ಕನ್ನಡದಲ್ಲಿ ನಟ ಅಂಬರೀಷ್ ಜೋಡಿಯಾಗಿ ಚಕ್ರವ್ಯೂಹ ಚಿತ್ರದಲ್ಲಿ ನಟಿಸಿದ್ದಾರೆ ಅಂಬಿಕಾ. ಆ ಚಿತ್ರದ 'ಚಳಿ ಚಳಿ ತಾಳೆನು ಈ ಚಳಿಯಾ..' ಹಾಡನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಸೀನ್‌ಗೆ ತಕ್ಕಂತೆ ಅವರ ಹಾವಭಾವ ಹಾಗು ನಟನೆ
ಬಹುಭಾಷಾ ತಾರೆ ಅಂಬಿಕಾ (Ambika) ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಮಾತನಾಡಿದ್ದು ಮಾತ್ರವಲ್ಲ, ಸ್ಪಷ್ಟವಾಗಿ ಕನ್ನಡದಲ್ಲಿ ಮಾತನಾಡಿದ್ದಾರೆ. ಸ್ವಲ್ಪವೂ ಜೀವನೋತ್ಸಾಹ ಕಳೆದುಕೊಳ್ಳದ ನಟಿ ಅಂಬಿಕಾ ಮಾತನಾಡಿದ್ದು ನೋಡಿದರೆ ಅವರೆಷ್ಟು ಪ್ರಬುದ್ಧರು ಎಂಬುದು ಅರ್ಥವಾಗುತ್ತದೆ. 70-80ರ ದಶಕದಲ್ಲಿ ಅಂಬಿಕಾ ಸ್ಟಾರ್ ನಟಿ ಮಾತ್ರವಲ್ಲ, ಕನ್ನಡ, ತಮಿಳು, ತೆಲುಗು ಹಾಗು ಮಲಯಾಳಂ ಚಿತ್ರರಂಗಗಳಲ್ಲಿ ಮಿಂಚಿರುವ ನಟಿ.
ಕನ್ನಡದಲ್ಲಿ ನಟ ಅಂಬರೀಷ್ ಜೋಡಿಯಾಗಿ ಚಕ್ರವ್ಯೂಹ ಚಿತ್ರದಲ್ಲಿ ನಟಿಸಿದ್ದಾರೆ. ಆ ಚಿತ್ರದ 'ಚಳಿ ಚಳಿ ತಾಳೆನು ಈ ಚಳಿಯಾ..' ಹಾಡನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಸೀನ್‌ಗೆ ತಕ್ಕಂತೆ ಅವರ ಹಾವಭಾವ ಹಾಗು ನಟನೆಯನ್ನು ಕನ್ನಡ ಸಿನಿಪ್ರೇಕ್ಷಕರು ಎಂದೂ ಮರೆಯಲಾಗದು. ಕನ್ನಡದಲ್ಲಿ ಡಾ ರಾಜ್‌ಕುಮಾರ್, ಶಂಕರ್ ನಾಗ್, ಅನಂತ್ ನಾಗ್ ಮುಂತಾದ ನಟರೊಂದಿಗೆ ತೆರೆ ಹಂಚಿಕೊಂಡಿರುವ ನಟಿ ಅಂಬಿಕಾ, ನಾಲ್ಕೂ ಭಾಷೆಗಳಲ್ಲಿ ಡೇಟ್ ಹೊಂದಾಣಿಕೆ ಮಾಡಲಾಗದೇ ಹಲವು ಸಿನಿಮಾಗಳನ್ನು ಮಾಡಿಲ್ಲ.
ಎಳ್ಳುನೀರು ಬಿಡೋದೇ ಒಳ್ಳೆಯದಾ..? ದರ್ಶನ್ ಡ್ರೀಮ್ ಪ್ರಾಜೆಕ್ಟ್ ಆಗೋದೇ ಕಷ್ಟ ಅನ್ನೋದ್ಯಾಕೆ...?
ತಮ್ಮ ಸಿನಿಮಾ ಜರ್ನಿ ಹಾಗು ಕನ್ನಡದ ಬಗ್ಗೆ ಖುಷಿಯಿಂದ ಮಾತನಾಡಿರುವ ಅಂಬಿಕಾ 'ನೀವು ಕೇಳಿರುವುದಕ್ಕೆ ನಾನು ಹೇಳುತ್ತಿದ್ದೇನೆ ಅಷ್ಟೇ.. ನಾನು ಚಿತ್ರರಂಗದಲ್ಲಿ ಇದ್ದಾಗ ನನಗೆ ಮೀಟೂ ಅಥವಾ ಕಾಸ್ಟಿಂಗ್ ಕೌಚ್ ಎಂಬ ಶಬ್ಧವೇ ಗೊತ್ತಿರಲಿಲ್ಲ. ಅದನ್ನೆಲ್ಲಾ ನಾನು ಈಗಲೇ ಕೇಳಿದ್ದು. ನಾನು ಪಾತ್ರಕ್ಕೆ ತಕ್ಕಂತೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೆ, ಡ್ರೆಸ್‌ಗಳನ್ನೂ ಹಾಕಿಕೊಳ್ಳುತ್ತಿದ್ದೆ. ಆದರೆ, ಅದೊಂದನ್ನು ಮಾತ್ರ ಮಾಡಲೇ ಇಲ್ಲ.
