ಡಿ-ಬಾಸ್‌ ಬರ್ತಡೇ: 'ರಾಬರ್ಟ್‌' ಟೀಸರ್‌ ಹವಾ ಶುರು!

Published : Feb 16, 2020, 10:11 AM ISTUpdated : Feb 17, 2020, 11:29 AM IST
ಡಿ-ಬಾಸ್‌ ಬರ್ತಡೇ: 'ರಾಬರ್ಟ್‌' ಟೀಸರ್‌ ಹವಾ ಶುರು!

ಸಾರಾಂಶ

ಚಾಲೆಂಜಿಂಗ್ ಸ್ಟಾರ್‌ ದರ್ಶನ್‌ ಅಭಿನಯದ  'ರಾಬರ್ಟ್‌'  ಟೀಸರ್‌ ರಿಲೀಸ್‌ ಆಗಿದೆ. ಚಂದನವನದಲ್ಲಿ ಶುರುವಾಯ್ತು 'ಒಡೆಯ'ನ ಹವಾ!  

ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಚಿತ್ರ 'ರಾಬರ್ಟ್‌ ಟೀಸರ್‌ ದರ್ಶನ್‌ ಹುಟ್ಟುಹಬ್ಬದ ಪ್ರಯುಕ್ತ ರಿಲೀಸ್‌ ಆಗಿದೆ. 

'ತಾಳ್ಮೆಯಲ್ಲಿ ಶ್ರೀರಾಮ, ಮಾತು ಕೊಟ್ರೆ ದಶರಥರಾಮ, ಪ್ರೀತಿಯಿಂದ ಬಂದ್ರೆ ಜಾನಕಿ ರಾಮ, ತಿರುಗಿ ಬಿದ್ರೆ ರಾವಣ' ಡೈಲಾಗ್‌ನಿಂದ ಶುರುವಾಗುವ ಟೀಸರ್‌ ಡಿ-ಬಾಸ್‌ ಮೂರು ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಂಜಯ್, ಅಕ್ಬರ್‌ ಹಾಗೂ ರಾಬರ್ಟ್‌ ಪಾತ್ರಗಳ ಹೆಸರು ಎನ್ನಲಾಗಿದೆ. 

"

ನೀವು ದರ್ಶನ್‌ ಫ್ಯಾನಾಗಿದ್ರೆ ಈ ಫಿಲ್ಮ್‌ ಮಿಸ್‌ ಮಾಡ್ದೇ ನೋಡ್ಬೇಕು!

ಇನ್ನು ಚಿತ್ರದಲ್ಲಿ ನಾಯಕಿಯಾಗಿ ಆಶಾ ಭಟ್‌ , ವಿಲನ್‌ ಆಗಿ ಜಗಪತಿ ಬಾಬು ಕಾಣಿಸಿಕೊಂಡಿದ್ದಾರೆ. ಉಮಾಪತಿ ನಿರ್ಮಾಣಕ್ಕೆ ತರುಣ ಸುಧೀರ್‌ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಅರ್ಜುನ್‌ ಜನ್ಯ ಅವರ ಹಿನ್ನಲೆ ಸಂಗೀತ ಚಿತ್ರದ ಮತ್ತೊಂದು ಹೈಲೈಟ್‌ ಆಗಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಜೋಡಿಯಾದ ಈ ನಟಿಯರೆಲ್ಲಿದ್ದಾರೀಗ?

43 ಸಂಭ್ರಮದಲ್ಲಿರುವ ದರ್ಶನ್‌ ರಾತ್ರಿ 12 ಗಂಟೆಯಿಂದ ಅಭಿಮಾನಿಗಳ ಜೊತೆ ಕೇಕ್‌ ಕತ್ತರಿಸುವ ಮೂಲಕ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಉಂಗುರ ಬದಲಿಸಿ 10 ವರ್ಷ : ಫ್ಯಾನ್ಸ್ ಗೆ ಸೂಪರ್‌ ಗಿಫ್ಟ್ ನೀಡಿದ ರಾಧಿಕಾ ಪಂಡಿತ್
ಬೆಂಗಳೂರು ಮೆಟ್ರೋ ಹತ್ತಿದ ರಾಕಿ ಭಾಯ್ 'ಟಾಕ್ಸಿಕ್': ಭಾರತೀಯ ಚಿತ್ರರಂಗದಲ್ಲೇ ಹೊಸ ಗಿಮಿಕ್ ಮಾಡಿದ ಯಶ್!