ಸಾವಿನ ದವಡೆಯಿಂದ ಬಚಾವ್ ಆಗಿ ಬಂದ ಮಾರ್ಟಿನ್‌ ಚಿತ್ರತಂಡ : ಶ್ರೀನಗರಕ್ಕೆ ತೆರಳುತ್ತಿದ್ದಾಗ ಅವಘಡ

Published : Feb 20, 2024, 08:45 AM ISTUpdated : Feb 20, 2024, 12:39 PM IST
ಸಾವಿನ ದವಡೆಯಿಂದ ಬಚಾವ್ ಆಗಿ ಬಂದ ಮಾರ್ಟಿನ್‌ ಚಿತ್ರತಂಡ : ಶ್ರೀನಗರಕ್ಕೆ ತೆರಳುತ್ತಿದ್ದಾಗ ಅವಘಡ

ಸಾರಾಂಶ

ಇತ್ತೀಚೆಗಷ್ಟೇ ರಶ್ಮಿಕಾ ಮಂದಣ್ಣ ಪ್ರಯಾಣಿಸುತ್ತಿದ್ದ ವಿಮಾನ ತುರ್ತು ಲ್ಯಾಂಡಿಂಗ್ ಆಗಿ ಸಾವಿನ ದವಡೆಯಿಂದ ಪಾರಾಗಿ ಬಂದ ಅನುಭವವನ್ನು ಹಂಚಿಕೊಂಡಿದ್ದರು. ಈ ಘಟನೆ ಮಾಸುವ ಮುನ್ನವೇ ಕನ್ನಡದ ಮಾರ್ಟಿನ್ ಚಿತ್ರತಂಡ ವಿಮಾನ ಅವಘಡವೊಂದರಿಂದ ಪಾರಾಗಿದೆ. 

ಬೆಂಗಳೂರು: ಇತ್ತೀಚೆಗಷ್ಟೇ ರಶ್ಮಿಕಾ ಮಂದಣ್ಣ ಪ್ರಯಾಣಿಸುತ್ತಿದ್ದ ವಿಮಾನ ತುರ್ತು ಲ್ಯಾಂಡಿಂಗ್ ಆಗಿ ಸಾವಿನ ದವಡೆಯಿಂದ ಪಾರಾಗಿ ಬಂದ ಅನುಭವವನ್ನು ಹಂಚಿಕೊಂಡಿದ್ದರು. ಈ ಘಟನೆ ಮಾಸುವ ಮುನ್ನವೇ ಕನ್ನಡದ ಮಾರ್ಟಿನ್ ಚಿತ್ರತಂಡ ವಿಮಾನ ಅವಘಡವೊಂದರಿಂದ ಪಾರಾಗಿದೆ. 

ಧ್ರುವ ಸರ್ಜಾ ನಟನೆಯ ಮಾರ್ಟಿನ್ ‌ಚಿತ್ರತಂಡ ಹಾಡೊಂದರ ಶೂಟಿಂಗ್‌ಗಾಗಿ ಜಮ್ಮು ಕಾಶ್ಮೀರದ ಶ್ರೀನಗರಕ್ಕೆ ತೆರಳಿತ್ತು.  ದೆಹಲಿಯಿಂದ ಇಂಡಿಗೋ ವಿಮಾನದಲ್ಲಿ ಶ್ರೀನಗರಕ್ಕೆ ಹೋಗುತ್ತಿದ್ದ ವೇಳೆ ವಿಮಾನದಲ್ಲಿ ನಡುಕ ಕಾಣಿಸಿಕೊಂಡಿತ್ತು ಎಂದು ಚಿತ್ರತಂಡ ಹೇಳಿದೆ. ಈ ವೇಳೆ ದೇವರ ಆಶೀರ್ವಾದ ಹಾಗೂ ಅಭಿಮಾನಿಗಳ ಹಾರೈಕೆಯಿಂದ ನಾವು ದೊಡ್ಡ ಅನಾಹುತದಿಂದ ತಪ್ಪಿಸಿಕೊಂಡೆವು ಎಂದು ಚಿತ್ರತಂಡ ಹೇಳಿದೆ. 

ದೇಹ ಸೌಂದರ್ಯದಿಂದ ನೆಟ್ಟಿಗರ ಎದೆಯಲ್ಲಿ ಕಿಚ್ಚು ಹಚ್ಚಿದ ಧ್ರುವ ಸರ್ಜಾ ನಾಯಕಿ ಅನ್ವೇಶಿ ಜೈನ್ !

