ನಾವು ಶೇರ್ ಮಾಡುವ ಬಾಂಡಿಂಗ್ ಬೇರೆ; ರಚಿತಾ ರಾಮ್‌ ಜೊತೆ ಮದುವೆ ಅನ್ನೋರಿಗೆ ಕ್ಲಾರಿಟಿ ಕೊಟ್ಟ ಧನ್ವೀರ್!

ನಟ ಧನ್ವೀರ್ ಮದುವೆ ಆಗ್ತಿದಾರಾ? ಅದು ನಟಿ ರಚಿತಾ ರಾಮ್‌ನಾ? ಇಬ್ಬರಿಗೂ ವಯಸ್ಸಿನ ಅಂತರ ಎಷ್ಟಿದೆ?ಇಲ್ಲಿದೆ ಸಂಪೂರ್ಣ ಮಾಹಿತಿ...


ಸ್ಯಾಂಡಲ್‌ವುಡ್‌ ಡಿಂಪಲ್ ಹುಡುಗಿ, ಡ್ರೀಮ್ ಗರ್ಲ್ಸ್‌ ರಚಿತಾ ರಾಮ್ ಈಗ ಮದುವೆ ಆಗ್ತಾರೆ ಆಗ ಮದುವೆ ಆಗ್ತಾರೆ, ಈ ನಾಯಕನನ್ನು ಪ್ರೀತಿಸುತ್ತಿದ್ದಾರೆ ಆ ನಾಯಕನ ಜೊತೆ ಓಡಾಡುತ್ತಿದ್ದಾರೆ ಅಂತ ಕೇಳಿ ಬಂದಿರುವ ಗಾಸಿಪ್ ತುಂಬಾನೇ ಕಡಿಮೆ. ಆದರೆ ರಚಿತಾ ರಾಮ್ ಮತ್ತು ನಟ ಧನ್ವೀರ್ ಲವ್ ಮಾಡ್ತಿದ್ದಾರೆ, ದಿಢೀರ್ ಮದುವೆ ಫಿಕ್ಸ್ ಆಗ್ತಿದೆ ಅನ್ನೋದು ದೊಡ್ಡ ಸುದ್ದಿಯಾಗಿತ್ತು. ಈ ವಿಚಾರದ ಬಗ್ಗಡ ನಟಿ ರಚಿತಾ ರಾಮ್ ರಿಯಾಕ್ಟ್ ಮಾಡಿಲ್ಲ ಏಕೆಂದರೆ ಟ್ರೋಲ್ ಮತ್ತು ನೆಗೆಟಿವ್ ಕಾಮೆಂಟ್‌ಗಳಿಗೆ ತಲೆ ಕೆಡಿಸಿಕೊಳ್ಳುವುದು ತುಂಬಾನೇ ಕಡಿಮೆ. ಆದರೆ ಈ ಗಾಸಿಪ್‌ಗೆ ನಟ ಧನ್ವೀರ್ ರಿಯಾಕ್ಟ್ ಮಾಡಿದ್ದಾರೆ. 

ಮೋಸ್ಟ್‌ ಹ್ಯಾಂಡ್ಸಮ್ ಬ್ಯಾಚುಲರ್ ಆಫ್ ಸ್ಯಾಂಡಲ್‌ವುಡ್‌ ಅಂತ ಪಟ್ಟ ಗಿಟ್ಟಿಸಿಕೊಂಡಿರುವುದು ನಟ ಧನ್ವೀರ್. ಮಹಿಳಾ ಅಭಿಮಾನಿಗಳ ಸಂಖ್ಯೆ ನೋಡಿದ್ರೆ ಶಾಕ್ ಆಗಿಬಿಡುತ್ತೀರಿ. ಹಾಗಿದ್ರೆ ಧನ್ವೀರ್ ಸಿಂಗಲ್ಲಾ ಎಂದು ಪ್ರಶ್ನಿಸಿದ್ದಕ್ಕೆ...'ನಾನು ಸಿಂಗಲ್ ಆಗಿದ್ದೀನಿ...ಲೈಫ್‌ ಲಾಂಗ್ ಸಿಂಗಲ್ ಆಗಿದ್ದು ಬಿಡೋಣ ಅಂದುಕೊಂಡಿದ್ದೀನಿ'ಎಂದು ಹೇಳಿದ್ದಾರೆ.

