KGF 3 ಚಿತ್ರಕ್ಕೆಂದು ಏನೇನೋ ರೆಡಿ ಇದೆ, ಆದ್ರೆ ಒಂದೇ ಒಂದು ಪ್ರಾಬ್ಲಂ; ಯಶ್ ಮಾತಿನ ಒಳಗುಟ್ಟೇನು?

Published : Jul 07, 2024, 01:31 PM ISTUpdated : Jul 07, 2024, 08:17 PM IST
KGF 3 ಚಿತ್ರಕ್ಕೆಂದು ಏನೇನೋ ರೆಡಿ ಇದೆ, ಆದ್ರೆ ಒಂದೇ ಒಂದು ಪ್ರಾಬ್ಲಂ; ಯಶ್ ಮಾತಿನ ಒಳಗುಟ್ಟೇನು?

ಸಾರಾಂಶ

ರಾಕಿಂಗ್ ಸ್ಟಾರ್ ಯಶ್ ಅವರು ಸದ್ಯ ಬಾಲಿವುಡ್‌ನ ರಾಮಾಯಣ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಜತೆಗೆ, ಈ ಸಿನಿಮಾದ ನಿರ್ಮಾಣದಲ್ಲಿ ಸಹ ಯಶ್ ಪಾಲುದಾರರು. ಅಷ್ಟೇ ಅಲ್ಲ, ಮತ್ತೊಂದು ಪ್ಯಾನ್ ವರ್ಲ್ಡ್‌ ಸಿನಿಮಾ 'ಟಾಕ್ಸಿಕ್‌'ನಲ್ಲೂ ನಟ ಯಶ್ ನಟಿಸುತ್ತಿದ್ದಾರೆ...

ಕನ್ನಡದ ನಟ ಯಶ್ (Rocking Star Yash) 'ಕೆಜಿಎಫ್ 3' ಬಗ್ಗೆ ಮಾತನಾಡಿದ್ದಾರೆ. 'ನಾನು ಮತ್ತು ಪ್ರಶಾಂತ್ ನೀಲ್ ಕೆಜಿಎಫ್ (KGF) ಸಿನಿಮಾದ ಕಥೆಯ ಬಗ್ಗೆ ಸಾಕಷ್ಟು ಯೋಚಿಸಿದ್ದೇವೆ, ಯೋಚಿಸುತ್ತಲೇ ಇದ್ದೇವೆ. ಕಾರಣ, ಈಗಾಗಲೇ ಆಗಿರುವ ಕೆಜಿಎಫ್ ಸಿನಿಮಾ ಸರಣಿಗಲ್ಲಿ 'ರಾಕಿ ಭಾಯ್ ಜಿಂದಗಿ' ಬಗ್ಗೆ ಹೇಳಿರುವುದು ಕೆಲವೇ ಕೆಲವು ಸಂಗತಿಗಳಷ್ಟು. ಆದರೆ, ಇನ್ನೂ ಹೇಳಬೇಕಿರುವುದು ಬಹಳಷ್ಟಿದೆ. ಕೆಜಿಎಫ್ & 'ಕೆಜಿಎಫ್ 2' ಚಿತ್ರಗಳಲ್ಲಿ ರಾಕಿ ಭಾಯ್ ಕಥೆಯ ಕೆಲವೇ ಕೆಲವು ಅಂಶಗಳನ್ನು ನಾವು ಪ್ರೇಕ್ಷಕರಿಗೆ ನೀಡಿದ್ದೇವೆ. ಹಾಗೆ ನೋಡಿದರೆ, ನಿಜವಾದ ರಾಕಿ ಭಾಯ್ ಜೀವನ ಚರಿತ್ರೆ ಇನ್ನೂ ತುಂಬಾನೇ ಇದೆ. 

