ಪ್ರೀತಿಸಿ ಮದ್ವೆ ಆದ್ರೂ ಡಿವೋರ್ಸ್ ಆಯ್ತು; ನೆಟ್ಟಿಗರಿಗೆ ಉತ್ತರ ಕೊಟ್ಟ ನಟಿ ಆಶಿತಾ

Published : Feb 20, 2024, 10:25 AM IST
ಪ್ರೀತಿಸಿ ಮದ್ವೆ ಆದ್ರೂ ಡಿವೋರ್ಸ್ ಆಯ್ತು; ನೆಟ್ಟಿಗರಿಗೆ ಉತ್ತರ ಕೊಟ್ಟ ನಟಿ ಆಶಿತಾ

ಸಾರಾಂಶ

ಆಶಿತಾ ಮದ್ವೆ ಆಗಿದ್ದಾರಾ? ಸಿಂಗಲ್ ಆಗಿದ್ದಾರಾ? ವಯಸ್ಸು ಎಷ್ಟು? ಏನು ಮಾಡುತ್ತಿದ್ದಾರೆ? ಯಾಕೆ ಸಿನಿಮಾ ಮಾಡುತ್ತಿಲ್ಲ?......ಆಶಿತಾ ಕೊಟ್ಟ ಉತ್ತರವಿದು.

ಕನ್ನಡ ಚಿತ್ರರಂಗವನ್ನು ರೂಲ್ ಮಾಡಿದ ಟಾಪ್‌ ನಟಿಯಲ್ಲಿ ಆಶಿತಾ ಮಾರಿಯಾ ಕ್ರಾಸ್ತಾ ಕೂಡ ಒಬ್ಬರು. ಮದುವೆ ಮತ್ತು ವೈಯಕ್ತಿಕ ಜೀವನದಲ್ಲಿ ತೊಡಗಿಸಿಕೊಂಡ ನಂತರ ಸಿನಿಮಾ ಪ್ರಪಂಚದಿಂದ ಕೊಂಚ ದೂರ ಉಳಿದುಬಿಟ್ಟರು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಆಶಿತಾ ಎಲ್ಲಿಯೂ ಫ್ಯಾಮಿಲಿ ಫೋಟೋ ಹಂಚಿಕೊಂಡಿಲ್ಲ. ಹೀಗಾಗಿ ಅವರ ಪತಿ ಯಾರು? ಮದುವೆ ಆಗಿದ್ಯಾ? ಎಂದು ನೆಟ್ಟಿಗರು ಕೇಳುವ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ. 

'ನನ್ನ ಮದುವೆ ಆಯ್ತು. ಆದ ಮೇಲೆ ವರ್ಕೌಟ್ ಆಗಲಿಲ್ಲ. ಜನರಿಗೂ ಗೊತ್ತಾಗಬೇಕು ಮದುವೆ ಜೀವನ ವರ್ಕೌಟ್ ಆಗಲಿಲ್ಲ ಅಂತ. ಇಬ್ಬರು ಮಾತನಾಡಿಕೊಂಡು ಪರಸ್ಪರ ನಿರ್ಧಾರ ಮಾಡಿ ಸಪರೇಟ್ ಆಗಿದ್ದು. ಇದು ಲವ್ ಮ್ಯಾರೇಜ್ ಆಗಿತ್ತು. ಲೈಫ್‌ನಲ್ಲಿ ನಾವು ಅಂದುಕೊಂಡಂತೆ ಆಗಲ್ಲ ಹೀಗಾಗಿ ಜೀವನವನ್ನು ಒಪ್ಪಿಕೊಂಡು ಚೆನ್ನಾಗಿ ಬದುಕಬೇಕು. ನಿರೀಕ್ಷೆ ಹೆಚ್ಚಿಗೆ ಇದ್ದಷ್ಟು ದುಃಖ ಅಗುತ್ತೆ. ಮನುಷ್ಯರಾಗಿ ನಾವು ನಿರೀಕ್ಷೆ ಮಾಡುವುದು ಸಹಜ ಆದರೆ ಯೋಗ್ಯತೆಗೂ ಮೀರಿ ನಿರೀಕ್ಷೆ ಮಾಡಬಾರದು. ನಿರೀಕ್ಷೆಗಳು ತುಂಬಾ ನೋವು ಕೊಡುತ್ತದೆ. ನನ್ನ ಜೀವನದಲ್ಲಿ ನಡೆದಿರುವ ಘಟನೆಗಳಿಂದ ನಾನು ಇಂದು ಗಟ್ಟಿಯಾಗಿರುವೆ..ಈಗ ಯಾವುದೇ ಘಟನೆ ಎದುರಾದರೂ ನಾನು ಸ್ಟ್ರಾಂಗ್ ಆಗಿ ನಿಂತುಕೊಳ್ಳುವೆ' ಎಂದು ಆಶಿತಾ ನಟ ರಘುರಾಮ್‌ ಯುಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ. 

