
ಕನ್ನಡ ಚಿತ್ರರಂಗದಲ್ಲಿರುವ ಕೈಂಡ್ ಮತ್ತು ಸಿಂಪಲ್ ಹಾರ್ಟ್ ನಟ ವಿಶಾಲ್ ಹೆಗ್ಡೆ (Vishal Hegde) ತಮ್ಮ ಯುಟ್ಯೂಬ್ ಚಾನೆಲ್ ಮೂಲಕ ವೀಕ್ಷಕರ ಮನಸ್ಸಿಗೆ ಹತ್ತಿರವಾಗುತ್ತಿದ್ದಾರೆ. ಕೆಲವು ದಿನಗಳ ಹಿಂದೆ ತಂದೆಯಾಗುತ್ತಿರುವ ಸಿಹಿ ಸುದ್ದಿಯನ್ನೂ ಹಂಚಿಕೊಂಡ ವಿಶಾಲ್ ಇದೀಗ ಬ್ಲಾಕ್ ಬಸ್ಟರ್ ಹಿಟ್ ಕಾಣುತ್ತಿರುವ ಲವ್ ಮಾಕ್ಟೇಲ್ 2 (Love Mocktail 2) ಸಿನಿಮಾ ಬಗ್ಗೆ ಮಾತನಾಡಿದ್ದಾರೆ.
ಹೌದು! ಡಾರ್ಲಿಂಗ್ ಕೃಷ್ಣ (Darling Krishna) ಮತ್ತು ಮಿಲನಾ ನಾಗರಾಜ್ (Milana Nagaraj) ನಟನೆಯ ಲವ್ ಮಾಕ್ಟೇಲ್ 2 ಸಿನಿಮಾ ಬಿಡುಗಡೆಯಾದ ಒಂದೇ ವಾರದಲ್ಲಿ7-8 ಕೋಟಿ ರೂ. ಕಲೆಕ್ಷನ್ ಮಾಡಿದೆ, ಎಂದು ವಿತರಕರಾಗಿರುವ ಕೃಷ್ಣ ತಂದೆ ಸಕ್ಸಸ್ ಮೀಟ್‌ನಲ್ಲಿ ಹೇಳಿದ್ದಾರೆ. ಕರ್ನಾಟಕದಲ್ಲಿ ಮಾತ್ರವಲ್ಲದೇ ಅಕ್ಕಪಕ್ಕ ರಾಜ್ಯದಲ್ಲೂ ಲವ್ ಮಾಕ್ಟೇಲ್ ಯಶಸ್ಸು ಕಾಣುತ್ತಿದೆ. ಕೆಲವೇ ದಿನಗಳಲ್ಲಿ ವಿದೇಶದಲ್ಲೂ ಸ್ಕ್ರೀನಿಂಗ್ ನಡೆಯಲಿದೆ ಎನ್ನಬಹುದು. ಈ ಸಿನಿಮಾನ ವೀಕ್ಷಿಸಿ ನಟ ವಿಶಾಲ್ ಹೆಗ್ಡೆ ಸಂತಸ ವ್ಯಕ್ತ ಪಡಿಸಿದ್ದಾರೆ.
'ನಿನ್ನೆ ರಾತ್ರಿ ಒಂದು ಅದ್ಭುತವಾದ ಸಿನಿಮಾ ನೋಡ್ಕೊಂಡು ಬಂದು. ಅದು ಲವ್ ಮಾಕ್ಟೇಲ್ 2. ಸಿನಿಮಾ ನನಗೆ ತುಂಬಾನೇ ಇಷ್ಟ ಆಯ್ತು. ಸಿನಿಮಾಗೆ ಹಾಕಿರುವ ಶ್ರಮ ಎದ್ದು ಕಾಣಿಸುತ್ತದೆ. ಕೃಷ್ಣ ಅವರನ್ನು ನಾನು 'ಹುಡುಗರು' (Hudugaru Film) ಸಿನಿಮಾ ಮಾಡುವ ಸಮಯದಲ್ಲಿ ಭೇಟಿ ಮಾಡಿದ್ದು. ಹೀಗಾಗಿ ಅವರನ್ನು ಸುನೀಲ್ (Sunil) ಎಂದು ಕರೆಯುತ್ತೆನೆ. ಸಿನಿಮಾ ಹೀಗೆ ಮಾಡಬೇಕು ಅಂತ ಯೋಚನೆ ಮಾಡುವುದು ಒಂದಾದರೆ, ಅದನ್ನು ಪರದೆ ಮೇಲೆ ತರುವುದು ತುಂಬಾನೇ ಕಷ್ಟ. ನಾನೊಬ್ಬ ನಟನಾಗಿ ಈ ಶ್ರಮ ಚೆನ್ನಾಗಿ ಗೊತ್ತಿದೆ. ಮಿಲನಾ ಮತ್ತು ಕೃಷ್ಣ ಶ್ರಮ ಗೊತ್ತಾಗುತ್ತದೆ. ನಿರ್ಮಾಣ, ನಿರ್ದೇಶಕ, ಸ್ಕ್ರೀನ್ ಪ್ಲೇ, ಡೈಲಾಗ್ ಎಲ್ಲಾರ ಅವರೇ ಮಾಡಿರುವುದು ಖುಷಿಯಾಗುತ್ತದೆ,' ಎಂದು ವಿಶಾಲ್ ಮಾತನಾಡಿದ್ದಾರೆ.
