Danish Saitಗೆ ದೊಡ್ಡ ವ್ಯಕ್ತಿಗಳು ಪರಿಚಯವಿದೆ, ಕೆಎಲ್‌ ರಾಹುಲ್‌ ಮನೆಗೆ ಬಂದಿದ್ರು: ನಟ Vijay Chendur

Suvarna News   | Asianet News
Published : Jan 08, 2022, 12:41 PM IST
Danish Saitಗೆ ದೊಡ್ಡ ವ್ಯಕ್ತಿಗಳು ಪರಿಚಯವಿದೆ, ಕೆಎಲ್‌ ರಾಹುಲ್‌ ಮನೆಗೆ ಬಂದಿದ್ರು: ನಟ Vijay Chendur

ಸಾರಾಂಶ

ಹಂಬಲ್ ಪೊಲಿಟಿಷಿಯನ್ ನೋಗ್‌ರಾಜ್‌ ವೆಬ್‌ ಸೀರಿಸ್‌ ಪ್ರಚಾರ ಹೇಗ್ ಮಾಡ್ತಾರೆ ಡ್ಯಾನಿಶ್? ನಟ ವಿಜಯ್ ಮಾತುಗಳನ್ನು ಕೇಳಿ... 

ಕನ್ನಡ ಚಿತ್ರರಂಗದ (Sandalwood) ಸೂಪರ್ ಹಿಟ್ ಸಿನಿಮಾ ಹಂಬಲ್ ಪೊಲಿಟಿಷಿಯನ್ ನೋಗ್‌ರಾಜ್‌ನ (Humble politician Nograj) ಇದೀಗ ವೆಬ್‌ ಸೀರಿಸ್‌ ಮಾದರಿಯಲ್ಲಿ ಬಿಡುಗಡೆಯಾಗಿದೆ. ಜನವರಿ 6ರಂದು ವೂಟ್‌ನಲ್ಲಿ ಬಿಡುಗಡೆಯಾದ ಈ ಸೀರಿಸ್‌ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಪ್ರಮುಖ ಪಾತ್ರಧಾರಿಗಳಾದ ಡ್ಯಾನಿಶ್ ಸೇಠ್ (Danish Sait) ಮತ್ತು ವಿಜಯ್‌ (Vijay Chendur) ಡಿಫರೆಂಟ್ ಆಗಿ ಪ್ರಚಾರ ಮಾಡುತ್ತಿದ್ದಾರೆ. ಡ್ಯಾನಿಶ್ ಸ್ನೇಹದ ಬಗ್ಗೆ ಅವರ ವ್ಯಕ್ತಿತ್ವದ ಬಗ್ಗೆ ವಿಜಯ್ ಮಾತನಾಡಿದ್ದಾರೆ. 

'ನಮ್ಮ ಹಂಬಲ್ ಪೊಲಿಟಿಷಿಯನ್ ನೋಗ್‌ರಾಜ್‌ ಸಿನಿಮಾನ ಕೆಎಲ್‌ ರಾಹುಲ್ (KL Rahul) ಮತ್ತು ಯjuವೇಂದ್ರ ಚಾಹಲ್ (Chala) ನೋಡಿದ್ದಾರೆ. ವಿರಾಟ್‌ (Virat) ಅವರು ಸಣ್ಣ ಪುಟ್ಟ ಸೀನ್‌ಗಳನ್ನು ನೋಡಿದ್ದಾರೆ. ಇದು ಹೇಗೆ ಅಂದ್ರೆ ಐಪಿಎಲ್‌ನಲ್ಲಿ (IPL Insider) ಇಬ್ರು ಇನ್‌ಸೈಡರ್ ಅಲ್ವಾ? ಅವರೆಲ್ಲಾ ಸ್ನೇಹಿತರು ಇವರಿಗೆ. ಸೋಷಿಯಲ್ ಮೀಡಿಯಾದಲ್ಲಿ (Social mediaa) ಡ್ಯಾನಿಶ್ ಅಪ್ಲೋಡ್ ಮಾಡುವ ಸಣ್ಣ ವಿಡಿಯೋ ಕೂಡಾ ಎಲ್ಲರೂ ನೋಡುತ್ತಾರೆ, ನಮ್ಮ ಆರ್‌ಸಿಬಿನಲ್ಲಿರುವವರು ಎಲ್ಲರೂ ನೋಡುತ್ತಾರೆ' ಎಂದು ವಿಜಯ್ ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.

