Kabzaa; ಪಾರ್ಟ್-2ನಲ್ಲಿ ಅಮರಾಪುರ 'ಕಬ್ಜ' ಮಾಡಿ ಉಪ್ಪಿ ಸಾಮ್ರಾಜ್ಯಕ್ಕೆ ಅಧಿಪತಿ ಆಗ್ತಾರಾ ಶಿವಣ್ಣ?

By Shruthi Krishna  |  First Published Mar 17, 2023, 1:37 PM IST

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕಬ್ಜ ಕ್ಲೈಮ್ಯಾಕ್ಸ್ ನಲ್ಲಿ ಎಂಟ್ರಿ ಕೊಟ್ಟಿದ್ದು  ಪಾರ್ಟ್ -2 ಮೇಲೆ ನಿರೀಕ್ಷೆ ಹೆಚ್ಚಿಸಿದ್ದಾರೆ.  


ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಕಬ್ಜ ಸಿನಿಮಾ ಅದ್ದೂರಿಯಾಗಿ ರಿಲೀಸ್ ಆಗಿದೆ. ವಿಶ್ವದಾದ್ಯಂತ ಸಿನಿಮಾ ಬಿಡುಗಡೆಯಾಗಿದೆ. 4000ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಕಬ್ಜ ಸಿನಿಮಾ ತೆರೆಗೆ ಬಂದಿದೆ. ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮೂವರು ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳ ಕಣ್ಣಿಗೆ ಹಬ್ಬವಾಗಿದೆ. ಇಂದು (ಮಾರ್ಚ್ 17) ಬೆಳಗ್ಗೆಯೇ ಅಭಿಮಾನಿಗಳು  ಕಬ್ಜ ನೋಡಿ ಆನಂದಿಸಿದ್ದಾರೆ. ರಿಯಲ್ ಸ್ಟಾರ್ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. 

ಕಬ್ಜ ಕ್ಲೈಮ್ಯಾಕ್ಸ್  ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಪಾರ್ಟ್-2ಗೆ ಲೀಡ್ ಕೊಟ್ಟಿರುವುದು ಸರ್ಪ್ರೈಸಿಂಗ್ ಆಗಿದೆ. ವಿಶೇಷ ಎಂದರೆ ಕ್ಲೈಮ್ಯಾಕ್ಸ್ ನಲ್ಲಿ ಎಂಟ್ರಿ ಕೊಡುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ 2ನೇ ಭಾಗದ ಮೇಲಿನ ಕುತೂಹಲ ಹೆಚ್ಚಿಸಿದ್ದಾರೆ. ಮೊದಲ ಭಾಗದಲ್ಲಿ ಶಿವಣ್ಣನ ಪಾತ್ರದ ಬಗ್ಗೆ ಹೆಚ್ಚು ರಿವೀಲ್ ಮಾಡಿಲ್ಲ. ಆದರೆ ಮಾಸ್ ಎಂಟ್ರಿ ಕೊಡುವ ಶಿವಣ್ಣನ್ನು ನೋಡಿದ್ರೆ ಮಾಫಿಯಾ ಲೀಡರ್ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಕಿಚ್ಚ ಸುದೀಪ್ ಭಾರ್ಗವ ಬಕ್ಷಿ ಎನ್ನುವ ಪೊಲೀಸ್ ಆಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಅರ್ಕೇಶ್ವರ ಪಾತ್ರದಲ್ಲಿ ಮಿಂಚಿದ್ದಾರೆ. ಅರ್ಕೇಶ್ವರ  ಎದುರಾಳಿಗಳನ್ನು ಹೊಡೆದಾಕಿ ಅಮರಾಪುರ ಕಬ್ಜ ಮಾಡಿಕೊಂಡು ಆಳ್ವಿಕೆ ನಡೆಸುತ್ತಿರುತ್ತಾನೆ. 

Kabzaa Twitter Review; ಉಪೇಂದ್ರ ಸಿನಿಮಾ ನೋಡಿ ಫ್ಯಾನ್ಸ್ ಹೇಳಿದ್ದೇನು, ಹೇಗಿದೆ ಕಿಚ್ಚ, ಶಿವಣ್ಣನ ಪಾತ್ರ?

Tap to resize

Latest Videos

ಸಿನಿಮಾದ ಕ್ಲೈಮ್ಯಾಕ್ಸ್ ನಲ್ಲಿ ಶಿವಣ್ಣ, ಸುದೀಪ್ ಹಾಗೂ ಉಪೇಂದ್ರ ಮೂವರು ಮುಖಾಮುಖಿಯಾಗುತ್ತಾರೆ. ಒಂದೇ ಪ್ರೇಮ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಕಬ್ಜ ಮಾಡಲು ಬಂದಿದ್ದು ಎಂದು ಹೇಳುತ್ತಾ ಫೈಯರ್ ಡೈಲಾಗ್ ಹೊಡೆಯುವ ಶಿವಣ್ಣನ ಎಂಟ್ರಿ 2ನೇ ಭಾಗದ  ಮೇಲಿನ ಕುತೂಹಲ ಹೆಚ್ಚಿಸಿದೆ. ಯಾರಿಗೂ ಹೆದರದೇ ಎಲ್ಲರನ್ನೂ ಶೂಟ್ ಮಾಡಿ ಸಾಯಿಸಿ ಸಾಮ್ರಾಜ್ಯ ಕಟ್ಟಿದ್ದ ಅರ್ಕೇಶ್ವರ ಶಿವಣ್ಣನನ್ನು ನೋಡಿ ಗಾಬರಿಬೀಳುತ್ತಾನೆ. ಶಿವಣ್ಣ ಯಾರು, ಉಪೇಂದ್ರಗೆ ಏನಾಗಬೇಕು ಎನ್ನುವುದು 2ನೇ ಭಾಗದಲ್ಲಿ ರಿವೀಲ್ ಆಗಲಿದೆ. 

Kabzaa; 50 ದೇಶ, 4000ಕ್ಕೂ ಅಧಿಕ ಚಿತ್ರಮಂದಿರ, ಅದ್ದೂರಿಯಾಗಿ ತೆರೆಗೆ ಬಂದ ರಿಯಲ್ ಸ್ಟಾರ್ ಸಿನಿಮಾ

ಅಮಾರಾಪುರ ವಶಪಡಿಸಿಕೊಂಡು ಶಿವಣ್ಣ ಸಾಮ್ರಾಜ್ಯ ಆಳ್ತಾರಾ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿಸಿದೆ. ಕ್ಲೈಮ್ಯಾಕ್ಸ್ ನಲ್ಲಿ ಬರುವ ಶಿವಣ್ಣ 2ನೇ ಭಾಗದಲ್ಲಿ ಹೆಚ್ಚಾಗಿ ತೆರೆಮೇಲೆ ಮಿಂಚುವ ಸಾಧ್ಯತೆ ಇದೆ. ಸುದೀಪ್ ಅವರ ಪಾತ್ರ ಕೂಡ 2ನೇ ಭಾಗಕ್ಕೆ ಮುಂದುವರೆದಿದೆ. ಹಾಗಾಗಿ ಪಾರ್ಟ್ -2 ಮೇಲೆ ಕುತೂಹಲ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಸಿನಿಮಾತಂಡ ಯಾವಾಗ ಅಭಿಮಾನಿಗಳ ಮುಂದೆ ಬರುತ್ತೆ ಎಂದು ಕಾದು ನೋಡಬೇಕಿದೆ.  

 

click me!