Latest Videos

ಹಬ್ಬದಂದು ಮ್ಯಾಚಿಂಗ್ ಮ್ಯಾಚಿಂಗ್ ಬಟ್ಟೆ ಧರಿಸಿದ ನೇಹಾ ಗೌಡ ಫ್ಯಾಮಿಲಿ; ಫೋಟೋ ವೈರಲ್

ರಚಿತಾ ರಾಮ್ ಜೊತೆ ಮದುವೆ? 

'ರಚಿತಾ ರಾಮ್ ಮಾತ್ರವಲ್ಲ ಬೇರೆ ಅವರ ಜೊತೆಗೂ ನನಗೆ ಸಾಕಷ್ಟು ಸಲ ಸಂಬಂಧ ಕಟ್ಟಿದ್ದಾರೆ. ಜನರೇ ಸಂಬಂಧ ಕಟ್ಟಿ ಅವರೇ ಛೌಟ್ರಿ ಕೂಡ ಬುಕ್ ಮಾಡಿಬಿಟ್ಟಿದ್ದಾರೆ. ತಾಂಬುಲ ಬದಲಾಯಿಸಿಲ್ಲ ಅದು ಬಿಟ್ಟು ಬೇರೆ ಎಲ್ಲನೂ ಮಾಡಿಬಿಟ್ಟಿದ್ದಾರೆ.ನಾಯಕಿ ಪಕ್ಕ ಕುಳಿತುಕೊಂಡು ಮಾತನಾಡುತ್ತಿದ್ದರೆ ಫೋಟೋ ತೆಗೆದುಕೊಂಡು ಗಾಸಿಪ್ ಕ್ರಿಯೇಟ್ ಮಾಡುತ್ತಾರೆ. ಓ ಇವರಿಬ್ಬರ ನಡುವೆ ಏನೋ ಆಗುತ್ತಿದೆ ಎಂದು ಗಾಸಿಪ್ ಶುರು ಮಾಡುತ್ತಾರೆ ಯಾರೂ ಯಾರೊಟ್ಟಿಗೂ ಮಾತನಾಡುವಂತೆ ಇಲ್ಲ. ನಾವು ಶೇರ್ ಮಾಡುವ ಬಾಂಡಿಂಗ್ ಏನು ಅಂತ ನಮಗೆ ಮಾತ್ರ ಗೊತ್ತಿರುವುದು. ಈಗ ನಾನು ರಚಿತಾ ರಾಮ್‌ ಜೊತೆ ಶೇರ್ ಮಾಡುವ ಬಾಂಡಿಂಗ್ ಬೇರೆ ಅವರ ಕಷ್ಟ ಸುಖ ನಮ್ಮ ಕಷ್ಟ ಸುಖ ಹಂಚಿಕೊಳ್ಳುವ ರೀತಿನೇ ಬೇರೆ. ಆ ಸಮಯದಲ್ಲಿ ಎಲ್ಲಾ ಜನರ ಮಾಡಿಬಿಟ್ಟರು. ಈ ಗಾಸಿಪ್‌ಗಳು ನನಗೆ ಇಷ್ಟ ಆಗುವುದಿಲ್ಲ' ಎಂದು ಧನ್ವೀರ್ ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

ಕಾಫಿ ಹೂವಿಗೆ ಮುತ್ತು ಕೊಟ್ರೆ ರೇಟ್ ಆಕಾಶ ಮುಟ್ಟದೆ ಏನ್ ಮಾಡುತ್ತೆ; ಭವ್ಯಾ ಗೌಡ ಫೋಟೋ ವೈರಲ್

click me!