Jaggesh Birthday: 'ವಯಸ್ಸು ಕೈ ಜಾರಿದೆ, ಕೈ ಹಿಡಿಯಲು ಒಂದು ವಧು ಬೇಕಿದೆ'

Published : Mar 17, 2023, 04:49 PM ISTUpdated : Apr 19, 2023, 05:10 PM IST
Jaggesh Birthday: 'ವಯಸ್ಸು ಕೈ ಜಾರಿದೆ, ಕೈ ಹಿಡಿಯಲು ಒಂದು ವಧು ಬೇಕಿದೆ'

ಸಾರಾಂಶ

ನಟ ಜಗ್ಗೇಶ್​ ಅವರ ಬಹು ನಿರೀಕ್ಷಿತ ರಾಘವೇಂದ್ರ ಸ್ಟೋರ್ಸ್‌ ಚಿತ್ರದ ಘೋಷಣೆಯನ್ನು ಅವರ ಹುಟ್ಟುಹಬ್ಬವಾದ ಇಂದು ವಿಶೇಷ ರೀತಿಯಲ್ಲಿ ಹೊಂಬಾಳೆ ಫಿಲ್ಮ್​ಮ್ಸ್​ ಅನೌನ್ಸ್​ ಮಾಡಿದೆ.  

ರಾಜ್ಯಸಭಾ ಸದಸ್ಯ, ನವರಸ ನಾಯಕ ಜಗ್ಗೇಶ್  (Jaggesh) ಅವರ ಹುಟ್ಟುಹಬ್ಬ ಇಂದು. ಮಾರ್ಚ್​ 17ರಂದು ಅಂದರೆ ಇವತ್ತಿಗೆ ನಟ 60 ವಸಂತಗಳನ್ನು ಪೂರೈಸಿದ್ದಾರೆ. 1963ರಲ್ಲಿ ಹುಟ್ಟಿರುವ ಜಗ್ಗೇಶ್​ ಅವರ 60ನೇ ಹುಟ್ಟುಹಬ್ಬ ಈ ಬಾರಿ ಬಲು ವಿಶೇಷವಾಗಲು ಕಾರಣ, ಹುಟ್ಟುಹಬ್ಬಕ್ಕೂ ಮುನ್ನವೇ ಅವರು  ಕುಟುಂಬ ಸಮೇತರಾಗಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಭೇಟಿಯಾಗಿದ್ದುದು. ಪತ್ನಿ ಪರಿಮಳಾ ಜಗ್ಗೇಶ್, ಎರಡನೇ ಪುತ್ರ ಯತಿರಾಜ್‌ ಅವರೊಂದಿಗೆ ಪ್ರಧಾನಿಯನ್ನು ಭೇಟಿಯಾಗಿ ಅವರ ಜೊತೆಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.  'ನನ್ನ ಬದುಕಿನ ಶ್ರೇಷ್ಠದಿನ ಇಂದು, ಮಾರ್ಚ್ 17 ನನ್ನ ಹುಟ್ಟು ದಿನ ,ಈ ವರ್ಷ ನನಗೆ 60ನೇ ವಸಂತ, ನನ್ನ ನೆಚ್ಚಿನ ಪ್ರಧಾನಿಗಳು ನನ್ನನ್ನು, ಹೆಂಡತಿ ಮತ್ತು ಮಗನನ್ನು ಮನ ತುಂಬಿ ಹರಸಿದರು ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದರು. 

