ದಾಂಪತ್ಯ ಜೀವನಕ್ಕೆ ಎಳ್ಳು ನೀರು ಬಿಟ್ಟಿರೋ ನಿವೇದಿತಾ & ಚಂದನ್; ಬೊಂಬೆ ನಿವಿಗೆ ಫುಲ್ ಕ್ಲಾಸ್!

By Shriram Bhat  |  First Published Jul 6, 2024, 10:28 PM IST

ನಿವೇದಿತಾ ಗೌಡ-ಚಂದನ್ ಶೆಟ್ಟಿ ಡಿವೋರ್ಸ್ ಸುದ್ದಿ ಹೊರಬೀಳುತ್ತಿದ್ದಂತೆ ಕೆಲವು ಊಹಾ-ಪೋಹಗಳು ಹಬ್ಬಿದ್ವು. ಆಗ್ಲೂ ನಿವೇದಿತಾ ಗೌಡರನ್ನೇ ಟಾರ್ಗೆಟ್ ಮಾಡಲಾಗಿತ್ತು. ಇವರಿಬ್ಬರ ವಿಚ್ಛೇದನದಲ್ಲಿ..


ಸದ್ಯ ಕರ್ನಾಟಕದಲ್ಲಿ ರೀಲ್ಸ್ಗೆ ಮುಕುಟ ಮಣಿ ಅಂದ್ರೆ ಅದು ನಿವೇದಿತಾ ಗೌಡ. ನಿವಿ ಮಾಡೋ ಒಂದೊಂದು ರೀಲ್ಸ್ಗಳು ಲಕ್ಷ ಲಕ್ಷ ವೀವ್ಸ್ ಪಡಿತಾವೇ. ನಿವೇದಿತಾ ಗೌಡ ಮಾಡೋ ರೀಲ್ಸ್ ನೋಡೋಕೆ ಅಂತಾನೆ ಒಂದಿಷ್ಟು ಮಂದಿ ನಿವೇದಿತಾ ಸೋಷಿಯಲ್ ಮೀಡಿಯಾವನ್ನ ಫಾಲೋ ಮಾಡ್ತಾರೆ. ಆದ್ರೆ ಈಗ ಈ ರೀಲ್ಸ್ ನೋಡಿ ಕೆಲ ವೀವರ್ಸ್ ನಿವಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ರೀಲ್ಸ್ ಮಾಡೋದಕ್ಕಾಗಿ ಗಂಡನನ್ನ ಬಿಟ್ಟ ಮಹಾನ್ ತ್ಯಾಗಿ ನಿವೇದಿತಾ ಅಂತ ಜರಿಯುದಿದ್ದಾರೆ..

ಬಿಗ್ ಬಾಸ್ ಮನೆಯಲ್ಲಿ ಪರಿಚಯ ಆಗಿ, ಆ ಪರಿಚಯ ಸ್ನೇಹಕ್ಕೆ ತಿರುಗಿ, ಸ್ನೇಹ ಪ್ರೀತಿಯಾಗಿ, ಈ ಪ್ರೀತಿಯಿಂದ ಸತಿ ಪತಿಯಾಗಿದ್ರು ನಿವೇದಿಯಾ ಹಾಗು ಚಂದನ್.. ಆದ್ರೆ ಇವರಿಬ್ಬರ ಸತಿ ಪತಿಯ ಜೀವನ ವಿಚ್ಛೇಧನದಲ್ಲಿ ಅಂತ್ಯವಾಗಿದೆ. ಇವರಿಬ್ಬರ ಡಿವೋರ್ಸ್ ಸುದ್ದಿ ಇಬ್ಬರ ಡೈ ಹಾರ್ಡ್ ಫಾಲೋರ್ಸ್ಗೆ ಶಾಕ್ ಕೊಟ್ಟಿತ್ತು. 

Tap to resize

Latest Videos

ಎಳ್ಳುನೀರು ಬಿಡೋದೇ ಒಳ್ಳೆಯದಾ..? ದರ್ಶನ್ ಡ್ರೀಮ್ ಪ್ರಾಜೆಕ್ಟ್ ಆಗೋದೇ ಕಷ್ಟ ಅನ್ನೋದ್ಯಾಕೆ...?

ರಾತ್ರಿಯೆಲ್ಲಾ ಚನ್ನಾಗಿದ್ದವರು ಬೆಳಗಾಗೋ ಅಷ್ಟರಲ್ಲಿ ವಿಚ್ಛೇಧನ ಪಡೆದಿದ್ದಾರಲ್ಲಾ ಇದು ಹೇಗೆ ಅಂತ ತಲೆ ಕೆಡಿಸಿಕೊಂಡಿದ್ರು. ನಿವಿ ಚಂದನ್ ವಿಚ್ಛೇಧನ ಬಳಿಕ ಈಗ ನಿವೇದಿತಾ ಗೌಡ ಟಾರ್ಗೆಟ್ ಆಗುತ್ತಿದ್ದಾರೆ. ಮೊದಲಿನಿಂದಲೂ ಸೋಷಿಯಲ್ ಮೀಡಿಯಾ ಫ್ರೀಕ್ ಆಗಿದ್ದ ನಿವೇದಿತಾ, ಈಗ  ಸರಣಿ ವೀಡಿಯೋಗಳನ್ನ ಹಂಚಿಕೊಳ್ಳುತ್ತಿದ್ದಾರೆ. ಆದ್ರೆ ಚಂದನ್ ಜೊತೆ ವಿಚ್ಛೇಧನ ಪಡೆದ ಬಳಿಕ ನಿವಿಗೆ ಬ್ಯಾಡ್ ಕಮೆಂಟ್ಗಳ ಸುರಿಮಳೆ ಬರುತ್ತಿವೆ. 