ನಾನು ಹಾಗು ಪ್ರಶಾಂತ್ ನೀಲ್ (Prashanth Neel) ಕೆಜಿಎಫ್ 3 ಗೆ ಸಾಕಷ್ಟು ಸೀನ್‌ಗಳನ್ನು ಈಗಾಗಲೇ ಯೋಚಿಸಿ ರೆಡಿ ಮಾಡಿ ಇಟ್ಟುಕೊಂಡಿದ್ದೇವೆ. ಕೆಜಿಎಫ್ 2ನಲ್ಲಿ ಹೇಳಲು ಆಗದೇ ಇದ್ದ ಹಲವಾರು ಸಂಗತಿಗಳು ನಮ್ಮ ಬಳಿ ಬಹಳಷ್ಟು ಇವೆ. ಅವೆಲ್ಲ ಹೇಳಲು ಹೊರಟರೆ ಖಂಡಿತ 'ಕೆಜಿಎಫ್ 3' ಸಿನಿಮಾ ಮಾಡಬಹುದು. ಆದರೆ, ಮುಂಬರುವ ಸಿನಿಮಾ ಕಾಲಕ್ಕೆ ತಕ್ಕಂತೆ, ಈಗಾಗಲೇ ಆಗಿರುವ ಚಿತ್ರಗಳಿಗಿಂತ ಬಿಗ್ ಬಜೆಟ್ ಹಾಗು ಭಿನ್ನವಾಗಿ ಮೂಡಿ ಬರಬೇಕಾಗುತ್ತದೆ. ಅದಕ್ಕಾಗಿ ನಮಗಿಬ್ಬರಿಗೂ ಸಾಕಷ್ಟು ಸಮಯ ಬೇಕು. 

ಅದೊಂದು ಮಾತ್ರ ನನ್ ಲೈಫಲ್ಲೇ ಮಾಡಿಲ್ಲ, ಯಾಕಂದ್ರೆ ನಂಗದು ಕಂಫರ್ಟೆಬಲ್ ಅನ್ನಿಸ್ಲಿಲ್ಲ; ನಟಿ ಅಂಬಿಕಾ!

ನಾನು ಹಾಗೂ ಪ್ರಶಾಂತ್ ಇಬ್ಬರೂ ಸದ್ಯಕ್ಕೆ ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿ ಆಗಿದ್ದೇವೆ, ಶುರುವಾಗಿರುವ ನಮ್ಮ ಪ್ರಾಜೆಕ್ಟ್‌ಗಳು ಮುಗಿಯಲಿಕ್ಕೇ ಬಹಳಷ್ಟು ಸಮಯ ಹಿಡಯುತ್ತದೆ. ಅದರ ಮಧ್ಯದಲ್ಲಿ ಹೊಸ ಸೀನ್‌ಗಳ ಬಗ್ಗೆ ಯೋಚಿಸಲು ಸಿಗುವುದು ಅತ್ಯಲ್ಪ ಸಮಯ ಮಾತ್ರ. ಆದರೆ, ಇಬ್ಬರೂ ಒಂದು ಕಡೆ ಕುಳಿತು ಚರ್ಚಿಸಿ ನಿರ್ಧಾರ ಕೈಗೊಳ್ಳಲು ಇಬ್ಬರಿಗೂ ಸಮಯದ ಈಗ ಅಭಾವವಿದೆ. ಆದರೆ, ಮುಂದೊಂದು ದಿನ ಕೆಜಿಎಫ್ ಸಿನಿಮಾ ಬರಬಹುದಾದ ಎಲ್ಲಾ ಸಾಧ್ಯತೆ ಇದೆ. ಏಕೆಂದರೆ, ಈಗಾಗಲೇ ನಮ್ಮ ಬಳಿ ಚಿತ್ರಕ್ಕೆ ಬೇಕಾದ ದೃಶ್ಯಗಳು ಬೇಕಾದಷ್ಟಿವೆ' ಎಂದಿದ್ದಾರೆ ರಾಕಿಂಗ್ ಸ್ಟಾರ್ ಯಶ್. 

ಎಳ್ಳುನೀರು ಬಿಡೋದೇ ಒಳ್ಳೆಯದಾ..? ದರ್ಶನ್ ಡ್ರೀಮ್ ಪ್ರಾಜೆಕ್ಟ್ ಆಗೋದೇ ಕಷ್ಟ ಅನ್ನೋದ್ಯಾಕೆ...?