'ನಮ್ಮ ಹೊಸ ವೆಬ್‌ ಸೀರಿಸ್‌ನೂ ಪ್ರಮೋಟ್ ಮಾಡಿದ್ದಾರೆ. ಎಲ್ಲರೂ ನೋಡುತ್ತೇವೆ ಎಂದು ಹೇಳಿದ್ದಾರೆ. ನಮಗೆಲ್ಲಾ ಹೇಗೆ ವೂಟ್ ಸೆಲೆಕ್ಟ್‌ ಮಾಡಿ ಅಂತ ಹೇಳ್ತಾರೆ ಹಾಗೇ ಅವರಿಗೂ ಅವರ ಸ್ಟೈಲ್‌ನಲ್ಲಿ ಹೇಳಿದ್ದಾರೆ. ವಿರಾಟ್, ರಾಹುಲ್ ಮತ್ತೆ ಚಹಾಲ್ ಶುಭಾಶಯಗಳನ್ನು ಕಳುಹಿಸುತ್ತಿದ್ದಾರೆ. ಅವರ ಪರ್ಸನಲ್‌ ಲೈಫ್‌ ಮದುವೆ ಬರ್ತ್‌ಡೇ ಎಲ್ಲಾನೂ ಅವರಿಗೆ ಅಪ್ಡೇಟ್ ಮಾಡುತ್ತಿರುತ್ತಾರೆ. ಈ ಮನುಷ್ಯನಿಗೆ ನೆಟ್‌ವರ್ಕ ಚೆನ್ನಾಗಿದೆ' ಎಂದು ವಿಜಯ್ ಹೇಳಿದ್ದಾರೆ. 

Humble Politician Nograj: ರಿಯಲ್ ರಾಜಕಾರಣಿ ರೀತಿ ಪ್ರಚಾರಕ್ಕಿಳಿದ ಡ್ಯಾನಿಷ್!

' ನಾನು ಕೆಎಲ್ ರಾಹುಲ್‌ರನ್ನು ಎರಡು ಸಲ ಭೇಟಿ ಮಾಡಿದ್ದೀನಿ. ಸಿನಿಮಾ ರಿಲೀಸ್ ಆದಾಗ ಓರಾಯನ್ ಮಾಲ್‌ಗೆ (Orion Mall) ಬಂದಿದ್ರು. ಡ್ಯಾನಿಶ್ ಬಂದು ಹೇಳಿದ್ರು ಹೇಗಾದ್ರೂ ಮಾಡಿ ಅವರನ್ನುಒಳಗೆ ಕರೆದುಕೊಂಡು ಹೋಗಬೇಕು ಇಲ್ಲ ಅಂದ್ರೆ ಜನರಿಗೆ ಇಲ್ಲಿ ತೊಂದರೆ ಆಗುತ್ತೆ ಅಂದಿದ್ದು. ಡ್ಯಾನಿಶ್‌ ಅವರ ಮನೆಯಲ್ಲಿ ಬರ್ತ್‌ಡೇ ಪಾರ್ಟಿಯಲ್ಲೂ ಭೇಟಿ ಮಾಡಿದ್ದೆ. ಅವರು ಕಾಲ್ ಮಾಡಿದ್ರು ನನ್ನ ಬರ್ತಡೇ ಇವತ್ತು ಅಂದ್ರು ನಾನು ವಿಶ್ ಮಾಡಿದೆ ಅಲ್ವಾ ಅಂತ ಹೇಳಿದೆ. ಅದಿಕ್ಕೆ ಅವರು ಇವತ್ತು ಪಾರ್ಟಿ ಇದೆ ನೀವು ಬರಬೇಕು ಅಂದ್ರು. ನಾನು ಹೋದೆ ಅಲ್ಲಿ ನೋಡಿದ್ರೆ ಎಲ್ಲರೂ ದೊಡ್ಡೋರು ಪ್ರಜ್ವಲ್ ದೇವರಾಜ್‌ (Prajwal Devaraj) ಇದ್ರು ಅವರೊಟ್ಟಿಗೆ ಮಾತನಾಡಿಕೊಂಡು ಇದ್ದೆ. ಡ್ಯಾನಿಶ್ ಬಂದು ವೇದಿಕೆ ಮೇಲೆ ಕರೆದುಕೊಂಡು ಹೋದ್ರು ಎಲ್ಲರಿಗೂ ಪರಿಚಯ ಮಾಡಿಸುವುದಕ್ಕೆ. ವಿಡಿಯೋದಲ್ಲಿ ಮಂಜುನಾಥ್ ಅಂತ ಹೇಳುತ್ತಾರೆ ಆದರೆ ಮಂಜುನಾಥ್ ಯಾರು ಎನು ಎಂದು ರಿವೀಲ್ ಮಾಡಿದ್ದು ಸಿನಿಮಾದಲ್ಲಿ ಸಾದ್ ಖಾನ್ ಬರೆದಿದ್ದಾರೆ. ಅಲ್ಲಿದ್ದವರು ಓ ಮಂಜುನಾಥ್ ಅಂತ ಹೇಳಿದ್ದರು' ಎಂದು ವಿಜಯ್ ಮಾತನಾಡಿದ್ದಾರೆ.

Mr Nagsಗೆ ಕೂಡಿ ಬಂತು ಕಂಕಣ ಭಾಗ್ಯ; ಡ್ಯಾನಿಶ್‌ ಲೈಫಲ್ಲಿ ಹೊಸ ಬೆಳಕು!

'ಡ್ಯಾನಿಶ್‌ಗೆ ತುಂಬಾ ಜನರು ಸಪೋರ್ಟ್ ಮಾಡುತ್ತಾರೆ. ಯಾಕಂದ್ರೆ ಈ ಮನುಷ್ಯನ ಶಕ್ತಿ ಏನೆಂದು ಅವರಿಗೆಲ್ಲಾ ಗೊತ್ತಿದೆ. ಇವರು ಕೂಡ ತುಂಬಾ ಜನರಿಗೆ ಸಪೋರ್ಟ್ ಮಾಡಿದ್ದಾರೆ. ಸಿನಿಮಾ ಮಾಡಿದ್ದೀವಿ ಅಂದ್ರೆ ಬೈಟ್‌ ಕೊಟ್ಟಿದ್ದಾರೆ. ಅವರ ಸುತ್ತ atmosphere ಚೆನ್ನಾಗಿ ಇಟ್ಕೊಂಡಿದ್ದಾರೆ ಇವರು.  ಮೇಕಪ್ ಇದ್ರೆ ಡ್ಯಾನಿಶ್ ನಟ ಭಯಂಕರ ಆಗ್ಬಿಡ್ತಾರೆ, ಮೇಕಪ್ ಇಲ್ಲ ಅಂದ್ರೆ ತುಂಬಾನೇ ಎಮೋಷನಲ್ ಆಗ್ಬಿಡ್ತಾರೆ. ನಮಗೆ ಎಲ್ಲಾದ್ರೂ ಒಂದು ಚೂರು ಗಾಯ ಆದ್ರೂ ತುಂಬಾನೇ ಕೇರ್ ತೆಗೆದುಕೊಳ್ಳುತ್ತಾರೆ, ಎಲ್ಲಾನೂ ಒಂದು ನಿಮಿಷ ನಿಲ್ಲಿಸುತ್ತಾರೆ ಜಾಸ್ತಿ ಕೇರ್ ಮಾಡಿ ಎಂದು ಹೇಳುತ್ತಾರೆ. ದೊಡ್ಡ ಕಲಾವಿದರಿಗೆ ಮಾತ್ರವಲ್ಲ ಲೈಟ್ ಮ್ಯಾನ್‌ನಿಂದ ಎಲ್ಲಿರಿಗೂ ಹೀಗೆ ಮಾಡುತ್ತಾರೆ. ಅವರಿಗೆ ಪೆಟ್ಸ್‌ ಅಂದ್ರೆ ತುಂಬಾನೇ ಇಷ್ಟ ಅವರ ಮನೆಯಲ್ಲಿ ನಾಯಿ ಬೆಕ್ಕು ಎಲ್ಲಾ ಇದೆ ಅವು ಊಟ ಮಾಡಿಲ್ಲ ಹುಷಾರಿಲ್ಲ ಅಂದ್ರೆ ಅದೇ ಯೋಚನೆ ಮಾಡುತ್ತಾರೆ. ಅವರ ತಾಯಿ ಮನೆಯಿಂದ ಊಟ ಮಾಡಿ ಕಳುಹಿಸುತ್ತಾರೆ. ಅವರಿಗೆ ಅಟ್ಯಾಚ್‌ಮೆಂಟ್  ತುಂಬಾನೇ ಇದೆ' ಎಂದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬರ್ತಾ ಬರ್ತಾ ಸಖತ್ Bold ಆಗ್ತಿದ್ದಾರೆ ಬಿಗ್ ಬಾಸ್ ಸಿಂಹಿಣಿ Sangeetha Sringeri
ಮದ್ವೆ ಬಗ್ಗೆ ಡಾಲಿ ಧನಂಜಯ್​ ಒಂದೇ ಒಂದು ಮಾತು: 67% Gen Z ಮದ್ವೆಗೆ ರೆಡಿ! ಅಂಥದ್ದೇನು ಹೇಳಿದ್ರು ನಟ?