ಮೊದಲ ದಿನವೇ ಹಲವು ದಾಖಲೆ ಪುಡಿಪುಡಿ.. 'ಗ್ಲೋಬಲ್ ಹಿಸ್ಟರಿ' ಸೃಷ್ಟಿಸಿದ ರಾಕಿಂಗ್ ಸ್ಟಾರ್ ಯಶ್! ಮುಂದೇನು?

Published : Aug 26, 2026, 02:58 PM IST
Rocking Star Yash

ಸಾರಾಂಶ

ಇದು ಒಬ್ಬ ಕನ್ನಡದ ನಟನ ಗ್ಲೋಬಲ್ ರೆಕಾರ್ಡ್ ಆಗಿದೆ. ಯಶ್ ಅಭಿನಯದ ಟಾಕ್ಸಿಕ್, ಕನ್ನಡದ ಜೊತೆಗೆ ಇಂಗ್ಲೀಷ್‌ನಲ್ಲಿಯೂ ಏಕ ಕಾಲದಲ್ಲಿ ನಿರ್ಮಾಣ ಆಗಿರೋ ಸಿನಿಮಾ. ಈ ಚಿತ್ರವು ಇನ್ನುಳಿದ ಭಾಷೆಗೆ ಡಬ್ಬಿಂಗ್ ಆಗಿದೆ. ಯಶ್ ಇಂಗ್ಲೀಷ್ ಭಾಷೆಯಲ್ಲೂ ಅಭಿನಯಿಸಿದ್ದಾರೆ. ಹೀಗಾಗಿ, ಈ ಮೂಲಕ ಹಾಲಿವುಡ್‌ಗೂ ಯಶ್ ಎಂಟ್ರಿ ಕೊಟ್ಟಂತಾಗಿದೆ.

Yash Toxic Movie Creates many Records-ಯಶ್ ಟಾಕ್ಸಿಕ್ ಸಿನಿಮಾ ಜಾಗತಿಕವಾಗಿ ಹಲವು ದಾಖಲೆ!

ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾ ಇಂದು, 26 ಆಗಸ್ಟ್‌ 2026ರಂದು ಜಗತ್ತಿನಾದ್ಯಂತ ಬಿಡುಗಡೆ ಆಗಿದೆ. ಬರೋಬ್ಬರಿ 12500ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಕನ್ನಡಿಗ ಯಶ್ ಸಿನಿಮಾ ಇಂದು ಜಾಗತಿಕವಾಗಿ ಅಬ್ಬರಿಸುತ್ತಿದೆ. ಕರ್ನಾಟಕದಲ್ಲಿಯೇ 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಯಶ್ ನಟನೆ-ನಿರ್ಮಾಣದ ಟಾಕ್ಸಿಕ್ ಸಿನಿಮಾ, ಭಾರತದಲ್ಲಿ ಬರೋಬ್ಬರಿ 4700 ಸ್ಕ್ರೀನ್‌ನಲ್ಲಿ ಪ್ರದರ್ಶನವಾಗುತ್ತಿದೆ. ಅವುಗಳಲ್ಲಿ ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್‌ ಸೇರಿವೆ.

ಟಾಕ್ಸಿಕ್ ಅಬ್ಬರಕ್ಕೆ ಅಭಿಮಾನಿಗಳಿಂದ ಜೈಕಾರ

ಬೆಂಗಳೂರಿನ ಗಾಂಧಿನಗರದ ಸಂತೋಷ್, ನರ್ತಕಿ, ತ್ರಿವೇಣಿ ಹಾಗೂ ಅನುಪಮ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಇದಕ್ಕೆ ಕಾರಣ, ಅಡ್ವಾನ್ಸ್‌ ಬುಕಿಂಗ್ ಮೂಲಕ ಎಲ್ಲಾ ಚಿತ್ರಮಂದಿರಗಳು ಮೊದಲ ದಿನ ಬುಕ್ಕಿಂಗ್ ಆಗಿದ್ದವು. ಪ್ರೇಕ್ಷಕರು ತುಂಬಾ ಉತ್ಸಾಹದಲ್ಲಿ ಎಲ್ಲಾ ಚಿತ್ರಮಂದಿರಗಳಿಗೆ ಲಗ್ಗೆಯಿಟ್ಟಿದ್ದಾರೆ. ಬೆಳ್ಳಂಬೆಳಿಗ್ಗೆ 6 ಗಂಟೆಗೇ ಕರ್ನಾಟಕ ಸೇರಿದಂತೆ ಭಾರತದ ಎಲ್ಲಾ ಕಡೆ ಟಾಕ್ಸಿಕ್ ಸಿನಿಮಾ ಪ್ರದರ್ಶನ ಶುರುವಾಗಿದೆ. ಪ್ರೇಕ್ಷಕರಲ್ಲಿ ಕನ್ನಡಿಗ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಖುಷಿ ವ್ಯಕ್ತವಾಗುತ್ತಿದ್ದು, ಟಾಕ್ಸಿಕ್ ಅಬ್ಬರ ಮುಂದುವರೆದಿದೆ.

