ಸದಾ ಹೊನ್ನವಳ್ಳಿ ಕೃಷ್ಣ ಬೇಕೆಂದು ಹಠ ಮಾಡುತ್ತಿದ್ದ ಪುನೀತ್ ರಾಜ್‌ಕುಮಾರ್. ದಶಕಗಳ ನಂತರ ಸೀಕ್ರೆಟ್ ಬಿಚ್ಚಿಟ್ಟ ಕೃಷ್ಣ.......
90ರ ದಶಕದಿಂದ ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡಿಗೆ ನೀಡಿರುವ ಹೊನ್ನವಳ್ಳಿ ಕೃಷ್ಣ ಮೊದಲ ಸಲ ಡಾ. ಪುನೀತ್ ರಾಜ್‌ಕುಮಾರ್ ವೀಕ್‌ನೆಟ್ ಏನೆಂದು ರಿವೀಲ್ ಮಾಡಿದ್ದಾರೆ.
'ಪ್ರೇಮದ ಕಾಣಿಕೆ ಸಿನಿಮಾ ಸಮಯದಲ್ಲಿ ಅಪ್ಪು ನನಗೆ ಪರಿಚಯವಾಗಿದ್ದು. ಅಪ್ಪು ಯೋಗ ಮತ್ತು ಸ್ಟಂಟ್‌ಗಳನ್ನು ಮಾಡುತ್ತಿದ್ದರು, ಪ್ರತಿಯೊಂದನ್ನು ಚೆನ್ನಾಗಿ ಕಲಿತು ಮಾಡುತ್ತಿದ್ದರು. ಗಾಂಧಿಜೀ ನಂತರ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರುವುದು ಪುನೀತ್ ರಾಜ್‌ಕುಮಾರ್ ಮಾತ್ರ. ಈ ಕಾಲದ ಕಲಾವಿದರು ಬರುವ ಮುನ್ನವೇ ಕೇಳುತ್ತಾರೆ ಎಷ್ಟು ಗಂಟೆಗೆ ಮುಗಿಯುತ್ತದೆ ಎಂದು ಹೀಗಿರುವಾಗ ಕಲಿಯುವುದಕ್ಕೆ ಎಲ್ಲಿ ಜಾಗವಿದೆ?' ಎಂದು ಖಾಸಗಿ ಯುಟ್ಯೂಬ್ ಸಂದರ್ಶನದಲ್ಲಿ ಹೊನ್ನವಳ್ಳಿ ಕೃಷ್ಣ ಮಾತನಾಡಿದ್ದಾರೆ.
ತಂದೆ ಹುಷಾರು ತಪ್ಪಿದಾಗ ಜವಾಬ್ದಾರಿ ಬಂತು, ಮನೆಗೆ ಹಣ ಎಲ್ಲಿಂದ ಬರುತ್ತೆ ಗೊತ್ತಾಗಿತ್ತು: ಯುವ ರಾಜ್‌ಕುಮಾರ್
'ಬೆಟ್ಟದ ಹೂ ಸಿನಿಮಾ ಚಿತ್ರೀಕರಣದ ವೇಳೆ ನಾನು ಇಲ್ಲ ಅಂದ್ರೆ ಅಪ್ಪು ಚಿತ್ರೀಕರಣ ಮಾಡುತ್ತಿರಲಿಲ್ಲ. ಆಗ ನಾನು ಮೈಸೂರಿನಲ್ಲಿ ಇದ್ದೆ..ಇದ್ದಕ್ಕಿದ್ದಂತೆ ಚಿತ್ರೀಕರಣ ಇದ್ದ ಕಾರಣ ಕಾರು ಕಳುಹಿಸಿದ್ದರು. ಕೆಂಮಣ್ಣು ಗುಂಡಿಯಲ್ಲಿ ಚಿತ್ರೀಕರಣ ನಡೆಯುತ್ತಿತ್ತು, ನಾನಿದ್ದರೆ ಅಪ್ಪುಗೆ ಆನೆ ಬಲ ಇದ್ದಂತೆ. ಅಪ್ಪು ಹೆದರಿಕೊಳ್ಳಬೇಡ ಹಾಗೆ ಮಾಡು ಹೀಗೆ ಮಾಡು ಎಂದು ತೋರಿಸುತ್ತಿದ್ದೆ ಅದನ್ನು ಚೆನ್ನಾಗಿ ಮಾಡುತ್ತಿದ್ದರು. ಯಾವ ಕಾರಣಕ್ಕೆ ನನ್ನ ಮಾತುಗಳನ್ನು ಕೇಳುತ್ತಿದ್ದರು ಗೊತ್ತಿಲ್ಲ ಆದರೆ ತಂದೆ ತಾಯಿ ಹೊರತು ಪಡಿಸಿದರೆ ನಾನೇ ಇಷ್ಟ ಆಗುತ್ತಿದೆ. ಅಪ್ಪು ವೀಕ್‌ನೆಸ್ ಏನೆಂದು ನನಗೆ ಚೆನ್ನಾಗಿ ಗೊತ್ತಿತ್ತು. ಗಾಂಧಿನಗರದಲ್ಲಿ ಇರುವ ಪೂರ್ಣಿಮಾ ನಾವೆಲ್ಟಿ ಸ್ಟೋರ್‌ನಲ್ಲಿ ಸಿಗುವ ಗೊಂಬೆಗಳು ತುಂಬಾ ಇಷ್ಟ, ಅಲ್ಲಿಂದ ಗೊಂಬೆ ತರಸಿ ಒಂದು ಕಡೆ ಇಡುವೆ ಅದನ್ನು ನೋಡಿಕೊಂಡೇ ಹೇಳಿಕೊಟ್ಟಿದ್ದು ಮಾಡುತ್ತಿದ್ದ. ಆ ಸಮಯದಲ್ಲಿ ಎಷ್ಟು ಗೊಂಬೆ ತರೆಸಿರುವೆ ಲೆಕ್ಕವಿಲ್ಲ. ನಾನು ಹೇಳಿಕೊಟ್ಟಿದ್ದನ್ನು ನನಗಿಂತ ಚೆನ್ನಾಗಿ ಮಾಡುವನು' ಎಂದು ಕೃಷ್ಣ ಹೇಳಿದ್ದಾರೆ.