ಬಣ್ಣದ ಪ್ರಪಂಚಕ್ಕೆ ಶುಭಾ ಪೂಂಜಾ ಕಾಲಿಟ್ಟಾಗ ಹೇಗಿತ್ತು? ಸುಮ್ಮನೆ ಕಾಲ್ ಮಾಡುವ ಜನರೂ ಇದ್ದಾರಾ?
ಮೊಗ್ಗಿನ ಮನಸ್ಸು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಶುಭಾ ಪೂಂಜಾ ಆಗ ಇದ್ದ unprofessional ಹಾಗೂ Professional ಕೆಲಸದ ಲೈಫ್ ಮತ್ತು ಈಗ ಆಗಿರುವ ಬದಲಾವಣೆಗಳ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ ಹೆಣ್ಣು ಮಕ್ಕಳಾಗಿ ಯಾವುದಕ್ಕೂ ಕೇರ್ ಮಾಡದೇ ಕೆಲಸ ಮಾಡುವುದು ದೊಡ್ಡ ಸವಾಲ್ ಎಂದಿದ್ದಾರೆ.
'ವೃತ್ತಿ ಜೀವನದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದೀನಿ. ಪ್ರೋಫೆಷನಲ್ ಆಗಿ ಫೋನ್ ಮಾಡುವವರು ಸ್ವಲ್ಪ ಜನ ಇರುತ್ತಾರೆ Unprofessional ಆಗಿ ಫೋನ್ ಮಾಡುವವರೂ ಇರುತ್ತಾರೆ. ಕೆಲವರು ಸಿನಿಮಾ ಕ್ಷೇತ್ರದಲ್ಲಿ ಇರುವುದಿಲ್ಲ ಸಿನಿಮಾ ಮಾಡುವ ಪ್ಲ್ಯಾನ್ ಕೂಡ ಇರುವುದಿಲ್ಲ ಆದರೂ ಅವರಿಗೆ ನಮ್ಮ ಜೊತೆ ಸಂಪರ್ಕ ಇರಬೇಕು. ಈ ರೀತಿ ವಿಚಿತ್ರ ವಿಚಿತ್ರ ಜನರು ಇರುತ್ತಾರೆ. ನಾನು ಸಿನಿಮಾ ರಂಗಕ್ಕೆ ಕಾಲಿಟ್ಟಾಗ ಕ್ಯಾರವಾನ್ ಇರುತ್ತಿರಲಿಲ್ಲ, ಬ್ಲ್ಯಾಕ್ ಬಟ್ಟೆ ಹಾಕಿಕೊಂಡು ಶೂಟಿಂಗ್ ಬಟ್ಟೆ ಬದಲಾಯಿಸಿಕೊಂಡಿದ್ದೀನಿ ಹಾಗೂ ಮತ್ತೊಬ್ಬರ ಮನೆಯಲ್ಲಿ ಸಹಾಯ ಕೇಳಿ ಬದಲಾಯಿಸಿಕೊಂಡಿದ್ದೀನಿ. ಅಷ್ಟೇ ಯಾಕೆ ರಸ್ತೆ ಬದಿಯಲ್ಲಿ ಕುಳಿತು ಶೂಟಿಂಗ್ ಮಾಡಿದ್ದೀವಿ ಆಗ ಈ ರೀತಿ ಪ್ರೋಫೆಷನಲ್ ಸಿಸ್ಟಮ್ ಇರಲಿಲ್ಲ' ಎಂದು ಶುಭಾ ಪೂಂಜಾ ಬಿ ಗಣಪತಿ ಅವರ ಸಂದರ್ಶನದಲ್ಲಿ ಮಾತನಾಡಿದ್ದಾರೆ.
undefined
ನೈಟ್ ಶೂಟಿಂಗ್ ಇದ್ರೂ ಕೇರ್ ಮಾಡಿಲ್ಲ ಹೋಗು ಅಂತಾರೆ: ಪತಿ ಬಗ್ಗೆ ಶುಭಾ ಪೂಂಜಾ
'ಈಗ ಈವೆಂಟ್ ಅಂತ ಹೋಗಿ ದುಡಿಮೆ ಮಾಡುತ್ತಿದ್ದೀವಿ ಆದರೆ ಆಗ ಸಿನಿಮಾ ಮಾಡಿ ಮೂರು ತಿಂಗಳು ಆದ್ಮೇಲೆ ಹಣ ಬರುತ್ತಿತ್ತು... ಇಲ್ಲ ಅವರು ಕಷ್ಟ ಅಂತ ಹೇಳಿದರೆ ನಾವು ಸುಮ್ಮನೆ ಆಗುತ್ತಿದ್ವಿ. ನಾನು ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದ ಆದರೆ ಹಣ ಪಡೆದಿಲ್ಲ ಈಗ ಯೋಚನೆ ಮಾಡುತ್ತಿರುವೆ ಯಾಕೆ ಆಗ ಹಣ ತೆಗೆದುಕೊಂಡಿರಲಿಲ್ಲ. ಕೆಲವೊಮ್ಮೆ ತುಂಬಾ ಬೇಸರ ಆಗುತ್ತೆ ಏಕೆಂದರೆ ತುಂಬಾ ಶ್ರಮ ಪಟ್ಟು ಕೆಲಸ ಮಾಡಿದ್ದೀನಿ. ಪೀರಿಯಡ್ಸ್ ಆದರೂ ಕೇರ್ ಮಾಡದೇ ಸಿನಿಮಾ ಮಾಡ್ತೀವಿ ಆದರೆ ಸಂಬಳ ಬಾರದೇ ಇದ್ದಾಗ ಬೇಸರ ಆಗುತ್ತೆ. ಕೆಲವು ವರ್ಷಗಳ ಹಿಂದೆ ಕೆರಿಯರ್ ಸ್ಪ್ಯಾನ್ ಬಗ್ಗೆ ಹೇಳುತ್ತಿದ್ವಿ ಆದರೆ ಈಗ ವರ್ಷ ಕಳೆಯುತ್ತಿದ್ದಂತೆ ನಮಗೆ ಎದುರಾಗುವ ಸವಾಲುಗಳನ್ನು ನಗುತ್ತ ಸ್ವೀಕರಿಸುತ್ತೀವಿ.' ಎಂದು ಶುಭಾ ಪೂಂಜಾ ಹೇಳಿದ್ದಾರೆ.