ಕನ್ನಡ ನಟಿ ನೇಹಾ ಮೇಲೆ ನಿರ್ದೇಶಕ, ಹೊಟೇಲ್ ಮಾಲೀಕನ ದೌರ್ಜನ್ಯ

By Suvarna NewsFirst Published Oct 2, 2021, 5:50 PM IST
Highlights

ಚಿತ್ರೀಕರಣದ ವೇಳೆ ನಿರ್ದೇಶಕ ದೌರ್ಜನ್ಯದ ಬಗ್ಗೆ ಸತ್ಯ ಬಿಚ್ಚಿಟ್ಟ ನಟಿ ನೇಹಾ ಸಕ್ಸೇನಾ..

ಕನ್ನಡ, ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ನಟಿಸಿರುವ ನೇಹಾ ಸಕ್ಸೇನಾ ಮೇಲೆ ನಿರ್ದೇಶಕರು, ಹೋಟೆಲ್ ಮಾಲೀಕರು ದೌರ್ಜನ್ಯ ಎಸಗಿದ್ದಾರೆ. ಘಟನೆಯ ಸಂಪೂರ್ಣ ಮಾಹಿತಿಯನ್ನು ನಟಿ ಖಾಸಗಿ ವೆಬ್‌ಸೈಟ್ ಒಂದಕ್ಕೆ ನೀಡಿರುವ ಸಂದರ್ಶನಲ್ಲಿ ಹಂಚಿಕೊಂಡಿದ್ದಾರೆ. ಇಂತಹ ಘಟನೆಗಳು ನಟಿಯ ವೃತ್ತಿ ಜೀವನ ಹಾಳು ಮಾಡುತ್ತಿದೆ. ಇವೆಲ್ಲಾ ಬದಲಾಗಬೇಕು ಎಂದಿದ್ದಾರೆ.

ಆಗಸ್ಟ್‌ 20ರಂದು ತಮಿಳು ಸಿನಿಮಾ (Tamil Movie) ಚಿತ್ರೀಕರಣ ಆರಂಭಿಸಿದ್ದರು. ನಿರ್ದೇಶಕರು ತಮಿಳುನವರು. ಆದರೆ ನಿರ್ಮಾಣ ಮಾಡುತ್ತಿದ್ದರು ಮಾತ್ರ ಕೇರಳದವರು. 'ನಿರ್ದೇಶಕರ ಪುತ್ರ ಡೆಬ್ಯೂ ಸಿನಿಮಾ ಇದಾಗಿತ್ತು. ಯಾರೂ ನಟಿಸಲು ಒಪ್ಪದ ಕಾರಣ, ನನ್ನನ್ನು ಕೇಳಿಕೊಂಡರು. ನಾನು ಆಯ್ಕೆ ಮಾಡಿಕೊಳ್ಳುತ್ತಿದ್ದ ಪಾತ್ರಗಳಿಗಿದು ವಿರುದ್ಧದ ಈ ಪಾತ್ರ. ಪ್ರಕಾಶ್ ರಾಜ್‌ ಅಥವಾ ನಿಸಾರ್‌ ಎಂ ಎದುರು ನಟಿಸುವ ಅವಕಾಶ ನೀಡುವುದಾಗಿ ಮಾತು ಕೊಟ್ಟರು. ಕೊರೋನಾ ಪ್ಯಾಂಡಮಿಕ್‌ನಿಂದ ಎಲ್ಲರಿಗೂ ತೊಂದರೆ ಆಗುತ್ತಿದ್ದ ಕಾರಣ ನಾನು ಅಡ್ವಾನ್ಸ್ ಆಗಿ 50 ಸಾವಿರ ರೂ. ಪಡೆದುಕೊಂಡು ಕಾಂಟ್ರ್ಯಾಕ್ಸ್ (Contract) ಸಹಿ ಮಾಡಿದೆ. ಚಿತ್ರೀಕರಣದ ಮೊದಲ ದಿನವೇ ಸೆಟ್‌ ನನಗೆ ವಿಚಿತ್ರ ಎಂದೆನಿಸಿತ್ತು. ಇರಿಸುಮುರಿಸು ಆದ ಕಾರಣ ನಾನು ನಿರ್ದೇಶಕರಿಗೆ ಕರೆ ಮಾಡಿ ಹೇಳಿದೆ. ಅದರಲ್ಲೂ ನಾನು ಬೇಡದ Intimate ದೃಶ್ಯಗಳನ್ನು ನಿರಾಕರಿಸಿದೆ. ಆಗಲೇ ನಿರ್ದೇಶಕರು ನನಗೆ ಹೆದರಿಸಲು ಆರಂಭಿಸಿದ್ದರು. ನಿರ್ಮಾಪಕರು  ಮಾಫಿಯಾದಲ್ಲಿ ಇದ್ದಾರೆ. ಕ್ಯಾಸಿನೋದಲ್ಲಿ ಅವರ ನಿನ್ನ ಟಾರ್ಚರ್ ಮಾಡಬಹುದು. ರೇಪ್ ಮಾಡಬಹುದು. ಇಲ್ಲವಾದರೆ ಗುಂಡಿಕ್ಕಿ ಸಾಯಿಸಬಹುದು ಎಂದು ಹೆದರಿಸಿದರು. ಹೆದರಿಕೊಂಡು ನಾನು ಸುಮ್ಮನೆ ಒಪ್ಪಿಕೊಂಡೆ,' ಎಂದು ಇ-ಟೈಮ್ಸ್‌ ಜೊತೆ ನೇಹಾ ಘಟನೆ ಬಗ್ಗೆ ಹಂಚಿಕೊಂಡಿದ್ದಾರೆ. 

