ಸೌಜನ್ಯ ಆತ್ಮಹತ್ಯೆ:  ವಾಟ್ಸಪ್ ಚಾಟ್‌ಗಳ ಪರಿಶೀಲನೆ

Suvarna News   | Asianet News
Published : Oct 02, 2021, 11:57 AM ISTUpdated : Oct 02, 2021, 12:00 PM IST
ಸೌಜನ್ಯ ಆತ್ಮಹತ್ಯೆ:  ವಾಟ್ಸಪ್ ಚಾಟ್‌ಗಳ ಪರಿಶೀಲನೆ

ಸಾರಾಂಶ

ಚೌಕಟ್ಟು ನಟಿ ಸೌಜನ್ಯ ಆತ್ಮಹತ್ಯೆ ಪ್ರಕರಣ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಪೊಲೀಸರು ನಟಿಯ ಗೆಳೆಯ ವಿವೇಕ್ ಹಾಗೂ ಅಸಿಸ್ಟೆಂಟ್ ಮಹೇಶ್ ವಿಚಾರಣೆ ನಡೆಸಲಾಗುತ್ತಿದೆ.

ಕನ್ನಡ ಕಿರುತೆರೆ ನಟಿ ಸೌಜನ್ಯ (Soujanya) ಕೆಲ ದಿನಗಳ ಹಿಂದೆ ಬೆಂಗಳೂರಿನ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ. ಸಾಯೋ ಮೂರು ದಿನಗಳ ಮುನ್ನ ಬರೆದಿರುವ ಡೆತ್ ನೋಟ್ ಸಹ ಬರೆದಿಟ್ಟಿದ್ದು, ಪೊಲೀಸರಿಗೆ ಸಿಕ್ಕಿದೆ. ಮರಣೋತರ ಪರೀಕ್ಷೆ ನಂತರ ಮೃತದೇಹವನ್ನು ಕುಟುಂಬಸ್ಥರಿಗೆ ನೀಡಲಾಗಿದೆ. ಸೌಜನ್ಯ ಆತ್ಮಹತ್ಯೆ ಸುತ್ತ ಹಲವು ಅನುಮಾನಗಳು ಸೃಷ್ಟಿಯಾಗಿವೆ.  ಸ್ನೇಹಿತ ವಿವೇಕ್ (Vivek) ವಿರುದ್ಧ ದೂರು ಸೌಜನ್ಯ ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನಿನ್ನೆ ರಾತ್ರಿ ಪೊಲೀಸರು ವಿವೇಕ್ ಹಾಗೂ ಮಹೇಶ್‌ (Mahesh) ಅವರನ್ನು ವಿಚಾರಣೆ ನಡೆಸಿದ್ದಾರೆ. ಕುಂಬಳಗೋಡು ಪೊಲೀಸರು (Kumbalagudu Police Station) ಇಂದು ಮತ್ತೆ ವಿಚಾರಣೆ ನಡೆಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜಾರಾಗುವಂತೆಯೂ ಸೂಚನೆ ನೀಡಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ನೀಡುವಂತೆ ನಟಿಗೆ ಏನಾಗಿರಬಹುದು ಎಂಬ ಮಾಹಿತಿಗಳನ್ನು ಪ್ರಕರಣದ ತನಿಖಾಧಿಕಾರಿಗಳು ಕಲೆ ಹಾಕುತ್ತಿದ್ದಾರೆ.

