
ರಾಕಿಂಗ್ ಸ್ಟಾರ್ (Rocking Star) ಯಶ್ (Yash) ಮುದ್ದಿನ ಮಡದಿ, ಎರಡು ಮಕ್ಕಳ ತಾಯಿ ರಾಧಿಕಾ ಪಂಡಿತ್ (Radhika Pandit) ಸದ್ಯ ಮನೆಯೇ ಮಂತ್ರಾಲಯ. ಮುದ್ದಾದ ಎರಡು ಮಕ್ಕಳ ತಂಟೆಮಾರಿತನವನ್ನು ಸಂಭಾಳಿಸುವುದರಲ್ಲೇ ದಿನ ಹೋಗುತ್ತದೆ. ಇಂಥ ಎರಡು ಮಕ್ಕಳು ಇದ್ದರೆ ಸದಾ ಜಾಯ್ ಅನ್‌ಲಿಮಿಟೆಡ್ ಅನ್ನುವುದು ರಾಧಿಕಾ ಅನಿಸಿಕೆ. ಸದ್ಯ ಸಂಗಾತಿ ಯಶ್ ನಟಿಸಿದ ಕೆಜಿಎಫ್ 2 (KGF 2) ಚಿತ್ರದ ಟ್ರೇಲರ್ (Trailer) ಬಿಡುಗಡೆ ಹಂತದಲ್ಲಿದೆ. ಏಪ್ರಿಲ್ ಮಧ್ಯಭಾಗದಲ್ಲಿ ಫಿಲಂ (Film) ಕೂಡ ಹೊರಬರುವ ಸೂಚನೆ ಉಂಟು, ಹೀಗಾಗಿ ಯಶ್ ಅದ್ರಲ್ಲಿ ಬ್ಯುಸಿ. ರಾಧಿಕಾ ಕೂಡ ಗಂಡನ ಫಿಲಂ ಸಕ್ಸಸ್ಸುಗಳು, ಮಕ್ಕಳನ್ನು ನೋಡಿಕೊಳ್ಳುವ ಹೊಣೆ...ಇವುಗಳ ನಡುವೆ ಬ್ಯುಸಿ. ಆದ್ರೂ...
ಹಿಂದೊಮ್ಮೆ ರಾಧಿಕಾ ಪಂಡಿತ್ ಅವರನ್ನು ಕೇಳಲಾಗಿತ್ತು- 'ನೀವು ಮತ್ತೆ ಸಿನಿಮಾ (Cinema) ದಲ್ಲಿ ನಟಿಸೋಲ್ವಾ?' ಅಂತ. ಆಗ ರಾಧಿಕಾ ಉತ್ತರಿಸಿದ್ದು ಹೀಗೆ- ''ನಾನು ತೆರೆಯ ಮೇಲೆ ನಟಿಸಿದ್ದೀನಿ. ಈಗ ಸಂಸಾರದಲ್ಲಿ, ವೈಯಕ್ತಿಕ ಬದುಕಿನಲ್ಲಿ ತಾಯಿಯ (Mother) ಪಾತ್ರಾನೂ ನಿರ್ವಹಿಸ್ತಾ ಇದೀನಿ. ಈ ಪಾತ್ರ ಏನು ಕಡಿಮೆ ಮಹತ್ವದ್ದಲ್ಲ. ಇದೂ ಪ್ರಮುಖವೇ. ನಾನು ಈ ಪಾತ್ರವನ್ನು ಚೆನ್ನಾಗಿ ಮಾಡ್ತಾ ಇದೀನಿ ಅನ್ನೋದು ನನ್ನ ಅನಿಸಿಕೆ,'' ಅಂತ. ಈ ಉತ್ತರಕ್ಕೆ ಕುಡೋಸ್ ಅನ್ಲೇಬೇಕು. ತೆರೆಯ ಮೇಲಿನ ಪಾತ್ರದಷ್ಟೇ, ಅಥವಾ ಅದಕ್ಕಿಂತ್ಲೂ ಮಹತ್ವದ್ದು ತಾಯ್ತನ ಅತ ಹೆಚ್ಚಿನ ಹೀರೋಯಿನ್‌ಗಳು ಹೇಳ್ತಾರೋ ಇಲ್ವೋ. ರಾಧಿಕಾ ಅದನ್ನು ಬಾಯಿಬಿಟ್ಟು ಹೇಳಿದ್ದಾರಲ್ಲ.