ಮತ್ತೆ ಪೋರ್ನ್‌ ನೋಡ್ತಾ ವಿದ್ಯಾರ್ಥಿನಿಯನ್ನು ಮಂಚಕ್ಕೆ ಕರೆದ ಕೋರಿಯೋಗ್ರಾಫರ್‌?

'ನಾನು ಆರ್ಧದಲ್ಲಿ ಕೈ ಬಿಟ್ಟರೆ ಇಡೀ ತಂಡಕ್ಕೆ ತೊಂದರೆ ಆಗುತ್ತದೆ ಎಂದು ಚಿತ್ರದ ಶೂಟಿಂಗ್‌ನಲ್ಲಿ ಮುಂದುವರೆದೆ. ಸಿನಿಮಾ ಅರ್ಧಕ್ಕೇ ಬಿಟ್ಟೆ ಎಂದು ನನ್ನ ಸಿನಿಮಾ ಕ್ಷೇತ್ರದಲಲ್ಲಿ ತಮ್ಮ ಹೆಸರು ಕೂಡ ಹಾಳಾಗಬಾರದು ಎಂದು ಸುಮ್ಮನಿದ್ದೆ. ಎಲ್ಲಾ ನೋವುಗಳನ್ನೂ ನುಂಗಿ ಕೊಂಡೆ.  ಆದರೆ ನನ್ನ ಕೋ-ಸ್ಟಾರ್ ಪತಿ ನನ್ನ ಜೊತೆ ಜಗಳ ಮಾಡಲು ಶುರು ಮಾಡಿದ್ದರು. ಸೆಟ್‌ನಲ್ಲಿ ನಾನು ಕೆಟ್ಟ ಕೆಲಸಗಳನ್ನು ನಡೆಸುತ್ತಿರುವೆ, ಎಂದು ನಿರ್ದೇಶಕರಿಗೆ (Director) ಹೇಳಿ ಅವರ ಮಗ ನನ್ನ ಜೊತೆ ಜಗಳ ಮಾಡುವಂತೆ ಮಾಡಿದರು. ನಿರ್ದೇಶಕರು ನನಗೆ ಸುಮ್ಮನಿರುವಂತೆ ಹೇಳಿದ್ದರು. ಸೆಪ್ಟೆಂಬರ್ 19ರಂದು ನನ್ನ ಅಸಿಸ್ಟೆಂಟ್ ಜೊತೆ ನಾನು ಡಿನ್ನರ್‌ಗೆ ಹೋಗಿದ್ದೆ. ನಾವೆಲ್ಲರೂ ಚಿತ್ರೀಕರಣಕ್ಕೆಂದು ಉಳಿದುಕೊಂಡಿದ್ದ ಹೋಟೆಲ್‌ನಲ್ಲಿ, ನಾನು ರೂಮ್‌ಗೆ ಹೋಗುವಾದ ಹೋಟೆಲ್‌ ಮಾಲೀಕರು ಬಂದು ಅವರೊಂದಿಗೆ ಒಂದು ರಾತ್ರಿ ಕಳಿಯುವುದಕ್ಕೆ ಹೇಳಿದರು. ಇದರಲ್ಲಿ ಅವರ ಸ್ನೇಹಿತರು ಕೂಡ ಇದ್ದರು. ಆದ ನಾನು ತಾಳ್ಮೆ ಕಳೆದುಕೊಂಡು ಅದು ಹೇಗೆ ನೀವು ನನ್ನನ್ನು ಕೇಳುತ್ತೀರಾ, ಎಂದು ಜಗಳ ಮಾಡಿದೆ. ನಿರ್ದೇಶಕರು ನನ್ನ ಪರ ಆಗಲೂ ಮಾತನಾಡಲಿಲ್ಲ. 10 ದಿನ ಚಿತ್ರೀಕರಣಕ್ಕೆ ಎಂದು ತೆಗೆದುಕೊಂಡಿರುವ ಹೋಟೆಲ್ ವ್ಯರ್ಥವಾಗುತ್ತದೆ ಎಂದು ಅಲ್ಲಿಗೆ ನಿಲ್ಲಿಸಿದ್ದರು. ರಾತ್ರಿಯಲ್ಲಿ ನನಗೆ ನಾನ್‌ ಸ್ಟಾಪ್ ಕರೆ ಬರುತ್ತಿತ್ತು. ಯಾರೋ ಬಂದು ಮಧ್ಯರಾತ್ರಿ ಬಾಗಿಲು ಬಡಿಯುತ್ತಿದ್ದರು. ಚಿತ್ರೀಕರಣ ಮುಗಿಯುವವರೆಗೂ ನನ್ನೊಂದಿಗೆ ಇರಲು ಅಸಿಸ್ಟೆಂಟ್‌ಗೆ ಹೇಳಿದೆ. ನಿರ್ಮಾಪಕರ ಬಗ್ಗೆ ಇವರು ಹೇಳಿದ ಮಾತು ನನ್ನ ಕಿವಿಯಲ್ಲಿತ್ತು. ಒಂದು ಸನ್ನಿವೇಶದಲ್ಲಿ ನಟ ನನ್ನ ಕುತ್ತಿಗೆ ಹಿಡಿದುಕೊಳ್ಳಬೇಕು ಮತ್ತೊಮ್ಮ ವಿಲನ್ ಬಂದು ನನಗೆ ಶೂಟ್ ಮಾಡುತ್ತಾನೆ. ಆದರೆ ನಟ ಹಾಗೆ ಮಾಡಲಿಲ್ಲ. ನನ್ನ ಕುತ್ತಿಗೆ ಹಿಡಿದು ಹಿಂದೆ ಬೀಳುವಂತೆ, ನೂಕಿದರು. ಆಗ ನನ್ನ ಸಣ್ಣ ಪುಟ್ಟ ಗಾಯ ಆಯ್ತು. ಆಗಲೂ ನಿರ್ದೇಶಕರು ಎರಡು ದಿನ ಚಿತ್ರೀಕರಣ ಇದೆ. ಇದಾದ ಮೇಲೆ ನೀವು ಹೋಗಬಹುದು ಈಗ ಸುಮ್ಮನಿರಿ ಎಂದು ಹೇಳಿದರು. ನಾನು ನಿರ್ದೇಶಕರಿಗೆ ಸಂಭಾವನೆ ಬೇಕು ಎಂದು ಕೊನೆ ದಿನ ಮೆಸೇಜ್ ಮಾಡಿದೆ ಅವರು thumbs up ಕಳುಹಿಸಿದ್ದರು. ನಾನು 25 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೀನಿ. ಇನ್ನೂ 10 ದಿನ ಕಾಯುವಂತೆ ಹೇಳಿದ್ದಾರೆ. ನಾನು ಪಡೆದುಕೊಂಡಿದ್ದು ಕೇವಲ 10% ಹಣ ಅಷ್ಟೆ,' ಎಂದು ಘಟನೆ ಬಗ್ಗೆ ನೇಹಾ ಮಾತನಾಡಿದ್ದಾರೆ. 