ನಿವಿ ಬೊಂಬೆಗೆ ಫುಲ್ ಕ್ಲಾಸ್, ಚಂದನ್ ಟೆಂಪಲ್ ರನ್, ನಿವೇದಿತಾ ರೀಲ್ಸ್ ರಾಣಿ ಅಂತ ಟ್ರೋಲ್..!
ಅದು ಎಂದರೆ, ಸ್ವಿಮ್ಮಿಂಗ್ ಡ್ರೆಸ್. ಸ್ವಿಮ್ಮಿಂಗ್ ಡ್ರೆಸ್ ಹಾಕಿಕೊಳ್ಳಲು ಸರಿಯಾದ ಬಾಡಿ ಶೇಪ್ ಹಾಗೂ ಲೆಗ್ ಚೆನ್ನಾಗಿ ಇರಬೇಕು. ಆದರೆ, ನನಗೆ ನನ್ನ ಕಾಲುಗಳು ತೋರಿಸುವಷ್ಟು ಚೆನ್ನಾಗಿದೆ ಎಂದು ಅನ್ನಿಸಲಿಲ್ಲ. ಆ ಕಾರಣಕ್ಕೆ ನಾನು ಯಾವತ್ತೂ ಸ್ವಿಮ್ಮಿಂಗ್ ಸ್ಯೂಟ್ ಹಾಕಲೇ ಇಲ್ಲ. ಹಾಕಿದರೆ ತಪ್ಪು ಅಂತ ನಾನು ಹೇಳುತ್ತಿಲ್ಲ. ಪಾತ್ರಕ್ಕೆ ಅಗತ್ಯವಿದ್ದರೆ ಹಾಕಿಕೊಳ್ಳುವುದರಲ್ಲಿ ತಪ್ಪೇನೂ ಇಲ್ಲ. ಆದರೆ, ನಮ್ಮ ಅಂಗಾಂಗಳು ಚೆನ್ನಾಗಿದ್ದರೆ, ಸೆಕ್ಸಿ ಲುಕ್ ಅಂತಾರಲ್ಲ, ಹಾಗೆ ಇದ್ದರೆ ಮಾತ್ರ ಹಾಕಿಕೊಳ್ಳಬೇಕು ಎಂಬುದು ನನ್ನ ಅನಿಸಿಕೆ.
ಕಾಲ್ ಮಾಡಿದ್ರು, ಅವ್ರ ಮನೆಗೆ ಹೋಗಿದ್ದೆ, ಅವ್ರ ಮನೆಲ್ಲಿ ಊಟ ಮಾಡಿದ್ರ ಬಗ್ಗೆ ಹೇಳ್ತೀನಿ: ಕಿರಣ್ ರಾಜ್
ನನ್ನ ಅಭಿಪ್ರಾಯದಲ್ಲಿ, ನನಗೆ ಕಂಫರ್ಟೇಬಲ್ ಅನ್ನಿಸಿದರೆ ಮಾತ್ರ ನಾನು ಯಾವುದೇ ಬಟ್ಟೆ ಹಾಕಿಕೊಳ್ಳುತ್ತೇನೆ. ಈಗಲೂ ಅಷ್ಟೇ, ಆಗಲೂ ಅಷ್ಟೇ. ನನಗೆ ಅದು ಅನ್‌ಕಂಫರ್ಟ್ ಎನಿಸಿದರೆ ಅದೆಷ್ಟೇ ಚೆನ್ನಾಗಿದ್ದರೂ ನಾನು ಆ ಬಟ್ಟೆ ಧರಿಸುವುದಿಲ್ಲ. ಗ್ಲಾಮರಸ್ ಆಗಿದ್ದರೆ ತೋರಿಸಬಹುದು, ಇಲ್ಲದಿದ್ದರೆ ಬೇಡ ಅನ್ನೋದು ನನ್ನ ಒಪಿನಿಯನ್. ನಾನು ಯಾರ ವಿಷಯದಲ್ಲಿಯೂ ಅಡ್ವೈಸ್ ಕೊಡುವುದಿಲ್ಲ, ಕೊಡಬಾರದು. ಜಗತ್ತಿನಲ್ಲಿ ಕೊಡಬಾರದ ಸಂಗತಿ ಎಂದರೆ ಅದು ಅಡ್ವೈಸ್ ಎನ್ನುವುದು ನನ್ನ ಅಭಿಪ್ರಾಯ' ಎಂದಿದ್ದಾರೆ ನಟಿ ಅಂಬಿಕಾ.
ತಮಿಳಿನಲ್ಲಿ ಮತ್ತೊಬ್ಬರು ಕೊಡಗಿನ ಬೆಡಗಿ ರನ್ನಿಂಗ್ ಶುರು; ಈ ಫೇಸ್‌ಲೀ ಏನೋ ಇದೆ, ಕಣ್ಣಂಚಲಿ ಸವಿ ಮಿಂಚಿದೆ..!