ಮೈಸೂರು ದಸರಾದಲ್ಲೂ ಅಪ್ಪು ಸ್ಮರಣೆ; ಪುನೀತ್ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿದ ಅಶ್ವಿನಿ ಪುನೀತ್‌ರಾಜ್ ಕುಮಾರ್

By Suvarna NewsFirst Published Sep 28, 2022, 3:56 PM IST
Highlights

ನಾಡಹಬ್ಬ ಮೈಸೂರು ದಸರಾ ಮಹೋತ್ಸವ ರಂಗು ಪಡೆದುಕೊಂಡಿದೆ. ನವರಾತ್ರಿಯ ಮೂರನೇ ದಿನವಾದ ಇಂದು (ಸೆಪ್ಟಂಬರ್ 28) ಹಲವು ಕಾರ್ಯಕ್ರಮಗಳಲ್ಲಿ ಅಪ್ಪು ಸ್ಮರಣೆ ಮಾಡಲಾಗಿದೆ.

ನಾಡಹಬ್ಬ ಮೈಸೂರು ದಸರಾ ಮಹೋತ್ಸವ ರಂಗು ಪಡೆದುಕೊಂಡಿದೆ. ನವರಾತ್ರಿಯ ಮೂರನೇ ದಿನವಾದ ಇಂದು (ಸೆಪ್ಟಂಬರ್ 28) ಹಲವು ಕಾರ್ಯಕ್ರಮಗಳಲ್ಲಿ ಅಪ್ಪು ಸ್ಮರಣೆ ಮಾಡಲಾಗಿದೆ. ದಸರಾ ಚಲನಚಿತ್ರೋತ್ಸವ, ಯೋಗ ಕಾರ್ಯಕ್ರಮ, ದಸರಾ ದರ್ಶನ ಹಾಗೂ ಪುನೀತ್ ರಾಜಕುಮಾರ್ ಅವರ 50ಅಡಿ ಕಟೌಟ್ ಇಂದಿನ ದಸರಾ ಆಕರ್ಷಣೆಯಾಗಿತ್ತು.

ಇಂದು (ಸೆಪ್ಟಂಬರ್ 28) ಪುನೀತ್ ರಾಜ್ ಕುಮಾರ್ ಹೆಸರಲ್ಲಿ ಚಲನಚಿತ್ರೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪುನೀತ್ ನಟನೆಯ ಬೆಟ್ಟದ ಹೂ, ರಾಜಕುಮಾರ, ರಣವಿಕ್ರಮ, ಯುವರತ್ನ ಚಿತ್ರ ಪ್ರದರ್ಶನದ ಮೂಲಕ ಸಿನಿಮಾ ಪ್ರದರ್ಶನದ ಮೂಲಕ ಅಪ್ಪುಗೆ ನಮನ ಸಲ್ಲಿಸಲಾಯಿತು. ನಗರದ ಐನಾಕ್ಸ್ ಚಿತ್ರಮಂದಿರದಲ್ಲಿ ನಡೆದ ಅಪ್ಪು ಚಲನಚಿತ್ರೋತ್ಸವಕ್ಕೆ ಅಶ್ವಿನಿ ಪುನೀತ್ ರಾಜಕುಮಾರ್ ಚಾಲನೆ ನೀಡಿದರು. ಪುನೀತ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಅಭಿಮಾನಿಗಳ ಜೊತೆ ಕೂತು ಕೆಲಕಾಲ ರಾಜಕುಮಾರ ಸಿನಿಮಾ ವೀಕ್ಷಣೆ ಮಾಡಿದ್ರು.

