
ಮೈಸೂರು (ಜು.10): ಬಹುಭಾಷಾ ನಟ, ಭಾರತದ ಮೈಕಲ್ ಜಾಕ್ಸನ್ ಎಂದೇ ಖ್ಯಾತಿ ಪಡೆದಿರುವ ಪ್ರಭುದೇವ ಅವರ ಅಜ್ಜಿ ಪುಟ್ಟಮ್ಮಣ್ಣಿ (97) ವಯೋ ಸಹಜ ಕಾಯಿಲೆಯಿದ ನಿಧನರಾಗಿದ್ದು, ಮೈಸೂರು ತಾಲೂಕಿನ ದೂರ ಗ್ರಾಮಕ್ಕೆ ಪ್ರಭುದೇವ್ ಹಾಗೂ ಸಹೋದರರು ಆಗಮಿಸಿದ್ದಾರೆ.
ಪ್ರಭುದೇವ್ ತಾಯಿ ಮಹಾದೇವಮ್ಮ ಸುಂದರ್ ಅವರ ತಾಯಿ ಪುಟ್ಟಮ್ಮಣ್ಣಿಯಾಗಿದ್ದು, ಪ್ರಭುದೇವರ ತಂದೆ ಮೂಗೂರು ಸುಂದರ್ ಅವರ ಅತ್ತೆಯಾಗಿದ್ದಾರೆ. ಮೈಸೂರು ತಾಲ್ಲೂಕಿನ ದೂರ ಗ್ರಾಮದಲ್ಲಿ ನಡೆಯಲಿರುವ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಪ್ರಭುದೇವ ಮನೆಯವರ ಜೊತೆಗೆ ಬಂದಿದ್ದಾರೆ.
ಕೂರ್ಗ್ ಟ್ರಿಪ್‌ನಲ್ಲಿ ಗರ್ಭಿಣಿ ನೇಹಾ ಗೌಡ, ಮುಖದ ಕಳೆ ನೋಡಿದ್ರೆ ಹೆಣ್ಣು ಮಗುನೇ ಹುಟ್ಟೋದು ಎಂದ ನೆಟ್ಟಿಗರು!
ಅಜ್ಜಿಯ ಪಾರ್ಥವ ಶರೀರ ದರ್ಶನ ಮಾಡಲು ಚೆನ್ನೈ ನಿಂದ ಮೈಸೂರಿಗೆ ಆಗಮಿಸಿದ್ದು, ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ಕಾರಿನ ಮೂಲಕ ದೂರ ಗ್ರಾಮಕ್ಕೆ ಪ್ರಭುದೇವ್ ಮತ್ತು ಸಹೋದರರು ತೆರಳಿದರು. ಇಂದು ದೂರ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಲವ್ ಬೇರೆ, ಮದುವೆ ಬೇರೆ, ಒಂದೇ ರೂಂನಲ್ಲಿ ಸಂಸಾರ ಆರಂಭಿಸಿದಾಗಲೇ ಎಲ್ಲವೂ ಗೊತ್ತಾಗೋದು: ಚಂದನ್ ಶೆಟ್ಟಿ
ಮೂಲತಃ ಮೈಸೂರಿನವರಾಗಿರುವ ಪ್ರಭುದೇವ ಅವರು ತಮ್ಮ ಊರಿಗೆ ಬಂದಾಗ, ಸಾಮಾಜಿಕ ಜಾಲತಾಣದಲ್ಲಿ ಆಗಾಗ ತನ್ನ ಅಜ್ಜಿಯ ಫೋಟೋಗಳನ್ನು ಹಾಕುತ್ತಿದ್ದರು.
ಹಿರಿಯ ನೃತ್ಯ ಕಲಾವಿದ ಮೂಗೂರು ಸುಂದರಂ ಅವರು ಮೂಲತಃ ಟಿ.ನರಸೀಪುರ ತಾಲೂಕಿನ ಮೂಗೂರು ಗ್ರಾಮದವರು. ಅವರು ದೂರ ಗ್ರಾಮದ ವೈಸ್ ಚೇರ್ಮನ್ ಮಹದೇವಪ್ಪ ಮತ್ತು ಪುಟ್ಟಮ್ಮಣ್ಣಿ ಅವರ ಮಗಳು ಮಹದೇವಮ್ಮ ಅವರನ್ನು ವರಿಸಿದ್ದರು. ನಂತರ ಚಿತ್ರರಂಗದಲ್ಲಿ ಯಶಸ್ಸು ಕಂಡು ಚೆನ್ನೈನಲ್ಲಿ ವಾಸವಾಗಿದ್ದಾರೆ. ಅವರ ಮೂರು ಮಂದಿ ಮಕ್ಕಳಾದ ರಾಜು, ಪ್ರಭುದೇವ, ನಾಗೇಂದ್ರ ಅವರು ಆಗಾಗ ದೂರ ಗ್ರಾಮದಲ್ಲಿರುವ ಅಜ್ಜಿ ಮನೆಗೆ ಬಂದು ಕಾಲ ಕಳೆದು ಹೋಗುತ್ತಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.