ವಿನೋದ್‌ ರಾಜ್‌ ಹೀರೋಯಿನ್ ಹಿಂದೆ ಹೋಗ್ತಾನೆ ಅನ್ನೋ ಸ್ವಾರ್ಥ ಲೀಲಮ್ಮನಿಗೆ ಇತ್ತು: ಬ್ರಹ್ಮಾಂಡ ಗುರೂಜೀ

By Vaishnavi Chandrashekar  |  First Published Dec 12, 2023, 3:12 PM IST

ಮಗ ವಿನೋದ್ ರಾಜ್ ಸಿನಿಮಾ ಮಾಡ್ಬೇಕು ನಟ ಆಗ್ಬೇಕು ಅಂತ ಲೀಲಮ್ಮನೇ ನಿರ್ಮಾಣ ಮಾಡುತ್ತಿದ್ದರು ಎಂದು ಹೇಳಿದ ಬ್ರಹ್ಮಾಂಡ ಗುರೂಜೀ 


ಕನ್ನಡ ಚಿತ್ರರಂಗ ಹಿರಿಯ ನಟ ಲೀಲಾವತಿ ಮತ್ತು ಪುತ್ರ ವಿನೋದ್ ರಾಜ್‌ ಭಾಂದವ್ಯವನ್ನು ಮೆಚ್ಚಿ ಕೊಂಡಾಡುವವರು ಹೆಚ್ಚು. ಅದರಲ್ಲೂ ಮಗ ನಾಯಕ ನಟನಾಗಬೇಕು ಹಿಟ್ ಸಿನಿಮಾ ನೋಡಬೇಕು ಅನ್ನೋದು ತಾಯಿ ಆಸೆ ಅಗಿತ್ತಂತೆ. ಹೀಗಾಗಿ ತಮ್ಮ 72ನೇ ವಯಸ್ಸಿನಲ್ಲೂ ಮಗನಿಗೆ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ವಿಚಾರಗಳನ್ನು ಬ್ರಹ್ಮಾಂಡ ಗುರೂಜಿ ಹಂಚಿಕೊಂಡಿದ್ದಾರೆ. 

'ಲೀಲಾವತಿ ಅಮ್ಮ ಸಿನಿಮಾ ಮಾಡಿಕೊಂಡು ಬ್ಯುಸಿಯಾಗಿರುತ್ತಿದ್ದರು ಆಗ ವಿನೋದ್ ರಾಜ್ ಕಾಡಿಗೆ ಹೋಗುತ್ತಿದ್ದರು. ಸಿನಿಮಾ ಇಲ್ಲ ಕಾರ್ಯ ಇಲ್ಲ ಏನು ಮಾಡುವುದು ಅಂತ. ಸೆಲೆಬ್ರಿಟಿ ಮಕ್ಕಳಿಗೆ ಪ್ರೆಸ್ಟೀಜ್ ಸಮಸ್ಯೆ ಆಗುತ್ತದೆ. ನಾಳೆ ಒಂದು ದಿನ ಮಾತು ಬರುತ್ತದೆ ಹೀರೋ ಆಗಲು ನನಗೋಸ್ಕರ ಒಂದು ಸಿನಿಮಾ ಮಾಡಲು ಆಗುತ್ತಿಲ್ಲ ಅವನು ಡೆವಲಪ್ ಆದ ನಾನು ಆಗಿಲ್ಲ ಬೇಸರ ಆಗುತ್ತದೆ. ಅದರಲ್ಲೂ ಲೀಲಾವತಿ ದೊಡ್ಡ ಸ್ಟಾರ್ ಅವರ ಮಗನಾಗಿ ಸಿನಿಮಾ ಕೊಡುತ್ತಿಲ್ಲ ಡೆವಲಪ್‌ ಮೆಂಟ್‌ ಇಲ್ಲ ಅಂದ್ರೆ ಯಾರಿಗೆ ಆದರೂ ಬೇಸರ ಆಗುತ್ತದೆ. ಆಗಿನ ಕಾಲದಲ್ಲಿ ರಾಜಕೀಯ ಹಾಗೆ ಇತ್ತು ..ಇವತ್ತಿಗೂ ರಾಜಕೀಯ ಇದೆ ಪ್ರೋತ್ಸಾಹ ಮಾಡುವುದಿಲ್ಲ. ಡೆವಲಪ್ ಆಗುತ್ತಿದ್ದೀರಾ ನಡೆ ನಡೆ ಎಂದು ಹೇಳುತ್ತಾರೆ. ಕೇರಳಾದಲ್ಲಿ ಸಣ್ಣ ಸಣ್ಣ ಕಲಾವಿದರಿಗೂ ಹಣ ಹಾಕುತ್ತಾರೆ ನಿರ್ಮಾಣ ಮಾಡುತ್ತಾರೆ ಅಲ್ಲಿ ಧೈರ್ಯ ಇದೆ ಹುಮ್ಮಸಿದೆ ಆದರೆ ನಮ್ಮಲ್ಲಿ ರಾಜಕೀಯ ಜಾಸ್ತಿ. ತೆಲುಗು ಸಿನಿಮಾದಲ್ಲೂ ರಾಜಕೀಯ ಇದೆ ನಮ್ಮ ಕುಟುಂಬನೇ ಬೆಳೆಯಬೇಕು ನಮ್ಮ ಕುಟುಂಬ ಡಾಮಿನೇಟ್ ಮಾಡಬೇಕು ಎಂದು' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಬ್ರಹ್ಮಾಂಡ ಗುರೂಜಿ ಮಾತನಾಡಿದ್ದಾರೆ.

