
ಕೊರೋನಾ ಲಾಕ್‌ಡೌನ್ (Covid19 lockdown) ನಂತರ ಕನ್ನಡ ಚಿತ್ರರಂಗದ (Sandalwood) ಸಣ್ಣ ಬಜೆಟ್‌ಯಿಂದ ಹಿಡಿದು ದೊಡ್ಡ ಬಜೆಟ್ ಸಿನಿಮಾವರೆಗೂ ರಿಲೀಸ್ ಡೇಟ್ (Film release date) ಅನೌನ್ಸ್ ಮಾಡಿದ್ದಾರೆ. ಅಲ್ಲದೆ ಹಲವು ದಿನಗಳ ನಂತರ ಸಿನಿಮಾ ಕಾರ್ಯಕ್ರಮಗಳು ನಡೆಯುತ್ತಿರುವ ಕಾರಣ ಆಡಿಯೋ ಲಾಂಚ್ (Audio launch), ಟೀಸರ್ ಲಾಂಚ್ (Teaser launch) ಹೀಗೆ ಸಣ್ಣ ಪುಟ್ಟ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಹಮ್ಮಿಕೊಳ್ಳುತ್ತಿದ್ದಾರೆ. ಸ್ಟಾರ್ ನಟ, ನಟಿಯರನ್ನು ಕರೆಸಿ ಪ್ರತಿ ಕ್ಷಣವನ್ನು ಸೆಲೆಬ್ರೇಟ್ ಮಾಡುತ್ತಿದ್ದಾರೆ.
ಸ್ಯಾಂಡಲ್‌ವುಡ್ ಡಿಫರೆಂಟ್ ಡೈರೆಕ್ಟರ್ ಪ್ರೇಮ್ (Jogi Prem) ನಿರ್ದೇಶನ ಏಕ್ ಲವ್ ಯಾ (Ek love ya) ಸಿನಿಮಾದ 'ಎಣ್ಣೆ' ಹಾಡಿನ ಲಾಂಚ್ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ವೇಳೆ ಇಡೀ ತಂಡ ಪುನೀತ್‌ಗೆ (Puneeth Rajkumar) ನಮನ ಸಲ್ಲಿಸಿದ್ದರು. ಅದಾದ ನಂತರ ವೇದಿಕೆ ಮೇಲೆ ಆಗಮಿಸಿದ ನಿರ್ಮಾಪಕಿ ರಕ್ಷಿತಾ ಪ್ರೇಮ್ (Rakshita Prem) ಶಾಂಪೇನ್ ಬಾಟಲ್‌ನ ಓಪನ್ ಮಾಡಿದ್ದಾರೆ, ತಕ್ಷಣವೇ ಹಿಂದಿದ್ದ ಎಲ್‌ಇಡಿ ಸ್ಕ್ರೀನ್ ಮೇಲೆ ಪುನೀತ್ ರಾಜ್‌ಕುಮಾರ್ ಫೋಟೋ ಹಾಗೂ ಪ್ರೇಮ್ ಭಾವುಕರಾಗಿ ನಮನ ಸಲ್ಲಿಸುತ್ತಿರುವ ಧ್ವನಿ ಕೇಳಿ ಬರುತ್ತದೆ. ಈ ಸಣ್ಣ ವಿಡಿಯೋ ತುಣುಕು ಸೋಷಿಯಲ್ ಮೀಡಿಯಾದಲ್ಲಿ (Social media) ಸಿಕ್ಕಾಪಟ್ಟೆ ವೈರಲ್ ಆದ ಕಾರಣ ಸಾ.ರಾ ಗೋವಿಂದು (Sa Ra Govindu) ಅವರು ಇಡೀ ತಂಡ ಕ್ಷಮೆ ಕೇಳಬೇಕು ಎಂದಿದ್ದಾರೆ.
ಚಿತ್ರರಂಗದಲ್ಲಿ ನಮ್ಮವರೇ ಹೀಗೆ ಮಾಡಿದರೆ ಏನು ಮಾಡಲು ಆಗುತ್ತದೆ, ಇಡೀ ತಂಡ ಕ್ಷಮೆ ಕೇಳಬೇಕು ಎಂದು ಗೋವಿಂದು ಅವರು ಹೇಳಿದ್ದಾರೆ. ನೆಟ್ಟಿಗರು ಕೂಡ ಕ್ಷಮೆ ಕೇಳಲು ಅಗ್ರಹಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ದಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಪೋಸ್ಟ್ ಹಂಚಿಕೊಳ್ಳುವ ಮೂಲಕ ಕ್ಷಮೆ ಕೇಳಿದ್ದಾರೆ.
'ಎಲ್ಲರಿಗೂ ನಮಸ್ಕಾರ. ನಿನ್ನೆಯ ಏಕ್ ಲವ್ ಯಾ ಸಿನಿಮಾದ ಸಾಂಗ್ ಲಾಂಚ್ (Song Launch) ಕಾರ್ಯಕ್ರಮದಲ್ಲಿ ಅಪ್ಪು ಭಾವಚಿತ್ರದ ಎದುರು ಶಾಂಪೇನ್ ಬಾಟಲ್ (Champagne bottle) ಓಪನ್ ಮಾಡಿ ಹಾಡನ್ನು ಬಿಡುಗಡೆಗೊಳಿಸಿರುವ ಬಗ್ಗೆ ನೆಮಗೆಲ್ಲರಿಗೆ ಅಸಮಾಧಾನವಾಗಿದೆ. ಆ ಬಗ್ಗೆ ದಯವಿಟ್ಟು ಕ್ಷಮೆ ಇರಲಿ. ನಾನೂ ಕೂಡ ಚಿತ್ರದ ಭಾಗವಾಗಿರುವುದರಿಂದ, ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರಿಂದ ಕ್ಷಮೆ ಕೇಳುತ್ತೇನೆ. ಅಪ್ಪು ಅವರಿಗೆ ಅವಮಾನ ಮಾಡಲು ಉದ್ದೇಶ, ಆಲೋಚನೆ ಯಾವ ಕನ್ನಡಿಗರಿಗೂ ಇರುವುದಿಲ್ಲ. ಅದಾಗಿಯೂ ಉದ್ದೇಶಪೂರ್ವಕವಲ್ಲದ ತಪ್ಪನ್ನು ಅಭಿಮಾನಿಗಳು ಮನ್ನಿಸುತ್ತಾರೆಂದು ನಂಬಿದ್ದೇನೆ' ಎಂದು ರಚಿತಾ ಬರೆದುಕೊಂಡಿದ್ದಾರೆ.
'ಇಷ್ಟೇ ಜೀವನ ಅಪ್ಪು ಅವರು ಇದ್ದಾಗ ಅವ್ರು ಹೊಗಳೋದೋ ಹೊಗಳೋದು ಇವಾಗ ಎಲ್ಲಾ ಮರೆತ್ತೋತ್ತು ಅಲ್ವಾ? ಕಳೆದುಕೊಂಡಿದ್ದ ಅಭಿಮಾನಿಗಳಿಗೆ ಮಾತ್ರ ಆ ನೋವು ಗೊತ್ತು' ಎಂದು ನೆಟ್ಟಿಗರು ರಚ್ಚು ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.