
ಗಾಲಿ ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾಗಿದೆ. ಅದ್ಧೂರಿಯಾಗಿ ನಡೆದ ಚಿತ್ರದ ಮುಹೂರ್ತ ಕಾರ್ಯಕ್ರಮದಲ್ಲಿ ಎಸ್ ಎಸ್ ರಾಜಮೌಳಿ ಕಿರೀಟಿಗೆ ಸಾಥ್ ನೀಡಿ ಪ್ರೋತ್ಸಾಹಿಸಿದ್ದು ಗೊತ್ತೇ ಇದೆ. ಇಂಟ್ರಡಕ್ಷನ್ ಟೀಸರ್ ಮೂಲಕ ಗಮನ ಸೆಳೆದಿರೋ ಕಿರೀಟಿ ಒಂದೇ ನೋಟಕ್ಕೆ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಅಲ್ಲದೆ ಸ್ಯಾಂಡಲ್ ವುಡ್ ಅಂಗಳಕ್ಕೆ ಭರವಸೆಯ ನಾಯಕ ನಟನಾಗುತ್ತಾನೆ ಎಂಬ ಭವಿಷ್ಯ ವಾಣಿಯೂ ಕೇಳಿ ಬಂದಿವೆ. ಎಲ್ಲರ ಪ್ರೋತ್ಸಾಹದ ನುಡಿಗಳೊಂದಿಗೆ ಯಂಗ್ ಅಂಡ್ ಎನರ್ಜಿಟಿಕ್ ಕಿರೀಟಿ ಮೊದಲ ಚಿತ್ರದ ಚಿತ್ರೀಕರಣದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಸದ್ಯ ಕಿರೀಟಿ ಮೊದಲ ಚಿತ್ರದಿಂದ ಲೇಟೆಸ್ಟ್ ಅಪ್ ಡೇಟ್ ಹೊರಬಿದ್ದಿದೆ. ಅದುವೇ ಚಿತ್ರದ ಟೈಟಲ್.
ಹೌದು, ಕಿರೀಟಿ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟು ಈಗಾಗಲೇ ಚಿತ್ರೀಕರಣ ಸಹ ಅದ್ದೂರಿಯಾಗಿ ನಡೆಯುತ್ತಿದೆ. ಶೂಟಿಂಗ್ ಪ್ರಾರಂಭವಾಗಿ ತಿಂಗಳುಗಳೇ ಆಗಿದ್ರು ಸಹ ಇದುವರೆಗೂ ಸಿನಿಮಾದ ಬಗ್ಗೆ ಯಾವುದೇ ಅಪ್ ಡೇಟ್ ಸಿಕ್ಕಿಲ್ಲ. ಅಲ್ಲದೇ ಟೈಟಲ್ ಅನಾವರಣ ಕೂಡ ಆಗಿಲಿಲ್ಲ. ಸಿನಿಮಾದ ಟೈಟಲ್ ಏನು ಎನ್ನುವ ಕುತೂಹಲ ಅಭಿಮಾನಿಗಳಿತ್ತು. ಆದರೀಗ ಫೈನಲಿ ಸಿನಿಮಾ ತಂಡ ಟೈಟಲ್ ರಿವೀಲ್ ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ. ಅದು ಒಂದು ವಿಶೇಷ ದಿನದಂದೂ. ವಿಜಯ ದಶಮಿ ಸಮಯದಲ್ಲೇ ಕಿರೀಟಿ ಮೊದಲ ಸಿನಿಮಾದ ಟೈಟಲ್ ಅನಾವರಣವಾಗಲಿದೆ.
ಬರ್ತಿದ್ದಾನೆ ಬಳ್ಳಾರಿ ಬೊಂಬಾಟ್ ಹುಡುಗ: ಕಿರೀಟಿ ಶ್ರಮಕ್ಕೆ ಬಹುಪರಾಕ್ ಎಂದ ರಾಜಮೌಳಿ!