KGF Chapter 2: ಗೂಗಲ್ ಮ್ಯಾಪ್ನಲ್ಲಿ ಶೋ ಆಯ್ತು 'ಕೆಜಿಎಫ್ ಫಿಲ್ಮ್ ಸೆಟ್' ಲೋಕೆಶನ್!
2014ರಲ್ಲಿ ಬಂದ ಅವರ ಮಿಸ್ಟರ್ ಆಂಡ್ ಮಿಸೆಸ್ ರಾಮಾಚಾರಿ ಫಿಲಂ ಶೂಟಿಂಗ್ ವೇಳೆ ರಾಧಿಕಾ ಮತ್ತು ಯಶ್ ಹೆಚ್ಚು ಹತ್ತಿರವಾಗಿದ್ದು. ಆ ಬಳಿಕ ಅವರಿಬ್ಬರ ಪ್ರೇಮಕತೆ ಸಾಂಗವಾಗಿ ನಡೆದು ಅವರು ಮದುವೆಯಾದದ್ದು ನಿಮಗೆ ಗೊತ್ತೇ ಇದೆ. 2016ರಲ್ಲಿ ರಾಧಿಕಾ- ಪುನೀತ್ (Puneeth Rajkumar) ನಟನೆಯ ದೊಡ್ಮನೆ ಹುಡ್ಗ ಬಂತು. ಅದು ಹಿಟ್ ಆಯ್ತು. ಪುನೀತ್ ತೀರಿಕೊಂಡ ಬಳಿಕ ಪುನೀತ್ ಬಗೆಗಿನ ಆತ್ಮೀಯ ನೆನಪುಗಳ ಬಗ್ಗೆ ರಾಧಿಕಾ ಭಾವುಕವಾಗಿ ಇನ್‌ಸ್ಟಗ್ರಾಂನಲ್ಲಿ ಬರೆದುಕೊಂಡಿದ್ದರು. ಇಂಧಿಗೂ ಅವರಿಗೆ ಅಪ್ಪು ಅವರನ್ನು ಮರೆಯಲಿಕ್ಕೆ ಆಗುತ್ತಿಲ್ಲವಂತೆ. ೨೦೧೯ರಲ್ಲಿ ಬಂದ ಆದಿಲಕ್ಷ್ಮಿ ಪುರಾಣವೇ ಕೊನೆ. ನಂತರ ಅವರು ನಟಿಸಿಲ್ಲ. ಸೂಕ್ತ ಪಾತ್ರ ಸಿಕ್ಕರೆ ರಾಧಿಕಾ ನಟನೆ ಮಾಡಬಹುದು. ಆದರೆ ಇಬ್ಬರು ಮಕ್ಕಳ ತಾಯಿಗೆ ತಕ್ಕ ರೋಲ್ ತಯಾರು ಮಾಡಿ ಅಪ್ರೋಚ್ ಮಾಡುವ ನಿರ್ದೇಶಕರು ಕನ್ನಡದಲ್ಲಿ ಕಡಿಮೆ. ಐಶ್ವರ್ಯ ರೈ, ಕಾಜೋಲ್ ಕೂಡ ಇಂಥ ನಿರ್ದೇಶಕರು, ನಿರ್ಮಾಪಕರ ಕೊರತೆಯಿಂದಾಗಿಯೇ ಸುಮ್ಮನೆ ಉಳಿದಿದ್ದಾರೆ ಹೊರತು, ನಟನೆ ಸಾಕೆಂದು ಎಂದೂ ಹೇಳಿಕೊಂಡಿಲ್ಲ.
