
ಪೋಷಕ ಕಲಾವಿದೆಯಾಗಿ ಗುರುತಿಸಿಕೊಂಡಿರುವ ಗೌರಿಶ್ರೀ (GowriShree) ಅವರು ಮೊದಲ ಬಾರಿಗೆ ಸಿನಿಮಾ ನಿರ್ದೇಶನ ಮಾಡುವ ಜತೆಗೆ ತಾವೇ ನಿರ್ಮಾಣ ಕೂಡ ಮಾಡಿದ್ದಾರೆ. ಚಿತ್ರದ ಹೆಸರು ‘ಜನರಕ್ಷಕ’ (Janarakshaka). ಇತ್ತೀಚೆಗಷ್ಟೆ ಈ ಚಿತ್ರದ ಪೋಸ್ಟರ್ (Poster) ಬಿಡುಗಡೆ ಆಯಿತು. ಈ ನೆಪದಲ್ಲಿ ಚಿತ್ರತಂಡ ಮಾಧ್ಯಮಗಳ ಮುಂದೆ ಬಂತು. ಎಸ್ ಎ ಚಿನ್ನೇಗೌಡ, ಕರಿಸುಬ್ಬ ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಗೌರಿಶ್ರೀ ಅವರು, ‘ನಾನು ಸಹಕಲಾದೆಯಾಗಿ 150ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದೇನೆ. ಇದು ನನ್ನ ಮೊದಲ ನಿರ್ದೇಶನ ಹಾಗೂ ನಿರ್ಮಾಣದ ಸಿನಿಮಾ. ಚಿತ್ರರಂಗದ ಮೇಲಿನ ಪ್ರೀತಿಯಿಂದ ಈ ಚಿತ್ರವನ್ನು ನಿರ್ಮಿಸಿದ್ದೇನೆ.
ಮಕ್ಕಳಾದವರು ತಮ್ಮ ಕುಟುಂಬದ ಗೌರವ, ಘನತೆಯನ್ನು ಹೇಗೆ ಕಾಪಾಡಿಕೊಳ್ಳಬೇಕು, ಅವರು ದಾರಿತಪ್ಪಿದರೆ ಆ ಸಂಸಾರ ಏನಾಗುತ್ತದೆ, ಅಲ್ಲದೆ ಕುಡಿತದಿಂದ ಕುಟುಂಬದಲ್ಲಿ ಏನೆಲ್ಲ ಅನಾಹುತಗಳಾಗುತ್ತವೆ ಎಂಬುದನ್ನು ಒಂದು ಕುಟುಂಬದ ಭಿನ್ನ ವ್ಯಕ್ತಿತ್ವದ ಇಬ್ಬರು ಮಕ್ಕಳ ಮೂಲಕ ಹೇಳಿದ್ದೇನೆ. ನಟನೆ ಜತೆಗೆ ನೃತ್ಯ ಸಂಯೋಜಕಿ ಆಗಿಯೂ ಕೆಲಸ ಮಾಡಿದ್ದೇನೆ. ನಾನೇ ನೃತ್ಯ ಶಾಲೆಯನ್ನು ನಡೆಸುತ್ತಿದ್ದೇನೆ. ಐದಾರು ವರ್ಷಗಳ ಹಿಂದೆ ನಾನು ಪುನೀತ್ ರಾಜ್‌ಕುಮಾರ್ (Puneeth Rajkumar) ಅವರ ಜತೆ 'ಪರಮಾತ್ಮ' (Paramathma) ಚಿತ್ರದಲ್ಲಿ ಅಭಿನಯಿಸಿದ್ದೆ.
Tribute to Puneeth Rajkumar: ಅಪ್ಪು ನೆನಪಲ್ಲಿ ನಿರ್ಮಿಸಿರುವ ಒಳಾಂಗಣ ಕ್ರೀಡಾಂಗಣ ಲೋಕಾರ್ಪಣೆ!
