ಕೀಮೋದಿಂದ ಕೂದಲು ಉದುರುತ್ತೆ ಅನ್ನೋ ಭಯ ಇತ್ತು, ಅರ್ಜುನ್ ಜನ್ಯ ಅತ್ಬಿಟ್ರು: ಶಿವರಾಜ್‌ಕುಮಾರ್

ಎನರ್ಜಿಟಿಕ್ ಶಿವಣ್ಣ ಆರೋಗ್ಯ ಸಮಸ್ಯೆ ಬಗ್ಗೆ ಹೇಳಿಕೊಂಡಾಗ ಅರ್ಜುನ್ ಜನ್ಯ ಭಾವುಕರಾಗಿದ್ದಾರೆ. ಜನರ ಪ್ರೀತಿ ನನ್ನನ್ನು ಕಾಪಾಡಿದೆ ಎಂದಿದ್ದಾರೆ ನಟ.


ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮೊದಲ ಸಲ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಅದುವೇ 45 ಎಂಬ ಚಿತ್ರಕ್ಕೆ. ಈ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಟಿಸುತ್ತಿದ್ದಾರೆ. ಆ.15ರಂದು ಸಿನಿಮಾ ರಿಲೀಸ್ ಆಗಲಿದೆ ಆದರೆ ಈಗ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಟೀಸರ್ ರಿಲೀಸ್ ಕಾರ್ಯಕ್ರಮಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಆಗಮಿಸಿದ್ದರು. ಹೀಗೆ ಸಿನಿಮಾ ಮತ್ತು ಆರೋಗ್ಯದ ಬಗ್ಗೆ ಮಾತನಾಡುವಾಗ ಅರ್ಜುನ್ ಜನ್ಯ ಮಗು ಗುಣದ ಬಗ್ಗೆ ಶಿವಣ್ಣ ರಿವೀಲ್ ಮಾಡಿದ್ದಾರೆ. 

'ಎಲ್ಲರೂ ನಮ್ಮ ಕುಟುಂಬವೇ. ನನಗೆ ಕ್ಯಾನ್ಸರ್‌ ಅಂತ ನಾನು ಹೇಳುವವರೆಗೂ ಮಾಧ್ಯಮಗಳು ಕೂಡ ಎಲ್ಲೂ ಹೇಳಲಿಲ್ಲ. ದುಡ್ಡು ಬರುತ್ತೆ ಹೋಗುತ್ತೆ ಪ್ರೀತಿ ಮತ್ತು ವಿಶ್ವಾಸ ಶಾಶ್ವತವಾಗಿ ಉಳಿದುಕೊಳ್ಳುತ್ತದೆ. ಆ ದಿನ ನಾನು ಕೀಮೋಥೆರಪಿಗೆ ಹೋಗಬೇಖು ಎಂದಾಗ ಅರ್ಜುನ್ ಜನ್ಯ ಚಿಕ್ಕ ಮಗು ಥರ ಅತ್ಬಿಟ್ರು. ಕ್ಯಾನ್ಸಲ್ ಮಾಡಬೇಕಾ ಅಂತ ಕೇಳಿದರು. 45 ಸಿನಿಮಾವನ್ನು ನಾನು ಮುಗಿಸಿಕೊಡಲೇಬೇಕು ಅಂತ ಡಾಕ್ಟರ್‌ಗೆ ಹೇಳಿದ್ದೆ. ನೀವು ಶೂಟಿಂಗ್‌ಗೆ ಒಪ್ಪಿದರೆ ಕೀಮೋಥೆರಪಿ ಮಾಡಿಸಿಕೊಳ್ಳುತ್ತೇನೆ ಅಂತ ಡಾಕ್ಟರ್‌ಗೆ ಹೇಳಿದ್ದೆ. ಅವರು ಇಲ್ಲ ಇಲ್ಲ ಮಾಡಲೇಬೇಕು ಅಂತ ಮಾಡಿಸಿದ್ದರು' ಎಂದು ವೇದಿಕೆ ಮೇಲೆ ನಟ ಶಿವರಾಜ್‌ಕುಮಾರ್ ಮಾತನಾಡಿದ್ದಾರೆ.  

Latest Videos

ಕೈಗೆ ದುಡ್ಡು ಬಂದ್ರೆ ಚಿನ್ನ ಖರೀದಿಸುತ್ತೀನಿ, ಕಷ್ಟ ಬಂದ್ರೆ ಅಡವಿಡುತ್ತೀನಿ: ಸೋನು ಗೌಡ

'ದೇವರ ದಯೇ ಕೀಮೋ ಮಾಡಿಸಿದ ಮೇಲೆ ಕೂದಲು ಉದುರತ್ತೆ ಅನ್ನೋ ಭಯ ಇತ್ತು ಆದರೆ ಆಗಲಿಲ್ಲ. ಎಲ್ಲರ ಪ್ರೀತಿ,ಆಶೀರ್ವಾದ ಇತ್ತು ನನ್ನ ಮೇಲೆ. ಸ್ವಲ್ಪ ಸುಸ್ತು ಆಗುತ್ತೆ ಆದರೂ ನಮ್ಮ ಟೀಮ್‌ ನನ್ನ ಜೊತೆಗೆ ಪಿಲ್ಲರ್ ಥರ ಸಪೋರ್ಟ್ ಮಾಡಿದರು. ಟೀಸರ್ ನೋಡಿದಾಗ ಖುಷಿ ಆಯ್ತು ಡಬಲ್ ಎನರ್ಜಿ ಬಂದಿದೆ ಅಂತ ಅನಿಸುತ್ತದೆ. ಕಳೆದ ಏಪ್ರಿಲ್‌ನಿಂದ ಈ ಮಾರ್ಚ್‌ವರೆಗೂ ಮೈಂಡ್‌ನಲ್ಲಿ ಏನೋ ಒಂದು ಓಡುತ್ತಿತ್ತು. ಈಗ ಹುಷಾರಾಗಿ ವಾಪಸ್ ಬಂದಿದ್ದೀನಿ' ಎಂದು ಶಿವಣ್ಣ ಹೇಳಿದ್ದಾರೆ. 

ನಾವು ಶೇರ್ ಮಾಡುವ ಬಾಂಡಿಂಗ್ ಬೇರೆ; ರಚಿತಾ ರಾಮ್‌ ಜೊತೆ ಮದುವೆ ಅನ್ನೋರಿಗೆ ಕ್ಲಾರಿಟಿ ಕೊಟ್ಟ ಧನ್ವೀರ್!

click me!