ಚಂದನ್ ಶೆಟ್ಟಿ ಅವರು ಬಿಗ್ ಬಾಸ್ ಶೋ ಟೈಮ್‌ನಲ್ಲಿ ಸಹಸ್ಪರ್ಧಿ ನಿವೇದಿತಾ ಗೌಡ ಅವರನ್ನು ಲವ್ ಮಾಡಿದ್ದು, ಬಳಿಕ ಮದುವೆಯಾಗಿದ್ದು, ಇತ್ತೀಚೆಗೆ ಅವರಿಬ್ಬರೂ ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್ ಪಡೆದಿದ್ದು, ಹೀಗೆ ಎಲ್ಲವೂ..
ನಟ, ಗಾಯಕ ಚಂದನ್ ಶೆಟ್ಟಿ (Chandan Shetty) ಅವರದೊಂದು ವೀಡಿಯೋ ಸಂದರ್ಶನದ ತುಣುಕು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಅದರಲ್ಲಿ 'ನಿಮ್ ಪಾರ್ಚ್ಯೂನ್ ಅನ್ನೋದು ಪಾರ್ಚ್ಯೂನ್ ಕಾರಿನಲ್ಲೂ ಕಾಣ್ತಾ ಇದೆ. ಈ ಫೇಸ್ ಆಫ್ ಲೈಫ್‌ನಲ್ಲಿ ಯಾವ್ ಕಡೆ ಕುದುರೆ ಓಡ್ತಾ ಇದೆ? ಎಂದು ಕೇಳಿದ್ದಾರೆ ಆ್ಯಂಕರ್ ರ್‍ಯಾಪಿಡ್ ರಶ್ಮಿ. ಅದಕ್ಕೆ ಪಾಪ್ ಸಿಂಗರ್ ಚಂದನ್ ಶೆಟ್ಟಿ ತಮ್ಮದೇ ಆದ ಉತ್ತರ ನೀಡಿದ್ದಾರೆ. ಹಾಗಿದ್ದರೆ ಏನ್ ಹೇಳಿದ್ದಾರೆ ಚಂದನ್ ಶೆಟ್ಟಿ? ಮುಂದಿದೆ ಅವರ ಮಾತುಗಳು, ನೋಡಿ..
'ಒಂದು ಖುಷಿ ಸಂಗತಿ ಏನು ಅಂದ್ರೆ, ನಾನು ಬೆಂಗಳೂರಿಗೆ ಬಂದಾಗ ಸಿಟಿ ಬಸ್‌ನಲ್ಲೇ ಓಡಾಡ್ತಿದ್ದೆ. ನಾನ್ ಯಾವಾಗ ಬೈಕ್ ತಗೊಳ್ಳೋದು? ಎಷ್ಟು ಅಂತ ಬಸ್‌ನಲ್ಲಿ ಓಡಾಡೋದು? ಅದು ಬೇರೆ ಬಸ್ ಸ್ಟ್ಯಾಂಡಿಗೆ ಹೋಗ್ಬೇಕು, ಬಸ್‌ಗೆ ಕಾಯ್ಬೇಕು, ಇವೆಲ್ಲಾ ಬೇಡ ಅಂತ ಟೂ ವೀಲರ್ ತಗೊಂಡೆ. ಅದು ನಮ್ಮಪ್ಪನ ಬೈಕ್, ಅದನ್ನ ನಾನೇ ನಮ್ಮೂರು ಹಾಸನದಿಂದ ಓಡಿಸ್ಕೊಂಡು ಬಂದಿದ್ದೆ. ಅದಾದ್ಮೇಲೆ ಕಾರು ಅನ್ನೋದು ನಮ್ಮ ತಲೆನಲ್ಲಿ ಯೋಚ್ನೆ ಇರುತ್ತಲ್ಲಾ..
