ಕಾಂತಾರ ಚಾಪ್ಟರ್ 1’ ಚಿತ್ರದಲ್ಲಿ ನಟಿಸುವ ಆಸೆ ಇದ್ದರೆ ಅಂಥವರಿಗೆ ಹೊಂಬಾಳೆ ಫಿಲಮ್ಸ್ ಒಳ್ಳೆಯ ಆಫರ್ ಕೊಟ್ಟಿದೆ. ಇನ್ನೇಕೆ ತಡ, ಕೂಡಲೇ ಅರ್ಜಿ ಸಲ್ಲಿಸಿ. ಇಲ್ಲಿದೆ ಡಿಟೇಲ್ಸ್.
ರಿಷಬ್ ಶೆಟ್ಟಿ ನಟನೆ, ನಿರ್ದೇಶನ, ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ‘ಕಾಂತಾರ ಚಾಪ್ಟರ್ 1’ (Kantara Chapter 1) ಚಿತ್ರದ ಮೊದಲ ಪೋಸ್ಟರ್ ಇತ್ತೀಚೆಗೆ ಅನಾವರಣಗೊಂಡಿತ್ತು. ‘ಕಾಂತಾರ’ ಚಿತ್ರದ ಕಥೆ ನಡೆಯುವುದಕ್ಕೂ ಮೊದಲು ಏನಾಗಿತ್ತು ಎಂಬುದನ್ನು ಈ ಚಿತ್ರದಲ್ಲಿ ಹೇಳುತ್ತಿದೆ. ಫಸ್ಟ್ ಪೋಸ್ಟರ್ ಸಾಕಷ್ಟು ಗಮನ ಸೆಳೆದಿದೆ. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ, ಬೆಂಗಾಲಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಸಿನಿಮಾ ಸಿದ್ಧವಾಗುತ್ತಿದೆ. ಸಿನಿಮಾದ ಫಸ್ಟ್‌ಲುಕ್ ಯೂಟ್ಯೂಬ್‌ನಲ್ಲಿ ನಂ.1 ಟ್ರೆಡಿಂಗ್‌ನಲ್ಲಿದೆ. ಇದಾಗಲೇ 2 ಕೋಟಿಗೂ ಅಧಿಕ ಮಂದಿ ಫಸ್ಟ್ ಲುಕ್ ಟೀಸರ್ ವೀಕ್ಷಣೆ ಮಾಡಿದ್ದಾರೆ. ಫಸ್ಟ್ ಲುಕ್ ಅಪ್ಲೋಡ್ ಮಾಡಿ 24 ಗಂಟೆಗಳ ಅವಧಿಯಲ್ಲಿ 1 ಕೋಟಿ 20 ಲಕ್ಷಕ್ಕೂ ಅಧಿಕ ಮಂದಿ ಕಾಂತಾರ ಪ್ರೀಕ್ವಲ್‌ನ ನೋಡಿದ್ದು ದಾಖಲೆಯಾಗಿತ್ತು. ದಕ್ಷಿಣ ಭಾರತೀಯ ನಟರಾದ ಪ್ರಭಾಸ್, ರಕ್ಷಿತ್ ಶೆಟ್ಟಿ, ಪೃಥ್ವಿರಾಜ್ ಮೊದಲಾದವರು ಟೀಸರ್ ಬಗ್ಗೆ ಪ್ರಶಂಸಿಸಿದ್ದರು. ಇದರಲ್ಲಿ ರಿಷಬ್ ಶೆಟ್ಟಿ ಅವತಾರ ನೋಡಿ ಫ್ಯಾನ್ಸ್ ರೋಮಾಂಚನಗೊಂಡಿದ್ದಾರೆ. ಗೂಗಲ್‌ನಲ್ಲೂ ‘ಕಾಂತಾರ 1’ ರಿಲೀಸ್ ದಿನಾಂಕದ ಬಗ್ಗೆ ಅತೀ ಹೆಚ್ಚು ಸರ್ಚ್ ನಡೆದಿದ್ದು, ಗೂಗಲ್ ಇಂಡಿಯಾ ಎಕ್ಸ್‌ನಲ್ಲಿ ಈ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದೆ. ಈ ವೇಳೆ ‘ಕಾಂತಾರ 1’ ಎಂಬುದನ್ನು ಕನ್ನಡದಲ್ಲೇ ಬರೆದದ್ದು ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಮತ್ತು ಬಂಗಾಳಿ ಭಾಷೆಗಳಲ್ಲಿ ಕಾಂತಾರ ಫಸ್ಟ್‌ಲುಕ್ ಬಿಡುಗಡೆಯಾಗಿತ್ತು. ಒಂದೇ ವಿಡಿಯೋದಲ್ಲಿ ಸೆಟ್ಟಿಂಗ್‌ನಲ್ಲಿ ಭಾಷೆ (ಸೌಂಡ್ ಟ್ರ್ಯಾಕ್) ಬದಲಾಯಿಸುವ ಅವಕಾಶ ನೀಡಿದ್ದು ವಿಶೇಷವಾಗಿತ್ತು.
