ಉಪೇಂದ್ರ 'ಯುಐ' ಸಿನಿಮಾದಲ್ಲಿ ಸನ್ನಿ ಲಿಯೋನ್ ಕುಣಿಯುತ್ತಿಲ್ಲ, ನಟಿಸುತ್ತಿದ್ದಾರೆ; ಯಾಕೆ ಅಂತಿದಾರೆ ಏನ್ ಹೇಳೋದು!

By Shriram Bhat  |  First Published Feb 19, 2024, 7:54 PM IST

ಯುಐ ಸಿನಿಮಾ ಹಲವು ಸಪ್​​ಪ್ರೈಸ್​ಗಳ ಹೂರಣ. ಒಂದೊಂದೇ ಸರ್​ಪ್ರೈಸ್​ಗಳನ್ನ ಉಪ್ಪಿ ಬಿಡುತ್ತಾ ಬರುತ್ತಿದ್ದಾರೆ. ಟೀಸರ್ ಕೊಟ್ಟ ಬಳಿಕ ಈಗ ಹಾಡು ಬಿಡುಗಡೆ ಮಾಡೋದಾಗಿ ಹೇಳಿದ್ದಾರೆ. ಅದಕ್ಕೂ ಮೊದಲೇ ಯುಐ ಪ್ರಪಂಚದ ಬಗ್ಗೆ ಮತ್ತೊಂದು ಸುದ್ದಿ ಆವರಿಸಿದೆ.


ರಿಯಲ್ ಸ್ಟಾರ್ ಉಪೇಂದ್ರ (Upendra) ನಿದ್ದೆ ಮಾಡುತ್ತಿಲ್ಲ. ದಿನಕ್ಕೆ ಎರಡು ಮೂರು ಗಂಟೆ ರೆಸ್ಟ್ ಮಾಡಿದ್ರೆ ಹೆಚ್ಚು. ಇದನ್ನ ನಾವ್ ಹೇಳುತ್ತಿಲ್ಲ. ರಿಯಲ್ ಸ್ಟಾರ್ ಉಪ್ಪಿಯ ಯುಐ (UI Movie) ಸಿನಿಮಾದ ನಿರ್ಮಾಪಕ ಕೆ.ಪಿ ಶ್ರೀಕಾಂತ್ ಹೇಳುತ್ತಿರೋ ಮಾತು. ಯಾಕಂದ್ರೆ ಯುಐ ಸಿನಿಮಾದ ಕೆಲಸ ಅಷ್ಟೊಂದು ಫಾಸ್ಟ್ ಅಗಿ ನಡೀತಿದೆಯಂತೆ. ಹೆಚ್ಚು ಗ್ರಾಫಿಕ್ಸ್​​ನಿಂದಲೇ ತುಂಬಿಕೊಂಡಿರೋ ಈ ಸಿನಮಾದ ಕೆಲಸಕ್ಕಾಗಿ ಉಪ್ಪಿ ಸಿಕ್ಕಾಪಟ್ಟೆ ತಲೆ ಕೆರೆದುಕೊಂಡಿದ್ದಾರಂತೆ. ಇಷ್ಟಾದ್ಮೇಲೆ ಯುಐ ರಿಲೀಸ್ ಯಾವಾಗ ಅಂತ ಕೇಳಿದ್ರೆ, ಅದನ್ನ ಹೇಳೋದಕ್ಕಾಗೆ ಡೇಟ್​, ಟೈಂ ಫಿಕ್ಸ್​ ಮಾಡಿದ್ದೇವೆ ಎಂದಿದ್ದಾರೆ. 
 
ಯುಐ ಸಿನಿಮಾ ಹಲವು ಸಪ್​​ಪ್ರೈಸ್​ಗಳ ಹೂರಣ. ಒಂದೊಂದೇ ಸರ್​ಪ್ರೈಸ್​ಗಳನ್ನ ಉಪ್ಪಿ ಬಿಡುತ್ತಾ ಬರುತ್ತಿದ್ದಾರೆ. ಟೀಸರ್ ಕೊಟ್ಟ ಬಳಿಕ ಈಗ ಹಾಡು ಬಿಡುಗಡೆ ಮಾಡೋದಾಗಿ ಹೇಳಿದ್ದಾರೆ. ಅದಕ್ಕೂ ಮೊದಲೇ ಯುಐ ಪ್ರಪಂಚದ ಬಗ್ಗೆ ಮತ್ತೊಂದು ಸುದ್ದಿ ಆವರಿಸಿದೆ. ಅದೇ ಯುಐನಲ್ಲಿ ಹಾಟಿ, ಪಡ್ಡೆಗಳ ಮನದನ್ನೆ, ಗಂಡ್​ ಹೈಕ್ಳ ಸಿಂಗಾರ ಸಿರಿ ಸನ್ನಿ ಲಿಯೋನ್​ ಇದ್ದಾರೆ ಅನ್ನೋದು.. 

