGF ಸ್ಟಾರ್ ಯಶ್!

'ಹಣದ ಆಸೆ ಅಂದ್ರೆ, ಹಾಸನಕ್ಕೆ ಬಂದು ನಾನ್ಯಾಕೆ ಜಮೀನು ಮಾಡ್ಬೇಕು? ಫಸ್ಟ್ ಒಂದ್‌ ವಿಷ್ಯ ನೀವೆಲ್ಲಾ ಅರ್ಥ ಮಾಡ್ಕೊಳ್ಳಿ.. ನಾನು ದುಡ್ಡು ಮಾಡ್ಬೇಕು ಅಂದ್ರೆ ಬೆಂಗಳೂರಲ್ಲೆ ಬೇಕಾದಷ್ಟು ಜಾಗಗಳು ಸಿಗ್ತವೆ, ಮಾರಿದ್ರೆ ತುಂಬಾ ರೇಟ್ ಬರುತ್ತೆ.. ಅಲ್ಲೇ ತಗೊಂಡು ಇರ್ಬಹುದಿತ್ತು.. ಆದ್ರೆ ಇಲ್ಲಿ ಸುತ್ತ ಏನಾದ್ರೂ ಎಕ್ಷಾಂಪಲ್ ಸೃಷ್ಟಿ ಮಾಡೋ ತರ ಏನಾದ್ರೂ ಅಗ್ರಿಕಲ್ಚರ್ ಮಾಡ್ಬೆಕು ಅನ್ನೋ ಆಸೆಯಿಂದ ತಗೊಂಡಿರೋದು. 

ಶಿವಣ್ಣನ ಮಗಳ ಸಿನಿಮಾಗೆ ಎಂಟ್ರಿ ಕೊಟ್ರು ಅಚ್ಯುತ್ ಕುಮಾರ್, ಹಳೇ ಬೇರು ಹೊಸ ಚಿಗುರು ಆಟವೇ..? 

ಸುತ್ತ ಕಾಂಪೌಂಡು ಹಾಕಿಸ್ಕೋತಾ ಇದೀವಿ.. ನಾವೇನು ಸಿಸ್ಟಮ್ ಮಾಡ್ಬೇಕು ಅನ್ನೋದು ನಂಗೊತ್ತು.. ಒಳ್ಗಡೆ ನಾವು ಲೇಕರಿ ಇರಿಗೇಶನ್ ಮಾಡಿಸಿದ್ರೆ ಸುತ್ತ ಇರೋರಿಗೂ ಒಳ್ಳೇದಾಗುತ್ತೆ ಅನ್ನೋದು ನಮಗೆ ಗೊತ್ತು.. ನಮ್ಗೆ ಸಾವಿರ ಉದ್ದೇಶಗಳಿವೆ.ಇದೂ ಏನಾಗುತ್ತೆ ಗೊತ್ತಾ? ಅವ್ರು ಹಳ್ಳಿ ಜನ, ನಮ್ ತಂದೆ ತಾಯಿನೂ ಹಳ್ಳಿ ಜನನೇ.. 

ಹಾಗಾಗಿ ಆ ಮಾತುಕತೆಗಳು ಆಗುತ್ತೆ.. ಆದ್ರೆ ಯಾವ್ ರೀತಿ ಮಾತಾಡ್ಬೇಕೋ ಆ ರೀತಿ ಮಾತಾಡ್ಬೇಕು.. ಆದ್ರೆ, ಮೀಡಿಯಾ ಇದೆ ಅಂತ, ಎಲ್ಲಾನೂ ಇದೇ ಆಗ್ಬಿಟ್ಟಿದೆ ನಮ್ಗೆ.. ಇಲ್ಲಿ ಇವತ್ತು ಯಾಕೆ ಬಂದಿದೀವಿ ಗೊತ್ತಾ? ಇರ್ಲಿ ಬಿಡ್ರಿ, ನಾವೂ ಅಪ್ಪ-ಅಮ್ಮನಿಗೆ ಹುಟ್ಟಿದ ಮಕ್ಕಳೇ.. ತಂದೆ-ತಾಯಿಗೆ ಮಾತಾಡ್ತಾ ಇದ್ರೂ ನಮ್ ಇಮೇಜು ಅದೂ ಇದೂ ಅಂತ ನೋಡ್ತಾ ಕೂತ್ಕೊಳ್ಳೋಕೆ ಆಗಲ್ಲಾರೀ..