'ಎರಡನೇ ಭಾಗದಲ್ಲಿ ಎರಡು ಮೂರು ಹೊಸ ಕ್ಯಾರೆಕ್ಟರ್‌ಗಳನ್ನು ಪರಿಚಯ ಮಾಡಿದ್ದಾರೆ. ಸಿನಿಮಾ ತುಂಬಾ ಫನ್ನಿಯಾಗಿದೆ. ಸಾಮಾನ್ಯವಾಗಿ ನಾನು ಸಿನಿಮಾಗಳ ಬಗ್ಗೆ ಮಾತನಾಡುವುದಿಲ್ಲ ವಿಮರ್ಶೆ ಮಾಡುವುದಿಲ್ಲ. ಆದರೆ ಇದು ಒಳ್ಳೆ ಕಂಟೆನ್ಟ್ ಆಗಿರುವ ಕಾರಣ ಜನರಿಗೆ ಹೇಳುತ್ತಿರುವೆ. ಒಳ್ಳೆ ಕನ್ನಡ ಸಿನಿಮಾ ರಿಲೀಸ್ ಆದಾಗ ಖುಷಿಯಾಗುತ್ತದೆ. ನಾನು ನಟಿಸಿದ್ದೀನಿ, ನಟಿಸಿಲ್ಲ ಅನ್ನೋದು ಮುಖ್ಯ. ಅಲ್ಲ ನನ್ನ ಪರಿಚಯ ಇರುವವರ ಸಿನಿಮಾ ಗೆದ್ದಾಗ ತುಂಬಾನೇ ಖುಷಿ ಆಗುತ್ತದೆ ಹೆಮ್ಮೆ ಆಗುತ್ತೆ. ನಾನು ಈ ಸಿನಿಮಾದಲ್ಲಿ ಇಲ್ಲ. ನಾನು ಈ ಸಿನಿಮಾ ಪ್ರಚಾರ ಮಾಡುತ್ತಿರುವೆ ಅಂದುಕೊಳ್ಳಬೇಡಿ. ನಿಜ ಇದು ನನ್ನ ಅನಿಸಿಕೆ,' ಎಂದು ವಿಶಾಲ್ ಹೇಳಿದ್ದಾರೆ.
'ಕನ್ನಡದಲ್ಲಿ ಒಳ್ಳೆ ಸಿನಿಮಾ ಬರಲ್ಲ ಗುರು ಅಂತ ಎಷ್ಟೊಂದು ಜನ ಟೀಕೆ ಮಾಡುತ್ತಾರೆ. ಕನ್ನಡದಲ್ಲಿ ಅಲ್ಲ ಬಾಸ್ ಯಾವುದೇ ಭಾಷೆ ಆಗಿರಲಿ, 100 ಸಿನಿಮಾ ಬಂದ್ರೆ ಅದರಲ್ಲಿ 50 ಚೆನ್ನಾಗಿರುತ್ತೆ. ಕನ್ನಡದಲ್ಲಿ ಒಳ್ಳೆ ಸಿನಿಮಾ ಬಂದಾಗ, ನಾವು ತಪ್ಪದೇ ನೋಡಬೇಕು. ಇತ್ತೀಚಿಗೆ ರತ್ನನ್ ಪ್ರಪಂಚ (Ratnan Prapancha) ಸಿನಿಮಾ ಬಂತು. ಅದು ಕೂಡ ಚೆನ್ನಾಗಿದೆ. ಈ ಸಿನಿಮಾ ನೋಡಿ ಮನಸ್ಸಿಗೆ ಖುಷಿ ಆಯ್ತು. ಅದಕ್ಕೆ ವಿಡಿಯೋ ಮಾಡೋಣ ಅಂದುಕೊಂಡೆ. ಯಾರು ಸಿನಿಮಾ ನೋಡಿದ್ದೀರಾ, ಹೇಗಿತ್ತು ಎಂದು ಕಾಮೆಂಟ್ ಮಾಡಿ. ಯಾರು ನೋಡಿಲ್ಲ, ದಯವಿಟ್ಟು ಹೋಗಿ ನೋಡಿ,' ಎಂದು ವಿಶಾಲ್ ಮಾತು ಮುಗಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.