ಸಿನಿಮಾ ಬಗ್ಗೆ ಹಾಡಿ ಹೊಗಳುತ್ತಿರೋ ಅಭಿಮಾನಿಗಳು

ಟಾಕ್ಸಿಕ್ ಸಿನಿಮಾ ನೋಡಿ ಹೊರಬಂದಿರುವ ಪ್ರೇಕ್ಷಕರು ಸಿನಿಮಾ ಮೆಚ್ಚಿ ಮಾತನ್ನಾಡುತ್ತಿದ್ದಾರೆ. ಕೆಲವರ ಅಭಿಪ್ರಾಯದಂತೆ, ಟಾಕ್ಸಿಕ್ ಸಿನಿಮಾದ ನಿಜವಾದ ಕಥೆ 2 ಹಾಫ್ ನಿಂದ ಶುರುವಾಗುತ್ತೆ. ಮೊದಲಾರ್ಧವು ಸೆಕೆಂಡ್ ಹಾಫ್ ಕಥೆ ಶುರುವಾಗಲು ಪೂರಕವಾಗಿ ಕೆಲಸ ಮಾಡಿದೆ. ಹಲವರು 'ಟಾಕ್ಸಿಕ್ ಸಿನಿಮಾ 'ಅಕ್ಕ ತಮ್ಮ'ನ ಸೆಂಟಿಮೆಂಟ್ ಕಥೆ' ಎನ್ನುತ್ತಿದ್ದಾರೆ.

ರಾಯನ ಪಾತ್ರದಲ್ಲಿ ಯಶ್ ಅಭಿನಯ ಮಸ್ತಾಗಿದೆ

ಕನ್ನಡದ ಟಾಕ್ಸಿಕ್ ಹಾಲಿವುಡ್ ರೇಂಜ್ ಮೇಕಿಂಗ್ ಇದೆ ಅನ್ನೋದು ಪ್ರೇಕ್ಷಕರ ಮಾತು.. ರಾಯ ಹಾಗೂ ಟಿಕೆಟ್‌ ಹೆಸರಿನ ದ್ವಿಪಾತ್ರದ ಮೂಲಕ ಯಶ್ ಇಡೀ ಸಿನಿಮಾದಲ್ಲಿ ಅಬ್ಬರಿಸಿದ್ದಾರೆ. 5 ನಾಯಕಿಯರು ಕಥೆಗೆ ಪೂರಕವಾಗಿದ್ದು, ಚಿತ್ರಕಥೆಯಲ್ಲಿ ಹೆಚ್ಚುಕಡಿಮೆ ಎಲ್ಲರಿಗೂ ಪ್ರಾಶಸ್ತ್ಯವಿದೆ. ಪೋಷಕರ ನಟರು ಹಾಗೂ ಚಿತ್ರದಲ್ಲಿನ ಬಾಲಕಲಾವಿದರ ನಟನೆ ಗಮನ ಸೆಳೆಯುವಂತಿದೆ. ಯಶ್ ಅಭಿನಯದ ಕನ್ನಡ ಸಿನಿಮಾ, ಪ್ಯಾನ್ ಇಂಡಿಯಾ ಸಿನಿಮಾ ನೋಡಿದ್ದ ಕನ್ನಡ ಸಿನಿಪ್ರೇಕ್ಷಕರಿಗೆ ಈಗ ಬಂದಿರುವ 'ಟಾಕ್ಸಿಕ್' ಸಿನಿಮಾ ತುಂಬಾ ಶ್ರೀಮಂತವಾಗಿದೆ ಎಂಬ ಅನಿಸಿಕೆ ಮೂಡಿಸಿದೆ.