ನಿನ್ನೆ ನಡೆದ ವಿಚಾರಣೆಯಿಂದ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಬಗ್ಗೆ ಯಾವುದೇ ಸಾಕ್ಷ್ಯ ಪತ್ತೆಯೆಯಾಗಿಲ್ಲ. ಸೌಜನ್ಯ ಹಾಗೂ ವಿವೇಕ್ ಸ್ನೇಹದ ಬಗ್ಗೆ ಸ್ನೇಹಿತರಿಂದಲೂ ಪೊಲೀಸರು ಮಾಹಿತಿ ಪಡೆದಿದ್ದಾರೆ. ವಿವೇಕ್ ಅವರ ಕಾಮನ್ ಫ್ರೆಂಡ್ಸ್ ಮೂಲಕ ಸೌಜನ್ಯ ಜೊತೆ ಸ್ನೇಹ ಸಂಪಾದಿಸಿದ್ದರು. ಇಬ್ಬರು ಹೇಗಿದ್ದರು, ಗಲಾಟೆ ಏನಾದರೂ ಮಾಡ್ಕೊಳ್ತಿದ್ರಾ ಎಂಬ ಬಗ್ಗೆಯೂ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ. ಹೀಗಾಗಿ ವಿವೇಕ್ ಮೊಬೈಲ್ ಪರೀಶಿಲನೆ ನಡೆಸಲಾಗುತ್ತದೆ. ವಾಟ್ಸಪ್ (Whatsapp) ಚಾಟ್‌ಗಳಿಂದ ಸುಳಿವು ಸಿಗಬಹುದು ಎಂದು ಅದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. 

ಕಿರುತೆರೆ ನಟಿ ಸುಸೈಡ್‌ ಕೇಸ್‌ಗೆ ಟ್ವಿಸ್ಟ್.. ಮದುವೆಯಾಗು ಎಂದು ಕಿರುಕುಳ ಕೊಡ್ತಿದ್ದ ನಟ!

ನಟಿ ಸವಿ ಮಾದಪ್ಪ ಆಲಿಯಾಸ್ ಸೌಜನ್ಯ ಆತ್ಮಹತ್ಯೆ ನಂತರ ನಟಿಯ ತಂದೆ ಪ್ರಭು ಮಾದಪ್ಪ, ಕನ್ನಡ ಹಾಗೂ ತೆಲುಗು ಕಿರುತೆರೆ ನಟನೊಬ್ಬ ಮಗಳಿಗೆ ಪರಿಚಿತನಿದ್ದ.  ಮದುವೆಯಾಗು ಎಂದು‌ ತಮ್ಮ ಮಗಳಿಗೆ ಕಿರುಕುಳ‌ ನೀಡುತ್ತಿದ್ದ. ಆತನೇ ಬೆಳಗ್ಗೆ ಮನೆ ಬಳಿ ಬಂದು‌ ಕಿರುಕುಳ ನೀಡಿರುವ ಸಾಧ್ಯತೆ ಇದೆ. ಆದ್ದರಿಂದ ನನ್ನ ಮಗಳು ಸಾಯುವ ನಿರ್ಧಾರ ಮಾಡಿರಬಹುದು. ಸೂಕ್ತ ತನಿಖೆ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದರು. ನಂತರ ಮೃತಳ ಮರಣೋತ್ತರ ಪರೀಕ್ಷೆ ನಡೆಯಿಸಿ, ಮೃತ ದೇಹವನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಗಿತ್ತು. 

ಪ್ರಾಥಮಿಕ ತನಿಖೆಯಲ್ಲಿ ಸೌಜನ್ಯಳದ್ದು ಆತ್ಮಹತ್ಯೆ ಎಂಬುವದು ದೃಢಪಟ್ಟಿದೆ. 'ಸೌಜನ್ಯ ಹಾಗೂ ವಿವೇಕ್ ಸಾಕಷ್ಟು ಅನ್ಯೋನ್ಯತೆ' ಇತ್ತು ಎಂಬುವುದೂ ತಿಳಿದು ಬಂದಿದೆ. ಆದರೆ, ವಿವೇಕ್‌ ಕಿರುಕುಳ ನೀಡಿರುವ ಬಗ್ಗೆ ಯಾವುದೇ ಸಾಕ್ಷಗಳಿಲ್ಲ. ಮೂರು ಕಾರಣಗಳಿಂದ ನಟಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬುವುದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಮೂರು ಆಯಾಮಗಳಲ್ಲಿ ಸದ್ಯ ತನಿಖೆ ನಡೆಸಲಾಗುತ್ತಿದೆ. ಸೆಲೆಬ್ರಟಿ ಪಾಷ್ ಲೈಫ್ ಮೆಂಟೈನ್ ಮಾಡೋಕೆ ಆಗ್ತಿರ್ಲಿಲ್ಲ, ಸ್ವಂತ ದುಡಿಮೆಯಿಂದ ಸೆಲೆಬ್ರೆಟಿ ಹೈಫೈ ಲೈಫ್ ಮೆಂಟೈನ್ ಮಾಡಲು ಕಷ್ಟವಾಗುತ್ತಿತ್ತು ಹಾಗೂ ಪದೇ-ಪದೇ‌ ಪೋಷಕರಿಂದ ಹಣ ಹಾಕಿಸಿಕೊಳ್ತಿದ್ದ ಸೌಜನ್ಯರಿಗೆ ಒತ್ತಡ ಕಾಡುತ್ತಿದ್ದಿರಬಹುದು, ಎನ್ನಲಾಗಿದೆ.