ಈ ಮೂಲಕ, ಕಾಂತಾರ ಸಿನಿಮಾ ಕರ್ನಾಟಕ, ಭಾರತ ಮಾತ್ರವಲ್ಲದೇ ಇದೀಗ ಅಂತರರಾಷ್ಟ್ರೀಯ ಮನ್ನಣೆಯನ್ನೂ ಗಳಿಸಿದೆ. ಕಾಂತಾರಾ ಪ್ರೀಕ್ವಲ್ ಯಾವಾಗ ಬರುತ್ತದೆ ಎಂದು ಫ್ಯಾನ್ಸ್ ಕಾತರದಿಂದ ಕಾಯುತ್ತಿರುವ ನಡುವೆಯೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿಯೂ ಕಾಂತಾರಾ ಮನ್ನಣೆ ಗಳಿಸಿದೆ. ಅತ್ಯಂತ ಕಡಿಮೆ ಬಜೆಟ್‌ನಲ್ಲಿ ತಯಾರಾಗುವ ಚಿತ್ರ ಕೂಡ ಅಂತರರಾಷ್ಟ್ರೀಯ ಮಟ್ಟವನ್ನು ತಲುಪಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ರಿಷಬ್ ಶೆಟ್ಟಿ ಇದೀಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಪರಭಾಷಿಕರು ಕನ್ನಡದ ಸಿನಿಮಾ ನೋಡುವ ದೃಷ್ಟಿಯೇ ಬೇರೆ ಮಾಡಿದ ಶ್ರೇಯಸ್ಸು ಕೂಡ ಇವರದ್ದು. ಕನ್ನಡದಲ್ಲಿ ಹಿಟ್ ಆಗುತ್ತಿದ್ದಂತೆಯೇ, ಪರಭಾಷೆಗಳಿಂದ ರಿಷಬ್ ಶೆಟ್ಟಿ ಅವರಿಗೆ ಬೇಡಿಕೆ ಹೆಚ್ಚಾಗಿದೆ.
ಒಬ್ಬರಿಗಾದ್ರೂ ನಾನು ಹೇಳಿದ್ದೇನೆಂದು ಅರ್ಥವಾಯ್ತಲ್ಲ, ಅಷ್ಟೇ ಸಾಕು: ರಿಷಬ್ ಶೆಟ್ಟಿ ಹೀಗೆ ಅಂದಿದ್ದೇಕೆ?
