ಚಿಕ್ಕಣ್ಣ ಮದುವೆ ಕರೆಯೋಲೆ; 'ಮದುವೆ' ಆದ್ಮೇಲೆ ಟಾಕ್ಸಿಕ್ ಸಿನಿಮಾ ನೋಡ್ತೀನಿ' ಎಂದ ಕಾಮಿಡಿ ಕಿಂಗ್!

Published : Aug 25, 2026, 10:35 PM IST
Chikkanna Marriage

ಸಾರಾಂಶ

ಸ್ಯಾಂಡಲ್‌ವುಡ್ 'ಕಾಮಿಡಿ ಕಿಂಗ್' ನಟ ಚಿಕ್ಕಣ್ಣ ಮದುವೆ ಇದೇ ತಿಂಗಳು 29 ಹಾಗೂ 30ಕ್ಕೆ ನಡೆಯಲಿದೆ. ಈ ಸಂಬಂಧ ಸುದ್ದಿಗೋಷ್ಠಿ ಆಯೋಜಿಸಿದ್ದ ನಟ ಚಿಕ್ಕಣ್ಣ ಅವರು 'ಎಲ್ಲರೂ ನನ್ನ ಮದುವೆ ಬನ್ನಿ.‌ ಯಾರು ಬರೋಕೆ ಆಗಲ್ವೋ ಅವರು ಮನೆಯಿಂದಲೇ ನನ್ನನ್ನ ಹರಸಿ' ಎಂದು ಹೇಳಿದ್ದಾರೆ.

Actor Chikkanna Wedding-Chikkanna Marriage Date 29-30th August 2026-Chikkanna Press Conference-Chikkanna Wedding Invitation. ನಟ ಚಿಕ್ಕಣ್ಣ ಸುದ್ದಿಗೋಷ್ಠಿ- 'ಎಲ್ಲರೂ ನನ್ನ ಮದುವೆ ಬನ್ನಿ.‌ ಯಾರು ಬರೋಕೆ ಆಗಲ್ವೋ ಅವರು ಮನೆಯಿಂದಲೇ ನನ್ನನ್ನ ಹರಸಿ' ಎಂದ ನಟ!

ಸ್ಯಾಂಡಲ್‌ವುಡ್ 'ಕಾಮಿಡಿ ಕಿಂಗ್' ನಟ ಚಿಕ್ಕಣ್ಣ ಮದುವೆ ಇದೇ ತಿಂಗಳು 29 ಹಾಗೂ 30ಕ್ಕೆ ನಡೆಯಲಿದೆ. ಈ ಸಂಬಂಧ ಸುದ್ದಿಗೋಷ್ಠಿ ಆಯೋಜಿಸಿದ್ದ ನಟ ಚಿಕ್ಕಣ್ಣ ಅವರು 'ಎಲ್ಲರೂ ನನ್ನ ಮದುವೆ ಬನ್ನಿ.‌ ಯಾರು ಬರೋಕೆ ಆಗಲ್ವೋ ಅವರು ಮನೆಯಿಂದಲೇ ನನ್ನನ್ನ ಹರಸಿ' ಎಂದು ಹೇಳಿದ್ದಾರೆ. ತಮ್ಮ ಮದುವೆ ಸುದ್ದಿಗೋಷ್ಠಿಯನ್ನು ಕರೆದು ನಟ ಚಿಕ್ಕಣ್ಣ ಸಾಕಷ್ಟು ಸುದ್ದಿಗಳನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ನಟ ಚಿಕ್ಕಣ್ಣ ಅದೇನು ಹೇಳಿದ್ದಾರೆ ನೋಡಿ..