Gandhada Gudi: ಕ್ಯಾಮರಾ ಹಿಡಿದು ನಗುನಗ್ತಾ ಶೂಟಿಂಗ್ ಮಾಡಿದ್ದ ಅಪ್ಪು ನೋಡಿ ಫ್ಯಾನ್ಸ್ ಭಾವುಕ

ಅಲ್ಲದೇ ಇಂದಿನಿಂದ ಯುವದಸರಾ ಆರಂಭ ಹಿನ್ನೆಲೆ ಮಹಾರಾಜ ಕಾಲೇಜು ಮೈದಾನದಲ್ಲಿ ಅಪ್ಪು ಡ್ಯಾನ್ಸ್ ಮಾಡುವ ಬೃಹತ್ ಕಟೌಟ್ ನಿರ್ಮಾಣ ಮಾಡಲಾಗಿದೆ. ಬೆಂಗಳೂರು ಮೂಲದ ಅಪ್ಪು ಅಭಿಮಾನಿ ಮಾರುತಿ, ಪುನೀತ್ ನೃತ್ಯ ಮಾಡುವ 50 ಅಡಿ ಬೃಹತ್ ಕಟೌಟ್ ನಿರ್ಮಿಸಿ ತಮ್ಮ ಅಭಿಮಾನ ಮೆರೆದಿದ್ದಾರೆ. ಇದು ಅಪ್ಪು ಅಭಿಮಾನಿಗಳು ಸಂತಸಕ್ಕೆ ಕಾರಣವಾಗಿದೆ. 

Puneeth Rajkumar ಕಾಂತಾರ ಸಿನಿಮಾ ಕೈ ಬಿಟ್ಟು ರಿಷಬ್‌ ಶೆಟ್ಟಿನೇ ನಟಿಸಬೇಕು ಅಂದಿದ್ದೇಕೆ?

ಜೊತೆಗೆ ಅರಮನೆ ಆವರಣದಲ್ಲಿ ಇಂದು ಯೋಗ ಸಂಭ್ರಮ ನಡೆಯಿತು. ಯೋಗ ಸಂಭ್ರಮ ಕಾರ್ಯಕ್ರಮಕ್ಕೆ ಸುತ್ತೂರು ಮಠದ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ ಚಾಲನೆ ನೀಡಿದ್ರು. 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಯೋಗಪಟುಗಳು 75 ವಿಶಿಷ್ಟ ಆಸನಗಳು ಮಾಡಿ ಸೆಳೆದರು. ಇನ್ನೂ ದಸರಾ ದರ್ಶನ ಕಾರ್ಯಕ್ರಮಕ್ಕೂ ಇಂದು ಅಧಿಕೃತ ಚಾಲನರ ದೊರೆಯಿತು. ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ದಸರಾ ದರ್ಶನ ಕಾರ್ಯಕ್ರಮಕ್ಕೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ  ಬಳಿ ಸಚಿವ ಎಸ್‌.ಟಿ. ಸೋಮಶೇಖರ್‌ ರಿಂದ ಚಾಲನೆ ನೀಡಿದ್ರು‌. ಮೈಸೂರು ತಾಲೂಕಿನಿಂದ ಜನರನ್ನು ಉಚಿತವಾಗಿ ಕರೆತಂದು ದಸರಾ ಕಾರ್ಯಕ್ರಮ ತೊರಿಸುವುದು. ಪ್ರತಿ ನಿತ್ಯ ಒಂದು ತಾಲೂಕಿಗೆ 3 ಬಸ್ ಗಳಂತೆ ಮೂರು ದಿನಕ್ಕೆ 81 ಬಸ್‌ಗಳ ನಿಯೋಜನೆ ಮಾಡಲಾಗಿದ್ದು 3 ದಿನದಲ್ಲಿ 4455 ಮಂದಿಗೆ ದಸರಾ ತೋರಿಸುವ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಒಟ್ಟಾರೆ ನವರಾತ್ರಿಯ ಮೂರನೇ ದಿನವೂ ಹಲವು ಕಾರ್ಯಕ್ರಮಗಳ ಜೊತೆ ದಸರಾ ರಂಗೇರಿದೆ. ಸಂಜೆ ವೇಳೆಗೆ ಆರಂಭವಾಗುವ ಯುವದಸರಾ ಮತ್ತಷ್ಟು ಮೆರುಗು ನೀಡಲಿದೆ.

click me!