ರಿಷಬ್ ಶೆಟ್ಟಿಗೆ ಹೊಸ ಸಂಕಷ್ಟ; 'ಕಾಂತಾರ 1' ಸಿನಿಮಾದಲ್ಲಿ ಪಂಜುರ್ಲಿ ದೈವ ಇರೋದಿಲ್ವಾ?

Tap to resize

Latest Videos

ಸನ್ನಿ ಲಿಯೋನ್ 'ಯುಐ'ನಲ್ಲಿ ಕುಣಿಯಲ್ಲ ನಟಿಸುತ್ತಾರೆ..!
ಈ ಸೇಸಮ್ಮ ಯುಐ ಸಿನಿಮಾದಲ್ಲಿದ್ದಾರೆ ಅನ್ನೋ ಸುದ್ದಿ ಕಳೆದ ನಾಲ್ಕು ತಿಂಗಳ ಹಿಂದೆಯೇ ತಂಗಾಳಿಯಂತೆ ತೇಲಿ ಬಂದಿತ್ತು. ಆಗ ಯುಐನಲ್ಲಿ ಸನ್ನಿಯ (Sunny Leone) ಹಾಟ್ ಡಾನ್ಸ್ ಇರುತ್ತೆ ಅನ್ನೋದು ಉಪ್ಪಿ ಫ್ಯಾನ್ಸ್ ಊಹೆಯಾಗಿತ್ತು. ಯಾಕಂದ್ರೆ ಈ ಬ್ಯೂಟಿ ಹಾಟ್ ಆಗಿ ಡಾನ್ಸ್ ಮಾಡಿದ್ರೇನೆ ಅದಕ್ಕೊಂದು ಕಳೆ ಅನ್ನೋದು ಪಡ್ಡೆಗಳ ವಾದ. ಕನ್ನಡದ ಸಿನಿಮಾದಲ್ಲಿ ಸನ್ನಿ  ಹೆಜ್ಜೆ ಗುರುತು ಇರೋದೇ ಹಾಡಿನಲ್ಲಿ. ಆದ್ರೆ ಯುಐ ಸಿನಿಮಾದಲ್ಲ ಸನ್ನಿ ಲಿಯೋನ್  ಕುಣಿಯುತ್ತಿಲ್ಲ ನಿಮ್ಮನ್ನ ಕುಣಿಸುತ್ತಲೂ ಇಲ್ಲ. ಉಪೇಂದ್ರ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ನಟಿಸುತ್ತಿದ್ದಾರೆ ಅನ್ನೋದು ಈಗ ಬಂದಿರೋ ಸುದ್ದಿ. 

ಸೌತ್ ಚಿತ್ರರಂಗದ ಮೇಲೆ ಹಿಂದಿ ಮಂದಿಗೆ ಮತ್ತೆ ಭಯ; ಬಾಲಿವುಡ್​ ಇಷ್ಟೊಂದು ಹೆದರುತ್ತಿರೋದೇಕೆ?
 

ಉಪ್ಪಿ 'ಯುಐ' ವರ್ಲ್ಡ್​​ ತೆರೆದುಕೊಳ್ಳೋದು ಯಾವಾಗ..?
ಉಪೇಂದ್ರ ‘ಯುಐ’ ಚಿತ್ರದಲ್ಲಿ ಚೀಪ್​ ಸಾಂಗ್ ಇದೆ ಅಂತ ಆ ಹಾಡಿನ ಪ್ರೋಮೋ ಬಿಟ್ಟಿದ್ದಾರೆ. ಈ ಚೀಪ್ ಸಾಂಗ್ ಸಾಹಿತ್ಯ ಕೇಳಿ ತಲೆ ಕೆಡಿಸಿಕೊಂಡಿರೋ ಫ್ಯಾನ್ಸ್​ಗೆ ಈ ಹಾಡನ್ನ ಪೂರ್ತಿ ಕೇಳೋಕೆ ಇದೇ 26ನೇ ತಾರೀಖು ಸಮುಯ ಕೂಡಿ ಬರುತ್ತೆ. ಯಾಕಂದ್ರೆ ಆ ದಿನ ಯುಐನ ಮೊದಲ ಹಾಡು ಅದರಲ್ಲೂ ಚೀಪ್ ಸಾಂಗ್ ರಿಲೀಸ್ ಆಗುತ್ತಿದೆ. ಅದೇ ದಿನ ಯುಐ ಸಿನಿಮಾ ರಿಲೀಸ್ ಡೇಟ್​ ಕೂಡ ಅನೌನ್ಸ್ ಆಗುತ್ತಂತೆ. 

ಬಿಗ್ ಬಾಸ್ ಬಳಿಕ ಸಂಗೀತಾ-ಚಾರ್ಲಿ ಭೇಟಿ; ನೆಟ್ಟಿಗರು ಎಂತೆಂತಹ ಕಾಮೆಂಟ್ ಹಾಕ್ತಿದಾರೆ ನೋಡ್ರಿ!

click me!