
ಬೆಂಗಳೂರು(ಜೂ.22) ದರ್ಶನ್ ಪ್ರಕರಣ ಸೇರಿದಂತೆ ಸಾಲು ಸಾಲು ಪ್ರಕರಣಗಳನ್ನು ಉಲ್ಲೇಖಿಸಿ ನಟಿ ರಮ್ಯಾ ಟ್ವೀಟ್ ಮಾಡಿದ್ದಾರೆ. ಪ್ರತಿ ಘಟನೆಯಲ್ಲಿ ಆರೋಪಿಗಳು ಶಕ್ತಿಶಾಲಿಗಳು, ಶ್ರೀಮಂತರಾಗಿದ್ದರೆ, ನೊಂದವರು ಕರ್ನಾಟಕದ ಬಡ ಮಹಿಳೆಯರು ಹಾಗೂ ಮಕ್ಕಳು ಎಂದು ರಮ್ಯಾ ಹೇಳಿದ್ದಾರೆ. ಆದಷ್ಟು ಬೇಗ ಈ ಪ್ರಕರಣಗಳ ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು. ಇಲ್ಲದಿದ್ದರೂ ಸಾರ್ವಜನಿಕರಿಗೆ ಯಾವ ನ್ಯಾಯ ನೀಡಲಾಗುತ್ತದೆ ಎಂದು ರಮ್ಯಾ ಪ್ರಶ್ನಿಸಿದ್ದಾರೆ.
ಇತ್ತೀಚೆಗೆ ಕರ್ನಾಟಕದಲ್ಲಿ ಹೆಣ್ಣುಮಕ್ಕಳ ಮೇಲೆ ನಡೆದ ಸಾಲು ಸಾಲು ದೌರ್ಜನ್ಯ ಪ್ರಕರಣಗಳನ್ನು ನಟಿ ರಮ್ಯಾ ಉಲ್ಲೇಖಿಸಿದ್ದಾರೆ. ಕಾನೂನು ಉಲ್ಲಂಘಿಸುವವರು ಶ್ರೀಮಂತರು ಹಾಗೂ ಪ್ರಭಾವಿಗಳಾಗಿದ್ದಾರೆ. ಆದರೆ ಇವರ ಹಿಂಸೆ, ಕ್ರೌರ್ಯಕ್ಕೆ ಬಳಲುತ್ತಿರುವುದು ಬಡವರು, ಮಹಿಳೆಯರು ಹಾಗೂ ಮಕ್ಕಳ. ಜೊತೆಗೆ ಕರ್ನಾಟಕದ ಜನಸಾಮಾನ್ಯರು. ಈ ಅಪರಾಧಗಳನ್ನು ಬಯಲಿಗೆಳೆದ ಪೊಲೀಸರು ಹಾಗೂ ಮಾಧ್ಯಮಕ್ಕೆ ಹ್ಯಾಟ್ಸಆಫ್. ಆದರೆ ವಿಚಾರಣೆಯನ್ನು ಅದಷ್ಟು ಬೇಗ ಮುಗಿಸಿ ಪ್ರಕರಣಗಳಿಗೆ ತಾರ್ಕಿಕ ಅಂತ್ಯ ನೀಡಿದಾಗ ಮಾತ್ರ ನ್ಯಾಯ ಒದಗಿಸಲಾಗುತ್ತದೆ. ಆದರೆ ನ್ಯಾಯ ಮೇಲುಗೈ ಸಾಧಿಸಲಿದ್ದರೆ ನಾವು ಸಾರ್ವಜನಿಕರಿಗೆ ಯಾವ ಸಂದೇಶ ನೀಡುತ್ತೇವೆ ಎಂದು ನಟಿ ರಮ್ಯಾ ಪ್ರಶ್ನಿಸಿದ್ದಾರೆ.
'ಕಾನೂನಿಗಿಂತ ಯಾರೂ ದೊಡ್ಡವರಲ್ಲ..' ದರ್ಶನ್ ಕೇಸ್ ಉಲ್ಲೇಖಿಸಿ ರಮ್ಯಾ ಪೋಸ್ಟ್!