ನಾನು ಡ್ಯಾನ್ಸ್ ಸ್ಕೂಲ್ ಆರಂಭಿಸಿದಾಗ ಆರ್ಥಿಕವಾಗಿ ಸಹಾಯ ಕೂಡ ಮಾಡಿದ್ದರು’ ಎಂದು ಹೇಳಿಕೊಂಡರು. ಈಗ ಶಾಲೆಯಲ್ಲಿ 380 ಮಕ್ಕಳು ತರಭೇತಿ ಪಡೆಯುತ್ತಿದ್ದಾರೆ. ಟಿವಿಯಲ್ಲಿ ಡಾ.ವಿಷ್ಣುವರ್ಧನ್ ಸಿನಿಮಾ ನೋಡುತ್ತಿರುವಾಗ, ಇವರು ಇದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅಂದುಕೊಂಡು ನಾಲ್ಕು ಸಾಲು ಬರೆದುಕೊಂಡೆ. ಒಮ್ಮೆ ಕಾರ್ಯಕ್ರಮಕ್ಕೆ ಹೋದಾಗ ಡಾ.ವಿಷ್ಣುವರ್ಧನ್‌ರಂತೆ ಒಬ್ಬರನ್ನು (ರಾಜ್) ನೋಡಿದೆ. ಇವರನ್ನು ಹಾಕಿಕೊಂಡು ಯಾಕೆ ಚಿತ್ರ ಮಾಡಬಾರದು ಅಂದು ಕೊಂಡು ಅವರ ಮೇಲೆ ಕಥೆ ಬರೆದು ಮುಗಿಸಿದೆ. ಮುಂದೆ ಅವರು ನಟಿಸಲು ಒಪ್ಪಿಕೊಂಡರು. ಪಿ.ಕೆ.ಹೆಚ್.ದಾಸ್ ಛಾಯಾಗ್ರಹಣ ಪ್ಲಸ್ ಪಾಯಿಂಟ್ ಆಯಿತು.
ಕಥೆಯಲ್ಲಿ ಜವಬ್ದಾರಿಯನ್ನು ಮರೆತರೆ, ಹಾಗೆಯೇ ಸಮಾಜಕ್ಕೆ ಯಾವ ರೀತಿ ಒಳ್ಳೆಯರಾಗಬೇಕು ಎನ್ನುವುದಕ್ಕೆ ಇಬ್ಬರು ಮಕ್ಕಳು ಇರುತ್ತಾರೆ. ಅವರಿಬ್ಬರು ಕುಟುಂಬದ ಗೌರವವನ್ನು ಹೇಗೆ ಕಾಪಾಡಿಕೊಂಡು ಹೋಗುತ್ತಾರೆ ಎಂಬುದನ್ನು ತೋರಿಸಲಾಗಿದೆ ಎಂದು ಚಿತ್ರದ ನಿರ್ದೇಶಕಿ ಹಾಗೂ ನಿರ್ಮಾಪಕಿಯಾದ ಗೌರಿಶ್ರೀರವರು ಚಿತ್ರದ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದರು. ಇನ್ನು ಹಿರಿಯ ನಟ ಕರಿಸುಬ್ಬು ಮಾತನಾಡುತ್ತಾ ಗೌರಿಶ್ರೀ ಕಷ್ಟಪಟ್ಟು ಸಿನಿಮಾ ಮಾಡಿದ್ದಾರೆ. ಡ್ಯಾನ್ಸ್ ಶಾಲೆ ನಡೆಸುತ್ತಾ ಅದರಲ್ಲಿ ಗಳಿಸಿದ ಹಣದಲ್ಲಿ ಇಂತಹ ಸಾಧನೆ ಮಾಡಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದರು.
Gowli Movie: ರಗಡ್ ಲುಕ್‌ನಲ್ಲಿ ಶ್ರೀನಗರ ಕಿಟ್ಟಿ: ಫೆಬ್ರವರಿ 2ರಂದು ಚಿತ್ರದ ಟೀಸರ್ ರಿಲೀಸ್
ಚಿನ್ನೇಗೌಡ (Chinnegowda) ಅವರು ಮಾತನಾಡಿ, ‘ಪಾರ್ವತಮ್ಮ ರಾಜ್‌ಕುಮಾರ್, ಲೀಲಾವತಿ, ಪಂಡರೀಬಾಯಿ, ಜಯಶ್ರಿದೇವಿ, ಪ್ರಿಯಾಹಾಸನ್ ಹೀಗೆ ಹಲವು ನಿರ್ಮಾಪಕಿಯರನ್ನು ನಾವು ಚಿತ್ರರಂಗದಲ್ಲಿ ನೋಡಿದ್ದೇವೆ. ಮಹಿಯರು ಸಿನಿಮಾ ನಿರ್ಮಿಸಿ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಇವರ ಸಾಲಿಗೆ ಗೌರಿಶ್ರೀ ಕೂಡ ಸೇರುವಂತಾಗಲಿ’ ಎಂದು ಶುಭ ಕೋರಿದರು. ಚಿತ್ರಕ್ಕೆ ಪಿ ಕೆ ಎಚ್ ದಾಸ್ ಕ್ಯಾಮೆರಾ, ದೇವದಾಸ್ ಸಂಗೀತ ಸಂಯೋಜನೆ ಮಾಡಿದ್ದಾರೆ. ರಘು, ಭಾಗ್ಯಶ್ರಿ, ನಟರಾಜ್, ರತ್ನಮಾಲಾ, ಪ್ರಿಯಾ ಸೋಮಸುಂದರ್ ಮುಂತಾದವರು ಚಿತ್ರದ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.