ಎರಡು ವರ್ಷಗಳಿಂದ ಕೆಲಸ ಇಲ್ಲದೆ ಖಾಲಿ ಇದ್ದರು ಸೌಜನ್ಯ. ಇದರಿಂದಲೂ ಮನನೊಂದಿದ್ದರು. ಅಲ್ಲದೇ ವೈಯಕ್ತಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಮಾನಸಿಕವಾಗಿ ಜರ್ಜರಿತರಾಗಿದ್ದರು ಎನ್ನಲಾಗುತ್ತಿತ್ತು. ಅಲ್ಲದೇ, ತಾವು ಪ್ರೀತಿಸುತ್ತಿದ್ದ ಹುಡುಗನನ್ನು ಮದುವೆಯಾಗಲು ಕುಟುಂಬದ ವಿರೋಧವೂ ಇತ್ತು. ಪ್ರಿಯಕರ ವಿವೇಕ್‌ಗೂ ಸುಳಿವೇ ನೀಡದಂತೆ ಆತ್ಮಹತ್ಯೆಗೆ ಶರಣಾದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿವೆ, ಎನ್ನಲಾಗುತ್ತಿದೆ. 

ಡೆತ್ ನೋಟ್‌ನಲ್ಲಿ (Death Note) ಸೌಜನ್ಯ ತನ್ನ ಸಾವಿಗೆ ತಾನೇ ಕಾರಣ ಎಂದು ಬರೆದಿದ್ದಾರೆ. ಆದರೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ.  ಸೌಜನ್ಯ ಮೊಬೈಲ್, ಮನೆಯಲ್ಲಿದ್ದ 6 ಲಕ್ಷ ರೂ. ನಗದು ಹಾಗೂ ಚಿನ್ನ (Gold) ಕಾಣೆಯಾಗಿದೆ.  ಸೌಜನ್ಯ ತುಂಬಾ ಸ್ಟ್ರಾಂಗ್ ಹುಡುಗಿ ಎಂದು ಔಕಟ್ಟು ಸಿನಿಮಾ ನಿರ್ದೇಶಕರಾದ ಸಂದೀಪ್ (Sandeep) ಹೇಳಿದ್ದರು. ಸಿನಿಮಾರಂಗದಲ್ಲಿ ಉಳಿಯಬೇಕು ಒಂದು ನಿರ್ಮಾಣ ಸಂಸ್ಥೆ ತೆರೆಬೇಕು ಎಂದು ಸೌಜನ್ಯ ಪ್ಲಾನ್ ಮಾಡಿದ್ದರು ಎನ್ನಲಾಗಿದೆ.

"

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಶಿರಸಿ ಸಾಯಿಬಾಬಾಗೆ ಬಲು ದುಬಾರಿಯ ಚಿನ್ನದ ಕಿರೀಟ ಅರ್ಪಿಸಿದ ನಟಿ ಮಾಲಾಶ್ರೀ: ಕಾರಣವೂ ರಿವೀಲ್​!
34th Wedding Anniversary : ಅಂಬಿ ನೆನಪಲ್ಲಿ ಸುಮಲತಾ ಭಾವನಾತ್ಮಕ ಪೋಸ್ಟ್