ಯಶ್ ಗ್ಲೋಬಲ್‌ ಹಿಸ್ಟರಿ

ಕರ್ನಾಟಕದ ಹುಡುಗ ಯಶ್ ವಿಶ್ವ ಮಟ್ಟದಲ್ಲಿ ಫೇಮಸ್ ಆಗಿರೋದು ಕನ್ನಡಿಗರಿಗೆ ನಿಜವಾಗಿಯೂ ಹೆಮ್ಮೆಯ ಸಂಗತಿ ಎಂಬುದು ಕನ್ನಡ ಪ್ರೇಕ್ಷಕರು ಎಲ್ಲಾ ಕಡೆ ಹೇಳುವ ಮಾತು. ಇಂದಿನಿಂದ ಪ್ರದರ್ಶನ ಕಾಣುತ್ತಿರುವ ಟಾಕ್ಸಿಕ್, ವಿಶ್ವ ಜಗತ್ತಲ್ಲಿ ಹೊಸ ಮಹಾನ್ ದಾಖಲೆ ಬರೆದಿದೆ. ವಿಶ್ವಾದ್ಯಂತ ಒಟ್ಟು ಸುಮಾರು 12,500 ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಇದು ಯಶ್ ಅವರ ಸಿನಿ ಬದುಕಿನಲ್ಲೇ ಅತ್ಯಂತ ದೊಡ್ಡ ಸಿನಿಮಾ ಬಿಡುಗಡೆಯಾಗಿದೆ.

ಭಾರತ ಹೊರತುಪಡಿಸಿ ವಿದೇಶಗಳಲ್ಲಿಯೇ ಬರೋಬ್ಬರಿ 4000 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ಗಳಲ್ಲಿ ಟಾಕ್ಸಿಕ್ ರಿಲೀಸ್ ಆಗಿದೆ. ಅಮೇರಿಕಾ ಒಂದರಲ್ಲೇ 2,000ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಭರ್ಜರಿಯಾಗಿ ಬಿಡುಗಡೆ ಅಗಿದ್ದು, ಬಹಳಷ್ಟು ಯುರೋಪ್ ದೇಶಗಳಲ್ಲೂ ಟಾಕ್ಸಿಕ್ ಹಬ್ಬ ಜೋರಾಗಿದೆ. ಆಸ್ಟ್ರೇಲಿಯಾದ ದ ಸಿಡ್ನಿ , ಮೆಲ್ಬೋರ್ನ್, ಬ್ರಿಸ್ಬೇನ್ ಸೇರಿ ಪ್ರಮುಖ ನಗರಗಳ್ಲಿ ಒಟ್ಟು 300 ಸ್ಕ್ರೀನ್ ಗಳಲ್ಲಿ ಟಾಕ್ಸಿಕ್ ರಿಲೀಸ್ ಆಗಿದೆ.

ಅರಬ್ ದೇಶಗಳಲ್ಲೂ ಯಶ್ ಹವಾ..

ಹಾಲಿವುಡ್ ಸ್ಪಾಟ್ ಅಮೆರಿಕಾ ಮಾತ್ರವಲ್ಲ, ದುಬೈನಲ್ಲಿ 200 ಕ್ಕೂ ಹೆಚ್ಚಿನ ಸ್ಕ್ರೀನ್‌ಗಳಲ್ಲಿ ಟಾಕ್ಸಿಕ್‌ ರಿಲೀಸ್ ಆಗಿದೆ. ದುಬೈ ಮತ್ತು ಶಾರ್ಜಾಗಳಲ್ಲಿ ಕನ್ನಡಿಗರಿಗಾಗಿ ಮುಂಜಾನೆ 2ಗಂಟೆಗೆ ಟಾಕ್ಸಿಕ್ ಪ್ರದರ್ಶನ ಆಗುತ್ತಿದೆ. ದುಬೈನಲ್ಲಿ ಮೊದಲ‌‌ ದಿನದ ಎಲ್ಲಾ‌ ಶೋ ಗಳು ಹೌಸ್ ಫುಲ್ ಆಗಿರೋ ಬಗ್ಗೆ ಮಾಹಿತಿ ಬಂದಿದೆ. ಜೊತೆಗೆ ಅಫ್ಘಾನಿಸ್ತಾನ, ಅರ್ಜೆಂಟೀನಾ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಬ್ರೆಜಿಲ್ ಹಾಗೂ ಯುರೋಪ್‌ನ ವಿವಿಧ ದೇಶಗಳಲ್ಲಿ ಸಿನಿಮಾ ಪ್ರದರ್ಶನಗೊಳ್ಳುತ್ತಿದೆ.

ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಚಿತ್ರೀಕರಿಸಿರೋ ಯಶ್ ಮೊದಲ ಹಾಲಿವುಡ್ ಸಿನಿಮಾ

ಯಶ್ ಅಭಿನಯದಲ್ಲಿ ಈ ಮೊದಲು ಬಂದಿದ್ದ ಸಿನಿಮಾಗಳು ಕನ್ನಡ ಹಾಗೂ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಾತ್ರ ಬಿಡುಗಡೆ ಆಗಿದ್ದವು. ಈ ಹಿಂದಿನ ಕೆಜಿಎಫ್-1 ಹಾಗೂ ಕೆಜಿಎಫ್-2 ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಾತ್ರ ಸದ್ದು ಮಾಡಿದ್ದವು. ಜಾಗತಿಕವಾಗಿ ಕೆಜಿಎಫ್ ಸರಣಿ ಸಿನಿಮಾಗಳ ಮೂಲಕ ಯಶ್ ಗುರುತಿಸಿಕೊಂಡಿದ್ದರೂ ಕೂಡ ಕೆಜಿಎಫ್ ಮೂಲಕ ನಟ ಯಶ್ ಅವರಿಗೆ 'ಪ್ಯಾನ್ ವರ್ಲ್ಡ್‌ ಸ್ಟಾರ್' ಪಟ್ಟ ಸಿಕ್ಕಿರಲಿಲ್ಲ. ಆದರೆ, ಈಗ ಬಿಡುಗಡೆ ಆಗಿರುವ ಟಾಕ್ಸಿಕ್ ಸಿನಿಮಾ ಮೂಲಕ ಯಶ್ ಅವರ 'ಪ್ಯಾನ್ ವರ್ಲ್ಡ್‌' ಸಿನಿಮಾ ಪಟ್ಟದ ಕನಸು ನನಸಾಗಿದೆ.

ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಿಗೆ ಡಬ್ ಮಾಡಿ ಈ ಟಾಕ್ಸಿಕ್ ಸಿನಿಮಾವನ್ನು ಬಿಡುಗಡೆ ಮಾಡಲಾಗಿದೆ. ಟಾಕ್ಸಿಕ್ ಓವರ್‌ಸೀಸ್ ಡೀಲ್‌ನಲ್ಲಿ ದಾಖಲೆ ಬರೆದ ರಾಕಿಂಗ್ ಸ್ಟಾರ್ ಯಶ್, ಕನ್ನಡ, ಹಿಂದಿ, ಮಲೆಯಾಳಂ, ತಮಿಳು,‌ ತೆಲುಗು ಭಾಷೆಗೆ ವಿದೇಶದಲ್ಲಿ ಬಿಡುಗಡೆ ಮಾಡಲು 109 ಕೋಟಿಗೆ ಮಾರಾಟ ಆಗಿದೆ ಎಂಬ ಮಾಹಿತಿ ಇದೆ. ಆದ್ರೆ, ವಿಶೇಷ ಅಂದ್ರೆ ಈ ಡೀಲ್‌ನಲ್ಲಿ ಇಂಗ್ಲೀಷ್ ಭಾಷೆಯ ಟಾಕ್ಸಿಕ್ ಡೀಲ್ ಸೇರಿಲ್ಲ.

ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ದೊಡ್ಡ ವಿದೇಶಿ ವ್ಯವಹಾರಗಳಲ್ಲಿ ಟಾಕ್ಸಿಕ್ ಸಿನಿಮಾ ದೊಡ್ಡ ಮೇಲುಗೈ ಸಾಧಿಸಿದೆ. ಭಾರತದ ಯಾವುದೇ ಚಿತ್ರವೂ ಕೂಡ ವಿದೇಶಗಳಲ್ಲಿ ಈ ಮಟ್ಟದ ಕ್ರೇಜ್ ಹಾಗೂ ವ್ಯಾಪಾರ-ವ್ಯವಹಾರ ಮಾಡಿರಲಿಲ್ಲ. ಬಿಸಿನೆಸ್ ಹಾಗೂ ಕ್ರೇಜ್ ವಿಷಯದಲ್ಲಿ ಯಶ್ ಟಾಕ್ಸಿಕ್ ಭಾರತೀಯ ಚಿತ್ರರಂಗದ ಎಲ್ಲಾ ದಾಖಲೆ ಮುರಿದಿದ್ದು, ಕನ್ನಡ ಚಿತ್ರರಂಗವನ್ನು ಜಾಗತಿಕ ಮಟ್ಟದಲ್ಲಿ ಪ್ರತಿನಿಧಿಸಿದೆ.

ವ್ಯವಹಾರಿಕ ದೃಷ್ಟಿಯಿಂದ ಟಾಕ್ಸಿಕ್ ಹಿಂದಿನ ಎಲ್ಲಾ ದಾಖಲೆ ಮುರಿದಿದ್ದು, ತೆಲುಗು ನೆಲದಲ್ಲಿ 120 ಕೋಟಿ ರೂಪಾಯಿ ಡೀಲ್ ಆಗಿದೆ.

ತಮಿಳುನಾಡಿನಲ್ಲಿ ವಿತರಣಾ ಹಕ್ಕುಗಳು 63 ಕೋಟಿಗೆ ಮಾರಾಟವಾಗಿವೆ. ಹಿಂದಿ ಅವತರಣಿಕೆಯಿಂದ 200 ಕೋಟಿಗೂ ಹೆಚ್ಚು ಹಣ ಬಂದಿದೆ ಅನ್ನೋ ಮಾಹಿತಿ‌ ಇದೆ. ಸಿನಿಮಾ ಬಿಡುಗಡೆಗೂ ಮೊದಲೇ 500 ಕೋಟಿ ಪ್ರೀ ರಿಲೀಸ್ ಬ್ಯುಸಿನೆಸ್ ಮಾಡಿದೆ ಎನ್ನಲಾಗಿದೆ. ಇದೀಗ ಮೊದಲ ದಿನದ ಗಳಿಕೆ ಮೂಲಕ 120 ರಿಂದ 130 ಕೋಟಿ ರೂಪಾಯಿಗೂ ಹೆಚ್ಚು ಹಣ ನಿರ್ಮಾಪಕರಿಗೆ ಹರಿದುಬರಲಿದೆ.

ಇದು ಒಬ್ಬ ಕನ್ನಡದ ಹುಡುಗನ ಗ್ಲೋಬಲ್ ರೆಕಾರ್ಡ್ ಆಗಿದೆ. ಯಶ್ ಅಭಿನಯದ ಟಾಕ್ಸಿಕ್, ಕನ್ನಡದ ಜೊತೆಗೆ ಇಂಗ್ಲೀಷ್‌ ನಲ್ಲಿ ಏಕ ಕಾಲದಲ್ಲಿ ನಿರ್ಮಾಣ ಆಗಿರೋ ಸಿನಿಮಾ. ಈ ಚಿತ್ರವು ಇನ್ನುಳಿದ ಭಾಷೆಗೆ ಡಬ್ಬಿಂಗ್ ಆಗಿದೆ. ಯಶ್ ಇಂಗ್ಲೀಷ್ ಭಾಷೆಯಲ್ಲೂ ಅಭಿನಯಿಸಿದ್ದಾರೆ. ಹೀಗಾಗಿ, ಈ ಮೂಲಕ ಹಾಲಿವುಡ್‌ಗೂ ಯಶ್ ಎಂಟ್ರಿ ಕೊಟ್ಟಂತಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಯಶ್ ಸಿನಿಮಾ ಪ್ರದರ್ಶನದ ನಡುವೆ ಚಿತ್ರಮಂದಿರಗಳಿಗೆ ಖಡಕ್ ಸೂಚನೆ ಕೊಟ್ಟ ಟಾಕ್ಸಿಕ್ ಟೀಂ
ಯಶ್ ಜೊತೆ ಕಿಯಾರಾ ಇಂಟಿಮೇಟ್ - ಟಾಕ್ಸಿಕ್ ಸಿನಿಮಾದ ಬೋಲ್ಡ್ ಸೀನ್ ವೈರಲ್