ಸೆಪ್ಟೆಂಬರ್ 29ಕ್ಕೆ ಟೈಟಲ್ ರಿವೀಲ್ ಮಾಡಲಾಗುತ್ತೆ ಎನ್ನಲಾಗಿದೆ. ಸೆಪ್ಟಂಬರ್ ಸಂಜೆ 6.39ಕ್ಕೆ ವಾರಾಹಿ ಚಲನಚಿತ್ರ ಯೂಟ್ಯೂಬ್ ಚಾನೆಲ್ ನಲ್ಲಿ ಕಿರೀಟಿ ಚೊಚ್ಚಲ ಚಿತ್ರದ ಟೈಟಲ್ ಲಾಂಚ್ ವೀಡಿಯೋ ಬಿಡುಗಡೆಯಾಗೋದು ಫಿಕ್ಸ್ ಆಗಿದೆ. ರಾಧಾಕೃಷ್ಣ ರೆಡ್ಡಿ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ವಾರಾಹಿ ಫಿಲ್ಮಂ ಪ್ರೊಡಕ್ಷನ್ ಬಂಡವಾಳ ಹೂಡಿದೆ. ಇದು ವಾರಾಹಿ ಸಂಸ್ಥೆಯ 15ನೇ ಸಿನಿಮಾ ಕೂಡ ಆಗಿದ್ದು ಅಷ್ಟೇ ಅದ್ದೂರಿಯಾಗಿ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದೆ. ಕನ್ನಡ ಮತ್ತು ತೆಲುಗು ಎರಡೂ ಭಾಷೆಯಲ್ಲಿ ನಿರ್ಮಾಣವಾಗುತ್ತಿರೋ ಈ ಚಿತ್ರದ ಮೂಲಕ ಕಿರೀಟಿ ಕನ್ನಡ ಮತ್ತು ತೆಲುಗು ಎರಡೂ ಇಂಡಸ್ಟ್ರಿಗೆ ಏಕಕಾಲದಲ್ಲಿ ಹೀರೋ ಆಗಿ ಲಾಂಚ್ ಆಗ್ತಿದ್ದಾರೆ ಕಿರೀಟಿ.
ಒಂದು ಗಂಟೆ ಫ್ಲೈಟ್‌ನಲ್ಲಿ ನಟ ರವಿಚಂದ್ರನ್‌ಗೆ ಒಂದು ಸಾವಿರ ಪ್ರಶ್ನೆ ಕೇಳಿದ ಕಿರೀಟಿ ಜನಾರ್ಧನ್!
ಈ ಸಿನಿಮಾದಲ್ಲಿ ದೊಡ್ಡ ತಾರಾಬಳವೇ ಇದೆ. ರವಿಚಂದ್ರನ್, ಜೆನಿಲಿಯಾ ರಿತೇಶ್ ದೇಶ್ ಮುಖ್, ಶ್ರೀಲೀಲಾ ಸೇರಿದಂತೆ ಅನೇಕ ಸ್ಟಾರ್ ಕಲಾವಿದರು ನಟಿಸಿದ್ದಾರೆ. ಚಿತ್ರದ ತಾಂತ್ರಿಕ ವರ್ಗ ಕೂಡ ಶ್ರೀಮಂತವಾಗಿದ್ದು ರಾಕ್ಸ್ಟಾರ್ ದೇವಿಶ್ರೀ ಪ್ರಸಾದ್ ಸಂಗೀತ, ಬಾಹುಬಲಿ ಸಿನಿಮಾದ ಕಣ್ಣು ಕೆ ಸೆಂಥಿಲ್ ಕುಮಾರ್ ಛಾಯಾಗ್ರಹಣ, ರವೀಂದರ್ ಕಲಾ ನಿರ್ದೇಶನ, ಭಾರತದ ಟಾಪ್ ಸ್ಟಂಟ್ ಡೈರೆಕ್ಟರ್ ಪೀಟರ್ ಹೆನ್ ಆಕ್ಷನ್ ಚಿತ್ರಕ್ಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.