ಮಕ್ಕಳಾದ ಬಳಿಕ ಸಿನಿಮಾದಿಂದ ದೂರ ಉಳಿದ ಜೆನಿಲಿಯಾ 10 ವರ್ಷಗಳ ನಂತರ ಕಮ್‌ಬ್ಯಾಕ್ ಮಾಡಿದ್ದಾರೆ. ಈ ಸಮಯದಲ್ಲಿ ಜನರು ನೀಡಿದ ಟೀಕೆಗಳಿಗೆ ಅವರು ಹೇಗೆ ಪ್ರತಿಕ್ರಿಯಿಸಿದರು ಎಂಬುದನ್ನು ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.
ಸುಮಾರು 6 ಭಾಷೆಗಳಲ್ಲಿ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಜೆನಿಲಿಯಾ ಮಕ್ಕಳಾದ ಮೇಲೆ ಸಿನಿಮಾದಿಂದ ಸಂಪೂರ್ಣವಾಗಿ ದೂರ ಉಳಿದುಬಿಟ್ಟರು. ಒಂದೆರಡು ವರ್ಷ ಆಗಿದಿದ್ರೆ ಜನರು ಏನೂ ಮಾತನಾಡುತ್ತಿರಲಿಲ್ಲ ಆದರೆ 10 ವರ್ಷ ಆದ ಕಾರಣ ಕಮ್ ಬ್ಯಾಕ್ ಪದ ಬಳಸುವ ಪರಿಸ್ಥಿತಿ ಎದುರಾಗಿತ್ತು ಹಾಗೂ ಮಾಡ್ಬೇಕಾ ಅನ್ನೋ ಪ್ರಶ್ನೆ ಕೂಡ ಮುಂದಿಟ್ಟರು. ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ಜೆನಿಲಿಯಾ ಕಮ್‌ಬ್ಯಾಕ್ ಮಾಡುವ ಸಮಯದಲ್ಲಿ ಜನರು ಎಷ್ಟು ಕೊಂಕು ಮಾಡಿದರು, ಅವರಿಗೆ ಏನ್ ಉತ್ತರ ಕೊಟ್ಟ ಎಂದು ನಟಿ ಹಂಚಿಕೊಂಡಿದ್ದಾರೆ.
'ಸೋಲು, ಗೆಲುವು ಹಾಗೂ ಕಮ್ ಬ್ಯಾಕ್ ಮಾಡುವುದು ನಮ್ಮ ಜೀವನದ ಒಂದು ಭಾಗ. ನಮ್ಮ ಯಶಸ್ಸನ್ನು ನಾವೇ ಹೈಪ್ ಕೊಟ್ಟುಕೊಂಡು ಕೊನೆಯಲ್ಲಿ ನಮ್ಮ ಸೋಲಿನ ಬಗ್ಗೆಯೂ ತಲೆ ಕೆಡಿಸಿಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ. ಇದರಿಂದ ನಮ್ಮ ದಿನನಿತ್ಯದ ಕೆಲಸ ಮತ್ತು ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಸುಮಾರು 6 ಭಾಷೆಗಳಲ್ಲಿ ಕೆಲಸ ಮಾಡಿದ್ದೀನಿ ಆದರೆ ನಾನು ಬ್ರೇಕ್ ತೆಗೆದುಕೊಂಡ ಕಾರಣವೇ ನನಗೆ ಮಕ್ಕಳಾದ ಸಮಯದಲ್ಲಿ. ಆದರೆ ಜನರು ನನ್ನ ಬಗ್ಗೆ ತುಂಬಾ ಮಾತನಾಡಲು ಶುರು ಮಾಡಿಬಿಟ್ಟರು ಅಯ್ಯೋ ನೀನು 10 ವರ್ಷಗಳಾದ ಮೇಲೆ ಕಮ್ ಬ್ಯಾಕ್ ಮಾಡಬೇಕಾ ಎಂದು. ಜನರ ಮಾತುಗಳು ವರ್ಕ್ ಆಗುವುದಿಲ್ಲ. ಏಕೆಂದರೆ ನನ್ನ ಕಮ್‌ಬ್ಯಾಕ್ ಸಿನಿಮಾ ದೊಡ್ಡ ಯಶಸ್ಸು ಮತ್ತು ಕಲೆಕ್ಷನ್ ಮಾಡಿತ್ತು' ಎಂದು ಜೆನಿಲಿಯಾ ಮಾತನಾಡಿದ್ದಾರೆ.
ಅಂತೂ ಇಂತೂ ಹೋಳ್ಗೆ ಮಾಡೋದು ಕಲ್ತೆ ಎಂದ ಮೋಕ್ಷಿತಾ;ನಮ್ ಮನೆ ಸೊಸೆ ನೀನೇ ಎಂದ ನೆಟ್ಟಿಗರು!
'ನನ್ನ ಬ್ರೇಕ್‌ನಲ್ಲಿ ನನ್ನ ಮಕ್ಕಳ ಹಾರೈಕೆಯಲ್ಲಿ ನಾನು ಬ್ಯುಸಿಯಾಗಿದ್ದೆ. ಆ 10 ವರ್ಷಗಳ ಅವಧಿಯಲ್ಲಿ ನನ್ನ ದೈಹಿಕ ಮತ್ತು ಮಾನಸಿಕ ಆರೋಗ್ಯ ಹಾಗೂ ಮಕ್ಕಳ ಮೇಲೆ ಗಮನ ಕೊಡುತ್ತಿದ್ದೆ. ನಮ್ಮ ಮಕ್ಕಳನ್ನು ಸಮರ್ಥರನ್ನಾಗಿ ಮಾಡಬೇಕು ಎಂದು ರಿತೇಶ್ ಪದೇ ಪದೇ ಹೇಳುತ್ತಿದ್ದರು. ಅಲ್ಲದೆ ಸಸ್ಯಹಾರಿಯಾಗಿ ನನ್ನ ಡಯಟ್ ತುಂಬಾ ಕಷ್ಟಕರವಾಗಿತ್ತು.ಆ ಸಮಯದಲ್ಲಿ ನಮ್ಮ ಬ್ರಾಂಡ್ ಬಗ್ಗೆ ಯೋಚನೆ ಮಾಡಿ Imagineನ ಕ್ರಿಯೇಟ್ ಮಾಡಿತ್ತು. ಸಸ್ಯಹಾರಿಗಳಾಗಿ ನಮಗೆ ಬಹಳ ಕಡಿಮೆ ಪ್ರೋಟಿನ್ ಆಯ್ಕೆಗಳು ಇದೆ ಹೀಗಾಗಿ ಈ ದಾರಿ ಹುಡುಕಿ ಕೊಟ್ಟಿದ್ದು ರಿತೇಶ್' ಎಂದು ಜೆನಿಲಿಯಾ ಹೇಳಿದ್ದಾರೆ.
ಚಿಕಿತ್ಸೆಗೆ 16 ಕೋಟಿ ರೂ. ಅಂತ ಕೇಳಿ ಶಾಕ್ ಆಯ್ತು, ದಯವಿಟ್ಟು ಸಹಾಯ ಮಾಡಿ; ಪುಟಾಣಿ ಪರ ನಿಂತ ಸುದೀಪ್