ತಾಯಿ ದೃಷ್ಟಿಯಲ್ಲಿ ಮಗಳ ಪ್ರೀತಿ ಹೇಗಿರುತ್ತದೆ ಎಂದು ಹಂಚಿಕೊಂಡ ಪವಿತ್ರಾ ಲೋಕೇಶ್. ಇದು ಬೈಟು ಲವ್ ಸ್ಟೋರಿ...
ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿರುವ ಬೈಟು ಲವ್ (Bytwo Love) ಸ್ಟೋರಿ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಮೊದಲ ಬಾರಿ ತೆರೆ ಮೇಲೆ ಧನ್ವೀರ್ (Dhanveer) ಮತ್ತು ಶ್ರೀಲೀಲಾ (Sreeleela) ಕಾಂಬಿನೇಷನ್ ನೋಡಬಹುದು. ಹಾಗೆಯೇ ನಟಿ ಶ್ರೀಲೀಲಾ ತಾಯಿ ಪಾತ್ರದಲ್ಲಿ ಪವಿತ್ರ ಲೋಕೇಶ್ ಅಭಿನಯಿಸಿದ್ದಾರೆ. ಸಂತು ನಿರ್ದೇಶನ ಮಾಡಿರುವ ಈ ಸಿನಿಮಾ ಒಪ್ಪಿಕೊಳ್ಳಲು ಕಾರಣವೇನು ಎಂದು ಪವಿತ್ರ ಹಂಚಿಕೊಂಡಿದ್ದಾರೆ.
'ನಿರ್ದೇಶಕ ಸಂತು ಅವರು ಸಿನಿಮಾದ ಕಾನ್ಸೆಪ್ಟ್ ಹೇಳಿದ ತಕ್ಷಣ ನಾನು ಪ್ರಾಜೆಕ್ಟ್ ಒಪ್ಪಿಕೊಂಡೆ. ಒಳ್ಳೆ ಸಂದೇಶ ಇರುವ ಸಿನಿಮಾ ಇದು. ಇಲ್ಲಿವರೆಗೂ ಈ ರೀತಿ ಸಿನಿಮಾ ಬಂದಿಲ್ಲ. ಜೀವನದಲ್ಲಿ ಇದನ್ನು ನಾವು ಒಮ್ಮೆ ಎಕ್ಸಪೀರಿಮೆಂಟ್ ಮಾಡಬೇಕು. ಸಿನಿಮಾದಲ್ಲಿ ಶ್ರೀಲೀಲಾ ನನ್ನ ಮಗಳು. ಆಕೆ ಜೀವನದಲ್ಲಿ ಏನು ಅನುಭವಿಸುತ್ತಿದ್ದಾಳೆ ಎಂದು ತಾಯಿ ಮೂಲಕ ಹೇಳಿಸಿದ್ದಾರೆ. ಕೆಲವೊಂದು ಸನ್ನಿವೇಶಗಳು ತುಂಬಾನೇ ನ್ಯಾಚುರಲ್ ಆಗಿ ಮಾಡಿದ್ದಾರೆ ಇದಕ್ಕೆ ನಿರ್ದೇಶಕ ಸಂತುಗೆ ಧನ್ಯವಾದ ಹೇಳಬೇಕು. ಮಗಳ ನೋವು ಆದಾಗ ತಾಯಿ ಸ್ಪಂದಿಸುವ ರೀತಿ ಈ ಸಿನಿಮಾದಲ್ಲಿ ಚೆನ್ನಾಗಿದೆ' ಎಂದು ಪವಿತ್ರ ಲೋಕೇಶ್ ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.
Bytwo love film release; ಧನ್ವೀರ್ ಶ್ರೀಲೀಲಾ ಸ್ಟೈಲಿಶ್ ಪ್ರೇಮಕತೆ'ಶ್ರೀಲೀಲಾ ತುಂಬಾನೇ ಬಬ್ಲಿ ನಟಿ. ಸಿನಿಮಾದಲ್ಲಿರುವ ಪಾತ್ರಕ್ಕೆ ಆಕೆ ಸೂಟ್ ಆಗಿದ್ದಾಳೆ. ಧನ್ವೀರ್ ಜೊತೆ ಸನ್ನಿವೇಶ ಇರಲಿಲ್ಲ. ಅದಕ್ಕೆ ಹೆಚ್ಚಾಗಿ ಹೇಳುವುದಕ್ಕೆ ಆಗಲ್ಲ. ಕೆಲವು ಸಿನಿಮಾ ಡಬ್ಬಿಂಗ್ ಮಾಡುವಾಗ ಏನು ಅಂತ ಗೊತ್ತಾಗುತ್ತದೆ ಆದರೆ ಈ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಗೊತ್ತಾಯ್ತು. ಆರಂಭದಿಂದ ಅಂತ್ಯದವರೆಗೂ ಎಲ್ಲಾ ಭಾವನೆಗಳನ್ನು ಚೆನ್ನಾಗಿ ತೋರಿಸಿದ್ದಾರೆ. ಜನರಿಗೆ ಬೇಗ ಸಿನಿಮಾ ಹತ್ತಿರವಾಗುತ್ತದೆ' ಎಂದು ಪವಿತ್ರಾ ಲೋಕೇಶ್ (Pavitra Lokesh) ಹೇಳಿದ್ದಾರೆ.
