ಕಿಡಿ ಹಚ್ಚಿದ 'ಫಸ್ಟ್‌ನೈಟ್' ಹೇಳಿಕೆ: ರಚಿತಾ ರಾಮ್ ಕ್ಷಮೆಗೆ ಪಟ್ಟು

Suvarna News   | Asianet News
Published : Nov 13, 2021, 01:51 PM ISTUpdated : Nov 13, 2021, 02:17 PM IST
ಕಿಡಿ ಹಚ್ಚಿದ 'ಫಸ್ಟ್‌ನೈಟ್' ಹೇಳಿಕೆ: ರಚಿತಾ ರಾಮ್ ಕ್ಷಮೆಗೆ ಪಟ್ಟು

ಸಾರಾಂಶ

ಲವ್ ಯು  ರಚ್ಚು ಸಿನಿಮಾ ಸುದ್ದಿಗೋಷ್ಢಿಯಲ್ಲಿ ನೀಡಿದ 'ಫಸ್ಟ್‌ನೈಟ್' ಹೇಳಿಕೆ ವಿಚಾರವಾಗಿ ರಾಜ್ಯದ ಜನತೆಯಲ್ಲಿ ರಚಿತಾ ರಾಮ್ ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ಕನ್ನಡ ಕ್ರಾಂತಿದಳ ಒತ್ತಾಯಿಸಿದೆ. 

ಚಾಮರಾಜನಗರ (ನ.13): ಕನ್ನಡ ಚಿತ್ರರಂಗದ ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಅವರ ಮುಂಬರುವ ಚಿತ್ರ 'ಲವ್ ಯು  ರಚ್ಚು' (Love You Rachchu) ಸಿನಿಮಾ ಸುದ್ದಿಗೋಷ್ಢಿಯಲ್ಲಿ ನೀಡಿದ 'ಫಸ್ಟ್‌ನೈಟ್' ಹೇಳಿಕೆ ವಿಚಾರವಾಗಿ ರಾಜ್ಯದ ಜನತೆಯಲ್ಲಿ ರಚಿತಾರಾಮ್ ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ಕನ್ನಡ ಕ್ರಾಂತಿದಳ (Kannada Krantidala) ಒತ್ತಾಯಿಸಿದೆ.

ರಚಿತಾ ರಾಮ್ ಅಸಭ್ಯ ಹಾಗು ಕೀಳು ಅಭಿರುಚಿಯ ಹೇಳಿಕೆ ನೀಡಿದ್ದಾರೆ. ಅಲ್ಲದೇ ಯುವಜನತೆಯ ದಾರಿ ತಪ್ಪಿಸುವ ಮಾತನಾಡಿದ್ದು, ಇದು ಕನ್ನಡ ನಾಡಿನ ಸಂಸ್ಕೃತಿಗೆ ವಿರುದ್ಧವಾಗಿದೆ. ಅನೇಕ ಧೀಮಂತ ಮಹಿಳೆಯರು ಹುಟ್ಟಿರುವ ನಾಡಿನಲ್ಲಿ ಇಂತಹ  ಹೇಳಿಕೆ ನೀಡಿರುವುದು ಅಸಹ್ಯಕರವಾಗಿದೆ. ಹಾಗಾಗಿ ರಚಿತಾ ರಾಮ್ ಕೂಡಲೇ ಬಹಿರಂಗ ಕ್ಷಮೆ ಯಾಚಿಸಬೇಕು. ಇಲ್ಲದಿದ್ದಲ್ಲಿ ರಾಜ್ಯದಲ್ಲಿ ಲವ್ ಯು ರಚ್ಚು ಸಿನಿಮಾ ಬಿಡುಗಡೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ಕನ್ನಡ ಕ್ರಾಂತಿದಳದ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗಸ್ವಾಮಿ (Tejasvi Nagalingaswamy) ಹಾಗೂ ಚಿತ್ರನಟಿ ಸಂಗೀತ ಅಶ್ವಥ್ (Sangeeta Ashwath) ಆಗ್ರಹಿಸಿದರು.