ಸುದೀಪ್ ಯಾರನ್ನ ಬಾಸ್ ಅಂತಾರೆ..? ಅದ್ಯಾಕೆ ಅಂತ್ಲೂ ಹೇಳಿದಾರೆ, ಹೀಗೂ ಉಂಟೇ ಅನ್ಬೇಡಿ!

ಅಂದಹಾಗೆ, ಯಶ್ ನಟನೆ ಹಾಗು ಪ್ರಶಾಂತ್ ನೀಲ್ (Prashanth Neel) ನಿರ್ದೇಶನದ 'ಕೆಜಿಎಫ್' ಹಾಗು 'ಕೆಜಿಎಫ್ 2' ಸಿನಿಮಾಗಳ ಖ್ಯಾತಿ ಹಾಗು ಗಳಿಕೆ ಬಗ್ಗೆ ಜಗತ್ತೇ ತಿಳಿದಿದೆ. ಕೆಜಿಎಫ್‌ ಚಿತ್ರಕ್ಕಿಂತಲೂ ಕೆಜಿಎಫ್ 2 ಚಿತ್ರದ ಕಲೆಕ್ಷನ್ ಬಹಳಷ್ಟು ಜಾಸ್ತಿ ಆಗಿದ್ದು, ಈ ಸಿನಿಮಾ ಸ್ಯಾಂಡಲ್‌ವುಡ್ ಮಟ್ಟಿಗೆ ಹೊಸ ದಾಖಲೆ ಎನಿಸಿದೆ. ದಂಗಲ್ ಹಾಗೂ ಬಾಹುಬಲಿ-2 ಚಿತ್ರಗಳ ಬಳಿಕ ಯಶ್ ನಟನೆಯ 'ಕೆಜಿಎಫ್2' KGF 2 ಚಿತ್ರವು ಭಾರತದಲ್ಲಿ ಅತೀ ಹೆಚ್ಚಿನ ಗಳಿಕೆ ಕಂಡಿರುವ ಮೂರನೆಯ ಚಿತ್ರವಾಗಿ ಹೊರಹೊಮ್ಮಿದೆ. 

ಮಾಡದೇ ಇರುವ ಕೊಲೆಗೆ ಜೈಲಿನಲ್ಲಿ ಇದ್ದಾರೆ, ನೋವು ಆಗಲ್ವಾ ಅಂದ್ರು ನಿರ್ಮಾಪಕ ಕೆ ಮಂಜು!

ಈ ಮೂಲಕ ಕೆಜಿಏಫ್-2 ಚಿತ್ರವು ಜೂನಿಯರ್ ಎನ್‌ಟಿಆರ್ ಹಾಗು ರಾಮ್ ಚರಣ್ ನಟನೆಯ 'ಆರ್‌ಆರ್‌ಅರ್‌' ಚಿತ್ರವನ್ನು ಕೆಳಕ್ಕೆ ತಳ್ಳಿದೆ. ಸದ್ಯ ರಾಕಿಂಗ್ ಸ್ಟಾರ್ ಯಶ್ ಅವರು ಸದ್ಯ ಬಾಲಿವುಡ್‌ನ ರಾಮಾಯಣ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ, ಗೀತೂ ಮೋಹನ್‌ದಾಸ್ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ 'ಟಾಕ್ಸಿಕ್‌'ನಲ್ಲಿಯೂ ಯಶ್ ನಟಿಸುತ್ತಿದ್ದಾರೆ. ಇನ್ನೊಂದು ಸಂಗತಿ ಎಂದರೆ, ನಟ ಯಶ್ ರಾಮಾಯಣ ಸಿನಿಮಾಗೆ ನಿರ್ಮಾಪಕರೂ ಆಗಿದ್ದು, ಈ ಮೂಲಕ ಮೊದಲ ಬಾರಿಗೆ ನಿರ್ಮಾಪಕ ಪಟ್ಟ ಪಡೆದಿದ್ದಾರೆ. 

ಪಾಪ...ಕರುಳು ಕಿತ್ತು ಬರುತ್ತೆಅನುಶ್ರೀ ಕಥೆ ಕೇಳಿದ್ರೆ, ಕೆನ್ನೆ ಮೇಲೆ ಬಿಸಿ ಹನಿ ಬೀಳದಿದ್ರೆ ನಿಮಗೇನೋ ಆಗಿದೆ..!

click me!