ಮಲ್ಲೇಶ್ವರಂನಲ್ಲಿ ಬ್ರಾಹ್ಮಿನ್‌ ಕ್ರೌಡ್‌ ಜಾಸ್ತಿ; ಹೋಟೆಲ್‌ ಬಾಗಿಲು ಮುಚ್ಚಿದ ನಟಿ ಆಶಿತಾ

'ಕಲಾವಿದರ ಜೀವನ ಅಂದ್ರೆ ತುಂಬಾ ಗ್ಲಾಮರ್ ಅಂದುಕೊಳ್ಳುತ್ತಾರೆ. ಆದರೆ ನಿಜ ಸತ್ಯ ಅದಲ್ಲ. ನಮ್ಮ ಜೀವನ ಕೇವಲ hypothetical situation ಅಷ್ಟೆ. ಸಿನಿಮಾ ಅಂತ ಬಂದ್ರೆ ನಾವು ಆಕ್ಟಿಂಗ್ ಮಾಡುತ್ತೀವಿ ಆದರೆ ಅದ ಹಿಂದೆ ಜೀವನದಲ್ಲಿ ಎದುರಿಸಲು ತುಂಬಾ ಇದೆ. ಏನೇ ಆದರು ಎದುರಿಸಲು ಸಜ್ಜಾಗಿರಬೇಕು. ಸಿನಿಮಾ ಕ್ಷೇತ್ರದಲ್ಲಿ ಹೇಗಿರಬೇಕು ಅಂತ ನಿರ್ಧಾರ ಮಾಡಬೇಕು ಇಷ್ಟ ಇಲ್ಲ ಅಂದ್ರೆ ಹೊರ ಬರಬೇಕು. ಆದರೆ ವೈಯಕ್ತಿಕ ಜೀವನದಲ್ಲಿ ನಾನು ಎಲ್ಲನೂ ಪರ್ಫೆಕ್ಟ್‌ ಅಂದುಕೊಂಡೆ ಆದರೆ ಆಗಲಿಲ್ಲ. ಆದಷ್ಟು ಅವಕಾಶಗಳನ್ನು ಕೊಟ್ಟು ಪ್ರಯತ್ನ ಮಾಡಿದೆ ಆದರೂ ನಮ್ಮಿಬ್ಬರ ನಡುವೆ ವರ್ಕ್‌ ಆಗಲಿಲ್ಲ. ಬಾಯ್‌ಫ್ರೆಂಡ್‌ ಗರ್ಲ್‌ಫ್ರೆಂಡ್‌ ಇದ್ದಾಗ ಜೀವನ ಬೇರೆ...ಮದುವೆಯಾಗಿ ಒಂದು ಸೂರಿನ ಕೆಳಗೆ ಬಂದ ಮೇಲೆ ಜೀವನ ಬೇರೆ. ಆಗ ಜೀವನ ಅಷ್ಟು ಸುಲಭ ಅಲ್ಲ ಅನಿಸುತ್ತದೆ. ಎಷ್ಟೇ ಪ್ರಯತ್ನ ಮಾಡಿದ್ದರೂ ವರ್ಕ್ ಆಗಲಿಲ್ಲ ಅಂದ್ರೆ ಹೊರ ಬಂದು ಬಿಡಿ. ಸುಮ್ಮನಿದ್ದು ಕಷ್ಟ ಪಟ್ಟು ಸಹಿಸಿಕೊಂಡು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗುವ ಬದಲು ಒಳ್ಳೆ ರೀತಿಯಲ್ಲಿ ಸ್ನೇಹಿತರಂತೆ ದೂರ ಆಗಿಬಿಡಿ' ಎಂದು ಆಶಿತಾ ಹೇಳಿದ್ದಾರೆ.  

ಸರ್ ಸರ್ ಅನ್ನಬೇಕು, ಮೆಸೇಜ್ ಮಾಡಬೇಕು: ನಿರ್ಮಾಪಕರ ಮೇಲೆ Me Too ಆರೋಪ ಮಾಡಿದ ನಟಿ ಆಶಿತಾ

'ಕೆಟ್ಟ ಘಟನೆಗಳನ್ನು ಮಾತ್ರ ನೆನಪಿಸಿಕೊಳ್ಳುವುದಿಲ್ಲ ಅದೆಷ್ಟೋ ಒಳ್ಳೆ ಘಟನೆಗಳು ಇದೆ. ಒಬ್ಬ ಗಂಡಸು ಅಥವಾ ವ್ಯಕ್ತಿಯಿಂದ ನನ್ನ ಜೀವನ ಮುಗಿದಿಲ್ಲ. ಏನೇ ಇದ್ದರೂ ಗಟ್ಟಿಯಾಗಿ ಎದುರಿಸಬೇಕು. ನಾನು ಜೀವನ ಪೂರ್ತಿ ಫೈಟರ್ ಆಗಿರುವೆ. ಆ ಸಮಯದಲ್ಲಿ ನಾನು ಮಾನಸಿಕವಾಗಿ ಕಷ್ಟ ಅನುಭವಿಸಿದ್ದೀನಿ ಅದರಿಂದ ಹೊರ ಬಂದಿದ್ದೀನಿ. ಕೆಲವರಿಗೆ ಧೈರ್ಯ ಇಲ್ಲದೆ ಕೆಟ್ಟ ನಿರ್ಧಾರ ತೆಗೆದುಕೊಳ್ಳುತ್ತಾರೆ. ನನ್ನ ಜೀವನದಲ್ಲಿ ಎಲ್ಲವೂ ಚೆನ್ನಾಗಿ ನಡೆಯುತ್ತಿರುವಾಗ ನನಗೆ ಮೆಂಟಲ್ ಹೆಲ್ತ್‌ ಸಮಸ್ಯೆ ಆಯ್ತು. ಹೇಗೆ ನಾವು ಮ್ಯಾನೇಜ್ ಮಾಡುತ್ತೀವಿ ಅನ್ನೋದು ಮುಖ್ಯವಾಗುತ್ತದೆ. ಹೀಗಾಗಿ ಯಾವುದಕ್ಕೂ ಹೆದರಿಕೊಳ್ಳಬೇಡಿ' ಎಂದಿದ್ದಾರೆ ಆಶಿತಾ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