ಫಸ್ಟ್‌ ನೈಟಲ್ಲಿ ಏನ್‌ ಮಾಡ್ತೀರಾ: ರಚಿತಾ ರಾಮ್‌ ಬೋಲ್ಡ್‌ ಪ್ರಶ್ನೆ

ನಡೆದಿದ್ದೇನು?: ಇತ್ತಿಚೆಗಷ್ಟೇ 'ಲವ್ ಯು  ರಚ್ಚು' ಚಿತ್ರದ 'ಮುದ್ದೂ ನೀನು' (Muddu Neenu) ರೊಮ್ಯಾಂಟಿಕ್ ಸಾಂಗ್ ಬಿಡುಗಡೆಯಾಗಿತ್ತು. ಈ ಹಾಡಿನ ಒಂದು ದೃಶ್ಯದಲ್ಲಿ ನಟ ಅಜಯ್ ರಾವ್ (Ajai Rao) ಜೊತೆ ರಚಿತಾ ರಾಮ್ ಬೋಲ್ಡ್ ಕ್ಯಾರೆಕ್ಟರ್‌ನಲ್ಲಿ ಕಾಣಿಸಿಕೊಂಡಿದ್ದರು. ಈ ಬಗ್ಗೆ ಚಿತ್ರದ ಸುದ್ದಿಗೋಷ್ಢಿಯಲ್ಲಿ ನಟಿ ರಚಿತಾ ರಾಮ್ ಅವರನ್ನು ಈ ಹಿಂದೆ ಬೋಲ್ಡ್ ಸೀನ್‌ಗಳಲ್ಲಿ ನಟಿಸುವುದಿಲ್ಲವೆಂದು ಹೇಳಿಕೆ ನೀಡಿದ್ದಿರಲ್ಲ ಎಂದು ಪ್ರಶ್ನಿಸಿದಾಗ, 'ಹೌದು!  ಬೋಲ್ಡ್ ಸೀನ್ ಮಾಡಲ್ಲ ಅಂತ ಹೇಳಿದ್ದೆ. ಆದರೆ, ಬೋಲ್ಡ್ ಸೀನ್ ಮಾಡಿದ್ದೇನೆ ಅಂದರೆ ಅದರಲ್ಲಿ ಏನೋ ಒಂದು ವಿಷಯ ಇರುತ್ತೆ ಅಂತ ಅಲ್ವಾ? ಮದುವೆ ಆದ ಮೇಲೆ ಫಸ್ಟ್‌ನೈಟ್‌ನಲ್ಲಿ ಏನ್ ಮಾಡ್ತೀರಾ? ಮದುವೆ ಆದ ಮೇಲೆ ಫಸ್ಟ್‌ನೈಟ್‌ನಲ್ಲಿ ಸಾಮಾನ್ಯವಾಗಿ ಏನ್ ಮಾಡ್ತಾರೆ? ರೊಮ್ಯಾನ್ಸ್ ಮಾಡ್ತಾರೆ ಅಲ್ವಾ? ಅದನ್ನೇ ಈ ಹಾಡಿನಲ್ಲೂ ಮಾಡಿದ್ದೇವೆ. ಡಿಟೈಲ್ ಆಗಿ ಹೋಗಿಲ್ಲ ಬೇಸಿಕ್ ಏನಿದೆಯೋ ಅದನ್ನೇ ಮಾಡಿದ್ದೇವೆ ಎಂದು ರಚಿತಾ ಉತ್ತರವನ್ನು ಕೊಟ್ಟಿದ್ದರು. 

