So Moody, So Beautiful: ರಾಜ್ ಬಿ ಶೆಟ್ಟಿಗೆ ರಕ್ಷಿತ್ ಶೆಟ್ಟಿ ಹೀಗೆ ಅನ್ನೋದಾ..!

Published : Nov 23, 2023, 04:46 AM IST
So Moody, So Beautiful: ರಾಜ್ ಬಿ ಶೆಟ್ಟಿಗೆ ರಕ್ಷಿತ್ ಶೆಟ್ಟಿ ಹೀಗೆ ಅನ್ನೋದಾ..!

ಸಾರಾಂಶ

ರಕ್ಷಿತ್ ಶೆಟ್ಟಿ ಅವರು ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಇದೀಗ ಟ್ರೆಂಡ್‌ನಲ್ಲಿರುವ ಸಾಲನ್ನ ಆಪ್ತರೊಬ್ಬರಿಗೆ ಹೇಳಿದ್ದಾರೆ. ಸೋ ಮೂಡಿ, ಸೋ ಬ್ಯೂಟಿಫುಲ್ ಎಂದು ಸೋಷಿಯಲ್ ಮೀಡಿಯಾದಲ್ಲಿ ರಕ್ಷಿತ್ ಬರೆದುಕೊಂಡಿರುವ ಪೋಸ್ಟ್ ಸಖತ್ ವೈರಲ್ ಆಗಿದೆ.  

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯಿಸಿದ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಸೈಡ್ ಬಿ ನವೆಂಬರ್​ 17ರಂದು ರಿಲೀಸ್ ಆಗಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಪ್ತ ಸಾಗರದಾಚೆ ಸೈಡ್ ಎ ಸಿನಿಮಾ ಕೂಡ ಸೂಪರ್ ಹಿಟ್ ಆಗಿತ್ತು. ಇದೀಗ ಸೈಡ್ ಬಿ ಕೂಡ ಪ್ರೇಕ್ಷಕರ ನಿರೀಕ್ಷೆ ಮುಟ್ಟಿದ್ದು, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪರಭಾಷೆಗಳಲ್ಲೂ ಕನ್ನಡ ಸಿನಿಮಾಗಳಿಗೆ ಡಿಮ್ಯಾಂಡ್​ ಹೆಚ್ಚಾಗಿದೆ. ಈ ನಡುವೆ ರಕ್ಷಿತ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡ ಆ ಒಂದು ಲೈನ್ ಸಖತ್ ವೈರಲ್ ಆಗಿದೆ.

ಹೌದು! ರಕ್ಷಿತ್ ಶೆಟ್ಟಿ ಅವರು ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಇದೀಗ ಟ್ರೆಂಡ್‌ನಲ್ಲಿರುವ ಸಾಲನ್ನ ಆಪ್ತರೊಬ್ಬರಿಗೆ ಹೇಳಿದ್ದಾರೆ. ಸೋ ಮೂಡಿ, ಸೋ ಬ್ಯೂಟಿಫುಲ್ ಎಂದು ಸೋಷಿಯಲ್ ಮೀಡಿಯಾದಲ್ಲಿ ರಕ್ಷಿತ್ ಬರೆದುಕೊಂಡಿರುವ ಪೋಸ್ಟ್ ಸಖತ್ ವೈರಲ್ ಆಗಿದೆ. ಸೋ ಮೂಡಿ, ಸೋ ಬ್ಯೂಟಿಫುಲ್ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದು ಬೇರೇ ಯಾರಿಗೋ ಅಲ್ಲ. ಗೆಳೆಯ ರಾಜ್ ಬಿ ಶೆಟ್ಟಿಗೆ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದ ಟ್ರೈಲರ್ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ರಾಜ್, ಸಿರಿ ನಟನೆ ಬಲು ಇಷ್ಟಪಟ್ಟಿದ್ದಾರೆ.

ಈ ಕಾರಣಕ್ಕೆ ನಾನು ರಾಜ್ ಬಿ ಶೆಟ್ಟಿ ಜೊತೆ 'ಸ್ವಾತಿ ಮುತ್ತಿನ ಮಳೆ ಹನಿಯೇ' ಚಿತ್ರದಲ್ಲಿ ನಟಿಸಲಿಲ್ಲ: ರಮ್ಯಾ ಹೇಳಿದ್ದೇನು?