ಇದೀಗ  ನಾಡಿನ ಅನೇಕ ದಿಗ್ಗಜರು, ಕಲಾವಿದರು, ರಾಜಕಾರಣಿಗಳು ಶುಭಾಶಯ ಕೋರುತ್ತಿದ್ದಾರೆ. ಕೆಲವೊಂದು ಚಿತ್ರತಂಡವು ವಿಶೇಷ ರೀತಿಯಲ್ಲಿ ನಟನಿಗೆ ಶುಭ ಕೋರಿದೆ.  ಗುರು ಪ್ರಸಾದ್ ನಿರ್ದೇಶನದಲ್ಲಿ ಮೂಡಿ ಬಂದ ‘ರಂಗನಾಯಕ’ (Ranganayaka)  ಮತ್ತು ಸಂತೋಷ್ ಆನಂದ್ ರಾಮ್ ನಿರ್ದೇಶನದ ರಾಘವೇಂದ್ರ ಸ್ಟೋರ್ಸ್ (Raghavendra Stores) ಚಿತ್ರತಂಡ  ವಿಭಿನ್ನ ರೀತಿಯಲ್ಲಿ ನಟನಿಗೆ ಶುಭಾಶಯವನ್ನು ಹೇಳಿದೆ.  ಅದರಲ್ಲಿ ಗಮನ ಸೆಳೆದಿರುವುದು  ‘ರಾಘವೇಂದ್ರ ಸ್ಟೋರ್ಸ್‌’ದ್ದು. ನವರಸ ನಾಯಕ ಜಗ್ಗೇಶ್​ ಅವರ ಹುಟ್ಟುಹಬ್ಬದ ದಿನವೇ ಸಿನಿಮಾದ ಬಿಡುಗಡೆ ದಿನಾಂಕವನ್ನು ವಿಶಿಷ್ಟ ರೀತಿಯಲ್ಲಿ  ರಿವೀಲ್‌ ಮಾಡಲಾಗಿದೆ.  ಸಿನಿಮಾ ಚಿತ್ರೀಕರಣ ಮುಗಿದು ಬಹಳ ದಿನಗಳಾದರೂ ಇದುವರೆಗೆ ಬಿಡುಗಡೆ ದಿನಾಂಕದ ಬಗ್ಗೆ ಮಾಹಿತಿ ನೀಡಿರಲಿಲ್ಲ. ಹಾಗೆ ನೋಡಿದರೆ ಚಿತ್ರವು  ಕಳೆದ ವರ್ಷದ ವರಮಹಾಲಕ್ಷ್ಮಿ ಹಬ್ಬಕ್ಕೆ ಸಿನಿಮಾ ಬಿಡುಗಡೆ ಆಗಬೇಕಿತ್ತು. ಈ ಕುರಿತು  ಹೊಂಬಾಳೆ  ಫಿಲ್ಮ್​ಸ್ (Hombale Films) ಕೂಡ ಘೋಷಣೆ ಮಾಡಿತ್ತು.

'ಕಿಚ್ಚ' ನಟನಿಗೆ ಅಣ್ಣನಿಂದಲೇ ವಿಷಪ್ರಾಶನ: ಭಯಾನಕ ಸತ್ಯ ತಿಳಿಸಿದ Ponnambalam

ಆದರೆ ಕಾರಣಾಂತರಗಳಿಂದ ಚಿತ್ರದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗುತ್ತಲೇ ಇತ್ತು. ಇದೀಗ  ನಟನ ಹುಟ್ಟುಹಬ್ಬದ ದಿನವೇ  ಹೊಂಬಾಳೆ ಸಂಸ್ಥೆ ಚಿತ್ರ ಬಿಡುಗಡೆಯ ದಿನಾಂಕವನ್ನು ಅನೌನ್ಸ್​ ಮಾಡಿದೆ. ಇದನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿಕೊಳ್ಳಲಾಗಿದೆ. 'ನಮ್ಮ ರಾಘವೇಂದ್ರ ಸ್ಟೋರ್ಸ್‌ನ ಖ್ಯಾತ ಬಾಣಸಿಗರಾದ ಜಗ್ಗೇಶ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ನವಿರಾಗಿ ಸಿದ್ಧಪಡಿಸಿರುವ ನವರಸದೌತಣವನ್ನು ಏಪ್ರಿಲ್ 28, 2023ರಂದು ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಉಣಬಡಿಸಲಿದ್ದೇವೆ. ವಯಸ್ಸು ಕೈ ಜಾರಿದೆ, ಕೈ ಹಿಡಿಯಲು ಒಂದು ವಧು ಬೇಕಿದೆ' ಎಂದು ಹೇಳಲಾಗಿದೆ. ಈ ಚಿತ್ರದ ಮೊದಲ ಹಾಡು 'ಸಿಂಗಲ್‌ ಸುಂದರ, ಯಾವಾಗ್‌ ಹಾಕ್ತೀಯಾ ಉಂಗುರ...' ಶೀಘ್ರದಲ್ಲಿ ಬಿಡುಗಡೆ (Release) ಆಗಲಿದೆ ಎಂಬ ವಿಚಾರವನ್ನೂ ಪೋಸ್ಟರ್‌ನಲ್ಲಿ ತಿಳಿಸಲಾಗಿದೆ. 