ರಜನಿಕಾಂತ್ ಚಿತ್ರದಲ್ಲಿ ಆ ನಟಿ ಜೊತೆ ಹೆಜ್ಜೆ ಹಾಕ್ಲೇಬಾರ್ದಿತ್ತು; ದುಬೈನಿಂದ ಓಡಿ ಬಂದು ತಪ್ಪು ಮಾಡ್ಬಿಟ್ಟೆ!
ಬೈಕ್ ಅಂತ ಅಂದಾಗ ಧೂಳು, ಮಳೆ ಬಂದಾಗ ಕಷ್ಟ ಅವೆಲ್ಲಾ ಇರುತ್ತಲ್ಲಾ. ನಾನು ಒಂದ್ ಕಾರು ತಗೋಬೇಕು ಅಂತ ಇರುತ್ತಲ್ಲಾ.. ದೇವರ ಆಶೀರ್ವಾದ, ಸೆಕೆಂಡ್ ಹ್ಯಾಂಡ್ ಒಂದು ರೆಡ್ ಕಲರ್ ಸ್ವಿಫ್ಟ್ ಕಾರ್ ತಗೊಂಡಿದ್ದೆ. ಆಮೇಲೆ ಚಾಕಲೇಟ್ ಕಲರ್ ಜೊತೆ ಬಿಗ್‌ಬಾಸ್‌ಗೆ ಹೋಗಿದ್ದೆ. ಆಮೇಲೇನಾಯ್ತು ಅನ್ನೋದು ಎಲ್ಲಾ ಗೊತ್ತಿರೋ ವಿಷ್ಯ. ನಾನು ಹೇಳೋದೇನಿಲ್ಲ, ಈಗ ನನ್ನ ಬಗ್ಗೆ ಎಲ್ಲಾನೂ ಎಲ್ಲರಿಗೂ ಗೊತ್ತು' ಎಂದಿದ್ದಾರೆ ಚಂದನ್ ಶೆಟ್ಟಿ.
ಹೇಳಿಕೊಳ್ಳಲಾಗದ ಖಾಯಿಲೆಯಿಂದ ಬಳಲುತ್ತಿರುವ ನಟಿ ಅನುಷ್ಕಾ ಶೆಟ್ಟಿ, ಶುರುವಾದ್ರೆ ನಿಲ್ಲೋದೇ ಇಲ್ವಂತೆ!
ಹೌದು, ಚಂದನ್ ಶೆಟ್ಟಿ ಅವರು ಬಿಗ್ ಬಾಸ್ ಶೋ ಟೈಮ್‌ನಲ್ಲಿ ಸಹಸ್ಪರ್ಧಿ ನಿವೇದಿತಾ ಗೌಡ ಅವರನ್ನು ಲವ್ ಮಾಡಿದ್ದು, ಬಳಿಕ ಮದುವೆಯಾಗಿದ್ದು, ಇತ್ತೀಚೆಗೆ ಅವರಿಬ್ಬರೂ ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್ ಪಡೆದಿದ್ದು, ಹೀಗೆ ಎಲ್ಲವೂ ಬಹುತೇಕ ಎಲ್ಲರಿಗೂ ಗೊತ್ತು. ಚಂದನ್ ಶೆಟ್ಟಿ ಹಾಗು ನಿವೇದಿತಾ ಗೌಡ ವಿಚ್ಚೇದನ ಬಳಿಕ ಹಲವರು ಅವರು ಆ ಸಮಯದಲ್ಲಿ ನಡೆದುಕೊಂಡ ರೀತಿಗೆ ಅಪಾರ ಮೆಚ್ಚುಗೆ ಸೂಚಿಸಿದ್ದಾರೆ. ತಾವಿಬ್ಬರೂ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗದೇ ಡಿವೋರ್ಸ್‌ಗೆ ಅಂತ ಕೋರ್ಟ್‌ಗೆ ಬಂದಾಗಲೂ ನಗುನಗುತ್ತಲೇ ಇರುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
ಹೆಂಗ್ ಕೊಡ್ಬೇಕು ಹಂಗೆ ಕೊಟ್ಟು, ಹೊಡ್ದು ಎತ್ಕೊಂಡು ಬಂದ್ವಲ್ಲಾ; ಕೆಜಿಎಫ್ ಸ್ಟಾರ್ ನಟ ಯಶ್!