ಕನ್ನಡದ ನಟ ರಾಕಿಂಗ್ ಸ್ಟಾರ್ ಯಶ್  ನಟನೆ ಹಾಗು ಪ್ರಶಾಂತ್ ನೀಲ್ ನಿರ್ದೇಶನದ 'ಕೆಜಿಎಫ್' ಹಾಗು 'ಕೆಜಿಎಫ್ 2' ಸಿನಿಮಾ ಖ್ಯಾತಿ ಮತ್ತು ಗಳಿಕೆ ಬಗ್ಗೆ ಇಡೀ ಪ್ರಪಂಚಕ್ಕೇ ಬಹುತೇಕ ಗೊತ್ತು. ಕೆಜಿಎಫ್‌ ಭಾರೀ ಸದ್ದುಮಾಡಿತ್ತು. ಆದರೆ ಅದಕ್ಕಿಂತಲೂ 'ಕೆಜಿಎಫ್ 2' ಚಿತ್ರದ ಕಲೆಕ್ಷನ್ ಬಹಳಷ್ಟು ಹೆಚ್ಚಾಗಿತ್ತು. ಕೆಜಿಎಫ್ 2 ಸಿನಿಮಾ ಸ್ಯಾಂಡಲ್‌ವುಡ್ ಮಟ್ಟಿಗೆ ಹೊಸ ದಾಖಲೆ ಬರೆದಿತ್ತು. ಆದರೆ, ಇದೀಗ ಬಂದ ಹೊಸ ಸುದ್ದಿಯ ಪ್ರಕಾರ, ನಟ ಯಶ್ ಅಭಿನಯದ ಸಿನಿಮಾ 'ಕೆಜಿಎಫ್ 2' ಭಾರತದಲ್ಲಿ ಹೊಸ ದಾಖಲೆ ಬರೆದಿದೆ. 

ನಿವಿ ಬೊಂಬೆಗೆ ಫುಲ್ ಕ್ಲಾಸ್, ಚಂದನ್ ಟೆಂಪಲ್ ರನ್, ನಿವೇದಿತಾ ರೀಲ್ಸ್‌ ರಾಣಿ ಅಂತ ಟ್ರೋಲ್..!

ಅದೇನೆಂದರೆ, ಇಲ್ಲಿಯವರೆಗೂ ರಾಜಮೌಳಿ ನಿರ್ದೇಶನ, ಜೂನಿಯರ್ ಎನ್‌ಟಿಆರ್ ಹಾಗು ರಾಮ್‌ಚರಣ್ ಅಭಿನಯದ 'ಆರ್‌ಆರ್‌ಆರ್ (RRR)' ಚಿತ್ರವು ಭಾರತದಲ್ಲಿ ಗಳಿಕೆ ದೃಷ್ಟಿಯಿಂದ ಮೂರನೇ ಸ್ಥಾನದಲ್ಲಿ ಇತ್ತು. ಆದರೆ ಈಗ ಸಿಕ್ಕಿರುವ ಮಾಹಿತಿ ಪ್ರಕಾರ, ಕೆಜಿಎಫ್ 2 (KGF 2) ಚಿತ್ರವು ಆರ್‌ಆರ್‌ಆರ್‌ ಚಿತ್ರದ ಗಳಿಕೆಯನ್ನು ಹಿಂದಿಕ್ಕಿ, ಮೂರನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಭಾರತದ ಅತೀ ಹೆಚ್ಚಿನ ಗಳಿಕೆ ಕಂಡ ಚಿತ್ರಗಳಲ್ಲಿ ಮೊದಲ ಸ್ಥಾನವನ್ನು ಬಾಲಿವುಡ್‌ನ ದಂಗಲ್ ಪಡೆದುಕೊಂಡಿದ್ದರೆ, ಎರಡನೇ ಸ್ಥಾನವನ್ನು ರಾಜಮೌಳಿ ನಿರ್ದೇಶನ ಹಾಗು ಪ್ರಭಾಸ್ ನಟನೆಯ 'ಬಾಹಬಲಿ 2' ಚಿತ್ರವು ಪಡೆದುಕೊಂಡಿದೆ.

