ಕ್ಯಾನ್ಸರ್‌ನಿಂದ ಬಳಲುತ್ತಿರುವ ನಟ ಹರೀಶ್ ರೈ. ಜನರ ಸಹಾಯಕ್ಕೆ ಎಂದಯ ಋಣಿ ಎಂದ ನಟ....
ಕನ್ನಡ ಚಿತ್ರರಂಗದಲ್ಲಿ ಖಡಕ್ ವಿಲನ್ ಆಗಿ ಮಿಂಚುತ್ತಿರುವ ನಟ ಹರೀಶ್ ರೈ ಹಲವು ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಚಿಕಿತ್ಸೆಗೆ ಸಹಾಯ ಬೇಕು ಎಂದು ಈ ಹಿಂದೆ ಮನವಿ ಮಾಡಿದ್ದರು. ಇದಕ್ಕೆ ನಟ-ನಟಿಯರು, ನಿರ್ಮಾಪಕರು, ನಿರ್ದೇಶಕರು ಮತ್ತು ಅಭಿಮಾನಿಗಳು ಸಹಾಯ ಮಾಡಿದ್ದರು. ಈಗ ಚೇತರಿಸಿಕೊಳ್ಳುತ್ತಿರುವ ಹರೀಶ್ ರೈ ತಮ್ಮ ಪತ್ನಿ ಮಾಡಿರುವ ತ್ಯಾಗ ನೆನಪಿಸಿಕೊಂಡು ಭಾವುಕರಾಗಿದ್ದಾರೆ.
'ನನ್ನ ಪತ್ನಿ ಜೀವನದಲ್ಲಿ ತುಂಬಾ ತ್ಯಾಗ ಮಾಡಿದ್ದಾಳೆ. ಎಷ್ಟು ಸಲ ಚಿನ್ನದ ಒಡವೆ ಅಡ ಇಟ್ಟಿದ್ದೀವಿ ಅನ್ನೋದು ಲೆಕ್ಕವಿಲ್ಲ. ಕಲಾವಿದರ ಮನೆಯಲ್ಲಿ ನಡೆಯುವ ಸತ್ಯದ ಘಟನೆ ಇದು. ಏನೇ ಸಮಸ್ಯೆ ಎದುರಾದರೂ ಮೊದಲು ಪತ್ನಿ ಕುತ್ತಿಗೆಯಲ್ಲಿರುವುದು ಕೈಗೆ ಬರುತ್ತದೆ. ನೆನಪಿರಲಿ ಪ್ರೇಮ್ ಕೂಡ ವಿಡಿಯೋ ಮಾಡಿ ನನ್ನ ಬಗ್ಗೆ ವಿಡಿಯೋ ಹಾಕಿದ್ದಾರೆ. ನನಗೆ ಫೋನ್ ಮಾಡಿದ್ದರು ನನ್ನ ಪತ್ನಿ ಮಾತನಾಡಿದ್ದಾರೆ. ಪ್ರೇಮ್ ಪತ್ನಿ ಕೂಡ ಚಿನ್ನ ಅಡವಿಟ್ಟು ಸಪೋರ್ಟ್ ಮಾಡಿದ್ದರು. ಅದನ್ನು ಅವಳಿಗೆ ಹೇಳುವುದು ನಾವು ಕೂಡ ಒಂದು ದಿನ ಬೆಳೆಯುತ್ತೀವಿ ಅಂತ. ಕಷ್ಟ ಅಂತ ಬಂದ್ರೆ ಹೆಣ್ಣು ಮಕ್ಕಳು ಇರಲಿ, ತೆಗೆದುಕೊಳ್ಳಿ ಈ ಒಡವೆ ಮತ್ತೆ ತೆಗೆದುಕೊಂಡರೆ ನಡೆಯುತ್ತದೆ ಎನ್ನುತ್ತಾರೆ. ಆದರೆ ಅವರ ಕುತ್ತಿಗೆಯಲ್ಲಿ ತಾಳಿಗೆ ನಾವು ಕೈ ಹಾಕುವುದು ಕಷ್ಟ. ನಾವು ತಾಳಿ ಕೇಳುವುದಿಲ್ಲ ಆದರೆ ಅವರೇ ಇಲ್ಲ ಇಲ್ಲ ತೆಗೆದುಕೊಳ್ಳಿ. ಮಾಡಿ ಮುಂದಿನ ಸಿನಿಮಾ ಬರುತ್ತೆ. ಆಗ ಮಾಡಿಸಿಕೊಂಡರೆ ಆಯ್ತು ಎನ್ನುತ್ತಾಳೆ. ಅದರಲ್ಲಿ ಬರುವ ಹಣ ಮಕ್ಕಳ ಸ್ಕೂಲ್ ಮತ್ತೊಂದು ಚರ್ಚೆ ಆಗುತ್ತದೆ. ನನ್ನ ಪತ್ನಿ ತುಂಬಾ ತ್ಯಾಗ ಮಾಡಿದ್ದಾಳೆ. ಧರ್ಮ ಅನ್ನೋದನ್ನು ಎಂದೂ ಮರೆಯಲು ಆಗಲ್ಲ' ಎಂದು ಹರೀಶ್ ಬಿ ಗಣಪತಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಕೆಜಿಎಫ್-2 ನಟ ಹರೀಶ್ ರೈಗೆ ಕ್ಯಾನ್ಸರ್; ಸಹಾಯಕ್ಕೆ ಮನವಿ
'ಜೀವನದಲ್ಲಿ ಇಷ್ಟು ಚೇತರಿಸಿಕೊಂಡು ಖುಷಿಯಾಗಿರುವೆ ಅಂದ್ರೆ ಅದಕ್ಕೆ ಜನರು ಕಾರಣ. ಸೋಷಿಯಲ್ ಮೀಡಿಯಾದಲ್ಲಿ ಎಲ್ಲಾ ಕಡೆ ನನ್ನ ಬಗ್ಗೆ ಹಾಕುತ್ತಿದ್ದಾರೆ. ಜನರಿಗೆ ನನ್ನ ಬಗ್ಗೆ ತಿಳಿಸುತ್ತಿದ್ದಾರೆ. ಜನರಿಗೆ ನಾನು ಹೇಳುವುದು ಇಷ್ಟೆ. ದಯವಿಟ್ಟು ಕಣ್ಣೀರು ಹಾಕಿ ಫೋನ್ ಮಾಡಬೇಡಿ ಈಗ ನಾನು ಚೇತರಿಸಿಕೊಳ್ಳುತ್ತಿರುವೆ. ನನಗೆ ತೋರಿಸುತ್ತಿರುವ ಪ್ರೀತಿಯಿಂದ ಖುಷಿಯಾಗಿದೆ ಹಾಗೂ ಧೈರ್ಯ ಬಂದಿದೆ. ನನ್ನ ಫ್ಯಾಮಿಲಿ ನಗು ನಗುತ್ತಾ ಇರುವುದಕ್ಕೆ ಕಾರಣ ಜನರು, ನಟರು, ನಿರ್ಮಾಪಕರು ಹಾಗೂ ನಿರ್ಮಾಪಕರು' ಎಂದು ಹರೀಶ್ ರೈ ಹೇಳಿದ್ದಾರೆ.