'ನಮ್ಮ ತಂದೆ ತಾಯಿ ಲವ್ ಸ್ಟೋರಿ ಎಲ್ಲಾ ಕೇಳಿದರೆ ಅಬ್ಬಾ ಈ ತರನೂ ಲವ್ ಮಾಡ್ತಿದ್ರಾ ಅನ್ಸುತ್ತೆ. ಈಗ ಪ್ರೀತಿಗೆ ಅರ್ಥನೇ ಇಲ್ಲ. ಇವರಿಂದ ಏನಾದ್ರೂ ಸಿಗುತ್ತಾ, ಏನಾದ್ರೂ ಲಾಭ ಇದ್ಯಾ ಅಂತ ಲೆಕ್ಕಾಚಾರ ಹಾಕ್ತಾರೆ. ಸುಮ್ಮನೆ ಪ್ರೀತಿ ಮಾಡುತ್ತಾರೆ, ಮದುವೆ ಮಾಡಿಕೊಳ್ಳುತ್ತಾರೆ. ಯಾವಾಗ ಗಂಡನಿಂದ ನನಗೆ ಏನೂ ಸಿಗೋಲ್ಲ, ಹೆಂಡತಿಯಿಂದ ಏನೂ ಸಿಗೋಲ್ಲ, ಹೆಂಡ್ತಿ ದುಡಿಯುತ್ತಿಲ್ಲ, ಅವಳಿಗೆ ಇಷ್ಟು ಸಂಬಳ ಇಲ್ಲ...ಈ ಲೆಕ್ಕಾಚಾರದಲ್ಲಿ ಇರುತ್ತಾರೆ. ನಿಜವಾದ ಪ್ರೀತಿ, ನಾನು ಇವನನ್ನು ಪ್ರೀತಿಸಿದ್ದೀನಿ ಇವನ ಜೊತೆ ಇರಬೇಕು ಅನ್ನೋ ಗಟ್ಟಿ ವ್ಯಕ್ತಿತ್ವ ಸಿಗೋದು ಕಡಿಮೆಯಾಗಿದೆ. ಈಗಿನ ಕಾಲದ ಮಕ್ಕಳಿಗೆ ಈ ಸಿನಿಮಾ ಸರಿಯಾಗಿದೆ. ಯುವಕರಿಗೆ ಒಳ್ಳೆಯ ಸಂದೇಶ ಇರುವ ಸಿನಿಮಾವಿದು' ಎಂದಿದ್ದಾರೆ ಪವಿತ್ರಾ.
ಧನ್ವೀರ್,ಶ್ರೀಲೀಲಾ ನಟನೆ Bytwo Love ಚಿತ್ರದ ಟ್ರೈಲರ್ ರಿಲೀಸ್!'ಇದು ಯಂಗ್ ಟೀಂ ತುಂಬಾನೇ ಎನರ್ಜಿ ಇರುವ ಟೀಂ. ಸಂತು ಬಗ್ಗೆ ಎಲ್ಲರಿಗೂ ಗೊತ್ತಿದೆ. ಇಡೀ ಟೀಂನ ಚೆನ್ನಾಗಿ ನಡೆಸಿಕೊಂಡಿದ್ದಾರೆ. ಈ ಕೊರೋನಾದಿಂದ ಎಲ್ಲರ ಬದುಕು ಅಪ್ಸೆಟ್ ಆಗಿದೆ. ಎಲ್ಲರೂ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ ಎಂದು ಕೇಳಿಕೊಳ್ಳುವೆ' ಎಂದು ಪವಿತ್ರಾ ಮಾತು ಮುಗಿಸಿದ್ದಾರೆ.