ಆ ಬಗ್ಗೆ ಮಾತಾಡೋಕೆ ಇದು ಟೈಂ ಅಲ್ಲ, ಆದ್ರೂ ಅವ್ರು ಮನೆಲ್ಲಿ ಊಟ ಮಾಡಿದ್ರ ಬಗ್ಗೆ ಹೇಳ್ತೀನಿ: ಕಿರಣ್ ರಾಜ್ 

ನಿವೇದಿತಾ ಗೌಡ-ಚಂದನ್ ಶೆಟ್ಟಿ ಡಿವೋರ್ಸ್ ಸುದ್ದಿ ಹೊರಬೀಳುತ್ತಿದ್ದಂತೆ ಕೆಲವು ಊಹಾ-ಪೋಹಗಳು ಹಬ್ಬಿದ್ವು. ಆಗ್ಲೂ ನಿವೇದಿತಾ ಗೌಡರನ್ನೇ ಟಾರ್ಗೆಟ್ ಮಾಡಲಾಗಿತ್ತು. ಇವರಿಬ್ಬರ ವಿಚ್ಛೇದನದಲ್ಲಿ ನಟ ಸೃಜನ್ ಲೋಕೇಶ್‌ ಹೆಸರನ್ನ ತಳುಕು ಹಾಕಲಾಗಿತ್ತು. ಇದ್ಯಾಕೋ ಬೇರೆಯದ್ದೇ ದಾರಿ ಹಿಡಿಯುತ್ತಿದೆ ಅಂತ ಗೊತ್ತಾಗ್ತಿದ್ದ ಹಾಗೆ ನಿವಿ ಚಂದನ್ ಇಬ್ಬರೂ ಒಟ್ಟಿಗೆ ಬಂದು ವಿಚ್ಛೇದನದ ಬಗ್ಗೆ ಸ್ಪಷ್ಟನೆ ನೀಡಿದ್ರು. ಆದ್ರೂ ನಿವೇದಿತಾಗೆ ಕೆಟ್ಟ ಕಮೆಂಟ್ಗಳೇನು ಕಮ್ಮಿಯಾಗಿಲ್ಲ. 

ಈ ಫೇಸ್‌ಲೀ ಏನೋ ಇದೆ, ಕಣ್ಣಂಚಲಿ ಸವಿ ಮಿಂಚಿದೆ; ತಮಿಳಿನಲ್ಲೂ ಕೊಡಗಿನ ಬೆಡಗಿ ರನ್ನಿಂಗ್!

ವಿಚ್ಛೇಧನ ಪಡೆದ ಮೇಲೆ ನಿವೇದಿತಾ ಚಂದನ್ ಅವರವರ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ನಿವೇದಿತಾ ಸಿನಿಮಾಗಳ ಕಥೆ ಕೇಲುತ್ತಿದ್ದಾರೆ. ಗ್ಯಾಪ್ನಲ್ಲಿ ದಿನಕ್ಕೆರಡು ರೀಲ್ಸ್ ಮಾಡಿ ಅಪ್ಲೋಡ್ ಮಾಡುತ್ತಿದ್ದಾರೆ. ನಟ ಚಂದನ್ ಶೆಟ್ಟಿ ತನ್ನ ವಿಧ್ಯಾರ್ಥಿ ವಿಧ್ಯಾರ್ತಿನಿಯೇ ಸಿನಿಮಾದ ಪ್ರಮೋಷನ್ ಕಡೆ ತಲೆ ಕೆಡಿಸಿಕೊಂಡಿದ್ದಾರೆ. ಅಷ್ಟೆ ಅಲ್ಲ ತನ್ನ ಸ್ನೇಹಿತರ ಜೊತೆಗೂಡಿ ಸಾಯಿ ಬಾಬ ದರ್ಶನ ಅಂತ ಟೆಪಲ್ ರನ್ ಮಾಡುತ್ತಿದ್ದಾರೆ. 

ನಾವೂ ಅಪ್ಪ-ಅಮ್ಮಂಗೆ ಹುಟ್ಟಿದ ಮಕ್ಕಳೇ, ತಂದೆ-ತಾಯಿಗೆ ಮಾತಾಡ್ತಾ ಇದ್ರೂ ನಮ್ ಇಮೇಜು..: ನಟ ಯಶ್

click me!