 'ಸ್ವಾತಿ ಮುತ್ತಿನ ಮಳೆ ಹನಿಯೇ' ಟ್ರೈಲರ್ ಶೇರ್ ಮಾಡಿಕೊಂಡು ಸೋ ಮೂಡಿ, ಸೋ ಬ್ಯೂಟಿಫುಲ್ ರಾಜ್ ಬಿ ಶೆಟ್ಟಿ ಯೂ ಆರ್ ದಿ ಮ್ಯಾನ್ ಎಂದು ರಕ್ಷಿತ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ರಮ್ಯಾ ನಿರ್ಮಾಣದ ಚೊಚ್ಚಲ ಸಿನಿಮಾ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಇದೇ ನವೆಂಬರ್ 24ಕ್ಕೆ ರಿಲೀಸ್ ಆಗುತ್ತಿದೆ. ಈ ಚಿತ್ರದ ಹಾಡು, ಟ್ರೈಲರ್ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ. ಚಿತ್ರಮಂದಿರದಲ್ಲಿ ರಾಜ್ ಬಿ ಶೆಟ್ಟಿ, ಸಿರಿ ಜೋಡಿಯ ಈ ಚಿತ್ರ ಅದೆಷ್ಟರ ಮಟ್ಟಿಗೆ ಕಮಾಲ್ ಮಾಡುತ್ತೆ ಕಾಯಬೇಕಿದೆ. 


ರಮ್ಯಾ ಮಾಡ್ಬೇಕಿದ್ದ ಈ ಚಿತ್ರದ ಪ್ರೇರಣಾ ಪಾತ್ರವನ್ನ ಸಿರಿ ರವಿಕುಮಾರ್ ಮಾಡಿದ್ದಾರೆ. ರಾಜ್ ಬಿ ಶೆಟ್ಟಿ ಮತ್ತು ಸಿರಿ ರವಿಕುಮಾರ್ ಅವರ ಜೋಡಿ ಇಲ್ಲಿ ಅದ್ಭುತ ಕಥೆಯೊಂದನ್ನ ಕಟ್ಟಿಕೊಟ್ಟಿದೆ. ಟ್ರೈಲರ್‌ನಲ್ಲಿ ಬಹುತೇಕ ಈ ಪಾತ್ರಗಳ ಪರಿಚಯ ಮತ್ತು ಕಥೆಯ ಸಂಕ್ಷಿಪ್ತ ಚಿತ್ರಣವೂ ಸಿಕ್ಕಿದೆ. ಇಂತಹ ಈ ಚಿತ್ರದ ಟಾಕ್ ಈಗಾಗಲೇ ಶುರು ಆಗಿದೆ. ಗೆಳೆಯನ ಸಿನಿಮಾ ಅನ್ನೋದಕ್ಕಿಂತಲೂ ಒಂದು ಒಳ್ಳೆ ಸಿನಿಮಾ ಅನ್ನುವ ಕಾರಣಕ್ಕೋ ಏನೋ, ಸಿನಿಮಾ ಲವರ್ ರಕ್ಷಿತ್ ಶೆಟ್ಟಿ ಇದೀಗ ಸ್ವಾತಿ ಮುತ್ತಿನ ಮಲೆ ಹನಿಯೇ ಚಿತ್ರದ ಟ್ರೈಲರ್ ಅನ್ನ ನೋಡಿ ಮನಸೋತಿದ್ದಾರೆ. 

Ragini Dwivedi: ಸ್ಯಾಂಡಲ್‌ವುಡ್‌ನ ತುಪ್ಪದ ಬೆಡಗಿ ರಾಗಿಣಿ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿದ್ಯಾಕೆ?

ಸ್ವತಃ ರಾಜ್ ಬಿ ಶೆಟ್ಟಿ ಕಥೆ ರಚಿಸಿ ನಿರ್ದೇಶನ ಮಾಡಿ ನಟಿಸಿರೋ ಈ ಚಿತ್ರದ ಮೊದಲ ಟ್ರೈಲರ್ ಹೆಚ್ಚು ಗಮನ ಸೆಳೆಯುತ್ತಿದೆ. ವಿಶೇಷವಾಗಿ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಅವರ ನಿರ್ಮಾಣ ಸಂಸ್ಥೆ ಆ್ಯಪಲ್ ಬಾಕ್ಸ್ ಮೂಲಕವೇ ಈ ಸಿನಿಮಾ ನಿರ್ಮಾಣಗೊಂಡಿದೆ. ಇದು ಈ ಸಂಸ್ಥೆಯ ಮೊದಲ ಕಾಣಿಕೆ ಆಗಿದೆ. ಇದೇ ತಿಂಗಳ ನವೆಂಬರ್-24 ರಂದು ಎಲ್ಲೆಡೆ 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾ ರಿಲೀಸ್ ಆಗುತ್ತಿದೆ. ಈಗಾಗಲೇ ಚಿತ್ರದ ಪ್ರಚಾರವೂ ಶುರು ಅಗಿದೆ. ಜೊತೆಗೆ ರಕ್ಷಿತ್ ರಿಯಾಕ್ಷನ್ ಕೂಡ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕನ್ನಡದಲ್ಲಿಯೇ ಮಾತನಾಡಿದ ನಟ ವಿಜಯ ದೇವರಕೊಂಡ: ಕೊಡವರ ಮನಗೆದ್ದ Rashmika Mandanna ಪತಿ
Sankeerthana Movie: ಈ ವಯಸ್ಸಿನಲ್ಲೂ ಸಿನಿಮಾ ಮಾಡಿ ಯಶಸ್ವಿಯಾದ ಸೀತಾರಾಮ ಧಾರಾವಾಹಿ ಅಜ್ಜಿ