ಮಧ್ಯರಾತ್ರಿ ಕೋಣೆ ಬಾಗಿಲು ತಟ್ಟಿದ್ರು ಡಾ ರಾಜ್‌ಕುಮಾರ್; ಶಾಕ್ ಆಗಿ ಪ್ರೊಡ್ಯೂಸರ್ ಮಾಡಿದ್ದೇನು?

By Shriram Bhat  |  First Published Jun 22, 2024, 2:22 PM IST

ನಿರ್ಮಾಪಕರ ಕೋಣೆಯ ಬಾಗಿಲನ್ನು ಯಾರೋ ತಟ್ಟಿದ ಸದ್ದಾಯಿತು. ತೆಗೆದು ನೋಡಿದರೆ ಡಾ ರಾಜ್‌ಕುಮಾರ್ ಅವರು ನಿರ್ಮಾಪಕರ ಎದುರು ನಿಂತಿದ್ದಾರೆ. ರಾತ್ರಿ ಅಷ್ಟು ಹೊತ್ತಿನಲ್ಲಿ ಅವರ ಕೋಣೆಯಿಂದ ನಡೆದುಕೊಂಡು ಬಂದು ತಮ್ಮ ಕೋಣೆಯ ಬಾಗಿಲ ಬಳಿ..


ಕರುನಾಡಿನ ಅಣ್ಣಾವ್ರು ಖ್ಯಾತಿಯ ನಟ ಡಾ ರಾಜ್‌ಕುಮಾರ್ (Dr Rajkumar) ಅವರನ್ನು ಎಲ್ಲರೂ ಸರಳತೆಯ ಸಾಕಾರ ಮೂರ್ತಿ ಎಂದೇ ಕರೆಯುತ್ತಾರೆ. ಅದಕ್ಕೆ ಕಾರಣಗಳು ಣೂರಾರು ಸಿಗುತ್ತವೆ. ಅದರಲ್ಲಿ ಇಲ್ಲೊಂದು ಕಾರಣದ ಬಗ್ಗೆ ಹೇಳಲೇಬೇಕು. ಅದು ಡಾ ರಾಜ್‌ಕುಮಾರ್  ನಾಯಕತ್ವದ ಹುಲಿಯ ಹಾಲಿನ ಮೇವು ಚಿತ್ರೀಕರಣ ಊಟಿಯಲ್ಲಿ ನಡೆದಿತ್ತು. ಆಗ ರಾಜ್‌ ಜೊತೆ ನಟಿಸಬೇಕಿದ್ದ ಒಬ್ಬ ನಟ ಮೂರು ದಿನ ಕಾದರೂ ಬರಲೇ ಇಲ್ಲವಂತೆ. ಮಾರನೆಯ ದಿನ ಅಂದರೆ, ಡಾ ರಾಜ್‌ಕುಮಾರ್ ಅವರ ಕಾಲ್‌ಶೀಟ್ ಮುಗಿದು ಅವರ ಮನೆಗೆ ಹೋಗಬೇಕು. 

ಆವತ್ತು ರಾತ್ರಿ ಒಂದು ಘಟನೆ ನಡೆದಿದೆ. ಅದೇನೆಂದರೆ, ನಿರ್ಮಾಪಕರ ಕೋಣೆಯ ಬಾಗಿಲನ್ನು ಯಾರೋ ತಟ್ಟಿದ ಸದ್ದಾಯಿತು. ತೆಗೆದು ನೋಡಿದರೆ ಡಾ ರಾಜ್‌ಕುಮಾರ್ ಅವರು ನಿರ್ಮಾಪಕರ ಎದುರು ನಿಂತಿದ್ದಾರೆ. ರಾತ್ರಿ ಅಷ್ಟು ಹೊತ್ತಿನಲ್ಲಿ ಅವರ ಕೋಣೆಯಿಂದ ನಡೆದುಕೊಂಡು ಬಂದು ತಮ್ಮ ಕೋಣೆಯ ಬಾಗಿಲ ಬಳಿ ನಿಂತಿದ್ದ ಡಾ ರಾಜ್‌ಕುಮಾರ್ ಅವರನ್ನು ಕಂಡು ನಿರ್ಮಾಪಕರಿಗೆ ಮಾತೇ ಹೊರಡಲಿಲ್ಲವಂತೆ. 

Latest Videos

undefined

ಆಮೇಲೇನಾಯ್ತು ಅನ್ನೋದು ಎಲ್ರಿಗೂ ಗೊತ್ತಿರೋ ವಿಷ್ಯ, ನಾನು ಹೇಳೋದೇನಿಲ್ಲ; ಚಂದನ್ ಶೆಟ್ಟಿ ಹೀಗಂದ್ಬಿಟ್ರು!

