Prajwal Devaraj Mafia: ಡೈನಾಮಿಕ್ ಪ್ರಿನ್ಸ್ ಸ್ನೇಹಿತನ ಪಾತ್ರದಲ್ಲಿ ಶೈನ್‌ ಶೆಟ್ಟಿ

Published : Jun 13, 2022, 04:00 AM IST
Prajwal Devaraj Mafia: ಡೈನಾಮಿಕ್ ಪ್ರಿನ್ಸ್ ಸ್ನೇಹಿತನ ಪಾತ್ರದಲ್ಲಿ ಶೈನ್‌ ಶೆಟ್ಟಿ

ಸಾರಾಂಶ

ಬಿಗ್‌ಬಾಸ್‌ ಸ್ಪರ್ಥಿ ಶೈನ್‌ ಶೆಟ್ಟಿ ಅವರು ಪ್ರಜ್ವಲ್‌ ದೇವರಾಜ್‌ ಅವರ ಸ್ನೇಹಿತನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಲೋಹಿತ್‌ ಹೆಚ್‌ ನಿರ್ದೇಶನದ ‘ಮಾಫಿಯಾ’ ಚಿತ್ರದಲ್ಲಿ ಶೈನ್‌ ಶೆಟ್ಟಿನಟಿಸುತ್ತಿದ್ದು, ಈಗಾಗಲೇ ಅವರ ಪಾತ್ರಕ್ಕೆ ಶೇ.45 ಭಾಗ ಚಿತ್ರೀಕರಣ ಆಗಿದೆ.

ಬಿಗ್‌ಬಾಸ್‌ ಸ್ಪರ್ಥಿ ಶೈನ್‌ ಶೆಟ್ಟಿ ಅವರು ಪ್ರಜ್ವಲ್‌ ದೇವರಾಜ್‌ ಅವರ ಸ್ನೇಹಿತನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಲೋಹಿತ್‌ ಹೆಚ್‌ ನಿರ್ದೇಶನದ ‘ಮಾಫಿಯಾ’ ಚಿತ್ರದಲ್ಲಿ ಶೈನ್‌ ಶೆಟ್ಟಿನಟಿಸುತ್ತಿದ್ದು, ಈಗಾಗಲೇ ಅವರ ಪಾತ್ರಕ್ಕೆ ಶೇ.45 ಭಾಗ ಚಿತ್ರೀಕರಣ ಆಗಿದೆ. ‘ನಾನು ನಡೆಸಿಕೊಡುತ್ತಿದ್ದ ಡ್ಯಾನ್ಸ್‌ ರಿಯಾಲಿಟಿ ಶೋಗೆ ಪ್ರಜ್ವಲ್‌ ದೇವರಾಜ್‌ ಅವರು ತೀರ್ಪುಗಾರರಾಗಿ ಬಂದಿದ್ದರು. ಆಗ ಅವರ ಜತೆಗೆ ನನ್ನ ಸ್ನೇಹ ಆಯಿತು. ಈ ಸ್ನೇಹ ಮುಂದೆ ಇಬ್ಬರು ಸಿನಿಮಾ ಮಾಡುವ ಹಂತಕ್ಕೆ ಬಂತು. ಪ್ರಜ್ವಲ್‌ ಅವರೇ ಕರೆದು ಚಿತ್ರದಲ್ಲಿ ನಟಿಸುವಂತೆ ಕೇಳಿದರು. 

ಪ್ರಜ್ವಲ್‌ ದೇವರಾಜ್‌ ಜತೆಗೆ ನಟಿಸಿದ ಅನುಭವ ತುಂಬಾ ಚೆನ್ನಾಗಿತ್ತು. ಇನ್ನೂ ನನ್ನ ಪಾತ್ರದ ಚಿತ್ರೀಕರಣ ಬಾಕಿ ಇದೆ. ಈ ಸಿನಿಮಾ ನಂತರ ಮತ್ತಷ್ಟು ಚಿತ್ರಗಳಲ್ಲಿ ನಟಿಸುವ ಅವಕಾಶ ಬರಲಿದೆ ಎನ್ನುವ ನಂಬಿಕೆ ಇದೆ’ ಎನ್ನುತ್ತಾರೆ ಶೈನ್‌ ಶೆಟ್ಟಿ. ಅದಿತಿ ಪ್ರಭುದೇವ ಚಿತ್ರದ ನಾಯಕಿ. ಮುಖ್ಯ ಪಾತ್ರಗಳಲ್ಲಿ ದೇವರಾಜ್‌, ವಾಸುಕಿ ವೈಭವ್‌, ಸಿದ್ಲಿಂಗು ಶ್ರೀಧರ್‌, ಪ್ರಕಾಶ್‌ ಬೆಳವಾಡಿ, ಒರಟ ಪ್ರಶಾಂತ್‌, ರವಿ ಭಟ್‌ ಮುಂತಾದವರು ನಟಿಸುತ್ತಿದ್ದಾರೆ. ಅನೂಪ್‌ ಸೀಳಿನ್‌ ಸಂಗೀತ, ಅನೀಶ್‌ ತರುಣ್‌ ಕುಮಾರ್‌ ಕ್ಯಾಮೆರಾ ಚಿತ್ರಕ್ಕಿದೆ.

Mafia: ದುಬಾರಿ ಮೊತ್ತಕ್ಕೆ ಪ್ರಜ್ವಲ್ ದೇವರಾಜ್ ಚಿತ್ರದ ಆಡಿಯೋ ರೈಟ್ಸ್ ಖರೀದಿಸಿದ ಆನಂದ್ ಆಡಿಯೋ!