'ನನ್ನನ್ನ ನೀವು ಬೆಳೆಸಿದ್ದೀರಾ.. ಹಾಸ್ಯ ನಟನನ್ನ ಹೀರೋ ಮಾಡಿದ್ದೀರಾ.. ಎಲ್ಲರೂ ನನ್ನ ಮದುವೆ ಬನ್ನಿ.‌ ಯಾರು ಬರೋಕೆ ಆಗಲ್ವೋ ಅವರು ಮನೆಯಿಂದಲೇ ನನ್ನನ್ನ ಹರಸಿ.. ಇದೇ 29 ಮತ್ತು 30 ನೇ ತಾರೀಖು ಮದುವೆ ಆಗುತ್ತಿದ್ದೇನೆ.. ನನ್ನದು ಲವ್ ಅಲ್ಲ ಅರೇಂಜ್ ಮ್ಯಾರೇಜ್.. ಮನೆಯವರು ನೋಡೋಕೆ ಶುರು ಮಾಡಿದ ಮೇಲೆ ಲವ್ ಆಯ್ತು.. ನಮ್ಮದು ಅರೇಂಜ್ ಕಮ್ ಲವ್ ಮ್ಯಾರೇಜ್' ಎಂದಿದ್ದಾರೆ ನಟ ಚಿಕ್ಕಣ್ಣ.

'ಪಾವನ ಬ್ಯುಸಿನೆಸ್ ಮಾಡ್ತಾರೆ.. ಹಾಗೇ, ನನ್ನ ಹೆಂಡತಿ ಸಿನಿಮಾ ಪ್ರೇಮಿ.. ನನ್ನ ಪ್ರೊಪೆಶನ್‌ ಅರ್ಥ ಮಾಡಿಕೊಳ್ಳುವಂಥ ಹುಡುಗಿ.. ನನಗೆ ಪಾವನಾ ಸಿಕ್ಕಿದ್ದು ನನ್ನ ಅದೃಷ್ಟ, ನಾನು ಲಕ್ಕಿ' ಎಂದಿದ್ದಾರೆ ನಟ ಚಿಕ್ಕಣ್ಣ.

ನಾನು ದರ್ಶನ್ ಸರ್ ಪ್ರಕರಣದಲ್ಲಿ ವಿಟ್ನೆಸ್ ಆಗಿರೋದ್ರಿಂದ ಅವರನ್ನ ನನ್ನ ಮದುವೆಗೆ ಕರೆಯೋಕೆ ಆಗಲ್ಲ.. ನಾನು ಡೆವಿಲ್ ಸಿನಿಮಾವನ್ನ ಪಾವನಾ ಜೊತೆಗೇ ನೋಡಿದ್ದೇನೆ' ಎಂದು ನಟ ಚಿಕ್ಕಣ್ಣ ಅವರು ತಮ್ಮ ಹಳೆಯ ನೆನಪು ಹಂಚಿಕೊಂಡು ನಟ ದರ್ಶನ್ ತೂಗುದೀಪ ಅವರನ್ನು ನೆನಪಿಸಿಕೊಂಡಿದ್ದಾರೆ.

ಇನ್ನು, ಯಶ್ ಹಾಗೂ ಟಾಕ್ಸಿಕ್ ಸಿನಿಮಾ ಬಗ್ಗೆಯೂ ನಟ ಚಿಕ್ಕಣ್ಣ ಮಾತನ್ನಾಡಿದ್ದಾರೆ. 'ಯಶ್ ಅವರನ್ನು ನಾನು 'ಬಯ್ಯ' ಅಂತ ಕರೆಯೋದು..

ಅವರ ಟಾಕ್ಸಿಕ್ ಸಿನಿಮಾವನ್ನ ನಾನು ಮದುವೆ ಆದ ಮೇಲೆ ಹೋಗಿ ನೋಡುತ್ತೇನೆ' ಎಂದಿದ್ದಾರೆ ಕನ್ನಡದ ಹಾಸ್ಯ ನಟ ಚಿಕ್ಕಣ್ಣ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Yash Toxic Exclusive: 'ಗಾಂಧಿ‌ನಗರದಲ್ಲಿ ಯಶ್ ಹೊಸ ದಾಖಲೆ.. ಈ ರೆಕಾರ್ಡ್ ಮಾಡಿದ ಏಕೈಕ ನಟ ರಾಕಿಂಗ್ ಸ್ಟಾರ್!
ಊರ್ವಶಿ ಚಿತ್ರಮಂದಿರ ನೆಲಸಮ ಪ್ರಕ್ರಿಯೆ ಸದ್ಯಕ್ಕಿಲ್ಲ; ಹೈಕೋರ್ಟ್‌ನಿಂದ ತಾತ್ಕಾಲಿಕ ತಡೆಯಾಜ್ಞೆ!