ಒಳಗೆ ಕರೆದು, ಡಾ ರಾಜ್‌ ಅವರನ್ನು ಪಕ್ಕದಲ್ಲಿಕುಳ್ಳಿರಿಸಿಕೊಂಡ ನಿರ್ಮಾಪಕರಿಗೆ ಡಾ ರಾಜ್ ಅವರು 'ಆ ನಟರಿಗೆ ಇನ್ನೊಮ್ಮೆ ಫೋನ್ ಮಾಡಿ ನೋಡಿ. ಅವ್ರು ಬರೋ ಹಾಗಿದ್ರೆ ಬರ್ಲಿ. ಇನ್ನೂ ಎರಡು-ಮೂರು ದಿನ ಕಾಯ್ತೀನಿ. ನಾನು ಒಮ್ಮೆ ಚಿತ್ರೀಕರಣ ಮುಗಿಸಿಕೊಂಡು ಹೋದ್ಮೇಲೆ ಮತ್ತೆ ಬರೋದಾದ್ರೆ ನಿಮ್ಗೆ ಅನಗತ್ಯವಾಗಿ ಖರ್ಚು ಹೆಚ್ಚಾಗುತ್ತೆ' ಎಂದರಂತೆ ಡಾ ರಾಜ್‌ಕುಮಾರ್. ನಾನು ಕಾಯೋದಕ್ಕೆ ರೆಡಿ ಇದೀನಿ, ದಯವಿಟ್ಟು ಅವ್ರಿಗೆ ಕಾಲ್ ಮಾಡಿ' ಅಂದಿದ್ರಂತೆ. 

ರಜನಿಕಾಂತ್ ಚಿತ್ರದಲ್ಲಿ ಆ ನಟಿ ಜೊತೆ ಹೆಜ್ಜೆ ಹಾಕ್ಲೇಬಾರ್ದಿತ್ತು; ದುಬೈನಿಂದ ಓಡಿ ಬಂದು ತಪ್ಪು ಮಾಡ್ಬಿಟ್ಟೆ!

ಇಂಥ ಮಾತು ಆಡುವ ವ್ಯಕ್ತಿಗಳು ಸಿಗುವುದು ತುಂಬಾ ವಿರಳ ಎನ್ನಲೇಬೇಕು. ಡಾ ರಾಜ್‌ಕುಮಾರ್ ಅವರ ವ್ಯಕ್ತಿತ್ವ ಅಷ್ಟು ಸರಳವಾಗಿತ್ತು. ತಮ್ಮಿಂದ ಯಾರಿಗೂ ತೊಂದರೆ ಆಗಬಾರದು ಎನ್ನುವುದು ಅವರ ನಿಲುವಾಗಿರುತ್ತಿತ್ತು. ಆ ಕಾರಣದಿಂದಲೇ ಅವರು ಅಷ್ಟೊಂದು ಸಿನಿಮಾಗಳನ್ನು ಮಾಡಲು ಸಾಧ್ಯವಾಯಿತು. ಜತೆಗೆ, ಅಷ್ಟೊಂದು ಜನಪ್ರಿಯತೆ, ಹೆಸರು-ಹಣ ಎಲ್ಲವನ್ನೂ ನೋಡಲು ಡಾ ರಾಜ್‌ಕುಮಾರ್ ಅವರಿಗೆ ಸಾಧ್ಯವಾಯಿತು. ಅವರ ವಿನಯವಂತಿಕೆ, ವೃತ್ತಿಪರತೆ ಹಾಗು ಸರಳತನ ಅವರನ್ನು ತುಂಬಾ ಎತ್ತರಕ್ಕೆ ಕೊಂಡೊಯ್ದಿತ್ತು. 

ಹೇಳಿಕೊಳ್ಳಲಾಗದ ಖಾಯಿಲೆಯಿಂದ ಬಳಲುತ್ತಿರುವ ನಟಿ ಅನುಷ್ಕಾ ಶೆಟ್ಟಿ, ಶುರುವಾದ್ರೆ ನಿಲ್ಲೋದೇ ಇಲ್ವಂತೆ!

ಅವೆಲ್ಲ ಕಾರಣಕ್ಕೇ ಇಂದಿಗೂ ಕೂಡ ಡಾ ರಾಜ್‌ಕುಮಾರ್ ಹೆಸರು ನೆನಪಾಗುತ್ತಲೇ ಇರುತ್ತದೆ. ಇಂಥ ಹಲವಾರು ಘಟನೆಗಳನ್ನು ಹಿರಿಯ ನಿರ್ದೇಶಕರು ಹಾಗು ನಿರ್ಮಾಪಕರು ಹೇಳುತ್ತಲೇ ಇರುತ್ತಾರೆ. ಈಗಂತೂ ಸೋಷಿಯಲ್ ಮೀಡಿಯಾ ಕಾಲ. ಯಾರು ಏನೇ ಅಂದರೂ ಅದು ಸಾಮಾಜಿಕ ಮಾಧ್ಯಮಗಳ ಮೂಲಕ ಇಡೀ ಜಗತ್ತನ್ನು ಸುತ್ತಾಡಿಕೊಂಡು ಬರುತ್ತವೆ. ಅದೇ ರೀತಿ ಡಾ ರಾಜ್‌ಕುಮಾರ್ ಸರಳತೆಗೆ ಸಾಕ್ಷಿಯಾಗಿರುವ ಈ ಘಟನೆ ಮಾಹಿತಿಯ ಈ ವೀಡಿಯೋ ಕೂಡ ಇದೀಗ ಸಖತ್ ವೈರಲ್ ಆಗುತ್ತಿದೆ. 

ಹೆಂಗ್ ಕೊಡ್ಬೇಕು ಹಂಗೆ ಕೊಟ್ಟು, ಹೊಡ್ದು ಎತ್ಕೊಂಡು ಬಂದ್ವಲ್ಲಾ; ಕೆಜಿಎಫ್ ಸ್ಟಾರ್ ನಟ ಯಶ್!

click me!