ಬಿಕಿನಿ ಫೋಟೋ ಕೇಳಿದವನಿಗೆ ಬಿಕ್ಕಳಿಕೆ ಬರುವಂತೆ ಉತ್ತರಿಸಿದ ಅನುಪಮಾ!

'ನಿರ್ಮಾಪಕರು ಒಂದು ದಿನ ನನ್ನನ್ನು ಭೇಟಿಯಾಗಲು ಬಂದರು. ಅವರು ನನ್ನ ತೊಂದರೆಗಳ ಬಗ್ಗೆ ಚರ್ಚೆ ಮಾಡಿದರು. ನಿರ್ದೇಶಕರು ಸುಳ್ಳು ಕತೆ ಕಟ್ಟಿ ನನಗೆ ಸಂಭಾವನೆ ನೀಡಲಾಗಿದೆ ಎಂದರು. ನಾನು ಇಲ್ಲ ಎಂದು ಹೇಳಿದಾಗ ನಾನು ಸುಳ್ಳು ಹೇಳುತ್ತಿರುವೆ ಎಂದೂ ಆರೋಪಿಸಿದರು. ನಾನಾಗಲೇ ನಿರ್ಮಾಪಕರಿಗೆ ಹೇಳಿದ್ದೆ, ಒಂದು ಚಾರಿಟಿಗೆ ಕೆಲಸ ಮಾಡಿದೆ ಎಂದುಕೊಂಡು ಸುಮ್ಮನಾಗುವೆ, ನನಗೆ ಸಂಭಾವನೆ ಬೇಡ, ಎಂದು ಲಿಫ್ಟ್‌ ಬಳಿ ಎದ್ದು ಹೊರಟೆ. ಆಗ ನಿರ್ದೇಶಕ ನನ್ನ ಕೈ ಹಿಡಿದು ಎಳೆದರು.  ಆಗ ನನ್ನ ತಾಯಿಯ ಕರೆ ಬಂದಿತು. ನಿರ್ದೇಶಕರು ತಕ್ಷಣ ನನ್ನ ಫೋನ್ ಕಿತ್ತುಕೊಂಡರು. ನನ್ನ ರೂಮಿಗೆ ನಿರ್ದೇಶಕರು ನುಗ್ಗಿ, ನನ್ನನ್ನು ವೇಶ್ಯೆ ಎಂದು ಕರೆದರು. ನನಗೆ ಶೂಟ್ ಮಾಡುವುದಾಗಿ ಬೆದರಿಸಿದದ್ದರು ಹಾಗೂ ನನ್ನ ವಸ್ತ್ರ ವಿನ್ಯಾಸ ಮಾಡುವವರು ಹಣ ಕೇಳಿದರೆ, ಅವರಿಗೆ ಹುಡುಗರನ್ನು ಬಿಟ್ಟು ಹೊಡೆಸುವುದಾಗಿಯೂ ಬೆದರಿಸಿದರು. ನಾನು ಹೊಟೇಲ್‌ನವರ ಸಹಾಯ ತೆಗೆದುಕೊಂಡೆ. ರೆಸೆಪ್ಶನ್‌‌ನವರು ಮಾಲೀಕರು ಬರುತ್ತಿದ್ದಾರೆ. ಕಷ್ಟ ಆಗುತ್ತದೆ, ಎಂದು ತಕ್ಷಣವೇ ಹೊರಡಲು ಹೇಳಿದ್ದರಿಂದ, ನಾನು ಅಲ್ಲಿಂದ ಜಾಗ ಖಾಲಿ ಮಾಡಿದೆ,' ಎಂದು ನೇಹಾ ತಮಗಾದ ನೋವನ್ನು ಸಂದರ್ಶನದಲ್ಲಿ ತೋಡಿಕೊಂಡಿದ್ದಾರೆ.

ಈ  ಬಗ್ಗೆ ಬೆಂಗಳೂರು ಸೆಂಟ್ರಲ್ ಪೊಲೀಸರಿಗೆ ದೂರು ನೀಡಿದ್ದ ನೇಹಾ, ಪೊಲೀಸರ ಸಹಾಯದಿಂದ ಸಂಭಾವನೆ ಪಡೆದುಕೊಂಡಿದ್ದಾರೆ. 'ಡಿಸಿಪಿ, ಎಸಿಪಿ ಅವರ ಅವರಿಗೆ ಚಿತ್ರದಲ್ಲಿ ನಟಿಸಿದ ಬಗ್ಗೆ ಹಾಗೂ ಉಳಿದ ಘಟನೆಗಳ ಬಗ್ಗೆ ಸಾಕ್ಷಿ ತೋರಿಸಿದೆ. ಅವರು ವಿಚಾರಣೆ ಶುರು ಮಾಡಿದರು. ಏನೂ ಮಾಡಿಲ್ಲ ಎಂದು ನಿರ್ದೇಶಕರು ವಾದ ಮಾಡಿದ್ದರು. ಇದರಲ್ಲಿ ನಿರ್ಮಾಪಕರ ಕೆಲಸ ಏನೂ ಇಲ್ಲ. ನಾನು ಕ್ಷಮೆ ಪತ್ರ ಬರೆಯುವುದಕ್ಕೆ ಹೇಳಿದೆ. ನಾನು ಕಾಸಬಾ ಸಿನಿಮಾದಲ್ಲಿ ವೇಶ್ಯೆಯಾಗಿ ನಟಿಸಿದೆ. ಅದೇ ನನ್ನ ಜೀವನ ಅನ್ನುವ ಹಾಗೆ ವರ್ತಿಸಿದ್ದಕ್ಕೆ ಕ್ಷಮೆ ಕೇಳಿಸಿದೆ. ನನ್ನ ಸಂಭಾವನೆ ಕೊಟ್ಟರು. ನಿಜಕ್ಕೂ ಪೊಲೀಸರಿಗೆ ಧನ್ಯವಾಗಳನ್ನು ಹೇಳಬೇಕು,' ಎಂದು ನೇಹಾ ಘಟನೆ ಬಗ್ಗೆ ಮಾತನಾಡಿದ್ದಾರೆ.

click me!