ಮೂರು ಭಾಷೆಗಳಲ್ಲಿ ಚಿತ್ರದ ಟೀಸರ್ ಬಿಡುಗಡೆ: 'ಮಾಫಿಯಾ' ಚಿತ್ರವು ಈಗಾಗಲೇ ಟೈಟಲ್​​ನಿಂದಲೇ ಸ್ಯಾಂಡಲ್‌ವುಡ್‌ ಹಾಗೂ ಸೌತ್ ಸಿನಿಮಾ ರಂಗದಲ್ಲಿ ಸದ್ದು ಮಾಡುತ್ತಿದೆ. ಕನ್ನಡ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ 'ಮಾಫಿಯಾ' ಚಿತ್ರ ನಿರ್ಮಾಣವಾಗುತ್ತಿದ್ದು, ಏಕಕಾಲದಲ್ಲಿ ಚಿತ್ರದ ಟೀಸರ್ ಮೂರೂ ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಕನ್ನಡದಲ್ಲಿ ಧ್ರುವ ಸರ್ಜಾ, ಸತೀಶ್ ನೀನಾಸಂ ಹಾಗೂ ರಿಷಬ್ ಶೆಟ್ಟಿ, ತೆಲುಗಿನಲ್ಲಿ ಸುಧೀರ್ ಬಾಬು ಮತ್ತು ರಾಜಶೇಖರ್ ಹಾಗೂ ತಮಿಳಿನಲ್ಲಿ ಸತ್ಯರಾಜ್, ವೆಂಕಟ್ ಪ್ರಭು, ಪಾರ್ಥಿಬನ್ ಹಾಗೂ ನಿರ್ದೇಶಕ ಶಿಶೀಂದ್ರನ್ 'ಮಾಫಿಯಾ' ಚಿತ್ರದ ಟೀಸರ್ ಅನ್ನು ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. 

ಟೀಸರ್‌ನಲ್ಲಿ ಸಖತ್ ಮಾಸ್ ಆಗಿ ಪ್ರಜ್ವಲ್ ದೇವರಾಜ್ ಕಾಣಿಸಿಕೊಂಡಿದ್ದು, ಅನೂಪ್ ಸೀಳಿನ್ ಅವರ ಸಂಗೀತ ಸಂಯೋಜನೆ ಟೀಸರ್​ನ ಮಾಸ್ ಗುಣವನ್ನು ಮತ್ತಷ್ಟು ಹೆಚ್ಚಿಸಿದೆ. 'ಮಾಫಿಯಾ' ಚಿತ್ರದ ಟೀಸರ್ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ. ಅಷ್ಟೇ ಅಲ್ಲದೇ  'ಮಾಫಿಯಾ' ಚಿತ್ರದ ಆಡಿಯೋ ರೈಟ್ಸ್ ದೊಡ್ಡ ಮೊತ್ತಕ್ಕೆ ಸೇಲ್ ಆಗಿದ್ದು, ಒಟ್ಟು 5 ಹಾಡುಗಳು ಚಿತ್ರದಲ್ಲಿರಲಿವೆ. ಆಡಿಯೋ ಹಕ್ಕುಗಳನ್ನು ಆನಂದ್ ಆಡಿಯೋ ಸಂಸ್ಥೆ ಖರೀದಿಸಿದೆ. ಇದುವರೆಗೆ ಪ್ರಜ್ವಲ್ ದೇವರಾಜ್ ಅಭಿನಯಿಸಿದ ಚಿತ್ರಗಳಲ್ಲೇ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಆಡಿಯೋ ಇದಾಗಿದೆ ಎಂದು ತಿಳಿದು ಬಂದಿದೆ. 

Prajwal Devaraj: ಡೈನಾಮಿಕ್ ಪ್ರಿನ್ಸ್ ಹೊಸ ಚಿತ್ರಕ್ಕೆ ಪನ್ನಗ ಭರಣ ಆಕ್ಷನ್ ಕಟ್

ಈ  ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಪೋಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಈ ಚಿತ್ರಕ್ಕಾಗಿ ಅವರು ಹೊಸ ಶೈಲಿಯಲ್ಲಿ ಹೇರ್‌ಸ್ಟೈಲ್‌ ಮಾಡಿಸಿಕೊಂಡಿದ್ದು, ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಆ ಕೂದಲನ್ನು ಕ್ಯಾನ್ಸರ್‌ನಿಂದ ಕೂದಲು ಕಳೆದುಕೊಂಡ ರೋಗಿಗಳಿಗೆ ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.  'ಜಯಮ್ಮನ ಮಗ' ಹಾಗೂ 'ರಜನಿಕಾಂತ್' ಚಿತ್ರಗಳಿಗೆ ಕೆಲಸ ಮಾಡಿ, 'ಮಮ್ಮಿ' ಹಾಗೂ 'ದೇವಕಿ' ಚಿತ್ರಗಳನ್ನು ನಿರ್ದೇಶನ ಮಾಡಿದ್ದ ಎಚ್. ಲೋಹಿತ್ (H.Lohith) ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. 'ಮಾಫಿಯಾ' ಚಿತ್ರದ ಶೀರ್ಷಿಕೆಯೇ ಹೇಳುವಂತೆ, ಇದು ಆಕ್ಷನ್ ಪ್ರಧಾನ ಕಥೆಯ ಚಿತ್ರವಾಗಿದೆ. ಅಂಡರ್‌ವರ್ಲ್ಡ್ ಸ್ಟೋರಿಯೂ ಚಿತ್ರದಲ್ಲಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ
‘ನೀನಾದೆ ನಾ’ ಹಾಡು 100 Million Views ದಾಟಿದ ಖುಷಿಯಲ್ಲಿ ‘ಯುವರತ್ನ’ ನಾಯಕಿ ಸಯ್ಯೇಷಾ ಸೈಗಲ್