ರಾಜ್‌ ಬಿ ಶೆಟ್ಟಿಗೆ ಎದುರಾದ 'ಗರುಡಗಮನ ವೃಷಭವಾಹನ'; ರಿಷಬ್‌ ಶೆಟ್ಟಿ ಪಾತ್ರವೇನು?

By Suvarna News  |  First Published Feb 15, 2020, 10:11 AM IST

ರಾಜ್ ಬಿ ಶೆಟ್ಟಿ ಸಿನಿಮಾ ಪ್ರೇಮಿಗಳಿಗೆ ಕಡೆಗೂ ಒಂದು ಸರ್ಪ್ರೈಸ್ ಕೊಟ್ಟಿದ್ದಾರೆ. ಯಾರಲ್ಲೂ ಹೇಳಿಕೊಳ್ಳದೆ ಗುಟ್ಟಾಗಿಯೇ ತಮ್ಮ ಎರಡನೇ ಸಿನಿಮಾ ಚಿತ್ರೀಕರಣ ಮುಗಿಸಿರುವ ಅವರು ಇದೀಗ ಚಂದದ ಫಸ್ಟ್ ಲುಕ್ ಕೂಡ ಬಿಡುಗಡೆ ಮಾಡಿದ್ದಾರೆ. 


ಅವರ ಹೊಸ ಸಿನಿಮಾದ ಹೆಸರು ಗರುಡಗಮನ ವೃಷಭವಾಹನ. ಈ ಸಿನಿಮಾದಲ್ಲಿ ಇಬ್ಬರು ನಾಯಕರು. ಒಬ್ಬರು ಸ್ವತಃ ರಾಜ್ ಬಿ ಶೆಟ್ಟಿ. ಇನ್ನೊಬ್ಬರು ರಿಷಬ್ ಶೆಟ್ಟಿ. ‘ಇಲ್ಲಿ ಎರಡು ಪಾತ್ರಗಳಿವೆ. ಒಂದು ಕ್ರೋಧದ ಪ್ರತಿರೂಪ. ಶಿವ ಇದ್ದಂತೆ.ಇನ್ನೊಂದು ನಿಯಂತ್ರಣದ ಪ್ರತಿರೂಪ. ವಿಷ್ಣು ಇದ್ದಂತೆ.

ಈ ಇಬ್ಬರು ಒಂದಾದರೆ ಯಾವ ಹಂತಕ್ಕೆ ಬೆಳೆಯಬಹುದು ಅನ್ನುವುದೇ ಈ ಸಿನಿಮಾದ ಕತೆ. ಮೊದಲು ಹರಿಹರ ಎಂದು ಹೆಸರಿಡುವ ಆಲೋಚನೆ ಇತ್ತು. ಆದರೆ ಇವರು ಹರಿ ಹರ ಅಲ್ಲ. ಹರಿ ಹರನ ಅಂಶಗಳಿರುವ ಪಾತ್ರಗಳು. ಹಾಗಾಗಿ ಹೊಸ ಹೆಸರು ಇಡಲಾಗಿದೆ. ಗರುಡಗಮನ ಹರಿ, ವೃಷಭವಾಹನ ಹರ. ಮಂಗಳೂರು ಹಿನ್ನೆಲೆಯಲ್ಲಿ ನಡೆಯುವ ಗ್ಯಾಂಗ್‌ಸ್ಟರ್ ಸಿನಿಮಾ ಇದು.

Tap to resize

Latest Videos

undefined

ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಡಲು ರೆಡಿಯಾಗಿದ್ದಾರೆ ರಾಜ್ ಬಿ ಶೆಟ್ಟಿ!

ಚಿತ್ರೀಕರಣ ಪೂರ್ತಿಯಾಗಿದೆ. ಜೂನ್‌ನಲ್ಲಿ ಸಿನಿಮಾ ಬಿಡುಗಡೆ ಮಾಡುವ ಸಾಧ್ಯತೆ ಇದೆ’ ಎನ್ನುತ್ತಾರೆ ನಿರ್ದೇಶಕ ರಾಜ್ ಬಿ ಶೆಟ್ಟಿ. ಒಂದು ಮೊಟ್ಟೆಯ ಕತೆ ಚಿತ್ರದ ತಾಂತ್ರಿತ ತಂಡ ಇಲ್ಲೂ ಇದೆ. ಅಲ್ಲದೇ ರಾಜ್ ಬಿ ಶೆಟ್ಟಿ ಅವರ ಲೈಟರ್ ಬುದ್ಧ ತಂಡ ನಿರ್ಮಾಣದ ಹೊಣೆ ಹೊತ್ತಿದೆ. ಅವರಿಗೆ ರವಿ ರೈ, ವಚನ್ ಶೆಟ್ಟಿ ಸಾಥ್ ನೀಡಿದ್ದಾರೆ.  
 

click me!