ಇನ್ನು ಹಾಡಿನ ಬಿಡುಗಡೆ ವೇಳೆ, ನಮಗಿರೋದು ಒಂದೇ ಜೀವನ, ಖುಷಿಯಾಗಿರೋಣ. ಬೇರೆಯವರ ಬಗ್ಗೆ ಇಷ್ಟಆದ್ರೆ ಮಾತ್ರ ಮಾತಾಡೋಣ, ಡಬಲ್‌ ಸ್ಟಾಂಡ್‌ ಬೇಡ. ಅಪ್ಪು ನಮಗೆಲ್ಲ ಸೈಲೆಂಟ್‌ ಆಗಿ ಮೆಸೇಜ್‌ ಕೊಟ್ಟು ಹೋಗಿದ್ದಾರೆ, ಈಗಲಾದ್ರೂ ಎಚ್ಚೆತ್ತುಕೊಳ್ಳೋಣ' ಎಂದು ರಚಿತಾ ರಾಮ್ ಹೇಳಿದ್ದರು. ಸಿದ್ಧ್ ಶ್ರೀರಾಮ್‌ ದನಿಯಲ್ಲಿ ಮೂಡಿಬಂದಿರುವ 'ಮುದ್ದೂ ನೀನು' ಹಾಡಿಗೆ ನಾಯಕ ಅಜಯ್‌ ರಾವ್‌ ಕೊರಿಯೋಗ್ರಫಿ ಮಾಡಿದ್ದಾರೆ. 'ಇದು ನನ್ನ ಪ್ರೊಡಕ್ಷನ್‌ನಲ್ಲಿ ಬರಬೇಕಿದ್ದ ಸಿನಿಮಾ. ಆದರೂ ಈ ಸಿನಿಮಾಗಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ. ಚಿತ್ರದ ಮೇಕಿಂಗ್‌ ವೇಳೆ ಘರ್ಷಣೆಗಳಾಗಿವೆ. ಒಂದು ಡೈಮಂಡ್‌ ಹೊರಬರಬೇಕು ಅಂದರೆ ಅನೇಕ ಕಠಿಣತೆಗಳನ್ನು ಹಾದು ಬರುವುದು ಅನಿವಾರ್ಯ. ನಮ್ಮ ಈ ಸಿನಿಮಾ ರೆಕಾರ್ಡ್‌ ಕ್ರಿಯೇಟ್‌ ಮಾಡುವ ವಿಶ್ವಾಸ ಇದೆ. ಎಲ್ಲ ಸನ್ನಿವೇಶಗಳನ್ನೂ ಸಮಚಿತ್ತದಿಂದ ನಿಭಾಯಿಸುವ ಗಂಡನ ಪಾತ್ರವನ್ನಿಲ್ಲಿ ನಿಭಾಯಿಸಿದ್ದೇನೆ' ಎಂದರು.

Hot ಲುಕ್‌ಗೆ ಹೆಸರುವಾಸಿ ಆಗ್ತಿದ್ದಾರಾ ರಚಿತಾ ರಾಮ್!

ಈ ಹಿಂದೆ ರಚಿತಾ ರಾಮ್‌ ಉಪೇಂದ್ರ (Upendra) ಜೊತೆ ನಟಿಸಿದ 'ಐ ಲವ್ ಯು' (I Love You) ಸಿನಿಮಾದ 'ಮಾತನಾಡಿ ಮಾಯವಾದೆ' ಹಾಡಿನಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದರು. ಈ ಬಗ್ಗೆ ತುಂಬಾ ಚರ್ಚೆಯಾಗಿತ್ತು. ಈ ವೇಳೆ ರಚಿತಾ ನಾನು ಇನ್ನು ಮುಂದೆ ಇಂತಹ ಬೋಲ್ಡ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದಿಲ್ಲವೆಂದು ಕಣ್ಣೀರು ಹಾಕಿದ್ದರು. ಈ ಹಾಡನ್ನು ನೋಡಿದ ನಮ್ಮ ಕುಟುಂಬ ತುಂಬಾ ಬೇಸರ ಪಟ್ಟುಕೊಂಡಿದ್ದಾರೆ. ಅಲ್ಲದೇ ಅಪ್ಪ ಅಮ್ಮನ ಮನಸ್ಸಿಗೆ ತುಂಬಾ ಬೇಸರ ಮಾಡಿದ್ದೇನೆ. ಅಮ್ಮ ನಾಯಕಿಯಾಗಿ ಇಂತಹ ಪಾತ್ರ ಓಕೆ. ಆದರೆ ಮಗಳಾಗಿ ನಿನ್ನನ್ನು ಹೀಗೆ ನೋಡಲು ಸಾಧ್ಯವಿಲ್ಲವೆಂದು ಹೇಳಿದ್ದಾರೆ ಎಂದು ರಚಿತಾ ರಾಮ್ ಅತ್ತಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?