ಗುರಾಯಿಸುತ್ತಿದ್ದ ಕ್ರಿಕೆಟಿಗರು, ಮೊದಲ ಲೇಡಿ ಆ್ಯಂಕರ್ ಮಂದಿರಾ ಬಿಚ್ಚಿಟ್ಟ ಸತ್ಯ
ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ರಾಧಿಕಾ ಆಗೀಗ ಇನ್‌ಸ್ಟಾಗ್ರಾಂ (Instagram) ನಲ್ಲಿ ಮಕ್ಕಳ ಫೋಟೋ ಮತ್ತು ವಿಡಿಯೋ ಹಂಚಿಕೊಳ್ಳುತ್ತಾರೆ. ಹೀಗಾಗಿ ಮಕ್ಕಳು ಕೂಡ ಸ್ಟಾರ್ ಕಿಡ್ ಪಟ್ಟಿ ಸೇರಿಕೊಂಡಿದ್ದಾರೆ. ಡಿಸೆಂಬರ್‌ನಲ್ಲಿ ಕ್ರಿಸ್ಮಸ್ ಟ್ರೀ ಇಟ್ಟು ಅಲ್ಲಿ ಫೋಟೋ ತೆಗೆದುಕೊಂಡಿದ್ದರು. ಅದರಲ್ಲಿ ಮಕ್ಕಳಾದ ಐರಾ (Ayra) ಮತ್ತು ತಮ್ಮ ಯಥರ್ವ್ (Yatharv) ಕೂಡ ಪೋಸ್ ಕೊಟ್ಟಿದ್ದಾರೆ. ಅದರಲ್ಲಿ ಐರಾ ಎಲ್ಲರ ಗಮನ ಸೆಳೆದಿದ್ದಳು. ಕ್ರಿಸ್ಮಸ್ ಟ್ರೀ ಮುಂದೆ ರಾಧಿಕಾ ಪೋಸ್ ಕೊಟ್ಟರೆ ಪಕ್ಕದಲ್ಲಿ ನಿಂತ ಪುತ್ರಿ ಐರಾ ಕ್ಯಾಮೆರಾಗೆ ಕಣ್ಣು ಹೊಡೆದಿದ್ದಲ್ಲದೆ, ಸ್ಟೈಲ್ ಆಗಿ ನಿಂತು ಪೋಸ್ ಕೊಟ್ಟಿದ್ದಳು. 'ಇಲ್ಲಿ ಯಾರು ಬೆಸ್ಟ್ ಪೋಸರ್ ಎಂದು ನೋಡಿದರೇ ಗೊತ್ತಾಗುತ್ತದೆ' ಎಂದು ರಾಧಿಕಾ ಬರೆದುಕೊಂಡಿದ್ದರು. "ತಂದೆ ತಾಯಿ ಇಬ್ಬರೂ ಅದ್ಭುತ ಕಲಾವಿದರು, ಸಾಕಷ್ಟು ಅವಾರ್ಡ್ ಪಡೆದುಕೊಂಡಿದ್ದಾರೆ. ಅವರನ್ನು ಮೀರಿಸುವ ಪ್ರತಿಭೆ ನಿನ್ನಲ್ಲಿದೆ.'' ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದರು. ಇದನ್ನೆಲ್ಲ ನೋಡಿದರೆ ಬೇಬಿ ಐರಾ ನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಪಡೆದರೂ ಆಶ್ಚರ್ಯವಿಲ್ಲ. ಹಾಗಾದರೂ ರಾಧಿಕಾ ಅವರ ನಟನೆಯ ಜೀನ್ ಮುಂದುವರಿಯಲಿ ಅಂತ ಹಾರೈಸೋಣ.
ತಮ್ಮ ಫಸ್ಟ್ ಲವ್ ಹೆಸರು ರೀವಿಲ್ ಮಾಡಿದ ಜಾನ್ವಿ ಕಪೂರ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.