ದರ್ಶನ್ ಹಾಗೂ ಗ್ಯಾಂಗ್ ನಡೆಸಿದ ಕೊಲೆ ಪ್ರಕರಣ, ಪ್ರಜ್ವಲ್ ರೇವಣ್ಣ ನಡೆಸಿದ ಅತ್ಯಾಚಾರ ಪ್ರಕರಣ ಸೇರಿದಂತೆ ಕರ್ನಾಟಕದ ಪ್ರಮುಖ ಘಟನೆಗಳನ್ನು ಉಲ್ಲೇಖಿಸಿ ರಮ್ಯಾ ಟ್ವೀಟ್ ಮಾಡಿದ್ದಾರೆ. ನಟ ದರ್ಶನ್ ಪ್ರಕರಣದ ಆರಂಭದಿಂದಲೂ ನಟಿ ರಮ್ಯಾ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ರೇಣುಕಾಸ್ವಾಮಿ ಕುಟುಂಬದ ಪರ ನಿಂತ ರಮ್ಯಾ ಸಂಪೂರ್ಣ ಘಟನೆಯಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿ ಎಂದು ಆಗ್ರಹಿಸಿದ್ದರು.
ಇತ್ತೀಚೆಗೆ ದರ್ಶನ್ ಪ್ರಕರಣ ಕುರಿತು ಮಾತನಾಡಿದ್ದ ರಮ್ಯಾ, ದರ್ಶನ್‌ಗೆ ಅಭಿಮಾನಿಗಳ ಬಳಗ ಹೆಚ್ಚಿಲ್ಲ. ದೊಡ್ಡ ಅಭಿಮಾನಿ ಬಳಗ ಇದೆ ಅನ್ನೋದು ಸುಳ್ಳು. ಅಷ್ಟು ಅಭಿಮಾನಿಗಳ ಬಳಗ ಇದ್ದರೆ ಎಲ್ಲಾ ಚಿತ್ರಗಳು ಯಶಸ್ಸು ಕಾಣಬೇಕಿತ್ತು. ಆದರೆ ದರ್ಶನ್ ಬೆರಳೆಣಿಕೆ ಚಿತ್ರಗಳು ಮಾತ್ರ ಯಶಸ್ಸು ಕಂಡಿದೆ. ವಿಧಾನಸಭೆ ಚುನಾವಣೆಯಲ್ಲಿ ದರ್ಶನ್ ಪ್ರಚಾರ ಮಾಡಿದ ನಾಯಕರೆಲ್ಲಾ ಸೋತಿದ್ದಾರೆ ಎಂದು ರಮ್ಯಾ ಹೇಳಿದ್ರು.
ನಟ ದರ್ಶನ್‌ಗಿಂತ ಹೆಚ್ಚಿನ ಅಭಿಮಾನಿಗಳನ್ನು ಹೊಂದಿರುವ ನಟರು ಕನ್ನಡದಲ್ಲಿ ಸಾಕಷ್ಟಿದ್ದಾರೆ. ಕನ್ನಡದ ಇತರ ನಟರ ಅಭಿಮಾನಿಗಳು ನೇತ್ರದಾನ, ರಕ್ತದಾನ ಸೇರಿದಂತೆ ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಕೆಲ ನಟರ ಅಭಿಮಾನಿಗಳು ಹತ್ಯೆ ಪ್ರಕರಣದಲ್ಲಿದ್ದಾರೆ ಎಂದು ನಟಿ ರಮ್ಯಾ ಹೇಳಿದ್ದರು.
ಕೊಲೆ ಆರೋಪಿ ನಟ ದರ್ಶನ್ ಹೈಪ್ ಮಾಡುವಷ್ಟು ಫ್ಯಾನ್ ಫಾಲೋಯಿಂಗ್ ಹೊಂದಿಲ್ಲ; ನಟಿ ರಮ್ಯಾ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.