ಚಾಲೆಂಜಿಂಗ್‌ ಸ್ಟಾರ್‌ಗೆ ಇಂದು 43ನೇ ಹುಟ್ಟುಹಬ್ಬ!

Published : Feb 16, 2020, 10:28 AM ISTUpdated : Feb 16, 2020, 05:21 PM IST
ಚಾಲೆಂಜಿಂಗ್‌ ಸ್ಟಾರ್‌ಗೆ ಇಂದು 43ನೇ ಹುಟ್ಟುಹಬ್ಬ!

ಸಾರಾಂಶ

ನಟ ದರ್ಶನ್‌ ಅವ​ರಿಗೆ 44ನೇ ಹುಟ್ಟುಹಬ್ಬದ ಸಂಭ್ರಮ. ಫೆ.16ರಂದು ಬೆಳ​ಗ್ಗಿ​ನಿಂದಲೇ ಅಭಿ​ಮಾ​ನಿ​ಗಳು ಸಾವಿ​ರಾರು ಸಂಖ್ಯೆ​ಯಲ್ಲಿ ಬೆಂಗ​ಳೂ​ರಿ​ನ​ ಆರ್‌​ಆರ್‌ ನಗ​ರ​ದಲ್ಲಿ​ರುವ ದರ್ಶನ್‌ ಅವರ ನಿವಾ​ಸಕ್ಕೆ ಆಗ​ಮಿಸಿ ತಮ್ಮ ನೆಚ್ಚಿನ ನಟ​ನಿಗೆ ಶುಭ ಕೋರಿದ್ದಾರೆ.

ಅಭಿ​ಮಾ​ನಿ​ಗಳೇ ಸೇರಿ​ಕೊಂಡು ದರ್ಶನ್‌ ನಿವಾ​ಸದ ಸುತ್ತ​ಮುತ್ತ ಕಟೌ​ಟ್‌​ಗಳು, ಹೂವಿನ ಅಲಂಕಾರ ಸೇರಿ​ದಂತೆ ಹಲವು ರೀತಿ​ಯಲ್ಲಿ ಸಿಂಗಾರ ಮಾಡಿ​ದ್ದಾರೆ. ಈ ನಡುವೆ ದರ್ಶನ್‌ ಅವರ ಮನವಿ ಮೇರೆಗೆ ರಾಜ್ಯದ ಬೇರೆ ಬೇರೆ ಜಿಲ್ಲೆ​ಗ​ಳಿಂದ ಆಗ​ಮಿ​ಸುವ ಅಭಿ​ಮಾ​ನಿ​ಗಳು ಅಕ್ಕಿ, ಬೇಳೆ, ದವಸ, ಧಾನ್ಯ ಮುಂತಾದ ಆಹಾರ ಸಾಮ​ಗ್ರಿ​ಗ​ಳನ್ನು ನೀಡ​ಲಿದ್ದು, ಅಭಿ​ಮಾ​ನಿ​ಗಳು ನೀಡಿ​ದ್ದನ್ನು ದರ್ಶನ್‌ ಅವರೇ ಮುಂದೆ ನಿಂತು ರಾಜ್ಯದ ಬೇರೆ ಬೇರೆ ಭಾಗ​ಗ​ಳ​ಲ್ಲಿ​ರುವ ಅನಾ​ಥಾಶ್ರ​ಮ​ಗ​ಳಿಗೆ ರವಾ​ನಿ​ಸ​ಲಿ​ದ್ದಾರೆ.

ಡಿ-ಬಾಸ್‌ ಬರ್ತಡೇ: 'ರಾಬರ್ಟ್‌' ಟೀಸರ್‌ ಹವಾ ಶುರು!

ಈ ಬಾರಿ ಚಾಲೆಂಜಿಂಗ್‌ ಸ್ಟಾರ್‌ ಹುಟ್ಟುಹಬ್ಬಕ್ಕೆ ತರುಣ್‌ ಸುಧೀರ್‌ ನಿರ್ದೇ​ಶ​ನದ ‘ರಾಬ​ರ್ಟ್‌’ ಚಿತ್ರ​ದ ಟೀಸರ್‌ ಬಿಡು​ಗಡೆ ಮಾಡಿದ್ದಾರೆ. ಜತೆಗೆ ಒಂದಿಷ್ಟುಹೊಸ ಚಿತ್ರ​ಗಳು ಘೋಷಣೆ ಆಗುವ ಸಾಧ್ಯತೆ ಇದೆ. ಇನ್ನು, ಬಹು ನಿರೀ​ಕ್ಷೆಯ ‘ರಾಜವೀರ ಮದ​ಕರಿ ನಾಯ​ಕ’ ಚಿತ್ರ​ತಂಡ​ದಿಂದ ಪೋಸ್ಟರ್‌ ಬಿಡು​ಗಡೆ ಮಾಡುವ ಸಾಧ್ಯ​ತೆ​ಗಳು ಇವೆ. ಸದ್ಯಕ್ಕೆ ಕೇರ​ಳದ ಕಾಡಿ​ನಲ್ಲಿ ಈ ಚಿತ್ರದ ಶೂಟಿಂಗ್‌ ನಡೆ​ಯು​ತ್ತಿದ್ದು, ಚಿತ್ರೀ​ಕ​ರ​ಣವನ್ನು ನಿಲ್ಲಿಸಿ ಹುಟ್ಟುಹಬ್ಬ​ಕ್ಕಾ​ಗಿಯೇ ದರ್ಶನ್‌ ಬೆಂಗ​ಳೂ​ರಿಗೆ ಬರು​ತ್ತಿ​ದ್ದಾರೆ.

ನೀವು ದರ್ಶನ್‌ ಫ್ಯಾನಾಗಿದ್ರೆ ಈ ಫಿಲ್ಮ್‌ ಮಿಸ್‌ ಮಾಡ್ದೇ ನೋಡ್ಬೇಕು!

ಫೆಬ್ರವರಿ 16ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಕರ್ಲಿ ಹೇರ್, ಹಳದಿ ಡ್ರೆಸ್: ಸಂಗೀತಾ ಶೃಂಗೇರಿ ಹೊಸ ಅವತಾರ ನೋಡಿ ನೆಟ್ಟಿಗರು ಏನಂದ್ರು?
ಹಿಮವದ್ ಗೋಪಾಲಸ್ವಾಮಿ ದೇವರ ದರ್ಶನಕ್ಕೆ ಬಂದ ನಟ ಚಿಕ್ಕಣ್ಣ-ಪಾವನಾ: ಅಲ್ಲೇ ಸಿಕ್ತು ಸಿಹಿ ಸುದ್ದಿ!