ಕಾಲ್ ಮಾಡಿದ್ರು, ಅವ್ರ ಮನೆಗೆ ಹೋಗಿದ್ದೆ, ಅವ್ರ ಮನೆಲ್ಲಿ ಊಟ ಮಾಡಿದ್ರ ಬಗ್ಗೆ ಹೇಳ್ತೀನಿ: ಕಿರಣ್ ರಾಜ್ 

ಅಂದಹಾಗೆ, ಕನ್ನಡದ ಸ್ಟಾರ್ ನಟ, ರಾಕಿಂಗ್ ಸ್ಟಾರ್ ಯಶ್ ಅವರು ಸದ್ಯ ಬಾಲಿವುಡ್‌ನ ರಾಮಾಯಣ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಜತೆಗೆ, ಈ ಸಿನಿಮಾದ ನಿರ್ಮಾಣದಲ್ಲಿ ಸಹ ಯಶ್ ಪಾಲುದಾರರು. ಅಷ್ಟೇ ಅಲ್ಲ, ಮತ್ತೊಂದು ಪ್ಯಾನ್ ವರ್ಲ್ಡ್‌ ಸಿನಿಮಾ 'ಟಾಕ್ಸಿಕ್‌'ನಲ್ಲೂ ನಟ ಯಶ್ ನಟಿಸುತ್ತಿದ್ದಾರೆ. ಗೀತೂ ಮೋಹನ್‌ ದಾಸ್ ನಿರ್ದೇಶನದ ಟಾಕ್ಸಿಕ್ ಚಿತ್ರದಲ್ಲಿ ಯಶ್ ಎದುರು ನಾಯಕಿಯಾಗಿ ಸಾಯಿ ಪಲ್ಲವಿ ಹೆಸರು ಕೇಳಿ ಬರುತ್ತಿದೆ. ಯಶ್ ನಟನೆಯ ರಾಮಾಯಣ ಚಿತ್ರದಲ್ಲಿ, ರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ಹಾಗು ರಾವಣನಾಗಿ ಯಶ್ ನಟಿಸುತ್ತಿದ್ದಾರೆ.

ತಮಿಳಿನಲ್ಲಿ ಮತ್ತೊಬ್ಬರು ಕೊಡಗಿನ ಬೆಡಗಿ ರನ್ನಿಂಗ್ ಶುರು; ಈ ಫೇಸ್‌ಲೀ ಏನೋ ಇದೆ, ಕಣ್ಣಂಚಲಿ ಸವಿ ಮಿಂಚಿದೆ..!

ಒಟ್ಟಿನಲ್ಲಿ, ಕನ್ನಡಿಗರ ಸಂಗಮ ಎನಿಸಿದ್ದ ನಟ ಯಶ್ ಅಭಿನಯ ಹಾಗು ಪ್ರಶಾಂತ್ ನೀಲ್ ನಿರ್ದೇಶನದ 'ಕೆಜಿಎಫ್' ಚಿತ್ರವು ಆರ್‌ಆರ್‌ಆರ್‌ ಚಿತ್ರವನ್ನು ಕಲೆಕ್ಷನ್‌ನಲ್ಲಿ ಹಿಂದಿಕ್ಕಿ ಮುಂದಿನ ಸ್ಥಾನವನ್ನು ಅಲಂಕರಿಸಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿಯೇ ಸರಿ. ಪ್ರಭಾಸ್ ನಾಯಕತ್ವದ 'ಸಲಾರ್ (Salaar) ಬಳಿಕ ಸದ್ಯ ಪ್ರಶಾಂತ್ ನೀಲ್ ಅವರು ತೆಲುಗು ಚಿತ್ರರಂಗದತ್ತ ಮುಖ ಮಾಡಿದ್ದು, ಜೂನಿಯರ್ ಎನ್‌ಟಿಆರ್ ನಟನೆಯ ಚಿತ್ರದ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. 

ಅಪ್ಪ-ಅಮ್ಮಂಗೆ ಹುಟ್ಟಿದವ್ರೇ ನಾವೂನೂ, ಅವ್ರ ಬಗ್ಗೆ ಮಾತಾಡ್ತಾ ಇದ್ರೂ ನಮ್ ಇಮೇಜು ಅಂತ ಸುಮ್ನಿರ್ಬೇಕಾ..?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?