ಸಿನಿಮಾಗಳ ಪೈರೆಸಿ ತಡೆಗಟ್ಟಲು ಪೊಲೀಸ್ ಕಮಿಷನರ್‌ ಭೇಟಿ ಮಾಡಿದ ನಿರ್ಮಾಪಕರು!

By Suvarna NewsFirst Published Oct 2, 2021, 11:50 AM IST
Highlights

ಪೊಲೀಸ್ ಕಮೀಷನರ್ ಹಾಗೂ ಸೈಬರ್ ಕ್ರೈಮ್ ಮುಖ್ಯಸ್ಥರನ್ನು ಭೇಡಿ ಮಾಡಿ, ಮನವಿ ಪತ್ರ ಸಲ್ಲಿಸಿದ ಕನ್ನಡ ಚಿತ್ರರಂಗದ ನಿರ್ಮಾಪಕರು. 

ಕರ್ನಾಟಕ ಸರ್ಕಾರ ರಾಜ್ಯದಲ್ಲಿರುವ ಚಿತ್ರಮಂದಿರಗಳಿಗೆ 100% ಸೀಟಿಂಗ್‌ ಅನುಮತಿ ನೀಡಿದ ಬೆನ್ನಲ್ಲೇ ನಿರ್ಮಾಪಕರ (Producer) ಸಂಘ ಸದಸ್ಯರು ಒಟ್ಟಾಗಿ ಸೇರಿ ಪೊಲೀಸ್ ಕಮಿಷನರ್ ಕಮಲ್ ಪಂತ್ (Kamal Pant) ಹಾಗೂ ಸೈಬರ್ ಕ್ರೈಮ್ ಮುಖ್ಯಸ್ಥರಾದ ಸಂದೀಪ್ ಪಾಟೀಲ್ (Sandeep Patil) ಅವರನ್ನು ಭೇಟಿ ಮಾಡಿ ಪೈರಸಿ (Piracy) ತಡೆಗಟ್ಟಲು ಮನವಿ ಪತ್ರ ಸಲ್ಲಿಸಿದ್ದಾರೆ. 

ಅಕ್ಟೋಬರ್ 1ರಿಂದ ಫುಲ್ ಸೀಟಿಂಗ್ ಆಗುತ್ತಿದ್ದು, 8ರಿಂದ ಹೊಸ ಸಿನಿಮಾಗಳ ಬಿಡುಗಡೆ ಆಗಲಿವೆ. ಅಕ್ಟೋಬರ್ 14 (October 14th)ರಂದು ಬಿಡುಗಡೆ ಆಗುತ್ತಿರುವ ಕೋಟಿಗೊಬ್ಬ 3 (Kotigobba 3) ಸಿನಿಮಾ ಈಗಾಗಲೆ ಪೈರಸಿ ಬಲೆಯಲ್ಲಿ ಸಿಲುಕಿ ಕೊಂಡಿದೆ. ಕೋಟಿಗೋಬ್ಬ 3 ಸಿನಿಮಾವನ್ನು ಮೊಬೈನ್‌ನಲ್ಲಿ ನೋಡಬೇಕು ಎಂದರೆ ಈ ಲಿಂಕ್ ಫಾಲೋ ಮಾಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಚಿತ್ರತಂಡದ ಗಮನಕ್ಕೆ ಈ ವಿಷಯ ಬಂದ ತಕ್ಷಣವೇ ಜಾಕ್ ಮಂಜು (Jack Manju) ಅವರು ಗೃಹ ಸಚಿವ (Home Minister) ಆರಗ ಜ್ಞಾನೇಂದ್ರ ಅವರಿಗೆ ಮನವಿ ಸಲ್ಲಿಸಿ, ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. 

ಈಗ ಬ್ಯಾಕ್ ಟು ಬ್ಯಾಕ್ ಸ್ಟಾರ್ ಸಿನಿಮಾಗಳನ್ನು ಬಿಡುಗಡೆ ಆಗುತ್ತಿರುವ ಕಾರಣ ಕನ್ನಡ ಚಿತ್ರರಂಗದ ನಿರ್ಮಾಪಕರು ಮುಂಬರುವ ದಿನಗಳಲ್ಲಿ ಯಾವುದೇ ತೊಂದರೆ ಆಗದಂತೆ ತಡೆಗಟ್ಟಲು ಈಗಲೇ ಪೊಲೀಸರ ಮೊರೆ ಹೋಗಿದ್ದಾರೆ. ಡಿಕೆ. ರಾಮಕೃಷ್ಣ (DK Ramakrishna) ಅವರ ನೇತೃತ್ವದಲ್ಲಿ  ನಿರ್ಮಾಪಕರಾದ ಕೆ.ಮಂಜು (K Manju), ಭಜರಂಗಿ 2 (Bajarangi) ನಿರ್ಮಾಪಕ ಜಯಣ್ಣ, ಗಣೇಶ್, ರಮೇಶ್ ಯಾದವ್, ಸಲಗ (Salaga) ನಿರ್ಮಾಪಕ ಕೆಪಿ ಶ್ರೀಕಾಂತ್ (Kp Srikanth) ಮುಂತಾದವರು ಈ ನಿಯೋಗದಲ್ಲಿ ಭಾಗಿಯಾಗಿದ್ದರು.  

ಕಿಚ್ಚ ಸುದೀಪ್ ಸಿನಿಮಾ ಕದ್ದವರಿಗೆ ಇರಲೇಬೇಕು ಲಾಟಿ ಏಟಿನ ಭಯ!