Latest Videos

undefined

ಧನ್ವೀರ್ ಗೌಡ ಹಣ ಕೊಟ್ಟು ಜನ ಕರೆಸುತ್ತಾರೆ; ನೆಟ್ಟಿಗರಿಗೆ ಖಡಕ್ ಟಾಂಗ್ ಕೊಟ್ಟ ಜಾನ್ವಿ ರಾಯಲಾ

' ಆ ಸಮಯದಲ್ಲಿ ವಿನೋದ್ ರಾಜ್‌ಗೆ ಸಿನಿಮಾ ಇಲ್ಲದ ಕಾರಣ ನಿನಗೋಸ್ಕರ ಸಿನಿಮಾ ಮಾಡ್ತೀನಿ ಅಂತ ಲೀಲಮ್ಮ ಮಾಡಿದರು. ಯಾರಿಗೂ ಗೊತ್ತಿಲ್ಲ ಲೀಲಮ್ಮ ಅವರಿಗೆ ಸ್ವಾರ್ಥ ಇತ್ತು...ಏನೆಂದರೆ ನನ್ನ ಮಗ ಒಳ್ಳೆ ನಾಯಕಿ ಜೊತೆ ಸಿನಿಮಾ ಮಾಡಿ ಅಲ್ಲಿ ಹೀರೋಯಿನ್‌ ಜೊತೆ ಜೋಗಿ ಬಿಟ್ಟರೆ? ಅವಳ ಹಿಂದೆ ಹೋಗಿ ನನ್ನನ್ನು ಬಿಟ್ಟು ಬಿಟ್ಟರೆ? ನನ್ನ ಮಗ ನನ್ನ ಜೊತೆ ಇರಬೇಕು.  ಲೀಲಾವತಿ ಅವರಿಗೆ ಒಂದೇ ಒಂದು ಆಸೆ ಇತ್ತು..ನನ್ನ ಮಗ ನನ್ನನ್ನು ಬಿಟ್ಟು ಹೋಗಬಾರದು ಎಂದು. ನನ್ನ ಮಗ ನನ್ನ ಜೊತೆಲೇ ಇರಬೇಕು ಅನ್ನೋ ಅಸೆ ಇತ್ತು. ಎಲ್ಲೋ ಒಂದು ಕಡೆ ಹೇಳಿಕೊಂಡಿದ್ದರು ನಾನು ಹೋದ ಮೇಲೆ ನನ್ನ ಮಗನ ಗತಿ ಏನು' ಎಂದು ಬ್ರಹ್ಮಾಂಡ ಗುರೂಜಿ ಹೇಳಿದ್ದಾರೆ.

ಹಣ ಎಣಿಸಿಲ್ಲ ಅಂದ್ರೆ ಎಲ್ಲಾ ಕಳೆದುಕೊಂಡು ಬಿಟ್ಟೆ ಅನಿಸುತ್ತದೆ: ವಿನೋದ್ ರಾಜ್

'ಜಗತ್ತಿನ ಬಗ್ಗೆ ಕೇರ್ ಇಲ್ಲ..ತನ್ನ ಸಂಪೂರ್ಣ ಗಮನ ಮಗನೆ ಮೇಲೆ ಇಟ್ಟಿದ್ದರು ಅದು ಡಾಮಿನೇಷನ್‌. ನನಗೆ ಅವನು..ಅವನಿಗೆ ನಾನು ಅಷ್ಟೇ ಇರಬೇಕು ಅಂತ. ಚಿಕ್ಕ ವಯಸ್ಸಿನಿಂದಲೂ ವಿನೋದ್ ರಾಜ್‌ರನ್ನು ಹಾಗೆ ಬೆಳೆಸಿ ಬಿಟ್ಟಿದ್ದಾರೆ. ವಿನೋದ್ ರಾಜ್ ಎಂದೂ ತಾಯಿ ಮಾತು ಮೀರಿ ಏನೂ ಮಾಡುತ್ತಿರಲಿಲ್ಲ. ಇಬ್ಬರು ಹಾಕಿಕೊಂಡಿದ್ದ ಗೆರೆ ಇಬ್ಬರೂ ದಾಟುತ್ತಿರಲಿಲ್ಲ. 72ನೇ ವಯಸ್ಸಿನಲ್ಲಿ ವಿನೋದ್ ರಾಜ್‌ಗೆ ಸಿನಿಮಾ ಮಾಡಿದರು. ಅದು ಅವರ ಕೊನೆಯ ಸಿನಿಮಾ. ಲೀಲಮ್ಮ ಅವರಿಗೋಸ್ಕರ ಎಸ್‌ ನಾರಾಯಣ್ ಎರಡು ಸಿನಿಮಾ ಮಾಡಿದ್ದರು' ಎಂದಿದ್ದಾರೆ ಬ್ರಹ್ಮಾಂಡ ಗುರೂಜಿ. 

click me!