ಇತ್ತೀಚೆಗಷ್ಟೇ ತಮ್ಮ ಈ ಹೊಸ ಚಿತ್ರದ ಬಗ್ಗೆ ಜಗ್ಗೇಶ್​ ಶೇರ್​ ಮಾಡಿಕೊಂಡಿದ್ದರು.  ‘ರಾಘವೇಂದ್ರ ಸ್ಟೋರ್ಸ್‌’ ಚಿತ್ರವು  ಅದ್ಭುತ ನಿರ್ದೇಶನ, ಅದ್ಭುತ ಸಂಗೀತ, ಅದ್ಭುತ ಸಂಕಲನ, ಅದ್ಭುತ ಛಾಯಾಗ್ರಹಣ, ಒಟ್ಟಾರೆ ಹೊಂಬಾಳೆ ಫಿಲಂಸ್‌ ಸಂಸ್ಥೆಯ ಅದ್ಭುತ ಚಿತ್ರ..  ಇಂಥ ಅದ್ಭುತ ಚಿತ್ರ ಕಟ್ಟಿಕೊಟ್ಟ ಸಂತೋಷ್‌ ಆನಂದ್‌ ರಾಮ್‌ (Santosh Anand Ram)ರವರಿಗೆ ಧನ್ಯವಾದಗಳು' ಎಂದು ಜಗ್ಗೇಶ್​ ಬರೆದುಕೊಂಡಿದ್ದರು. ನನ್ನ ಪ್ರಕಾರ ಈ ಚಿತ್ರ ಕನ್ನಡಿಗರ ಮನಗೆಲ್ಲುತ್ತದೆ. ಬಹಳ ವರ್ಷ ನೆನಪಲ್ಲಿ ಉಳಿಯುತ್ತದೆ. ಅತಿ ಶೀಘ್ರ ಚಿತ್ರಮಂದಿರದಲ್ಲಿ ಎಂದಿದ್ದರು. ಇದೀಗ ಬಿಡುಗಡೆಯ ದಿನಾಂಕವೂ ಘೋಷಣೆಯಾಗಿದೆ. ಅಂದಹಾಗೆ 'ರಾಘವೇಂದ್ರ ಸ್ಟೋರ್ಸ್' ಸಿನಿಮಾದಲ್ಲಿ 40 ವರ್ಷ ದಾಟಿದರೂ ಮದುವೆಯಾಗದ ಅಡುಗೆ ಭಟ್ಟರ ಪಾತ್ರದಲ್ಲಿ ಜಗ್ಗೇಶ್ ಕಚಗುಳಿ ಇಟ್ಟಿದ್ದಾರೆ.

Alia Bhatt: ಪತ್ನಿಯಿಂದ ದೂರವಿರಿ ಎಂದು ರಣಬೀರ್​ಗೆ ನೆಟ್ಟಿಗರ ಸಲಹೆ! ಯಾಕೆ ಗೊತ್ತಾ?

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