Benki Movie Trailer ಬಿಡುಗಡೆ: ಅನೀಶ್‌ ತೇಜೇಶ್ವರ್‌ ಸಿನಿಮಾ ಜು.15ಕ್ಕೆ ರಿಲೀಸ್

Published : Jun 13, 2022, 04:00 AM IST
Benki Movie Trailer ಬಿಡುಗಡೆ: ಅನೀಶ್‌ ತೇಜೇಶ್ವರ್‌ ಸಿನಿಮಾ ಜು.15ಕ್ಕೆ ರಿಲೀಸ್

ಸಾರಾಂಶ

ಎ ಆರ್‌ ಬಾಬು ಪುತ್ರ ಶಾನ್‌ ನಿರ್ದೇಶನದ ‘ಬೆಂಕಿ’ ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆ ಆಯಿತು. ಅನೀಶ್‌ ತೇಜೇಶ್ವರ್‌ ನಾಯಕನಾಗಿ ನಟಿಸಿರುವ ಮತ್ತೊಂದು ಆ್ಯಕ್ಷನ್‌ ಸಿನಿಮಾ ಇದು. ಚಿತ್ರದ ಟ್ರೇಲರ್‌ ಬಿಡುಗಡೆ ನೆಪದಲ್ಲಿ ಚಿತ್ರತಂಡ ಮಾಧ್ಯಮಗಳ ಮುಂದೆ ಬಂತು.

ಎ ಆರ್‌ ಬಾಬು ಪುತ್ರ ಶಾನ್‌ ನಿರ್ದೇಶನದ ‘ಬೆಂಕಿ’ ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆ ಆಯಿತು. ಅನೀಶ್‌ ತೇಜೇಶ್ವರ್‌ ನಾಯಕನಾಗಿ ನಟಿಸಿರುವ ಮತ್ತೊಂದು ಆ್ಯಕ್ಷನ್‌ ಸಿನಿಮಾ ಇದು. ಹಳ್ಳಿಯ ಹಿನ್ನೆಲೆಯಲ್ಲಿ ಸಾಗುವ ಈ ಕತೆಯಲ್ಲಿ ಅಣ್ಣ- ತಂಗಿಯ ಸೆಂಟಿಮೆಂಟ್‌ ಚಿತ್ರದ ಪ್ರಧಾನ ವಸ್ತು. ಚಿತ್ರದ ಟ್ರೇಲರ್‌ ಬಿಡುಗಡೆ ನೆಪದಲ್ಲಿ ಚಿತ್ರತಂಡ ಮಾಧ್ಯಮಗಳ ಮುಂದೆ ಬಂತು. ‘ಇದು ನನ್ನದೇ ನಿರ್ಮಾಣದ ಮೂರನೇ ಸಿನಿಮಾ. ನನ್ನ ಚಿತ್ರಗಳನ್ನು ನಾನೇ ನಿರ್ದೇಶನ ಅಥವಾ ನಿರ್ಮಾಣ ಮಾಡಿಕೊಳ್ಳುತ್ತಿದ್ದೇನೆ ಎಂದರೆ ನನಗೆ ಅಫರ್‌ಗಳು ಕಡಿಮೆ ಆಗಿವೆ ಎಂದರ್ಥವಲ್ಲ. ನನಗೆ ಇಷ್ಟವಾಗುವ ಕತೆಗಳು ಬರಬೇಕು. ನಿರ್ಮಾಣದಲ್ಲಿ ನನ್ನ ಸ್ನೇಹಿತರು ಕೈ ಜೋಡಿಸುತ್ತಿದ್ದಾರೆ. ಹೀಗಾಗಿ ಸಿನಿಮಾಗಳನ್ನು ಮಾಡುತ್ತಿದ್ದೇನೆ. ಬೆಂಕಿ ಚಿತ್ರ ಜುಲೈ 15ಕ್ಕೆ ತೆರೆಗೆ ಬರುತ್ತಿದೆ’ ಎಂದರು ಅನೀಶ್‌.

ನಿರ್ದೇಶಕ ಶಾನ್‌ ಮಾತನಾಡಿ, ಕೌಟುಂಬಿಕ ಹಿನ್ನೆಲೆಯಲ್ಲಿ ಸಾಗುವ ಭಾವುಕತೆಯ ಸಿನಿಮಾ ಇದು. ಕಾಮಿಡಿ, ಸೆಂಟಿಮೆಂಟ್‌ ಜತೆಗೆ ಆ್ಯಕ್ಷನ್‌ ಕೂಡ ಇದೆ. ಹೊಸಬರಿಗೆ ಅವಕಾಶ ಕೊಟ್ಟು ಸಿನಿಮಾ ಮಾಡುತ್ತಿರುವ ಅನೀಶ್‌ಗೆ ಧನ್ಯವಾದಗಳು ಎಂದರು. ಚಿತ್ರದ ನಾಯಕಿಯಾಗಿ ‘ರೈಡರ್‌’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಸಂಪದ ಹುಲಿವಾನ ಅಭಿನಯಿಸಿದ್ದಾರೆ. ಶ್ರುತಿ ಪಾಟೀಲ್‌, ಅಚ್ಯುತ್‌ ಕುಮಾರ್‌, ಸಂಪತ್‌, ಉಗ್ರಂ ಮಂಜು, ಹರಿಣಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೌಶಿಕ್‌ ಹರ್ಷ ಸಂಗೀತ ಸಂಯೋಜನೆ, ವಿನಸ್‌ ನಾಗರಾಜ್‌ ಮೂರ್ತಿ ಛಾಯಾಗ್ರಹಣ ಇದೆ. 