ಚಂದನ್ ಶೆಟ್ಟಿ ಹಾಗು ನಿವೇದಿತಾ ಗೌಡ ಅವರಿಬ್ಬರ ದಾಂಪತ್ಯದ ಜೀವನದಲ್ಲಿ ಮದುವೆ ಬಳಿಕ ಯಾಕೋ ಸರಿಯಾದ ಹೊಂದಾಣಿಕೆ ಸಾಧ್ಯವಾಗಲೇ ಇಲ್ಲವಂತೆ. ಇಬ್ಬರೂ ತಮ್ಮತಮ್ಮ ಮನೆಯವರ ಬಳಿ ಮಾತನಾಡಿ, ಮ್ಯೂಚ್ಯುವಲ್ ಅಂಡರ್‌ಸ್ಟ್ಯಾಂಡಿಂಗ್ ಮೂಲಕ ಕಾನೂನು ಪ್ರಕ್ರಿಯೆ ಮೂಲಕ ಇಬ್ಬರೂ ಬೇರೆಬೇರೆ ಆಗಿದ್ದಾರೆ. ಆದರೆ, ಡಿವೋರ್ಸ್‌ಗೆ ಎಂದು ಕೋರ್ಟ್‌ಗೆ ಬರುವ ವೇಳೆ ಕೂಡ ಸ್ನೇಹಿತರಂತೆ ಪರಸ್ಪರ ಕೈಕೈ ಹಿಡದುಕೊಂಡು, ಯಾವ ಜಗಳ-ಮನಸ್ತಾಪ ಇಲ್ಲದೇ ನಗುನಗುತ್ತಲೇ ಬಂದು ವಿಚ್ಛೇದನ ಪಡೆದು ದೂರವಾಗಿದ್ದಾರೆ.
ಏಲಿಯನ್ ಸಂಪರ್ಕ ಮಾಡಿದ್ದಕ್ಕೆ ಹೃತಿಕ್ ರೋಶನ್‌ಗೆ ಜೋರಾಗಿ ಹೊಡೆದ ರೇಖಾ!
ಅವರಿಬ್ಬರ ಈ ರೀತಿಯ ಡೀಸೆಂಡ್ ನಡೆಗೆ ಹಲವರು ಮನಸೋತು ಸೋಷಿಯಲ್ ಮೀಡಿಯಾಗಳಲ್ಲಿ ಮೆಚ್ಚುಗೆ ಕಾಮೆಂಟ್ ಹಾಕಿದ್ದಾರೆ. ಒಟ್ಟಿನಲ್ಲಿ, ಬಸ್, ಬೈಕ್ ಹೀಗೆ ಓಡಾಡುತ್ತಿದ್ದ ಚಂದನ್ ಶೆಟ್ಟಿ ಇಂದು ಫಾರ್ಚ್ಯೂನರ್ ಕಾರಿನಲ್ಲಿ ಓಡಾಡುವಷ್ಟು ಬೆಳೆದಿದ್ದಾರೆ, ವೃತ್ತಿಯಲ್ಲಿ ಹೆಸರು, ಹಣ ಸಂಪಾದಿಸಿದ್ದಾರೆ. ಇತ್ತೀಚೆಗೆ, ಡಿವೋರ್ಸ್ ಆದ ಬಳಿಕ ಕೂಡ ಒಂದು ಹೊಸ ಸಾಂಗ್ ಬಿಡುಗಡೆ ಮಾಡಿದ್ದಾರೆ.
ವೀರಪ್ಪನ್ ಅಣ್ಣಾವ್ರನ್ನು ಬಿಡುಗಡೆ ಮಾಡಿದಾಗ ಕೊಟ್ಟ ಗಿಫ್ಟ್ ಏನು? ಸೇತುಕುಳಿ ಅದನ್ನ ಕೊಟ್ಟಿದ್ನ?