'ನಿರ್ಮಾಪಕರು ಕಷ್ಟಪಟ್ಟು ಕೋಟ್ಯಾಂತರ ರೂಪಾಯಿ ಹಣ ಹೂಡಿ, ನಿರ್ಮಿಸುವ ಸಿನಿಮಾವನ್ನು ಪೈರಸಿ ಮಾಡುವುದರಿಂದ ಕನ್ನಡ ಚತ್ರರಂಗಕ್ಕೆ ದೊಡ್ಡ ಹೊಡೆತ ಬೀಳುತ್ತದೆ. ಪೈರಸಿ ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇದೊಂದು ರೀತಿ ಉದ್ದೇಶಿತ ಅಪರಾಧದಂತೆ ಕಾಣುತ್ತದೆ. ಸಿನಿಮಾರಂಗಕ್ಕೆ ಸಮಸ್ಯೆ ಉಂಟು ಮಾಡುವ ಪೈರೆಸಿಯನ್ನು ತಡೆಗಟ್ಟಲು ಎಲ್ಲ ಕ್ರಮಗಳನ್ನೂ ಕೈಗೊಳ್ಳುವಂತೆ ಪೊಲೀಸ್ ಇಲಾಖೆ ಸೂಕ್ತ ನಿರ್ದೇಶನ ನೀದಿದ್ದೇನೆ,' ಎಂದು ಗೃಹ ಸಚಿವರು ಹೇಳಿದ್ದಾರೆ. 

ಹಾಲು ಕರೆಯೋಕೆ ಗೊತ್ತಿದ್ದರೆ ಮಾತ್ರ ದನ ಸಾಕಬೇಕು; ದರ್ಶನ್‌ ಹೇಳಿದ ಕತೆ!

ಅಕ್ಟೋಬರ್ 8 ನಿನ್ನ ಸನಿಹಕೆ (Ninna Sanihake), 14ರಂದು ಸಲಗ, ಕೋಟಿಗೊಬ್ಬ 3 ಹಾಗೂ ಶ್ರೀ ಕೃಷ್ಣ ಅಟ್ ಜಿಮೇಲ್ ಡಾಟ್‌ ಕಾಮ್‌ (Sri Krishna @gmail.com) ರಿಲೀಸ್ ಆಗುತ್ತಿದೆ.  ದೊಡ್ಡ ಸ್ಟಾರ್‌ಗಳ ಸಿನಿಮಾ ಎರಡನೇ ವಾರ ಬಿಡುಗಡೆ ಆಗುತ್ತಿರುವುದಕ್ಕೆ ನಿನ್ನ ಸನಿಹಕೆ ತಂಡಕ್ಕೆ ಹೊಡೆತ ಬೀಳುತ್ತದೆ ಎಂದು ನಿರ್ದೇಶಕ ಸೂರಜ್‌ ಗೌಡ ಅವರು, ಸಲಗ ಹಾಗೂ ಕೋಟಿಗೊಬ್ಬ 3 ತಂಡಕ್ಕೆ ಮನವಿ ಮಾಡಿಕೊಂಡಿದ್ದಾರೆ. ಕೇವಲ ಒಂದು ವಾರದಲ್ಲಿ ನಾವು ಪ್ರಚಾರ ಮಾಡಿ ಸಿನಿಮಾಗೆ ಸ್ಕ್ರೀನ್ ಉಳಿಸಿಕೊಳ್ಳಬೇಕು ಎಂದಿದ್ದಾರೆ. ಸಂಗೀತ ನಿರ್ದೇಶಕ ರಘು ದೀಕ್ಷಿತ್ (Raghu Dixit) ಅವರು ಸಂಗೀತ ರಚನೆ ಮಾಡಿದ್ದ ಲವ್ ಮಾಕ್ಟೇಲ್ (Love Mocktail) ಸಿನಿಮಾಗೂ ಇದೇ ಪರಿಸ್ಥಿತಿ ಎದುರಾಗಿತ್ತು. ಚಿತ್ರದ ಹಾಡುಗಳು ಸೂಪರ್ ಆಗಿದ್ದ ಕಾರಣ ಓಟಿಟಿಯಲ್ಲಿ (OTT) ವೀಕ್ಷಕರ ಗಮನ ಸೆಳೆಯಿತು. ಅದೇ ಪರಿಸ್ಥಿತಿ ನಿನ್ನ ಸನಿಹಕೆ ತಂಡಕ್ಕೆ ಎದುರಾದರೆ ಕಷ್ಟ ಆಗುತ್ತದೆ ಎಂದು ಕೆಲವು ದಿನಗಳ ಹಿಂದೆ ಪ್ರೆಸ್ ಮೀಟ್‌ನಲ್ಲಿ ಹೇಳಿದ್ದರು.

ಪೈರಸಿ ಕಾಟ ಈಗಿನಿಂದ ಅಲ್ಲ, ಹಲವು ವರ್ಷಗಳಿಂದಲೂ ಇದೆ. ಸ್ಟಾರ್‌ ನಟರ ನಡುವೆ ವಾರ್ ಇಲ್ಲವಾದರೂ ಅವರ ಅಭಿಮಾನಿಗಳ ನಡುವಿನ ವಾರ್‌ಗೆ ಈ ರೀತಿ ಪೈರಸಿ ಮಾಡುತ್ತಾರೆ. ಕರ್ನಾಟಕ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಕಾರಣ ಪೈರಸಿ ಕಾಟ ಕಡಿಮೆ ಆಗಬಹುದು ಎಂದು ಚಿತ್ರರಂಗ ನಂಬಿದೆ.

click me!