ಶ್ರೀನಗರದಲ್ಲಿ ಕೆಟ್ಟ ಹವಾಮಾನ ತೀವ್ರವಾದ ಮಂಜು ಇದ್ದಿದ್ದರಿಂದ ಮೋಗಡಗಳ ಮಧ್ಯೆ ವಿಮಾನ ಚಲಿಸಿದಾಗ ಇಡೀ ವಿಮಾನವೇ ಅಲುಗಾಡಲು ಶುರುವಾಯ್ತು. ಆದರೆ  ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸದೆ ಪಾರಾಗಿ ಬಂದೆವು ಎಂದು ಚಿತ್ರತಂಡ ವೀಡಿಯೋ ಶೇರ್ ಮಾಡಿಕೊಳ್ಳುವ ಮೂಲಕ ವಿಚಾರ ಹಂಚಿಕೊಂಡಿದೆ. ಹಾಡಿನ ಶೂಟಿಂಗ್‌ಗಾಗಿ ತೆರಳಿರುವ ಚಿತ್ರತಂಡ ಫೆಬ್ರವರಿ 23 ರಂದು ವಾಪಸ್ ಆಗಲಿದೆ. 

ಮಾರ್ಟಿನ್ ಸಿನಿಮಾದಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಜೋಡಿಯಾಗಿ ಅನ್ವೇಷಿ ಜೈನ್ ಅವರು ನಟಿಸುತ್ತಿದ್ದಾರೆ. ಮಧ್ಯಪ್ರದೇಶ ಮೂಲದ ನಟಿ ಅನ್ವೇಶಿ ಜೈನ್, ಮಾಡೆಲ್​, ಗಾಯಕಿ ಜೊತೆಗೆ ತನ್ನ ಹಾಟ್​ ಲುಕ್​ ಮೂಲಕವೇ ಫೇಮಸ್​ ಆದವರು. ಉದಯ್‌ ಮೆಹ್ತಾ ನಿರ್ಮಿಸುತ್ತಿರುವ ಈ ಚಿತ್ರವನ್ನು ಎ ಪಿ ಅರ್ಜುನ್‌ ನಿರ್ದೇಶಿಸುತ್ತಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿದಿದೆ.  

ಸ್ಯಾಂಡಲ್‌ವುಡ್‌ನಲ್ಲಿ ಶುರುವಾಯ್ತು ಮಾರ್ಟಿನ್ ಸೌಂಡ್! ಆಡಿಯೋ ಹಕ್ಕಿನಲ್ಲಿ ಕೋಟಿ ಬೆಲೆ ಪಡೆದ ಧ್ರುವ ಸಿನಿಮಾ..!

ಕಳೆದ ವರ್ಷ ಫೆ.23ಕ್ಕೆ ಧ್ರುವ ಸರ್ಜಾ ನಟನೆಯ ‘ಮಾರ್ಟಿನ್‌’ ಚಿತ್ರದ ಟೀಸರ್‌ ಬಿಡುಗಡೆ ಮಾಡಲಾಗಿತ್ತು. ಐದು ಭಾಷೆಗಳಲ್ಲಿ ಟೀಸರ್‌ ಬಿಡುಗಡೆ ಆಗಿದ್ದು, 2021 ಸೆಪ್ಟೆಂಬರ್‌ನಲ್ಲಿ ಸಿನಿಮಾ ಸೆಟ್ಟೇರಿತ್ತು. ಅರ್ಜುನ್‌ ಸರ್ಜಾ  ಅವರು ಈ ಚಿತ್ರಕ್ಕೆ ಕತೆ ಬರೆದಿದ್ದು ಬೆಂಗಳೂರು, ಹೈದರಾಬಾದ್‌, ಕಾಶ್ಮೀರ, ಮುಂಬಯಿ ಸೇರಿ ಹಲವು ಲೊಕೇಶನ್‌ಗಳಲ್ಲಿ ಶೂಟಿಂಗ್‌ ಮಾಡಲಾಗಿದೆ.  
 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಒಂದೇ ದಿನದಲ್ಲಿ ದಾಖಲೆ ಬರೆದ ಸುದೀಪ್​ Mark Trailer​: ಇಷ್ಟೊಂದು Views​ ಆಗಿದ್ದು ನಿಜನಾ? ಏನಿದು ಚರ್ಚೆ?
ಸಲಗ Vs ರೂಲರ್: ಅಳಿದು ಉಳಿದವರ ಲ್ಯಾಂಡ್ ಲಾರ್ಡ್ ದುನಿಯಾದಲ್ಲಿ ಶೆಟ್ಟರ ವಾರ್!