‘ಕಾಂತಾರ ಚಾಪ್ಟರ್ 1’ನಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ರಿಷಬ್ ಶೆಟ್ಟಿ ಬಹಳ ಹಿಂದೆಯೇ ಹೇಳಿದ್ದರು. ಅದರಂತೆಯೇ ಅವರೀಗ ನಡೆದುಕೊಂಡಿದ್ದಾರೆ. ‘ಕಾಂತಾರ ಚಾಪ್ಟರ್ 1’ ಚಿತ್ರದಲ್ಲಿ ನಟಿಸೋಕೆ ಕಲಾವಿದರ ಅವಶ್ಯಕತೆ ಇದ್ದು, ಇದಕ್ಕಾಗಿ ಕಲಾವಿದರಿಗೆ ಆಹ್ವಾನ ಮಾಡಲಾಗಿದೆ. ಚಿತ್ರದಲ್ಲಿ ನಟಿಸಬೇಕು ಎನ್ನುವ ಕನಸು ಕಂಡಿರೋ ಕಲಾವಿದರೆ ಇದೊಳ್ಳೆ ಅವಕಾಶವಿದೆ. ಕಲಾವಿದರು ಬೇಕಾಗಿದ್ದಾರೆ ಎನ್ನುವ ಆಹ್ವಾನವನ್ನೂ ನೀಡಲಾಗಿದೆ. 2024ರ ಆರಂಭದಲ್ಲಿ ಸಿನಿಮಾ ಕೆಲಸ ಪ್ರಾರಂಭ ಆಗಲಿದೆ. ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಅವರೇ ನಾಯಕ ಆಗಲಿದ್ದಾರೆ. ಉಳಿದ ಪಾತ್ರಕ್ಕೆ ಕಲಾವಿದರ ಆಯ್ಕೆ ನಡೆಯುತ್ತಿದ್ದು, ಇದಕ್ಕಾಗಿ ಆಹ್ವಾನಿಸಲಾಗಿದೆ. ಪಾತ್ರಗಳ ಆಯ್ಕೆ ಪ್ರಕ್ರಿಯೆಗೆ ಹೊಂಬಾಳೆ ಫಿಲ್ಮ್ಸ್ ಚಾಲನೆ ನೀಡಿದೆ.
‘ಕಲಾವಿದರು ಬೇಕಾಗಿದ್ದಾರೆ’ ಎಂದು ಹೊಂಬಾಳೆ ಫಿಲ್ಮ್ಸ್ಂ ಪೋಸ್ಟರ್ ಹಂಚಿಕೊಂಡಿದೆ. ಇದಕ್ಕೆ ಒಂದಿಷ್ಟು ಕಂಡೀಷನ್ ಹಾಕಾಗಿದೆ. ಪುರುಷರ ವಯಸ್ಸು 30ರಿಂದ 60 ವರ್ಷ ಅಂತರದಲ್ಲಿ ಹಾಗೂ ಮಹಿಳೆಯರ ವಯಸ್ಸು 18ರಿಂದ 60 ವರ್ಷ ಅಂತರದಲ್ಲಿ ಇರಬೇಕು. ನೋಂದಣಿ ಮಾಡಲು kantara.film ಗೆ ಭೇಟಿ ನೀಡಬೇಕು. 14 ಡಿಸೆಂಬರ್ವರೆಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇದೆ. ಅಂದರೆ ಇನ್ನು ಎರಡೇ ದಿನಗಳಿವೆ. ಮತ್ತೊಂದು ವಿಶೇಷ ಸೂಚನೆಯನ್ನು ಕೂಡ ನೀಡಲಾಗಿದೆ. ರೀಲ್ಸ್ ಮತ್ತು ಅವುಗಳನ್ನೇ ಹೋಲುವ ವಿಡಿಯೋಗಳಿದ್ದರೆ ಅದನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಹೊಂಬಾಳೆ ಫಿಲ್ಮ್ಸ್ ಕಟ್ಟುನಿಟ್ಟಾಗಿ ಹೇಳಿದೆ.
ಕಾಂತಾರಕ್ಕೆ ಅಂತರರಾಷ್ಟ್ರೀಯ ವಿಶೇಷ ಪ್ರಶಸ್ತಿ: ಶಂಕರ್ನಾಗ್ಗೆ ಸಮರ್ಪಿಸಿದ ರಿಷಬ್ ಶೆಟ್ಟಿ
Step into the Spotlight! Auditions Open – Apply at https://t.co/OakW1iq90a for Your Shot at Fame.
Shortlisted talents will be called for in person auditions. … pic.twitter.com/75sm4j5MSt