Benki Movie First Look: ಅನೀಶ್‌ ತೇಜೇಶ್ವರ್‌ ಹೊಸ ಚಿತ್ರದ ಪೋಸ್ಟರ್ ರಿಲೀಸ್

ವಿಂಕ್‌ವಿಷಲ್‌ ಪ್ರೊಡಕ್ಷನ್‌ ಬ್ಯಾನರ್‌ ಮೂಲಕ ಅನೀಶ್‌ ಅವರೇ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈಗಾಗಲೇ ಚಿತ್ರಕ್ಕೆ ಶೂಟಿಂಗ್‌ ಮುಗಿದಿದ್ದು ಬಿಡುಗಡೆಗೆ ಸಿದ್ಧವಾಗಿದೆ. ಅನೀಶ್‌ಗೆ ನಾಯಕಿಯಾಗಿ ‘ರೈಡರ್‌’ ಸಿನಿಮಾ ಖ್ಯಾತಿಯ ಸಂಪದ ಹುಲಿವಾನ ನಟಿಸಿದ್ದಾರೆ. ಶ್ರುತಿ ಪಾಟೀಲ್‌, ಅಚ್ಯುತ್‌ ಕುಮಾರ್‌, ಸಂಪತ್‌, ಉಗ್ರಂ ಮಂಜು, ಹರಿಣಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೌಶಿಕ್‌ ಹರ್ಷ ಸಂಗೀತ ಸಂಯೋಜನೆ, ವೀನಸ್‌ ನಾಗರಾಜ್‌ ಮೂರ್ತಿ ಛಾಯಾಗ್ರಹಣ ಹೊಣೆ ಹೊತ್ತಿದ್ದಾರೆ. ಈ ಸಿನಿಮಾವನ್ನು ಕೊಳ್ಳೆಗಾಲ, ಹೊಸೂರು, ಬಾಗೇಪಲ್ಲಿ, ಚನ್ನರಾಯಪಟ್ಟಣ ಮುಂತಾದ ಹಳ್ಳಿಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. 

'ಟೈಸನ್' ಆ್ಯಕ್ಷನ್ ಪ್ಯಾಕ್ಡ್ ಸೋಶಿಯೋ ಥ್ರಿಲ್ಲರ್ ಸಿನಿಮಾ: ಇಂಟ್ರಸ್ಟಿಂಗ್ ಮಾಹಿತಿ ಬಿಚ್ಚಿಟ್ಟ ನಟ ಪೃಥ್ವಿರಾಜ್

ಬೆಂಕಿ ಸಿನಿಮಾ ಕೇವಲ ಅಣ್ಣ-ತಂಗಿ ಸೆಂಟಿಮೆಂಟ್ ಮಾತ್ರವಲ್ಲ ಕಾಮಿಡಿ- ಹಾರರ್ ಸಿನಿಮಾ ಕೂಡಾ ಎಂದು ಹೇಳುವ ಮೂಲಕ ಅನೀಶ್ ಕುತೂಹಲ ಹುಟ್ಟುಹಾಕಿದ್ದಾರೆ. ನಟಿ ಸಂಪದ ಹುಲಿವನ ಅವರು ಪ್ರೇತವಾಗಿ ನಟಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಹಾಗೂ ನಾನು ಮೊದಲಿನಿಂದಲೂ ಸ್ಟೈಲಿಶ್‌ ಆಗಿ ಕಾಣಿಸಿಕೊಂಡಿದ್ದೇನೆ. ಹಳ್ಳಿ ಜಾನರ್‌ನ ಕಥೆಯಲ್ಲಿ ಮಾಡಬೇಕು ಎನಿಸುತ್ತಿತ್ತು. ಈ ಸಿನಿಮಾದಲ್ಲಿ ವಿಭಿನ್ನ ಸಬ್ಜೆಕ್ಟ್ ಮೂಲಕ ಹಳ್ಳಿ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ ಎಂದು ಅನೀಶ್ ತಿಳಿಸಿದ್ದಾರೆ. ಇನ್ನು ಅನೀಶ್ 'ರಾಮಾರ್ಜುನ' ಚಿತ್ರದಲ್ಲಿ ಕಡೆಯದಾಗಿ ನಟಿಸಿದ್ದರು. ಈ ಚಿತ್ರಕ್ಕೆ ಮೊದಲ ಬಾರಿಗೆ ಅವರೇ ಆಕ್ಷನ್ ಕಟ್ ಹೇಳಿದ್ದರು. ಅನೀಶ್‌ಗೆ ನಾಯಕಿಯಾಗಿ ನಿಶ್ವಿಕಾ ನಾಯ್ಡು ಸ್ಕ್ರೀನ್ ಶೇರ್ ಮಾಡಿದ್ದರು.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!
ರಿಷಬ್ ಶೆಟ್ಟಿ ದೈವದ ಮುಂದೆ ಅತ್ಬಿಟ್ರಾ? ಅಳಬೇಡ ಅಂತ ಸಂತೈಸಿದ್ದೇಕೆ ಪಂಜುರ್ಲಿ ದೈವ?